An unconventional News Portal.

ಪತ್ರಿಕೋದ್ಯಮ
    ...
    iamgauri-transgenders-bangalore
    GAURI LANKESH FILES

    ಪತ್ರಕರ್ತೆಯ ಮಾನವೀಯ ಮುಖ: ‘ನಾನೂ ಗೌರಿ’ ಎಂದ ಬೆಂಗಳೂರಿನ ಲೈಂಗಿಕ ಅಲ್ಪಸಂಖ್ಯಾತರು!

    ಪತ್ರಕರ್ತೆ, ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆ ನಡೆದು ವಾರದ ನಂತರ ಬೆಂಗಳೂರಿನಲ್ಲಿ ನಡೆದ ‘ಪ್ರತಿರೋಧ ಸಮಾವೇಶ’ದಲ್ಲಿ ಲೈಂಗಿಕ ಅಲ್ಪಸಂಖ್ಯಾತರ ಭಾಗೀದಾರಿಕೆ ಎದ್ದು ಕಾಣುವಂತಿತ್ತು. ಅಷ್ಟೆ ಅಲ್ಲ; ಸಮಾವೇಶಕ್ಕಾಗಿ ಇದೇ ಸಮುದಾಯ ಭಿಕ್ಷೆ ಬೇಡಿ 2,351 ರೂಪಾಯಿಗಳ ದೇಣಿಗೆಯನ್ನೂ ನೀಡಿತು. ಸಮಾಜದಲ್ಲಿ ಬೇರೂರಿರುವ ಲೈಂಗಿಕತೆ ಬಗೆಗಿನ ‘ನಿಷಿದ್ಧ’ಗಳ ನಡುವೆಯೂ, ಲೈಂಗಿಕ ಅಲ್ಪಸಂಖ್ಯಾತರು ಗೌರಿ ಸಾವಿಗೆ ಕಂಬನಿಯನ್ನೇಕೆ ಮಿಡಿದರು? ಈ ಕುರಿತು ಇನ್ನಷ್ಟು ಆಳಕ್ಕಿಳಿದ ‘ಸಮಾಚಾರ’ಕ್ಕೆ ಕುತೂಹಲಕಾರಿ ಮಾಹಿತಿ ಲಭ್ಯವಾಯಿತು. ಕೆಲವೇ ವರ್ಷಗಳ ಹಿಂದೆ ಕರ್ನಾಟಕದಲ್ಲಿ ಹಿಜ್ರಾಗಳು ಎಂದರೆ ದರೋಡೆಕೋರರು,..

    September 14, 2017
    ...
    Kalanidhi Maran and Kavya Maran, Kaveri Kalanidhi
    ಟಿವಿ

    ‘ಉದಯ ನ್ಯೂಸ್’ ಮುಚ್ಚಲು ನೋಟಿಸ್: ನಷ್ಟ ತುಂಬಲು ಮಾರನ್ ಮಗಳ ‘ಪಾಕೆಟ್ ಮನಿ’ ಸಾಕು!

    ಕೋಪ, ಸಿಟ್ಟು, ಬೇಜಾರು, ಅಸಹನೆ, ಆಕ್ರೋಶ, ಖುಷಿ, ಸಂತಸ, ಸಂತೃಪ್ತಿ, ಉತ್ಸಾಹ… ಹೀಗೆ ನಾನಾ ಭಾವನೆಗಳನ್ನು ಅವುಗಳ ಅತಿರೇಕದಲ್ಲಿ ಅನುಭವಿಸುವ ಸಮುದಾಯ ಪತ್ರಕರ್ತರದ್ದು. ಇವುಗಳ ಜತೆಗೆ, ಉದ್ಯೋಗದ ಅಭದ್ರತೆಯೂ ಅವರನ್ನು ಯಾವ ಪರಿಯಲ್ಲಿ ಕಾಡಬಹುದು ಎಂಬುದಕ್ಕೆ ಕರ್ನಾಟಕದ ಸುದ್ದಿ ಮಾಧ್ಯಮದಲ್ಲಿ ಸದ್ಯ ನಡೆದಿರುವ ಈ ಬೆಳವಣಿಗೆಯೇ ಸಾಕ್ಷಿ. ಕಳೆದ ಐದು ವರ್ಷಗಳಲ್ಲಿ 3,834.95 ಕೋಟಿ ನಿವ್ವಳ ಲಾಭ ಗಳಿಸಿದ ಸನ್ ನೆಟ್ವರ್ಕ್ ತನ್ನ ಅಂಗ ಸಂಸ್ಥೆ ‘ಉದಯ ನ್ಯೂಸ್’ನ್ನು ಮುಚ್ಚಲು ತೀರ್ಮಾನಿಸಿದೆ. ನಷ್ಟದ ಕಾರಣವನ್ನು ಮುಂದಿಟ್ಟ ಸಂಸ್ಥೆಯ..

