An unconventional News Portal.

ಪತ್ರಕರ್ತ
  ...

  ಮೌನೇಶ್ ಪೋತರಾಜ್ ಸಾವಿಗೆ ‘ಮಾಲ್ಗುಡಿ ಟ್ವಿಸ್ಟ್’; ಕ್ರೈಂ ಸೀನ್ ಹುಟ್ಟುಹಾಕಿದ ಆ 7 ಶಂಕೆಗಳು

  ಕಳೆದ ಸುಮಾರು ಮೂವತ್ತು ಗಂಟೆಗಳಿಂದ ಪತ್ರಕರ್ತ ಮೌನೇಶ್ ಸಾವು ಮತ್ತು ನಂತರ ಆತನ ಶವವನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋದ ರೀತಿಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ. ಜಿಲ್ಲಾಡಳಿತ ಮತ್ತು ಪೊಲೀಸರ ವರ್ತನೆಯ ಬಗ್ಗೆ ಖಂಡನೆ ವ್ಯಕ್ತವಾಗುತ್ತಿದೆ. ಮೌನೇಶ್ ಅಪಘಾತದಿಂದ ಮೃತಪಟ್ಟಿದ್ದಾರೆ ಎಂಬುದನ್ನು ಪೊಲೀಸ್ ಮೂಲಗಳು ಮತ್ತು ಶಿರಸಿಯ ಬಹುತೇಕ ಪತ್ರಕರ್ತರು ಹೇಳುತ್ತಿದ್ದಾರಾದರೂ ಸಾವಿನ ಬಗ್ಗೆ ಹಲವು ಅನುಮಾನಗಳು ಮೌನೇಶ್ ಸ್ನೇಹಿತರಲ್ಲಿದೆ. ಆ ಅನುಮಾನಗಳಿಗೆ ಪುಷ್ಟಿ ನೀಡುತ್ತಿರುವ ಏಳು ಮಿಸ್ಸಿಂಗ್ ಲಿಂಕ್‌ಗಳನ್ನು ಪತ್ರಕರ್ತ ಮತ್ತು ಮೌನೇಶ್ ಸಹೋದ್ಯೋಗಿ […]

  January 15, 2018
  ...

  ‘Killers of ಗೌರಿ ಲಂಕೇಶ್’: ಈ ಬಾರಿ ಸುಳಿವು ಬಿಟ್ಟು ಕೊಡಲಿದೆಯಾ ಸಿಸಿಟಿವಿ?

  ಕರ್ನಾಟಕದಲ್ಲಿ ಮತ್ತೊಬ್ಬ ‘ಬುದ್ಧಿಜೀವಿ’ಯ ಹತ್ಯೆ ನಡೆದು ಹೋಗಿದೆ. ವಿದ್ವಾಂಸ ಎಂ. ಎಂ. ಕಲ್ಬುರ್ಗಿ ಹತ್ಯೆ ನಡೆದು 2 ವರ್ಷ ಒಂದು ವಾರದ ಅಂತರದಲ್ಲಿ ಪತ್ರಕರ್ತೆ, ಹೋರಾಟಗಾರ್ತಿ, ಬಲಪಂಥೀಯ ವಿಚಾರಗಳ ವಿಮರ್ಶಕಿ, ರಾಜ್ಯದಲ್ಲಿ ನಕ್ಸಲ್ ಹೋರಾಟಗಾರರನ್ನು ಮುಖ್ಯವಾಹಿನಿಗೆ ತರುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಗೌರಿ ಲಂಕೇಶ್ ತಮ್ಮ ಮನೆಯ ಮುಂದೆಯೇ ಗುಂಡೇಟಿಗೆ ಬಲಿಯಾಗಿದ್ದಾರೆ. ಮಂಗಳವಾರ ರಾತ್ರಿ 8 ಗಂಟೆ ಸುಮಾರಿಗೆ ಕಚೇರಿಯಿಂದ ಮನೆಗೆ ಮರಳಿದ ಗೌರಿ ಕಾರು ನಿಲ್ಲಿಸಿ ಗೇಟು ದಾಟಿ ಒಳ ಪ್ರವೇಶಿದ ನಂತರ ಅವರ ಮೇಲೆ ದಾಳಿ […]

  September 6, 2017
  ...

