An unconventional News Portal.

ಪರಪ್ಪನ ಅಗ್ರಹಾರ
    ...

    ಪರಪ್ಪನ ಅಗ್ರಹಾರಕ್ಕೆ ‘ಹೆಲೋ’ ಹೇಳಿದ ರವಿ ಬೆಳಗೆರೆ: ಬದಲಾದ ಕಾಲ ಹಾಗೂ ಉತ್ತರ ಸಿಗದ ಪ್ರಶ್ನೆಗಳು

    ಸುಪಾರಿ ಸಂಚಿನ ಆರೋಪ ಹೊತ್ತಿದ್ದ ಪತ್ರಕರ್ತ ರವಿ ಬೆಳಗೆರೆ ಕೊನೆಗೂ ಜೈಲು ಪಾಲಾಗಿದ್ದಾರೆ; ಅವರೀಗ ಪರಪ್ಪನ ಅಗ್ರಹಾರದಲ್ಲಿ ವಿಚಾರಣಾಧೀನ ಖೈದಿ 12785! ಸಹೋದ್ಯೋಗಿ ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿದ ಆರೋಪದ ಮೇಲೆ ಸಿಸಿಬಿ ಪೊಲೀಸರಿಂದ ಶುಕ್ರವಾರ ಬಂಧನಕ್ಕೆ ಒಳಗಾಗಿದ್ದರು. ನ್ಯಾಯಾಲಯ ತನಿಖಾಧಿಕಾರಿಗಳ ಕೋರಿಕೆ ಮೇರೆಗೆ 4 ದಿನಗಳ ಕಸ್ಟಡಿಗೂ ನೀಡಿತ್ತು. ಸಿಸಿಬಿ ಪೊಲೀಸರು ಪಡೆದುಕೊಂಡಿದ್ದ ವಿಚಾರಣಾ ಅವಧಿ ಸೋಮವಾರ ಮುಗಿಯುತ್ತಿದ್ದ ಹಿನ್ನೆಲೆಯಲ್ಲಿ ನ್ಯಾಯಾಲಯದ ಮುಂದೆ ಬೆಳಗೆರೆಯನ್ನು ಹಾಜರುಪಡಿಸಿದರು. ಈ ಸಮಯದಲ್ಲಿ ವಿಚಾರಣೆ ನಡೆಸಿದ ನ್ಯಾಯಾಲಯ, ಆರೋಪಿಯನ್ನು ಪರಪ್ಪನ […]

    December 11, 2017
    ...

    ಶಶಿಕಲಾ, ತೆಲಗಿ ಆಚೆಗೂ ಪರಪ್ಪನ ಅಗ್ರಹಾರದ ಕರ್ಮಕಾಂಡ ಬಿಚ್ಚಿಟ್ಟ ಡಿಐಜಿ ರೂಪ ಪತ್ರ

    ರಾಜ್ಯದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಆಂತರಿಕ ಪರಿಸ್ಥಿತಿಯ ಕುರಿತು ಡಿಐಜಿ ರೂಪಾ ತಮ್ಮ ಮೇಲಾಧಿಕಾರಿಗೆ ಬರೆದ ಪತ್ರ ಈಗ ಚರ್ಚೆಗೆ ಗ್ರಾಸವಾಗಿದೆ. ಪತ್ರದಲ್ಲಿ ತಮಿಳುನಾಡು ಸಿಎಂ ಜಯಲಲಿತಾ ಆಪ್ತೆ ಶಶಿಕಲಾ ಹಾಗೂ ನಕಲಿ ಛಾಪಾ ಕಾಗದ ಹಗರಣದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಕರೀಂ ಲಾಲ್ ತೆಲಗಿ ಹೆಸರೂ ಇರುವುದರಿಂದ ಸುದ್ದಿಗೆ ರಾಷ್ಟ್ರೀಯ ಆಯಾಮಯೂ ದೊರಕಿದೆ. ಒಟ್ಟು ನಾಲ್ಕು ಪುಟಗಳ ಪತ್ರದ ಜತೆಗೆ 6 ಪುಟಗಳ ಜೈಲಿನ ವೈದ್ಯಾಧಿಕಾರಿಗಳ ಪತ್ರವನ್ನೂ ಮೇಲಾಧಿಕಾರಿಗೆ ಸಲ್ಲಿಸಿದ್ದಾರೆ ಡಿಐಜಿ ರೂಪಾ. ವಿಶೇಷ ಅಂದರೆ ಪತ್ರದಲ್ಲಿ […]

    July 13, 2017
    ...