    August 26, 2017
    ...
    yava-seeme-book-1
    ಪತ್ರಿಕೆ

    ಪತ್ರಕರ್ತರ ಓದಿಗಾಗಿ: ಇದು ರಿಲಯನ್ಸ್‌ ಕಂಪನಿಯ ಪಿಆರ್‌ ಮ್ಯಾನೇಜ್‌ಮೆಂಟ್‌ ಚರಿತ್ರೆ!

      ಹಿರಿಯ ಪತ್ರಕರ್ತ ಅಜಿತ್‌ ಪಿಳ್ಳೈ ಅವರ ಲೇಖನಗಳ ಕನ್ನಡಾನುವಾದ ಇತ್ತೀಚೆಗೆ ‘ಇದು ಯಾವ ಸೀಮೆಯ ಚರಿತ್ರೆ?’ ಹೆಸರಿನಲ್ಲಿ ಶಿವಮೊಗ್ಗ ಮೂಲದ ಅಹರ್ನಿಶಿ ಪ್ರಕಾಶನ ಪ್ರಕಟಿಸಿದೆ. ಪತ್ರಕರ್ತರು ಓದಲೇಬೇಕಾದ ಪುಸ್ತಕ ಇದು. ‘ದಿ ಹಿಂದೂ’ ಪತ್ರಿಕೆಯಲ್ಲಿ ಹಾಸನ ಜಿಲ್ಲಾ ಹಿರಿಯ ವರದಿಗಾರರಾಗಿ ಕೆಲಸ ಮಾಡುತ್ತಿರುವ ಸತೀಶ್ ಜಿ. ಟಿ, ಅಜಿತ್‌ ಪಿಳ್ಳೈ ಅವರ  ‘Off the Record’ ಪುಸ್ತಕದ ಹಾಗೂ ಇತರೆ ಹಲವು ಲೇಖನಗಳನ್ನು ಕನ್ನಡಕ್ಕೆ ತಂದಿದ್ದಾರೆ. ಅದರ ಒಂದು ಭಾಗವನ್ನು ‘ಸಮಾಚಾರ’ ಇಲ್ಲಿ ಪ್ರಕಟಿಸುತ್ತಿದೆ. ಆಸಕ್ತಿ ಮೂಡಿಸುವ ಲೇಖನಗಳನ್ನು ಓದಲು..

    July 21, 2017
    ...
    CNN-fake-news
    ಮೀಡಿಯಾ 2.0

    ‘ಮೂಲಗಳು ತಿಳಿಸಿವೆ’: ಸುಳ್ಳು ಸುದ್ದಿ ಪ್ರಕಟಿಸಿ ಪೇಜಿಗೆ ಸಿಲುಕಿದ ಸಿಎನ್‌ಎನ್‌!

