An unconventional News Portal.

ಪಿಣರಾಯಿ ವಿಜಯನ್
    ...

    ಎಡಿಆರ್‌ ವರದಿಯಲ್ಲಿ ಸಿಎಂಗಳ ಆಸ್ತಿಪಾಸ್ತಿ: ಸಿದ್ದರಾಮಯ್ಯ ಬಳಿ ಆಸ್ತಿ ಎಷ್ಟಿದೆ?

    ‘ದೇಶದ 29 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳಿಗೆ ಸೇರಿದ ಎಲ್ಲ ಮುಖ್ಯಮಂತ್ರಿಗಳ ಪೈಕಿ 25 ಮುಖ್ಯಮಂತ್ರಿಗಳು ಕೋಟ್ಯಧಿಪತಿಗಳಾಗಿದ್ದಾರೆ,’ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್  ವಿಶ್ಲೇಷಣೆ ಮಾಡಿದ ವರದಿಯೊಂದು ಹೇಳಿದೆ. ಚುನಾವಣೆಗೆ ಸ್ಪರ್ಧಿಸಿದಾಗ ಅಭ್ಯರ್ಥಿಗಳು ‘ಚುನಾವಣಾ ಆಯೋಗ’ಕ್ಕೆ ಸಲ್ಲಿಸಿದ ಪ್ರಮಾಣ ಪತ್ರದ ಮಾಹಿತಿ ಆಧರಿಸಿ ಈ ವಿಶ್ಲೇಷಣೆ ಮಾಡಲಾಗಿದೆ. ದೇಶದ ಎಲ್ಲಾ ಮುಖ್ಯಮಂತ್ರಿಗಳು ಹೊಂದಿರುವ ಆಸ್ತಿ, ವಿದ್ಯಾರ್ಹತೆ ಮತ್ತು ಅವರ ವಿರುದ್ಧ ಇರುವ ಎಲ್ಲ ಪ್ರಕರಣಗಳು ಇದರಲ್ಲಿವೆ. ನ್ಯಾಶನಲ್ ಎಲೆಕ್ಷನ್ ವಾಚ್‌ನಲ್ಲಿಯೂ ಈ ಕುರಿತು ಮಾಹಿತಿ […]

    February 13, 2018
    ...

    ಫೇಕ್‌ ನ್ಯೂಸ್‌; ಮಾಧ್ಯಮ ಸಂಸ್ಥೆಗಳ ಮಾಲೀಕ ರಾಜೀವ್‌ ಚಂದ್ರಶೇಖರ್‌ ವಿರುದ್ಧ ಪ್ರಕರಣ

    ಹಲವು ವರ್ಷಗಳಿಂದ ‘ನೇರ, ದಿಟ್ಟ, ನಿರಂತರ’ ಎಂಬ ಶೀರ್ಷಿಕೆಯಡಿ ಮಾಧ್ಯಮ ಸಂಸ್ಥೆಗಳನ್ನು ನಡೆಸಿಕೊಂಡು ಬಂದಿರುವ ಸಂಸದ ರಾಜೀವ್‌ ಚಂದ್ರಶೇಖರ್‌ ವಿರುದ್ಧ ಫೇಕ್‌ ನ್ಯೂಸನ್ನು ಟ್ವೀಟ್‌ ಮಾಡಿದ್ದಕ್ಕೆ ದೂರು ದಾಖಲಾದ ಹಾಸ್ಯಾಸ್ಪದ ಪ್ರಕರಣ ಕೇರಳದಲ್ಲಿ ನಡೆದಿದೆ. ಕೇರಳ ಪೊಲೀಸ್‌ ಮಹಾ ನಿರ್ದೇಶಕ ಲೋಕನಾಥ್‌ ಬೆಹೆರಾ ಆದೇಶದ ಹಿನ್ನೆಲೆಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಕೇರಳ ಸುದ್ದಿ ವಾಹಿನಿಗಳು ವರದಿ ಮಾಡಿವೆ. ಈ ಮೂಲಕ ಸಮೂಹ ಸುದ್ದಿ ಸಂಸ್ಥೆಗಳ ಒಡೆಯನೊಬ್ಬನ ಮೇಲೆಯೇ ನಕಲಿ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಬಿತ್ತಿದ ಆರೋಪ ಸದ್ದು […]

    January 18, 2018
    ...

