An unconventional News Portal.

ಪಾಕಿಸ್ತಾನ
    ...
    Pakistan
    ವಿದೇಶ

    ‘ಸೂಫಿಸಂ’ ಮೇಲೆ ಐಸಿಎಲ್ ಭೀಕರ ದಾಳಿ: ಇಸ್ಲಾಂ ಒಳಗಿನ ವೈರುಧ್ಯಕ್ಕೆ ಸಾಕ್ಷಿಯಾದ ಪಾಕಿಸ್ತಾನ

    ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಸೂಫಿ ದರ್ಗಾದ ಮೇಲೆ ಗುರುವಾರ ನಡೆದ ಭಯೋತ್ಪಾದಕ ದಾಳಿ ಹಿನ್ನೆಲೆಯಲ್ಲಿ ನೆರೆಯ ರಾಷ್ಟ್ರದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ 29 ಭಯೋತ್ಪಾದಕರನ್ನು ಪಾಕ್‌ ಸೇನೆ ಹೊಡೆದು ಹಾಕಿದೆ. ಕಾರ್ಯಾಚರಣೆ ಮುಂದುವರಿದಿದೆ. ಗುರುವಾರ ಸೂಫಿ ಸಂಸ್ಕೃತಿಯನ್ನು ಪ್ರತಿನಿಧಿಸುವ ದೇಶದ ಶೆಹ್ವಾನ್ ಪ್ರದೇಶದಲ್ಲಿದ್ದ ಲಾಲ್ ಶಹ್ಬಾಝ್ ಖಲಂದರ್ ದರ್ಗಾದ ಮೇಲೆ ಭಯೋತ್ಪಾದಕ ದಾಳಿ ನಡೆದಿತ್ತು. ಘಟನೆಯಲ್ಲಿ ಸುಮಾರು 79 ಜನ ಸಾವನ್ನಪ್ಪಿದ್ದರೆ 250ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಇದು ಇತ್ತೀಚಿನ ವರ್ಷಗಳಲ್ಲಿ..

    February 17, 2017
    ...
    isro-pslv-launch-1
    ಸುದ್ದಿ ಸಾರ

    ವಿಶ್ವ ದಾಖಲೆ ಬರೆದ ಇಸ್ರೋ: 104 ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿದ ಬಾಹ್ಯಾಕಾಶ ಸಂಸ್ಥೆ

    ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಒಂದೇ ಬಾರಿಗೆ 104 ಉಪಗ್ರಹಗಳನ್ನು ಆಗಸಕ್ಕೆ ಕಳುಹಿಸುವ ಮೂಲಕ ಬುಧವಾರ ವಿಶ್ವದಾಖಲೆ ಬರೆದಿದೆ. ಈ ಹಿಂದೆ ರಷ್ಯಾ ಹೊಂದಿದ್ದ ದಾಖಲೆಯನ್ನು ಇದು ಅಳಿಸಿ ಹಾಕಿದೆ. ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್- ಪಿಎಸ್‌ಎಲ್‌ವಿ- ಸಿ 37 ಹೆಸರಿನ ಬಾಹ್ಯಕಾಶ ನೌಕೆಯು ಬೆಳಗ್ಗೆ 9. 28ಕ್ಕೆ ಸರಿಯಾಗಿ ಶ್ರೀಹರಿಕೋಟದ ಬಾಹ್ಯಕಾಶ ಕೇಂದ್ರದಿಂದ 104 ಉಪಗ್ರಹಗಳನ್ನು ಹೊತ್ತೊಯ್ದಿತು. ಇದರಲ್ಲಿ 101 ಉಪಗ್ರಹಗಳ ವಿದೇಶಗಳಿಗೆ ಸೇರಿದ್ದಾಗಿವೆ. ಇದರಲ್ಲಿ 95 ಅಮೆರಿಕಕ್ಕೆ ಸೇರಿದವಾಗಿದ್ದು, ಇನ್ನುಳಿದವು ಇಸ್ರೇಲ್, ಕಜಕಿಸ್ತಾನ, ಹಾಲೆಂಡ್, ಸ್ವಿಜರ್ಲೆಂಡ್ ಹಾಗೂ..