    ಅಮೆರಿಕಾದ ಮಾಧ್ಯಮ ಸಂಸ್ಥೆ ಸಿಎನ್ಎನ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಪ್ತರೊಬ್ಬರ ಕ್ಷಮೆ ಕೇಳಿದೆ. ಆಗಿದ್ದಿಷ್ಟೆ; ಸಿಎನ್ಎನ್ ಡೊನಾಲ್ಡ್ ಟ್ರಂಪ್ ಆಪ್ತರೊಬ್ಬರ ಬಗ್ಗೆ ಸುದ್ದಿಯೊಂದನ್ನು ಪ್ರಟಿಸಿತ್ತು. ನಂತರ ಈ ಸುದ್ದಿ ಸುಳ್ಳು ಎಂದು ಆ ‘ಆಪ್ತರು’ ಪ್ರತಿಪಾದಿಸಿದ್ದರು. ಆಂತರಿಕ ತನಿಖೆ ನಡೆಸಿ ತನ್ನ ಗೌರವ ಉಳಿಸಿಕೊಳ್ಳಲು ತಪ್ಪಿತಸ್ಥ ಮೂವರು ಪತ್ರಕರ್ತರನ್ನು ಹೊರಗಟ್ಟಿದೆ ಸಿಎನ್‌ಎನ್‌. ಸುದ್ದಿ ಇದಿಷ್ಟೇ ಆದರೂ ಮಾಧ್ಯಮ ಸಂಸ್ಥೆಯೊಂದು ವರದಿಗಳ ಪ್ರಕಟಣೆಗೆ ಅನುಸರಿಸಬೇಕಾದ ಮಾರ್ಗ, ಸುದ್ದಿಗಳ ಆಯ್ಕೆ ಮಾನದಂಡಗಳು, ಮಾಧ್ಯಮ ಸಂಸ್ಥೆಗಳ ಉತ್ತರದಾಯಿತ್ವ ಸುದ್ದಿಯಾಚೆಗಿನ ಚರ್ಚೆಗೆ ಮುನ್ನುಡಿ..

    June 28, 2017
    ...
    arnub-republic-message-final
    ಟಿವಿ

    ಉಳಿದಿರುವುದು 4 ದಿನ: ಕಿರುತೆರೆಗೆ ಅಪ್ಪಳಿಸಲಿರುವ ‘ಗೋಸ್ವಾಮಿ ರಿಪಬ್ಲಿಕ್’ ಹೇಗಿರಲಿದೆ?

    ಇನ್ನು ಉಳಿದಿರುವುದು ನಾಲ್ಕು ದಿನಗಳು ಅಷ್ಟೆ. ದೇಶದ ಇಂಗ್ಲಿಷ್ ಸುದ್ದಿ ವಾಹಿನಿಗಳ ಸಾಲಿಗೆ ಹೊಸ ‘ಅಬ್ಬರ’ವೊಂದು ಅಧಿಕೃತವಾಗಿ ಸೇರ್ಪಡೆಯಾಗಲಿದೆ. ಕಳೆದ ವರ್ಷ ಅಕ್ಟೋಬರ್ ಹೊತ್ತಿಗೆ ‘ಟೈಮ್ಸ್ ನೌ’ ವಾಹಿನಿಯಲ್ಲಿ ‘ನೇಷನ್ ವಾಂಟ್ಸ್ ಟು ನೋ’ ಅನ್ನುತ್ತಿದ್ದ ಪತ್ರಕರ್ತ ಅರ್ನಾಬ್ ಗೋಸ್ವಾಮಿ, ಈಗ ‘ರಿಪಬ್ಲಿಕ್’ ಟಿವಿಯಲ್ಲಿ ‘ನೇಷನ್ ಸ್ಟಿಲ್ ವಾಂಟ್ಸ್‌ ಟು ನೋ’ ಎನ್ನಲು ರೆಡಿಯಾಗಿದ್ದಾರೆ. ಮೇ. 6ಕ್ಕೆ ಅರ್ನಾಬ್ ಗೋಸ್ವಾಮಿ ನೇತೃತ್ವದ ‘ರಿಪಬ್ಲಿಕ್’ ಕಿರುತೆರೆಗೆ ಅಪ್ಪಳಿಸಲಿದೆ. ಈ ಗೋಸ್ವಾಮಿ ‘ರಿಪಬ್ಲಿಕ್’ ಟಿವಿ ಹೇಗಿರಲಿದೆ ಎಂಬುದಕ್ಕೆ ಕಳೆದ ತಿಂಗಳು ‘ಮ್ಯಾನ್ಸ್ ವರ್ಲ್ಡ್‌’..

