An unconventional News Portal.

ನ್ಯಾಯಾಲಯ
    ...

    ಬದುಕು ಅರಸಲು ಉದ್ಯೋಗ ಸಾಕಿತ್ತು; ನಿರುದ್ಯೋಗ ಕಂಬಿ ಹಿಂದೆ ತಳ್ಳಿತ್ತು…

    ಹಾವೇರಿ ಈಗ ಕರ್ನಾಟಕದ ಒಂದು ಜಿಲ್ಲೆ. ಈ ಮೊದಲು ಅದು ಧಾರವಾಡದ ಜಿಲ್ಲೆಗೆ ಸೇರಿತ್ತು. 1997ರಲ್ಲಿ ಧಾರವಾಡ ದಕ್ಷಿಣದ ಏಳು ತಾಲ್ಲೂಕುಗಳನ್ನು ಪತ್ಯೇಕಿಸಿ, ಹಾವೇರಿ ಜಿಲ್ಲೆಯನ್ನು ಸ್ಥಾಪಿಸಲಾಯಿತು. ಜಿಲ್ಲೆಯ ವಿಸ್ತೀರ್ಣ 4,823 ಚದರ ಕಿ,ಮೀ ಇದೆ. 2011ರ ಜನಗಣತಿ ಜನಗಣತಿ ಪ್ರಕಾರ, ಜಿಲ್ಲೆಯ ಒಟ್ಟು  ಜನಸಂಖ್ಯೆ 15,97,668 ಇದೆ. ಇದು 7 ವರ್ಷಗಳಲ್ಲಿ ಇನ್ನೂ ಹೆಚ್ಚಾಗಿದೆ. ಇಲ್ಲಿ ಮಳೆ ಕಡಿಮೆ. ಒಣ ಭೂಮಿಯೇ ಅಧಿಕ. ಮಳೆಯೇ ಕೃಷಿಗೆ ಆಧಾರವಿಲ್ಲಿ. ವರ್ಷಪೂರ್ತಿಯಂತೂ ಇಲ್ಲಿನ ಜನರಿಗೆ ಉದ್ಯೋಗ ಸಿಗುವುದಿಲ್ಲ. ಹಲವರು ಉದ್ಯೋಗ ಅರಸಿಕೊಂಡು ಬೇರೆ ಬೇರೆ ನಗರಗಳಿಗೆ […]

    February 5, 2018
    ...

    ಹಣದಾಸೆಗಾಗಿ ದಾರಿ ತಪ್ಪಿ ರಾಯಚೂರಿನ ಜೈಲಿನಲ್ಲಿ ಬಂಧಿಯಾದ ತೆಲಂಗಾಣದ ಯುವಕನ ಕತೆ

    ಹಿಂದಿನ ಆಂಧ್ರಪ್ರದೇಶದ ತೆಲಂಗಾಣ ಭಾಗ (ಈಗ ತೆಲಂಗಾಣ ಪ್ರತ್ಯೇಕ ರಾಜ್ಯವಾಗಿದೆ) ತೀರಾ ಹಿಂದುಳಿದ ಪ್ರದೇಶ. ಕೃಷಿ, ಕೈಗಾರಿಕೆ, ಬೆಳವಣಿಗೆ ಇಲ್ಲ. ಇಲ್ಲಿ ಭೂಹೀನ ರೈತರೇ ಹೆಚ್ಚು. ಕರಾವಳಿ ಆಂಧ್ರ ಹಾಗೂ ರಾಯಲಸೀಮೆ ಆಂಧ್ರಕ್ಕೆ ಹೋಲಿಸಿದರೆ ತೆಲಂಗಾಣ ವಿಚಾರದಲ್ಲಿ ಅತೀ ಹಿಂದುಳಿದಿರುವಿಕೆ ಎದ್ದು ಕಾಣುತ್ತಿತ್ತು. ಈ ಭಾಗದ ಬಡಗಿ ಕುಟುಂಬದ ಹುಡುಗ ರಘು. ಮನೆಕಡೆ ಎರಡೆಕರೆ ಒಣಭೂಮಿ ಇತ್ತು. ಅಪ್ಪ ಮಾಡುತ್ತಿದ್ದ ಬಡಗಿ ಕೆಲಸವೇ ಜೀವನಾಧಾರ. ತಂದೆ ತಾಯಿ ತಂಗಿಯಿರುವ ಕುಟುಂಬ ಈತನದು. ತಂಗಿ ಎಂಟನೇ ತರಗತಿ ಓದುತ್ತಿದ್ದಳು. […]

    January 24, 2018
    ...

    ‘ಎಜ್ಯೂಕೇಟೆಡ್ ಫೂಲ್ಸ್’: ಎರಡನೇ ಮದುವೆಯಾಗಿ ಜೈಲೂಟ ಅನುಭವಿಸಿದ ಸಿವಿಲ್ ಎಂಜಿನಿಯರ್ ಕಥೆ!