    ಕಂಬಿ ಹಿಂದಿನ ಕತೆ- 3: ಗುಂಡಿಸಿದ್ದನ ಮೇಲೆ ಸಮಾಜ ಹೊರಿಸಿದ ಆರೋಪಕ್ಕೆ ಜೈಲಿನ ಗೋಡೆಗಳ ನಡುವೆ ನ್ಯಾಯ ಸಿಕ್ತು!

    ಸಮಾಜದ ಕುರುಡು ನಂಬಿಕೆಗಳು, ಸಣ್ಣತನಗಳು ವ್ಯಕ್ತಿಯೊಬ್ಬನನ್ನು ಅನ್ಯಾಯವಾಗಿ 5 ವರ್ಷ ಜೈಲಿಗೆ ತಳ್ಳಿದ ದುರಂತ ಕತೆ ಇದು. ಇಲ್ಲಿ ಸಮಾಜ, ಪೊಲೀಸ್, ನ್ಯಾಯಾಂಗ ನಾವು ನೀವು ಎಲ್ಲರೂ ಪಾಲುದಾರರೇ. ಸೋತಿದ್ದು ಮಾತ್ರ ಈ ಮುಗ್ದ ಮನುಷ್ಯ ಗುಂಡಿಸಿದ್ದ; ಇದು ಕಂಬಿನ ಹಿಂದಿನ ಕತೆಯ ಮೂರನೇ ಕಂತು. ಆತನ ಊರು ತುಮಕೂರು. ಆತನನ್ನು ಎಲ್ಲರೂ ಗುಂಡಿಸಿದ್ಧ (ಬದಲಾಯಿಸಲಾಗಿದೆ) ಎಂದು ಕರೆಯುತ್ತಿದ್ದರು. ಹೆಸರಿನ ಜೊತೆಗೆ ಗುಂಡಿ ಅಂಟಿಕೊಂಡಿದ್ದಕ್ಕೂ ಕಾರಣ ಉಂಟು. ಆತ ಮುಗ್ಧನಾಗಿದ್ದ; ಮುಗ್ಧ ಅಂದರೆ ಮುಗ್ಧ. ಬಡಕೃಷಿಕ; ಮದುವೆಯಾಗಿತ್ತು. […]

    November 2, 2016
    ...

    ಕಂಬಿ ಹಿಂದಿನ ಕತೆ – 2: ಜೈಲೊಳಗಿನ ಕಾನೂನಿನ ಕಟ್ಟಳೆಗಳ ಆಚೆಗೆ ಮೆರೆದ ಮಾನವೀಯ ಸಂಬಂಧಗಳು!

    ಏನೇ ಅಂದರೂ, ಮನುಷ್ಯ ಬಂದು ನಿಲ್ಲುವುದು ಸಂಬಂಧಗಳ ಕಡೆಗೆ; ಎಷ್ಟಾದರೂ ಸಂಘ ಜೀವಿ ಈತ. ಜೈಲಿನಲ್ಲಿರುವವರು ಸಮಾಜದ ಎಲ್ಲಾ ಸಂಬಂಧಗಳಿಂದ ದೂರ ಉಳಿದಿರುತ್ತಾರೆ ಎಂಬ ಭಾವನೆ ನಮ್ಮೆಲ್ಲರಲ್ಲಿದೆ. ಖೈದಿಗಳಿಗೆ ಭಾವನೆಗಳೇ ಅರ್ಥವಾಗುವುದಿಲ್ಲ ಎಂಬ ದೂರೂ ಇದೆ. ಆದರೆ ಇದೆಲ್ಲವನ್ನೂ ಸುಳ್ಳಾಗಿಸುವ ಕರಿಸುಬ್ಬುವಿನ ಈ ರೋಚಕ ಕತೆ. ಇದು ಕಂಬಿ ಹಿಂದಿನ ಕತೆಗಳ ಎರಡನೇ ಕಂತು. ಆತನ ಹೆಸರು ಕರಿಸುಬ್ಬು; ಹಾಗೆಂದಿಟ್ಟುಕೊಳ್ಳಿ. ಬೆಂಗಳೂರಿನ ಲಗ್ಗೆರೆಯವನು. ಒಂದಷ್ಟು ಓದಿಕೊಂಡಿದ್ದ. ‘ಬಿಎಸ್ಎನ್ಎಲ್’ನಲ್ಲಿ ಲೈನ್ ಮ್ಯಾನ್ ಕೆಲಸ ಸಿಕ್ಕಿತು. ಧಾರವಾಡದಲ್ಲಿ ಕೆಲಸ ಮಾಡುತ್ತಿದ್ದ; ಖಾಯಂ ಕೂಡ ಆಗಿತ್ತು. […]

    September 28, 2016
    ...