  ಜಯಲಲಿತಾ ಆಪ್ತ, ನರೇಂದ್ರ ಮೋದಿ ‘ರಾಜ ಗುರು’, ಚೋ ರಾಮಸ್ವಾಮಿ ಇನ್ನಿಲ್ಲ…

  ತಮಿಳುನಾಡು ಮೂಲದ ಹಿರಿಯ ಪತ್ರಕರ್ತ, ನಟ, ಬಹುಮುಖ ಪ್ರತಿಭೆ ಚೋ. ರಾಮಸ್ವಾಮಿ ಇಹಲೋಕ ತ್ಯಜಿಸಿದ್ದಾರೆ. ಚೋ ರಾಮಸ್ವಾಮಿ ಎಂದೇ ಜನಪ್ರಿಯರಾಗಿದ್ದ ರಾಜಕೀಯ ವಿಶ್ಲೇಷಕ ಶ್ರೀನಿವಾಸ ಐಯರ್ ರಾಮಸ್ವಾಮಿ ಹೃದಯಾಘಾತದಿಂದ ಬುಧವಾರ ಬೆಳಿಗ್ಗೆ ಚೆನ್ನೈನಲ್ಲಿ ಅಸುನೀಗಿದ್ದಾರೆ. ಅವರಿಗೆ 82 ವರ್ಷ ವಯಸ್ಸಾಗಿತ್ತು. ಜಯಲಲಿತಾರಿಗೆ ಆಪ್ತ ಗೆಳೆಯರೂ ಆಗಿದ್ದ ರಾಮಸ್ವಾಮಿ 1999ರಲ್ಲಿ ರಾಜ್ಯಸಭೆಗೆ ನಾಮ ನಿರ್ದೇಶನಗೊಂಡಿದ್ದರು. ಬಿ. ಡಿ. ಗೋಯೆಂಕಾ ‘ಎಕ್ಸಲೆನ್ಸ್ ಇನ್ ಜರ್ನಲಿಸಂ’ ಪ್ರಶಸ್ತಿಯೂ ಅವರಿಗೆ ಸಂದಿತ್ತು. 2014ರ ಲೋಕಸಭೆಯಲ್ಲಿ ನರೇಂದ್ರ ಮೋದಿ ಪರವಾಗಿ ಅಭಿಯಾನವನ್ನೂ ಆರಂಭಿಸಿದ್ದರು. ನಂತರ […]

  December 7, 2016
  ...

  ಮಟ್ಟು, ಪೂಜಾರಿ, ಜೈನ್ ಮತ್ತು ‘ಬಿಲ್ಲವ ರಾಜಕಾರಣ’: ಚುನಾವಣಾ ಕಣಕ್ಕೆ ದಿನೇಶ್ ಅಮೀನ್?

  ದಕ್ಷಿಣ ಕನ್ನಡದ ಕಾಂಗ್ರೆಸ್ ಪಡಸಾಲೆಯಲ್ಲಿ ಮುಂದಿನ ವಿಧಾನಸಭೆ ಚುನಾವಣೆಯ ಲೆಕ್ಕಾಚಾರಗಳು ಶುರುವಾಗಿವೆ. ವಿಧಾನಸಭೆ ಕ್ಷೇತ್ರಗಳಿಗೆ ಅಭ್ಯರ್ಥಿಗಳು ಯಾರ್ಯಾರು ಎಂಬ ಚರ್ಚೆಗಳು ಆರಂಭವಾಗಿದ್ದು, ಮೂಡುಬಿದಿರೆ ಕ್ಷೇತ್ರಕ್ಕೆ ಕಾಂಗ್ರೆಸ್ ವಲಯದಿಂದ ಅಚ್ಚರಿಯ ರೀತಿಯಲ್ಲಿ ಪತ್ರಕರ್ತರೊಬ್ಬರ ಹೆಸರು ಕೇಳಿ ಬರುತ್ತಿದೆ. ಅವರು ಮತ್ಯಾರೂ ಅಲ್ಲ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು. “ಮುಂದಿನ ಮೂಡುಬಿದಿರೆ ಕ್ಷೇತ್ರದ ಕಾಂಗ್ರೆಸ್ ಸಾಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿ ದಿನೇಶ್ ಅಮೀನ್ ಮಟ್ಟು ಕೂಡಾ ಇದ್ದಾರೆ,” ಎನ್ನುತ್ತಾರೆ ಮಂಗಳೂರು ಕಾಂಗ್ರೆಸ್ಸಿನ ಹಿರಿಯರೂ ಆದ ಮಾಜಿ ಶಾಸಕರೊಬ್ಬರು. ದಿನೇಶ್ ಆಪ್ತವಲಯದವರೇ ಹೇಳುವ ಪ್ರಕಾರ, […]

  December 5, 2016
  ...