    ‘ರಾಜಕೀಯ ಹತ್ಯೆ’ ಆರೋಪಕ್ಕೆ ‘ಜಾಹೀರಾತಿ’ನ ಪ್ರತಿಕ್ರಿಯೆ: ಅರುಣ್ ಜೇಟ್ಲಿ ಭೇಟಿಗೆ ಪಿಣರಾಯಿ ವಿಜಯನ್ ಉತ್ತರ

    ಎಡಪಂಥೀಯ ಆಲೋಚನೆಯ ಸಿಪಿಐ (ಎಂ) ಆಡಳಿತ ನಡೆಸುತ್ತಿರುವ ಕೇರಳಕ್ಕೆ ಹಣಕಾಸು ಸಚಿವ ಅರುಣ್ ಜೇಟ್ಲಿ ಭೇಟಿ ನೀಡುವ ಮೂಲಕ ರಾಷ್ಟ್ರಮಟ್ಟದ ಚರ್ಚೆಗೆ ನಾಂದಿ ಹಾಡಿದ್ದಾರೆ. ಕೇರಳದಲ್ಲಿ ‘ರಾಷ್ಟ್ರೀಯ ಸ್ವಯಂ ಸೇವಕ ಸಂಘ’ ಹಾಗೂ ಬಿಜೆಪಿ ಕಾರ್ಯಕರ್ತರ ಮೇಲೆ ಎಡ ಪಕ್ಷಗಳ ಕಾರ್ಯಕರ್ತರು ಹಲ್ಲೆ ನಡೆಸುತ್ತಿದ್ದಾರೆ ಎಂದು ಬಿಜೆಪಿ ಆರೋಪ ಮಾಡುತ್ತಿತ್ತು. ಅದಕ್ಕೀಗ ರಾಷ್ಟ್ರೀಯ ಆಯಾಮ ನೀಡುವ ನಿಟ್ಟಿನಲ್ಲಿ ಅರುಣ್ ಜೇಟ್ಲಿ ಭೇಟಿ ಮಹತ್ವದ ತಿರುವು ನೀಡಿದೆ. ಸ್ವಾತಂತ್ರ್ಯ ನಂತರ, ವಿಶೇಷವಾಗಿ 70ರ ದಶಕದ ನಂತರ ಕೇರಳದಲ್ಲಿ ‘ರಾಜಕೀಯ […]

    August 7, 2017
    ...

    ಸಾಂಪ್ರದಾಯಿಕ ಶತ್ರುಗಳ ‘ನಿರ್ಣಾಯಕ ಯುದ್ಧ’: ಕೇರಳ ನೆಪದಲ್ಲಿ ಮತ್ತೆ ಶುರುವಾದ ಸಂಘರ್ಷ

    ಅತ್ತ ಕೇರಳದ ‘ನಿಯಮ ಸಭಾ’ದ ಒಳಗೆ ಆಯವ್ಯಯ ಪತ್ರ ಮಂಡನೆಗೂ ಮುನ್ನವೇ ಸೋರಿಕೆಯಾಗಿದೆ ಎಂದು ವಿರೋಧ ಪಕ್ಷಗಳು ‘ಹೈ ಡ್ರಾಮಾ’ ನಡೆಸುತ್ತಿವೆ. ಹೊರಗೆ, ರಾಜಕೀಯ ಹತ್ಯೆಗಳು ಕೇರಳದ ಗಡಿಯನ್ನು ದಾಟಿ ಸದ್ದು ಮಾಡುತ್ತಿವೆ. ಗುರುವಾರ ರಾತ್ರಿ ರಾಜ್ಯದ ಪಾಲಕ್ಕಾಡ್ ಜಿಲ್ಲೆಯ ಎಲಪ್ಪುಲ್ಲಿಯಲ್ಲಿ ಇಬ್ಬರು ಡೆಮಕ್ರಾಟಿಕ್ ಯೂತ್ ಫೆಡರೇಷನ್ ಆಫ್ ಇಂಡಿಯಾ (ಡಿವೈಎಫ್ಐ) ಕಾರ್ಯಕರ್ತರ ಮೇಲೆ ದಾಳಿ ನಡೆದಿದೆ. ಡಿವೈಎಫ್ಐ ಸಿಪಿಎಂ ಪಕ್ಷದ ಯುವ ಜನರ ಸಂಘಟನೆಯಾಗಿದೆ. ಘಟನೆ ಹಿನ್ನೆಲೆಯಲ್ಲಿ ಪೊಲೀಸರು ಪ್ರಥಮ ಮಾಹಿತಿ ವರದಿ ದಾಖಲಿಸಿಕೊಂಡಿದ್ದು ಮೂವರು ಬಿಜೆಪಿ […]