    February 15, 2017
    ...
    Agni 5
    ಸುದ್ದಿ ಸಾರ

    ಅಗ್ನಿ-5: ಚೀನಾ ನೆಲ ಮುಟ್ಟಲಿರುವ ಕ್ಷಿಪಣಿಯ ಅಂತಿಮ ಪರೀಕ್ಷೆಗೆ ಭರದ ಸಿದ್ಧತೆ

    ಅಣ್ವಸ್ತ್ರ ಸಿಡಿತಲೆ ಹೊತ್ತೊಯ್ಯಬಲ್ಲ ಸಾಮಾರ್ಥ್ಯದ ಅಗ್ನಿ-5 ಖಂಡಾಂತರ ಕ್ಷಿಪಣಿಯ ಅಂತಿಮ ಪರೀಕ್ಷೆಗೆ ಭಾರತ ಸಿದ್ಧವಾಗಿದೆ. ಒಡಿಶಾದ ವೀಲರ್ ದ್ವೀಪದಿಂದ ಬರೋಬ್ಬರಿ ಎರಡು ವರ್ಷಗಳ ನಂತರ ಮತ್ತೊಮ್ಮೆ ಅಗ್ನಿ-5 ಆಕಾಶಕ್ಕೆ ಚಿಮ್ಮಲಿದೆ. ಒಂದೊಮ್ಮೆ ಈ ಅಂತಿಮ ಪರೀಕ್ಷೆ ಯಶಸ್ವಿಯಾದಲ್ಲಿ ಅಗ್ನಿ-5 ಭಾರತೀಯ ಸೇನೆಯ ಬತ್ತಳಿಕೆ ಸೇರಲಿದೆ. ರಕ್ಷಣಾ ಇಲಾಖೆಯ ಸಂಶೋಧನಾ ಸಂಸ್ಥೆ ಡಿಆರ್’ಡಿಒ ಮೂಲಗಳ ಪ್ರಕಾರ ಡಿಸೆಂಬರ್ ಅಂತ್ಯದಲ್ಲಿ ಇಲ್ಲವೇ ಜನವರಿ ಆದಿಯಲ್ಲಿ ಅಗ್ನಿ ಕ್ಷಿಪಣಿಯ ಅಂತಿಮ ಪರೀಕ್ಷಾರ್ಥ ಉಡಾವಣೆ ನಡೆಯಲಿದೆ. “ಕಳೆದ ಜನವರಿ 2015ರಲ್ಲಿ ಉಡಾವಣೆ ಮಾಡಿದಾಗ..

    December 14, 2016
    ...
    junaid_jamshed-1
    ವಿದೇಶ

    ‘ಸಂಗೀತದಿಂದ ಧರ್ಮದೆಡೆಗೆ’: ಪಾಕ್ ವಿಮಾನ ಅಪಘಾತದಲ್ಲಿ ಸಾವಿಗೀಡಾದವರ ಪೈಕಿ ಬಹುಮುಖ ಪ್ರತಿಭೆ ಜುನೈದ್

    ಪಾಕಿಸ್ತಾನದ ಉತ್ತರ ಭಾಗದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದಲ್ಲಿ ಎಲ್ಲಾ 48 ಪ್ರಯಾಣಿಕರೂ ಸಾವಿಗೀಡಾಗಿದ್ದಾರೆ ಎಂದು ಪಾಕ್ ಏರ್ಲೈನ್ಸ್ ಅಧ್ಯಕ್ಷರ ಪ್ರಕಟಣೆ ತಿಳಿಸಿದೆ. ಪಾಕಿಸ್ತಾನ್ ಇಂಟರ್ನ್ಯಾಷನಲ್ ಏರ್ಲೈನ್ಸ್ (ಪಿಐಎ)ಗೆ ಸೇರಿದ ಪಿಕೆ 661 ಸ್ಥಳೀಯ ನಾಗರಿಕ ವಿಮಾನ ಚಿತ್ರಾಲ್ ನಗರದಿಂದ ಇಸ್ಲಾಮಾಬಾದ್ ಕಡೆಗೆ ಹೊರಟಿತ್ತು. ಖೈಬರ್ ಪ್ರಾಂಥ್ಯದ ಹವಾಲಿಯನ್ ನಗರದ ಸಮೀಪ ಬರುತ್ತಿದ್ದಂತೆ ವಿಮಾನ ಮಾರ್ಗಮಧ್ಯದಲ್ಲಿಯೇ ಪತನವಾಯಿತು. ಪಾಕಿಸ್ತಾನದಲ್ಲಿ ಪ್ರತಿ ವಿಮಾನವೂ 500 ಗಂಟೆಗಳ ಹಾರಾಟ ನಡೆಸಿದ ನಂತರ ತಪಾಸಣೆಗೆ ಒಳಗಾಗಬೇಕು ಎಂಬ ನಿಯಮವಿದೆ. ದುರಂತ ಅಂತ್ಯ ಕಂಡ ವಿಮಾನ..