    May 2, 2017
    ...
    cho ramaswamy Narendra Modi
    ಸುದ್ದಿ ಸಾರ

    ಜಯಲಲಿತಾ ಆಪ್ತ, ನರೇಂದ್ರ ಮೋದಿ ‘ರಾಜ ಗುರು’, ಚೋ ರಾಮಸ್ವಾಮಿ ಇನ್ನಿಲ್ಲ…

    ತಮಿಳುನಾಡು ಮೂಲದ ಹಿರಿಯ ಪತ್ರಕರ್ತ, ನಟ, ಬಹುಮುಖ ಪ್ರತಿಭೆ ಚೋ. ರಾಮಸ್ವಾಮಿ ಇಹಲೋಕ ತ್ಯಜಿಸಿದ್ದಾರೆ. ಚೋ ರಾಮಸ್ವಾಮಿ ಎಂದೇ ಜನಪ್ರಿಯರಾಗಿದ್ದ ರಾಜಕೀಯ ವಿಶ್ಲೇಷಕ ಶ್ರೀನಿವಾಸ ಐಯರ್ ರಾಮಸ್ವಾಮಿ ಹೃದಯಾಘಾತದಿಂದ ಬುಧವಾರ ಬೆಳಿಗ್ಗೆ ಚೆನ್ನೈನಲ್ಲಿ ಅಸುನೀಗಿದ್ದಾರೆ. ಅವರಿಗೆ 82 ವರ್ಷ ವಯಸ್ಸಾಗಿತ್ತು. ಜಯಲಲಿತಾರಿಗೆ ಆಪ್ತ ಗೆಳೆಯರೂ ಆಗಿದ್ದ ರಾಮಸ್ವಾಮಿ 1999ರಲ್ಲಿ ರಾಜ್ಯಸಭೆಗೆ ನಾಮ ನಿರ್ದೇಶನಗೊಂಡಿದ್ದರು. ಬಿ. ಡಿ. ಗೋಯೆಂಕಾ ‘ಎಕ್ಸಲೆನ್ಸ್ ಇನ್ ಜರ್ನಲಿಸಂ’ ಪ್ರಶಸ್ತಿಯೂ ಅವರಿಗೆ ಸಂದಿತ್ತು. 2014ರ ಲೋಕಸಭೆಯಲ್ಲಿ ನರೇಂದ್ರ ಮೋದಿ ಪರವಾಗಿ ಅಭಿಯಾನವನ್ನೂ ಆರಂಭಿಸಿದ್ದರು. ನಂತರ..