    March 3, 2017
    ...

    ಕಣ್ಣೂರಿನಿಂದ ‘ನಿಯಮ ಸಭಾ’ವರೆಗೆ: ಯಾರು ಈ ಮುಖ್ಯಮಂತ್ರಿ ಪಿಣರಾಯಿ ವಿಜಯನ್?

    ರಕ್ತಸಿಕ್ತ ಅಧ್ಯಾಯಗಳನ್ನು ಒಳಗೊಂಡ ಜಿಲ್ಲೆ; ಕೇರಳ ರಾಜ್ಯದ ಕಣ್ಣೂರು. ಅಂತಹ ಜಿಲ್ಲೆಯ ಪಿಣರಾಯಿ ಎಂಬ ಹಳ್ಳಿಯ ಕೆಳಜಾತಿಯೊಂದರಲ್ಲಿ ಹುಟ್ಟಿದ ಆ ಹುಡುಗ ಓದಲು ಕಲಿತಿದ್ದ. ಅದೇ ಆತನನ್ನು ಮುಂದಿನ ಭವಿಷ್ಯ ರಾಜಕೀಯ ನೆಲೆಯತ್ತ ಕೊಂಡೊಯ್ದು ಇವತ್ತು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಿದೆ. ನಿಯಮ ಸಭಾ ಎಂದು ಜನಪ್ರಿಯವಾಗಿರುವ ಕೇರಳ ವಿಧಾನಸಭೆಯ ಚುಕ್ಕಾಣಿ ಹಿಡಿಯುವಂತೆ ಮಾಡಿದೆ. ಸುದೀರ್ಘ 72ವರ್ಷಗಳ ತುಂಬು ಜೀವನದಲ್ಲಿ ‘ಪಿಣರಾಯಿ ವಿಜಯನ್’ ಎಂಬ ಹೆಸರಿನ ಜತೆಗೆ; ರಾಜಕೀಯ ಸಂಘರ್ಷಗಳು, ಪಕ್ಷದೊಳಗಿನ ಗುದ್ದಾಟಗಳು, ಅಧಿಕಾರವಧಿಯಲ್ಲಿ ಮಾಡಿದ ಒಳ್ಳೆಯ ಕೆಲಸಗಳು, ಎದುರಿಸಿದ […]

    February 24, 2017
    ...

    ಲೆಫ್ಟ್ ವರ್ಸಸ್ ರೈಟ್: ಫೆ. 25ಕ್ಕೆ ಮಂಗಳೂರಿನಲ್ಲಿ ಮತ್ತೊಂದು ಸುತ್ತಿನ ‘ಸೈದ್ಧಾಂತಿಕ ಸಂಘರ್ಷ’