    December 8, 2016
    ...
    Indian Army soldier
    ದೇಶ

    ಜಮ್ಮು- ಕಾಶ್ಮೀರದಲ್ಲೇಕೆ ಪದೇ ಪದೇ ಸೇನಾ ನೆಲೆಗಳ ಮೇಲೆ ದಾಳಿ ನಡೆಯುತ್ತಿದೆ?

    ಭಾರತೀಯ ಸೇನಾ ನೆಲೆಯ ಮೇಲೆ ಮಂಗಳವಾರ ಮುಂಜಾನೆ ಮತ್ತೊಂದು ದಾಳಿ ನಡೆದಿದೆ. ಜಮ್ಮು ಮತ್ತು ಕಾಶ್ಮೀರದ ನಾಗ್ರೋಟಾದಲ್ಲಿರುವ ಸೇನಾ ಘಟಕದ ಮೇಲೆ ನಡೆದ ಈ ದಾಳಿಯಲ್ಲಿ ಇಬ್ಬರು ಸೈನಿಕರು ಸಾವನ್ನಪ್ಪಿದ್ದಾರೆ; ಇಬ್ಬರು ಗಾಯಗೊಂಡಿದ್ದಾರೆ.  ಸದ್ಯ ಸೇನೆ ಮತ್ತು ಭಯೋತ್ಪಾದಕರ ಮಧ್ಯೆ ಗುಂಡಿನ ಚಕಮಕಿ ಮುಂದುವರಿದಿದೆ. ಸೇನಾ ನೆಲೆಯಲ್ಲಿ 2-3 ಉಗ್ರರು ಅಡಗಿಕೊಂಡಿರಬಹುದು ಎಂದು ವರದಿಗಳು ಹೇಳುತ್ತಿದೆ. 2016ರಿಂದೀಚೆಗೆ ಸುರಕ್ಷತಾ ಪಡೆಗಳ ಮೇಲೆ ನಡೆಯುತ್ತಿರುವ 6ನೇ ಭಯೋತ್ಪಾದಕ ಕೃತ್ಯ ಇದಾಗಿದೆ. ಸಂಘರ್ಷದ ನಾಡು ಜಮ್ಮು ಮತ್ತು ಕಾಶ್ಮೀರ: ಭಾರತ..

    November 29, 2016
    ...
    ndtv-india-logo
    ಟಿವಿ

    NDTV ಇಂಡಿಯಾ ಸ್ಥಗಿತಕ್ಕೆ ಶಿಫಾರಸು: ಅಸೂಕ್ಷ್ಮ ವರದಿ ಭಿತ್ತರ ಆರೋಪ

    ಪಠಾಣ್ ಕೋಟ್ ವಾಯು ನೆಲೆ ಮೇಲೆ ನಡೆದ ದಾಳಿ ವೇಳೆಯಲ್ಲಿ ರಕ್ಷಣಾ ಇಲಾಖೆಗೆ ಸಂಬಂಧಿಸಿದ ಸೂಕ್ಷ್ಮ ಸುದ್ದಿಯನ್ನು ಭಿತ್ತರಿಸಿದ ಆರೋಪದ ಮೇಲೆ ಎನ್ ಡಿಟಿವಿ ಸಮೂಹದ ಹಿಂದಿ ಸುದ್ದಿ ವಾಹಿನಿ, ಎನ್ಡಿಟಿವಿ ಇಂಡಿಯಾ ವಿರುದ್ಧ ಕೇಂದ್ರ ಕ್ರಮಕ್ಕೆ ಮುಂದಾಗುವ ಸಾಧ್ಯತೆ ಇದೆ. ಹೀಗಂತ, ಕೇಂದ್ರ ಮಾಹಿತಿ ಮತ್ತು ಪ್ರಚಾರ ಸಚಿವಾಲಯದ ಮೂಲಗಳು ತಿಳಿಸಿವೆ ಎಂದು ‘ನ್ಯೂಸ್ ಮಿನಿಟ್’ ವರದಿ ಮಾಡಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ನ. 9ನೇ ತಾರೀಖು ಎನ್ಡಿಟಿವಿ ಇಂಡಿಯಾ ಒಂದು ದಿನ ಮಟ್ಟಿಗೆ ‘ಆನ್..

    November 3, 2016
    ...
    arrested
    ಸುದ್ದಿ ಸಾರ

    ‘ಗೂಢಚರ್ಯೆ ಆರೋಪ’: ಪಾಕಿಸ್ತಾನ ರಾಯಭಾರಿ ಕಚೇರಿ ಸಿಬ್ಬಂದಿ ಬಂಧನ!