    December 7, 2016
    ...
    sugata-shrinivasraju
    ಪತ್ರಿಕೆ

    ‘ಸ್ನೇಹ- ಸೈದ್ಧಾಂತಿಕ ಸಂಘರ್ಷ’: ರಾಜೀವ್ ಚಂದ್ರಶೇಖರ್ ಮಾಧ್ಯಮ ಸಂಸ್ಥೆಗೆ ಸುಗತ ರಾಜೀನಾಮೆ

    ಕನ್ನಡ ಪತ್ರಿಕೋದ್ಯಮದಿಂದ ‘ಇಂಗ್ಲಿಷ್ ಪತ್ರಕರ್ತ’ರೊಬ್ಬರ ನಿರ್ಗಮನಕ್ಕೆ ದಿನಗಣನೆ ಆರಂಭವಾಗಿದೆ. ಮುಂದಿನ ತಿಂಗಳು ಡಿ. 31ಕ್ಕೆ ಸುಗತ ಶ್ರೀನಿವಾಸ ರಾಜು ಏಷಿಯಾನೆಟ್ ನ್ಯೂಸ್ ನೆಟ್ವರ್ಕ್ ಪ್ರೈ. ಲಿ. (ANNPL)ನ ಸಂಪಾದಕೀಯ ನಿರ್ದೇಶಕನ ಸ್ಥಾನದಿಂದ ಕೆಳಕ್ಕಿಳಿಯಲಿದ್ದಾರೆ. ಆಗಸ್ಟ್ ತಿಂಗಳಿನಲ್ಲಿಯೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಅವರು, ಸದ್ಯ ಒಂದು ತಿಂಗಳ ಮಟ್ಟಿಗೆ ಅದೇ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ. ಏಷಿಯಾನೆಟ್ ನ್ಯೂಸ್ ನೆಟ್ವರ್ಕ್ ಪ್ರೈ. ಲಿ., ಕನ್ನಡದಲ್ಲಿ ‘ಸುವರ್ಣ ನ್ಯೂಸ್’ ಸುದ್ದಿ ವಾಹಿನಿ ಹಾಗೂ ಕನ್ನಡ ಪ್ರಭ ದಿನಪತ್ರಿಕೆಯನ್ನು ಹೊರತರುತ್ತಿದೆ. ಸುಗತ ಶ್ರೀನಿವಾಸರಾಜು, ಹಿರಿಯ ಸಾಹಿತಿ ಶ್ರೀನಿವಾಸರಾಜು..

    November 28, 2016
    ...
    Arnab_G
    ಟಿವಿ

    Update: ಜೈನ್ ಮಾಲೀಕರ ‘ಚಿನ್ನದ ಮೊಟ್ಟೆ ಕೋಳಿ’; ಅರ್ನಾಬ್ ‘IS BACK’!

    ಭಾರತದ ವಿದ್ಯುನ್ಮಾನ ಮಾಧ್ಯಮದ ಚಹರೆಯನ್ನು ಕಳೆದ ಒಂದು ದಶಕಗಳ ಕಾಲ ತನಗೆ ಬೇಕಾದಂತೆ ಬದಲಿಸಿಕೊಂಡಿದ್ದ ಪತ್ರಕರ್ತ ಅರ್ನಾಬ್ ಗೋಸ್ವಾಮಿ ‘ನ್ಯೂಸ್ ಅವರ್’ ಸ್ಟುಡಿಯೋದಿಂದ ಹೊರ ಬಂದಿದ್ದಾರೆ. ಕ್ಷಮಿಸಿ, ‘ಟೈಮ್ಸ್ ನೌ’ ವಾಹಿನಿಯ ಸಂಪಾದಕ ಸ್ಥಾನದಿಂದ ಮಾತ್ರ. ಬದಲಿಗೆ ಅವರು ‘ನ್ಯೂಸ್ ಅವರ್’ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ ಎಂದು ಮೂಲಗಳು ಹೇಳುತ್ತಿವೆ. ಇದಕ್ಕೆ ಪೂರಕ ಎಂಬಂತೆ, ಅರ್ನಾಬ್ ಮತ್ತೆ ಟಿವಿಯಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಸಂದರ್ಶನದ ಮೊದಲ ಅತಿಥಿ ಮರಳಿ ಸ್ವಾಗತ ಕೋರಿಯೇ ಮಾತನ್ನು ಶುರು ಮಾಡಿದ್ದಾರೆ. ದೇಶದಲ್ಲಿ ನಡೆಯುತ್ತಿರುವ ‘ಜೈಲ್..

    November 1, 2016
    ...
    assange
    ವಿದೇಶ

    ದಶಕದ ಹಿಂದೆ ಜಗತ್ತನ್ನು ನಡುಗಿಸಿದ ಅಸಾಂಜೆ ಮತ್ತು ‘ವಿಕಿಲೀಕ್ಸ್’ ಎಂಬ ವಿಶಲ್ ಬ್ಲೋವರ್!