  ‘ಕೋರ್ಟ್ ಬೀಟ್’ ವರದಿಗಾರರಿಗೆ ಕಾನೂನು ಪದವಿ ಕಡ್ಡಾಯ: ಕೇರಳ ಹೈಕೋರ್ಟ್ ಹೊಸ ನಿಯಮ

  ಕೇರಳ ಹೈಕೋರ್ಟಿನ ವಕೀಲರು ಮತ್ತು ಪತ್ರಕರ್ತರ ನಡುವಿನ ಮುಸುಕಿನ ಗುದ್ದಾಟ ಹೊಸ ನಿಯಮದೊಂದಿಗೆ ಅಂತ್ಯವಾಗಿದೆ. ಕೇರಳ ಹೈಕೋರ್ಟಿನ ವಿಚಾರಣೆಗಳನ್ನು ವರದಿ ಮಾಡಲು ತೆರಳುವ ಪತ್ರಕರ್ತರಿಗೆ ಕಾನೂನು ಪದವಿಯನ್ನು ಕೋರ್ಟ್ ಕಡ್ಡಾಯಗೊಳಿಸಿದೆ. ತಕ್ಷಣದಿಂದ ಜಾರಿಗೆ ಬರುವಂತೆ ಹೈಕೋರ್ಟ್ ಈ ನಿಯಮಗಳನ್ನು ಜಾರಿಗೆ ತಂದಿದೆ. ಈ ಮೂಲಕ ಕೋರ್ಟ್ ಬೆಳವಣಿಗೆಗಳನ್ನು ವರದಿ ಮಾಡುವ ಪತ್ರಕರ್ತರು ‘ಲೀಗಲ್ ಕರೆಸ್ಪಾಂಡೆಂಟ್’ ಮಾನ್ಯತೆ ಪಡೆದುಕೊಳ್ಳಲು ಲಾ ಪದವಿ ಹೊಂದುವುದು ಅನಿವಾರ್ಯವಾಗಿದೆ. ಹೊಸ ನಿಯಮಗಳ ಪ್ರಕಾರ, ವರದಿಗಾರರಿಗೆ ಎರಡು ಪ್ರಕಾರದ ಮಾನ್ಯತೆಗಳನ್ನು ಕೋರ್ಟ್ ನೀಡುತ್ತದೆ. ಸಾಮಾನ್ಯ ಮತ್ತು ತಾತ್ಕಾಲಿಕ […]

  November 18, 2016
  ...

  ಪಾಕ್ ಮೂಲದ ಉಗ್ರರಿಂದ ಬೆದರಿಕೆ: ಪತ್ರಕರ್ತ ಅರ್ನಾಬ್ ಗೋಸ್ವಾಮಿಗೆ ವಿಶೇಷ ಭದ್ರತೆ!

  ನೆರೆಯ ದೇಶದ ವಿರುದ್ಧ ತಮ್ಮ ಟಿವಿ ಶೋಗಳಲ್ಲಿ ಕೆಂಡ ಕಾರುವ ಅರ್ನಾಬ್ ಗೋಸ್ವಾಮಿ, ಈಗ ಪಾಕ್ ಭಯೋತ್ಪಾಕರಿಂದ ಬೆದರಿಕೆ ಎದುರಿಸುತ್ತಿದ್ದಾರಂತೆ. ಈ ಕಾರಣಕ್ಕೆ ಅವರಿಗೆ ‘ವೈ’ ಶ್ರೇಣಿಯ ಭದ್ರತೆ ಒದಗಿಸಲಾಗಿದೆ. ‘ವೈ’ ಶ್ರೇಣಿಯ ಭದ್ರತೆ ಪಡೆಯಲಿರುವ ಅರ್ನಾಬ್ ಗೋಸ್ವಾಮಿಯನ್ನು 20 ಜನ ಸಿಬ್ಬಂದಿಗಳು ದಿನದ 24 ಗಂಟೆಯೂ ಕಾಯಲಿದ್ದಾರೆ. ಇವರಲ್ಲದೇ ಇಬ್ಬರು ಆಪ್ತ ಭದ್ರತಾ ಸಹಾಯಕರೂ ಇರಲಿದ್ದು, ಸಮೀಪದ ದಾಳಿಗಳಿಂದ ‘ಟೈಮ್ಸ್ ನೌ’ ಸಂಪಾದಕರನ್ನು ರಕ್ಷಿಸಲಿದ್ದಾರೆ. ಸಾಮಾನ್ಯವಾಗಿ ಸರಕಾರ ಎರಡು ರೀತಿಯಲ್ಲಿ ಭದ್ರತೆ ನೀಡುತ್ತದೆ. ವ್ಯಕ್ತಿಯ ಹುದ್ದೆಯನ್ನು ಆಧರಿಸಿ ಭದ್ರತೆ […]

  October 16, 2016
  ...