    ರಾಜ್ಯದಲ್ಲಿ ನಡೆಯುತ್ತಿರುವ ಎಡ ಮತ್ತು ಬಲದ ‘ಸೈದ್ಧಾಂತಿಕ ಸಂಘರ್ಷ’ಕ್ಕೆ ಇದೇ ತಿಂಗಳ 25ರಂದು ಮಂಗಳೂರಿನ ಬೀದಿಗಳು ಸಾಕ್ಷಿಯಾಗಲಿವೆ. ಸಿಪಿಎಂ ಕರ್ನಾಟಕ ಪಕ್ಷವು ಆಯೋಜಿಸಿರುವ ಕಾರ್ಯಕ್ರಮದಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪಾಲ್ಗೊಳ್ಳಲಿದ್ದಾರೆ. ‘ಕೋಮುವಾದಕ್ಕೆ ಸೋಲಾಗಲಿ; ಸೌಹಾರ್ದತೆ ಗಟ್ಟಿಯಾಗಲಿ’ ಎಂಬುದು ಕಾರ್ಯಕ್ರಮದ ಘೋಷವಾಕ್ಯ. ಕಾರ್ಯಕ್ರಮದ ಮಾಹಿತಿ ಹೊರ ಬೀಳುತ್ತಿದ್ದಂತೆ ವಿಶ್ವಹಿಂದೂ ಪರಿಷತ್, ಹಿಂದೂ ಜಾಗರಣ ವೇದಿಕೆ, ಭಜರಂಗದಳ ಮತ್ತು ಬಿಜೆಪಿ, ಪಿಣರಾಯಿ ಆಗಮನಕ್ಕೆ ವಿರೋಧ ವ್ಯಕ್ತಪಡಿಸಿವೆ. ಕಾರ್ಯಕ್ರಮದ ವಿರುದ್ಧ ಫೆ. 24ರಂದು ಮೆರವಣಿಗೆ ಮತ್ತು ಫೆ. 25ರಂದು ಬಂದ್ ನಡೆಸುವುದಾಗಿ ಪ್ರಕಟಿಸಿವೆ. […]

    February 22, 2017
    ...

    ದೇವರನಾಡಲ್ಲಿ ‘ರಾಜಕೀಯ ಹತ್ಯೆ’ಗಳು: ಕೇಸರಿ v/s ಕೆಂಬಾವುಟ ನಡುವಿನ ಕದನದ ಅಸಲಿಯತ್ತು ಇದು!

    ಪ್ರವಾಸೋದ್ಯಮ ಮತ್ತು ಅಭಿವೃದ್ಧಿಗೆ ಹೆಸರಾಗಿದ್ದ ದೇವರ ನಾಡು ಕೇರಳದಲ್ಲೀಗ, ರಾಜಕೀಯ ಕೊಲೆಗಳು ಸದ್ದು ಮಾಡುತ್ತಿವೆ. ಮೇಲಿಂದ ಮೇಲೆ ಬಿಜೆಪಿ ಮತ್ತು ಕಮ್ಯೂನಿಸ್ಟ್ ಪಕ್ಷಗಳ ಸಾಮಾನ್ಯ ಕಾರ್ಯಕರ್ತರ ನೆತ್ತರು ಹರಿಯುತ್ತಿದೆ. ಕೇಂದ್ರದಲ್ಲಿ ಆಡಳಿತದಲ್ಲಿರುವ ಬಿಜೆಪಿ ಮತ್ತು ಕೇರಳದಲ್ಲಿ ಆಡಳಿತ ನಡೆಸುತ್ತಿರುವ ಕಮ್ಯೂನಿಸ್ಟ್ ಪಕ್ಷಗಳ ನಡುವಿನ ಈ ಬೀದಿ ರಂಪಾಟ, ಈಗ ಸಹಜವಾಗಿಯೇ ರಾಷ್ಟ್ರೀಯ ಆಯಾಮವನ್ನು ಪಡೆದುಕೊಂಡಿದೆ. ಮುಖ್ಯವಾಗಿ ಬಿಜೆಪಿ ಇದನ್ನು ಕೇರಳ ರಾಜ್ಯದ ಹೊರಗೆ ‘ಸಾಮಾಜಿಕ ಜಾಗೃತಿ’ಯನ್ನು ಮೂಡಿಸಲು ಪ್ರಯತ್ನ ನಡೆಸುತ್ತಿದೆ. ಕಮ್ಯೂನಿಸ್ಟರನ್ನು ಬೆರಳೆಣಿಕೆಯಲ್ಲಿ ಎಣಿಸಬಹುದಾದ ಕರ್ನಾಟಕದಲ್ಲೂ, ಬಲಪಂಥೀಯ ಚಿಂತನೆಯ ಮಂದಿ ಸೆಮಿನಾರು, […]

    October 19, 2016

Top