    ‘ಕಂಬಿ ಹಿಂದಿನ ಕತೆ’: ಕಟ್ಟಡ ಕೆಲಸಕ್ಕೆ ಬೆಂಗಳೂರಿಗೆ ಬಂದವನು ಜೈಲು ಸೇರಿ ಹುಚ್ಚನಾದ ಕತೆ!

    ಜೈಲು ಎಂಬುದು ಹೊರಜಗತ್ತಿನ ಪಾಲಿಗೆ ಕುತೂಹಲ ಮೂಡಿಸುವ ಸ್ಥಳ. ಹಾಗಂತ ಅಲ್ಲಿಗೆ ಭೇಟಿ ಕೊಡುವ ಹಾಗಿಲ್ಲ; ಒಳಗೆ ಹೋಗುವ ಮನಸ್ಸು ಇರುವುದಿಲ್ಲ. ಯಾಕೆಂದರೆ, ‘ಜೈಲು’ ಎಂಬ ಪದವೇ ಸಾಮಾಜಿಕ ವ್ಯವಸ್ಥೆಯಲ್ಲಿ ಒಂದು ರೀತಿಯ ಟ್ಯಾಬೂ- ಆಚರಣೆಯಲ್ಲಿರುವ ನಿಷೇಧಿತ ಸ್ಥಳ ಎನ್ನಬಹುದು. ಇದು ಸಾಮಾನ್ಯ ಜನರ ಪಾಲಿಗಾದರೆ ಅಪರಾಧ ಸುದ್ದಿಗಾರರ ಪಾಲಿಗೆ ಜೈಲು ಮಾಹಿತಿಯ ಮೂಲ. ಅದರೊಳಗಿಂದ ಸಿಗುವ ಸ್ಪೋಟಕ ಮಾಹಿತಿ ಹೊರಜಗತ್ತಿನಲ್ಲಿ ದೊಡ್ಡದೊಂದು ‘ಸ್ಟೋರಿ’ಯನ್ನು ಸೃಷ್ಟಿಸಲು ಸಹಾಯ ಮಾಡಿರುತ್ತದೆ. ಆದರೆ, ಜೈಲಿನ ಒಳಗೇ ಇರುವ ‘ಸ್ಟೋರಿ’ಗಳು? ಕನ್ನಡದ ಮಾಧ್ಯಮಗಳ […]

    August 30, 2016
    ...

    ‘ಬದುಕು ಬದಲಿಸಿದ ಹೋರಾಟ’: 16 ವರ್ಷ ಜೈಲುವಾಸ ಮುಗಿಸಿ ಬಂದವರು ಬಿಚ್ಚಿಟ್ಟ BPL ಕತೆ!

    ಕೋಲಾಹಲ ಸೃಷ್ಟಿಸಿದ್ದ 1999ರ ‘ಬಿಪಿಎಲ್ ಬಸ್ ಬರ್ನಿಂಗ್ ಕೇಸ್’ನಲ್ಲಿ ಪ್ರಮುಖ ಅಪರಾಧಿಯಾಗಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಆರ್. ಶ್ರೀನಿವಾಸ್ ಸ್ವಾತಂತ್ರ್ಯ ದಿನಾಚರಣೆಯ ದಿನ ಬಿಡುಗಡೆ ಹೊಂದಿದ್ದಾರೆ. ಸನ್ನಡತೆಯ ಆಧಾರದಲ್ಲಿ 16 ವರ್ಷಗಳ ಜೈಲು ಶಿಕ್ಷೆಯ ನಂತರ ಅವರು ಪರಪ್ಪನ ಅಗ್ರಹಾರ ಜೈಲಿನಿಂದ ಹೊರ ಬಂದಿದ್ದಾರೆ. 1999ರಲ್ಲಿ ಪ್ರತಿಭಟನೆ ವೇಳೆ ಬಿಪಿಎಲ್ ಬಸ್ ಸುಟ್ಟ ಘಟನೆಯಲ್ಲಿ ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದರು. ಪ್ರಕರಣದಲ್ಲಿ ಐವರಿಗೆ ಜೀವಾವಧಿ ಶಿಕ್ಷೆಯನ್ನು ಸುಪ್ರಿಂ ಕೋರ್ಟ್ ಖಾಯಂಗೊಳಿಸಿತ್ತು. ಆರ್. ಶ್ರೀನಿವಾಸ್, ಟಿ.ಕೆ.ಎಸ್. ಕುಟ್ಟಿ, ಎನ್.ವಿ. ರವಿ, ಆರ್. […]

    August 20, 2016

Top