    ಆಧುನಿಕ ಪತ್ರಿಕೋದ್ಯಮದ ದಿಕ್ಕು ದೆಸೆಯನ್ನು ಬದಲಾಯಿಸಿದ ‘ವಿಕಿಲೀಕ್ಸ್ ಡಾಟ್ ಆರ್ಗ್’ ಹುಟ್ಟಿ ಹತ್ತು ವರ್ಷ ಸಂದಿದೆ. ಈ ಶುಭ ಸಂದರ್ಭಕ್ಕೆ ಹತ್ತು ಲಕ್ಷ ದಾಖಲೆಗಳ ಬಿಡುಗಡೆ ಮಾಡುವುದಾಗಿ ಸಂಸ್ಥಾಪಕ ಜೂಲಿಯನ್ ಅಸಾಂಜೆ ಹೇಳಿದ್ದಾರೆ. ಈ ದಾಖಲೆಗಳು ಅಮೆರಿಕಾ ಅಧ್ಯಕ್ಷೀಯ ಚುನಾವಣೆಗೆ ಸಂಬಂಧಿಸಿದ್ದು ಎಂಬುದು ಜಗತ್ತಿನಾದ್ಯಂತ ಕುತೂಹಲ ಹುಟ್ಟಿ ಹಾಕಿದೆ. 10 ವರ್ಷಗಳ ಹಿಂದೆ ಇದೇ ವಾರ ವಿಕಿಲೀಕ್ಸ್ ನೋಂದಾವಣೆಯಾಗಿತ್ತು. ಅದಾಗಿ 2007ರಲ್ಲಿ ಅಧಿಕೃತ ಚಾಲನೆ ಪಡೆದ ಈ ಸೋರಿಕೆಯ ಜಾಲ ತಾಣ ಪತ್ರಿಕೋದ್ಯಮಕ್ಕೆ ಹೊಸ ಅಂಗಿ ತೊಡಿಸಿದ್ದು..

    October 6, 2016
    ...
    Beautiful
    ಮೀಡಿಯಾ 2.0

    ಸಿಂಪಲ್ಲಾಗೊಂದು ‘ಬ್ಯೂಟಿಫುಲ್’ ಸಿನೆಮಾ: ಕತೆ ಒಂದು ವಿದ್ಯಾರ್ಥಿಗಳು ಹಲವರು!

    ಸ್ಟುಡೆಂಟ್ ಲೈಫ್ ಇಸ್ ‘ಬ್ಯೂಟಿಫುಲ್’ ಎನ್ನುತ್ತಿದ್ದಾರೆ ಎಸ್.ಡಿ.ಎಂ ಕಾಲೇಜಿನ ವಿದ್ಯಾರ್ಥಿಗಳು. ಪತ್ರಿಕೋದ್ಯಮಕ್ಕೂ, ಸಿನೆಮಾ ರಂಗಕ್ಕೂ ಇರುವ ನಂಟನ್ನು ಬೆಸೆಯುವ ಪ್ರಯತ್ನದ ಭಾಗದಂತೆ ಕಾಣಿಸುತ್ತಿರುವ ಈ ಕಾಲೇಜಿನ ವಿದ್ಯಾರ್ಥಿಗಳು 1 ಗಂಟೆ 40 ನಿಮಿಷಗಳ ಸಿನೆಮಾ ಒಂದನ್ನು ತೆರೆಗೆ ತರುತ್ತಿದ್ದಾರೆ. ಆ. 27ರಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನಲ್ಲಿ ಸಿನೆಮಾ ಪ್ರೀಮಿಯರ್ ಇಟ್ಟುಕೊಳ್ಳಲಾಗಿದೆ. ‘ಕತೆ ಒಂದು ಕತೆ ಹಲವು’ ಎಂಬ ಟ್ಯಾಗ್ ಲೈನ್ ಹೊಂದಿರುವ ‘ಬ್ಯೂಟಿಫುಲ್’ ಸಿನೆಮಾ ಹುಟ್ಟಿದ ಕತೆ ಕುತೂಹಲಕಾರಿಯಾಗಿದೆ. ವಿದ್ಯಾರ್ಥಿಗಳೇ ಸೇರಿ ನಿರ್ಮಿಸಿದ ಸಿನಿಮಾ..

    August 22, 2016

Top