    ಭಾರತ-ಪಾಕಿಸ್ತಾನ ಮಧ್ಯೆ ಕಾವೇರಿದ ವಾತಾವರಣ ಜಾರಿಯಲ್ಲಿರುವ ಹೊತ್ತಲ್ಲೇ ಪಾಕಿಸ್ತಾನ ರಾಯಭಾರ ಕಚೇರಿಯ ಸಿಬ್ಬಂದಿಯೊಬ್ಬರನ್ನು ಗುರುವಾರ ಬೆಳಿಗ್ಗೆ ಬಂಧಿಸಲಾಗಿದೆ. ಗೂಢಚರ್ಯೆ ಆರೋಪದ ಮೇಲೆ ರಾಯಭಾರ ಕಚೇರಿ ಸಿಬ್ಬಂದಿ ಮೆಹ್ಮೂದ್ ಅಖ್ತರ್ ರನ್ನು ವಿಚಾರಣೆಗಾಗಿ ಅರೆಸ್ಟ್ ಮಾಡಲಾಗಿದೆ. ಡಿಪ್ಲೊಮ್ಯಾಟಿಕ್ ಪಾಸ್ ಪೋರ್ಟ್ ಹೊಂದಿರುವ ಮೆಹ್ಮೂದ್ ಅಖ್ತರ್ ರನ್ನು ದೆಹಲಿ ಕ್ರೈಂ ಬ್ರಾಂಚ್ ಪೊಲೀಸರು ಬಂಧಿಸಿದ್ದು ಸದ್ಯ ಚಾಣಾಕ್ಯಪುರಿ ಜೈಲಿನಲ್ಲಿಅಖ್ತರ್ ವಿಚಾರಣೆ ನಡೆಯುತ್ತಿದೆ. ಮೂಲಗಳ ಪ್ರಕಾರ ಅಖ್ತರ್ ಬಳಿಯಲ್ಲಿ ಭಾರತದ ರಕ್ಷಣಾ ಇಲಾಖೆಗೆ ಸೇರಿದ ರಣತಂತ್ರಗಳ ದಾಖಲೆಗಳು ಪತ್ತೆಯಾಗಿವೆ ಎನ್ನಲಾಗಿದೆ. ಈ..

    October 27, 2016
    ...
    pak-quetta-attack
    ವಿದೇಶ

    ಮತ್ತೆ ಉಗ್ರರ ದಾಳಿಗೆ ನಲುಗಿದ ಪಾಕ್: ಕ್ವೆಟ್ಟಾದಲ್ಲಿ 60 ಪೊಲೀಸರ ಮಾರಣ ಹೋಮ!

    ಪಾಕಿಸ್ತಾನದ ಕ್ವೆಟ್ಟಾದಲ್ಲಿ ನಡೆದ ಬಾಂಬ್ ದಾಳಿಗೆ 60 ಜನ ಸಾವನ್ನಪ್ಪಿದ್ದಾರೆ. ‘ಜಮಾತ್-ಇ-ಝಂಗ್ವಿ’ ಉಗ್ರ ಸಂಘಟನೆ ದಾಳಿಯ ಹೊಣೆ ಹೊತ್ತುಕೊಂಡಿದ್ದು 100ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯಕ್ಕೆ ಸೇರಿದ ಕ್ವೆಟ್ಟಾ ನಗರದಲ್ಲಿ ಪೊಲೀಸರ ತರಬೇತಿ ಶಿಬಿರ ನಡೆಯುತ್ತಿತ್ತು. ಇದರಲ್ಲಿ ಸುಮಾರು 200 ಟ್ರೇನೀ ಪೊಲೀಸರು ಭಾಗವಹಿಸಿದ್ದರು. ಇದೇ ಶಿಬಿರದ ಮೇಲೆ ‘ಜಮಾತ್ ಇ ಝಂಗ್ವಿ’ ಉಗ್ರವಾದಿ ಸಂಘಟನೆಯ ಬಂಡುಕೋರರು ದಾಳಿ ನಡೆಸಿದ್ದಾರೆ. ಸೋಮವಾರ ರಾತ್ರಿಯ ವೇಳೆಗೆ ಈ ದಾಳಿ ನಡೆಸಿದ್ದು ಕೆಲವರನ್ನು ಕೊಂದ ಉಗ್ರರು ಇನ್ನು..

    October 25, 2016
    ...
    arnab-goswami
    ಟಿವಿ

    ಪಾಕ್ ಮೂಲದ ಉಗ್ರರಿಂದ ಬೆದರಿಕೆ: ಪತ್ರಕರ್ತ ಅರ್ನಾಬ್ ಗೋಸ್ವಾಮಿಗೆ ವಿಶೇಷ ಭದ್ರತೆ!