  ಅಪರೂಪದ ಪತ್ರಕರ್ತ ಗೋಪಾಲ್ ವಾಜಪೇಯಿ ಇನ್ನು ನೆನಪು ಮಾತ್ರ

  ಹಿರಿಯ ಪತ್ರಕರ್ತ, ಸಾಹಿತಿ ಗೋಪಾಲ್ ವಾಜಪೇಯಿ ಮಂಗಳವಾರ ಇಹಲೋಕ ತ್ಯಜಿಸಿದ್ದಾರೆ. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ವಾಜಪೇಯಿ ಬೆಂಗಳೂರಿನ ಕುಸುಮಾ ಆಸ್ಪತ್ರೆಯಲ್ಲಿ ಕಳೆದ ಕೆಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು.  ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ರಾತ್ರಿ 9:30ರ ಸುಮಾರಿಗೆ ನಿಧನರಾಗಿದ್ದಾರೆ. ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದು, ಅವರಿಗೆ 64 ವರ್ಷ ವಯಸ್ಸಾಗಿತ್ತು. ವೃತ್ತಿಯಿಂದ ಪತ್ರಕರ್ತರಾಗಿದ್ದ ಗೋಪಾಲ್ ವಾಜಪೇಯಿ ಸಿನಿಮಾ ಗೀತರಚನೆಕಾರ, ಸಂಭಾಷಣೆಕಾರ, ಸಾಹಿತಿ, ನಟರಾಗಿಯೂ ಖ್ಯಾತಿಗಳಿಸಿದ್ದರು. ಆತ್ಮೀಯರಿಂದ ಗೋಪಾಲ ಕಾಕಾ ಎಂದೇ ಕರೆಯಲ್ಪಡುತ್ತಿದ್ದ ವಾಜಪೇಯಿ, ಗದಗದ […]

  September 21, 2016
  ...

  ‘ಹೊಟ್ಟೆಪಾಡಿನ ನ್ಯಾಯ’: ಪತ್ರಕರ್ತರ ವೃತ್ತಿ ಬದುಕು ಮತ್ತು ಕಾನೂನು ಕಟ್ಟಳೆಗಳು!

  ವಿಭಿನ್ನ ವಿನ್ಯಾಸದ ವೃತ್ತಿಗಳಲ್ಲಿ ಪತ್ರಿಕೋದ್ಯಮ ಕೂಡಾ ಒಂದು. ಇಲ್ಲಿನ ಸವಾಲುಗಳು, ಕೆಲಸದ ಸಮಯಗಳು, ಒತ್ತಡಗಳ ವೈವಿಧ್ಯ ಬಹುಶಃ ಬೇರಾವ ವೃತ್ತಿಗಳಲ್ಲೂ ಕಾಣಲು ಸಾಧ್ಯವಿಲ್ಲ. ಇದೇ ಕಾರಣಕ್ಕೋ ಏನೋ ಕೇಂದ್ರ ಸರಕಾರ ಕಾರ್ಮಿಕ ಇಲಾಖೆಯಡಿಯಲ್ಲಿ ಪತ್ರಕರ್ತರಿಗಾಗಿಯೇ ಪ್ರತ್ಯೇಕ (The Working Jiournalists and Other Newspaper Employees (Conditions of Service) and Miscellaneous Provisions Act – 1955) ಕಾಯ್ದೆಯನ್ನೂ ಜಾರಿಗೆ ತಂದಿದೆ; ಎಷ್ಟರ ಮಟ್ಟಿಗೆ ಪತ್ರಿಕೆಗಳು, ಟಿವಿ ಮಾಧ್ಯಮಗಳು, ನ್ಯೂಸ್ ಚಾನೆಲ್ಗಳು ಇದನ್ನು ಪಾಲನೆ ಮಾಡುತ್ತಿವೆ […]

  September 12, 2016
  ...

  ಯುವ ಪತ್ರಕರ್ತೆಯ ‘ಮಾತ್ರೆ ಸೇವನೆ’ ಮತ್ತು ‘ಈ ಟಿವಿ’ ನ್ಯೂಸ್ ಸುತ್ತ ನಡೆದ ಬೆಳವಣಿಗೆಗಳು!