    ನೆರೆಯ ದೇಶದ ವಿರುದ್ಧ ತಮ್ಮ ಟಿವಿ ಶೋಗಳಲ್ಲಿ ಕೆಂಡ ಕಾರುವ ಅರ್ನಾಬ್ ಗೋಸ್ವಾಮಿ, ಈಗ ಪಾಕ್ ಭಯೋತ್ಪಾಕರಿಂದ ಬೆದರಿಕೆ ಎದುರಿಸುತ್ತಿದ್ದಾರಂತೆ. ಈ ಕಾರಣಕ್ಕೆ ಅವರಿಗೆ ‘ವೈ’ ಶ್ರೇಣಿಯ ಭದ್ರತೆ ಒದಗಿಸಲಾಗಿದೆ. ‘ವೈ’ ಶ್ರೇಣಿಯ ಭದ್ರತೆ ಪಡೆಯಲಿರುವ ಅರ್ನಾಬ್ ಗೋಸ್ವಾಮಿಯನ್ನು 20 ಜನ ಸಿಬ್ಬಂದಿಗಳು ದಿನದ 24 ಗಂಟೆಯೂ ಕಾಯಲಿದ್ದಾರೆ. ಇವರಲ್ಲದೇ ಇಬ್ಬರು ಆಪ್ತ ಭದ್ರತಾ ಸಹಾಯಕರೂ ಇರಲಿದ್ದು, ಸಮೀಪದ ದಾಳಿಗಳಿಂದ ‘ಟೈಮ್ಸ್ ನೌ’ ಸಂಪಾದಕರನ್ನು ರಕ್ಷಿಸಲಿದ್ದಾರೆ. ಸಾಮಾನ್ಯವಾಗಿ ಸರಕಾರ ಎರಡು ರೀತಿಯಲ್ಲಿ ಭದ್ರತೆ ನೀಡುತ್ತದೆ. ವ್ಯಕ್ತಿಯ ಹುದ್ದೆಯನ್ನು ಆಧರಿಸಿ ಭದ್ರತೆ..

    October 16, 2016
    ...
    surgical-india-pakistan
    ದೇಶ

    ‘ಆಪರೇಷನ್ ಜಿಂಜರ್’: 2011ರಲ್ಲೇ ಗಡಿಯಲ್ಲಿ ನಡೆದಿದ್ದವು ಆ 2 ಭೀಕರ ಸರ್ಜಿಕಲ್ ಸ್ಟ್ರೈಕ್ಸ್!

    ‘ಸರ್ಜಿಲ್ ಸ್ಟ್ರೈಕ್’ ಎಂಬ ಪದ ಕಳೆದ ಕೆಲವು ದಿನಗಳಿಂದ ಸುದ್ದಿಕೇಂದ್ರದಲ್ಲಿದೆ. ಭಾರತೀಯ ಸೇನೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ರಾತ್ರೋರಾತ್ರಿ ದಾಳಿ ನಡೆಸಿತು ಎಂಬ ಸುದ್ದಿ ಪರ- ವಿರೋಧದ ಚರ್ಚೆಯನ್ನು ಹುಟ್ಟು ಹಾಕಿದೆ. ಹೀಗಿರುವಾಗಲೇ, ಐದು ವರ್ಷಗಳ ಹಿಂದೆ, ಯುಪಿಎ-2 ಆಡಳಿತಾವಧಿಯಲ್ಲಿ ಭಾರತ- ಪಾಕ್ ಗಡಿ ನಿಯಂತ್ರಣ ರೇಖೆಯಲ್ಲಿ ಎರದು ಭೀಕರ ‘ನಿರ್ದಿಷ್ಟ ದಾಳಿ’ಗಳು ನಡೆದಿದ್ದವು ಎಂಬ ವಿಚಾರವನ್ನು ‘ದಿ ಹಿಂದೂ’ ಪತ್ರಿಕೆ ಅ. 9ರ ತನ್ನ ವಿಶೇಷ ಲೇಖನದಲ್ಲಿ ಬಯಲಿಗೆಳೆದಿದೆ. ಅದನ್ನು ಪತ್ರಕರ್ತ ಕುಮಾರ್ ಬುರಡಿಕಟ್ಟಿ ಕನ್ನಡಕ್ಕೆ ತಂದಿದ್ದಾರೆ.   2011ರ ಬೇಸಿಗೆಯ..

    October 9, 2016

ENTER YOUR E-MAIL

Name
Email *
February 2017
M T W T F S S
« Jan    
 12345
6789101112
13141516171819
20212223242526
2728  

Top