  ದೇಶದ ಅತಿದೊಡ್ಡ ಉದ್ಯಮಿಯ ಒಡೆತನಕ್ಕೆ ಇತ್ತೀಚೆಗೆ ಒಳಗಾಗಿರುವ ‘ಈಟಿವಿ ನ್ಯೂಸ್ ಕನ್ನಡ’ (ಪ್ರದೇಶ್ 18) ವಾಹಿನಿಯ ಪತ್ರಕರ್ತೆಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ಸುದ್ದಿ ಗುರುವಾರ ಮಾಧ್ಯಮ ವಲಯದಲ್ಲಿ ಬಿಸಿಬಿಸಿ ಚರ್ಚೆಗೆ ಗ್ರಾಸವಾಯಿತು. ಅದರಲ್ಲೂ ಕಳೆದ ಕೆಲವು ದಿನಗಳಿಂದ ಅಧಿಕಾರಿಗಳ ಆತ್ಮಹತ್ಯೆ ಕುರಿತಾದ ನಿರಂತರ ಸುದ್ದಿಗಳನ್ನು ನೀಡುತ್ತಿದ್ದ ಸುದ್ದಿ ಮಾಧ್ಯಮಗಳ ವಲಯದೊಳಗೇ ನಡೆದ ಈ ಬೆಳವಣಿಗೆ ಸಹಜ ಕುತೂಹಲಕ್ಕೆ, ಆತುರದಲ್ಲಿ ಹುಟ್ಟಿಕೊಳ್ಳುವ ಊಹಾಪೋಹಗಳಿಗೆ ಕಾರಣವಾಯಿತು. ಇದರ ಜತೆಗೆ, ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಹೇಳಲಾದ ಪತ್ರಕರ್ತೆಯ ಫೊಟೋ, ಅರ್ಧಂಬರ್ಧ  ಮಾಹಿತಿಯನ್ನು […]

  August 5, 2016
  ...

  ಪತ್ರಕರ್ತರ ಹೊಟ್ಟೆಯಲ್ಲಿ ಪತ್ರಕರ್ತರೇ ಹುಟ್ಟುತ್ತಾರೆ ಎಂದು ಹೇಳಲು ಹೆಚ್ಚಿನ ಪುರಾವೆಗಳು ಸಿಗುವುದಿಲ್ಲ!

  ರಾಜಕಾರಣಿಗಳ ಮಕ್ಕಳು ರಾಜಕಾರಣಿಗಳಾಗುವುದು, ವೈದ್ಯರ ಮಕ್ಕಳು ವೈದ್ಯರಾಗುವುದು, ಅಧಿಕಾರಿಗಳ ಮಕ್ಕಳು ಅಧಿಕಾರಿಗಳೇ ಆಗುವುದು ಸಾಮಾನ್ಯವಾಗಿ ಕಂಡುಬರುತ್ತಿರುವ ಸಮಯದಲ್ಲಿ ರಾಜ್ಯದ ಪತ್ರಕರ್ತರು ಮಕ್ಕಳು ಏನಾಗುತ್ತಿದ್ದಾರೆ? ಹೀಗೊಂದು ಕುತೂಹಲ ಪ್ರಶ್ನೆಯನ್ನು ಇಟ್ಟುಕೊಂಡು ‘ಸಮಾಚಾರ’ ಒಂದಷ್ಟು ಹಿರಿಯ- ಕಿರಿಯ ಪತ್ರಕರ್ತರನ್ನು ಮಾತನಾಡಿಸಿತು. ಈ ಸಮಯದಲ್ಲಿ ಹಲವರು ವ್ಯಕ್ತಪಡಿಸಿದ ಅಭಿಪ್ರಾಯಗಳು ಅಚ್ಚರಿ ಮೂಡಿಸುವಂತಿವೆ. ಇವು ಯಾಕೆ ಪತ್ರಕರ್ತರ ಮಕ್ಕಳು ಪತ್ರಿಕೋದ್ಯಮದ ಕಡೆ ಹೆಚ್ಚಾಗಿ ತಲೆ ಕೆಡಿಸಿಕೊಳ್ಳುವುದಿಲ್ಲ, ಎಂತಹ ಹಿನ್ನೆಲೆಯ ಪತ್ರಕರ್ತರ ಮಕ್ಕಳು ಪತ್ರಿಕೋದ್ಯಮಕ್ಕೆ ಬರುತ್ತಾರೆ ಮತ್ತಿತರ ವಿಚಾರಗಳನ್ನು ಅರ್ಥ ಮಾಡಿಕೊಳ್ಳಲು ಒಂದಷ್ಟು ಒಳನೋಟಗಳನ್ನು ನೀಡುತ್ತವೆ. […]

  May 27, 2016
 • 1
 • 2

Top