    ಹೆಸರು ಗಂಗಾಧರ. ವೃತ್ತಿಯಲ್ಲಿ ಸಿವಿಲ್ ಎಂಜಿನಿಯರ್, ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಕೈ ತುಂಬಾ ಸಂಬಳದ ಉದ್ಯೋಗದಲ್ಲಿದ್ದ. ಗ್ರಾಮೀಣ ಹಿನ್ನೆಲೆ ಆತ ಚಾಮರಾಜನಗರ ಕಡೆಯವನು. ಆರೇಳು ಎಕರೆ ಭೂಮಿಯಿತ್ತು. ತಂದೆ-ತಾಯಿ ರೈತಾಪಿ ಹಿನ್ನಲೆಯವರೇ. ಮನೆಗೆ ಇವನೊಬ್ಬನೇ ಗಂಡು ಮಗ ಬೇರೆ. ಈತ ಓದಿನ ಕಾರಣಕ್ಕಾಗಿ ನಗರಗಳಲ್ಲಿಯೇ ಬೆಳೆದಿದ್ದ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಮಾತ್ರ ಗ್ರಾಮೀಣ ಭಾಗದಲ್ಲಿ ಪಡೆದಿದ್ದ. ಉದ್ಯೋಗ ಸಿಕ್ಕಿದ ಮೇಲೆ ನೆಂಟರಿಷ್ಟರ ಕುಟುಂಬವೊಂದರ ಹುಡುಗಿಯೊಂದಿಗೆ ಮದುವೆ ಮಾಡಿದ್ದರು. ಎರಡು ಮಕ್ಕಳೂ ಆಗಿದ್ದವು. ಈತನ ಇಬ್ಬರು ಅಕ್ಕಂದಿರಿಗೆ ಮದುವೆ ಮಾಡಿ […]

    January 19, 2018
    ...

    ‘ಒಪ್ಪಿತ ಸಂಬಂಧ; ತುಪ್ಪದ ಹೋಮ’: ಕೇಸು ಖುಲಾಸೆಗೊಂಡರೂ ನಿಲ್ಲದ ಕಂಪನ; ಹವ್ಯಕರ ಬಂಧನ!

    ಇದೊಂದು ಅಧಿಕಾರ ಕೇಂದ್ರಕ್ಕೆ ಹತ್ತಿರದಲ್ಲಿರುವ ಜನಪ್ರಿಯ ಮಠ, ತುಪ್ಪದಲ್ಲಿ ಹೋಮ ಮಾಡುವ ಮೂಲಕ ವಾತಾವರಣದ ಆಮ್ಲಜನಕವನ್ನು ಹೆಚ್ಚಿಸುತ್ತೀವಿ ಎಂದು ಪ್ರಚಾರ ಪಡೆದವರು. ಮಲೆನಾಡಿನ ಗಿಡ್ಡ ತಳಿಯ ಹಸುಗಳ ಸಾಕಾಣಿಕೆಯ ಮೂಲಕ ‘ಗೋ ಸಂರಕ್ಷಣೆ’ಯ ಮಹತ್ವವನ್ನು ಹಂಚುತ್ತಿದ್ದವರು. ಹೀಗಿರುವಾಗಲೇ ಮಠದ ಉತ್ತರಾಧಿಕಾರಿಯಾಗಿ ಬಂದ ಯುವ ಸ್ವಾಮೀಜಿಯ ‘ಒಪ್ಪಿತ ಲೈಂಗಿಕ ಸಂಬಂಧ’ ಜಗಜ್ಜಾಹೀರಾಯಿತು. ಮೂರು ವರ್ಷಗಳ ಅಂತರದಲ್ಲಿ ದೂರು, ತನಿಖೆ, ವಿಚಾರಣೆಗಳೆಲ್ಲಾ ನಡೆದು ಹೋದವು. ನ್ಯಾಯಾಲಯದಲ್ಲಿ ಪ್ರಕರಣ ಖುಲಾಸೆಗೊಂಡಿತು. ಮಳೆ ನಿಂತ ಮೇಲೂ ಹನಿಗಳು ಉದುರುವಂತೆ; ನ್ಯಾಯಾಲಯದಲ್ಲಿ ಪರಿಹಾರ ಕಂಡ ಪ್ರಕರಣ, […]

    December 29, 2017
    ...

    ಬಹುಕೋಟಿ ಮೇವು ತಿಂದು ಜೈಲು ಪಾಲಾದ ಲಾಲೂ; ಶಿಕ್ಷೆಯಲ್ಲೂ ಅನುಕಂಪ ಗಿಟ್ಟಿಸ್ತಾರಾ ‘ಮಾಸ್ ಲೀಡರ್’?

    ರಾಷ್ಟ್ರೀಯ ಜನತಾ ದಳ (ಆರ್.ಜೆ.ಡಿ) ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಮತ್ತೆ ಜೈಲು ಪಾಲಾಗಿದ್ದಾರೆ. ಪ್ರಖ್ಯಾತ ಮೇವು ಹಗರಣದಲ್ಲಿ ಲಾಲೂ ದೋಷಿ ಎಂದು ರಾಂಚಿಯ ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. ಲಾಲೂ ಪ್ರಸಾದ್ ಯಾದವ್ ಸೇರಿ 15 ಜನರು ದೋಷಿಗಳು ಎಂದು ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಶಿವಪಾಲ್ ಸಿಂಗ್ ಆದೇಶ ನೀಡಿದ್ದಾರೆ. ಆದರೆ ಬಿಹಾರದ ಮಾಜಿ ಮುಖ್ಯಮಂತ್ರಿ ಡಾ. ಜಗನ್ನಾಥ್ ಮಿಶ್ರಾ ಸೇರಿ 7ಜನರನ್ನು ನ್ಯಾಯಾಲಯ ಪ್ರಕರಣದಿಂದ ಖುಲಾಸೆಗೊಳಿಸಿದೆ. ಅಪರಾಧಿಗಳಿಗೆ 2018ರ ಜನವರಿ 3ರಂದು […]

    December 23, 2017
    ...

    ‘ಪ್ರೇಮಾಂಗಣದಿಂದ ಹೋರಾಟದ ಕಣಕ್ಕೆ’: ಮರ್ಯಾದಾ ಹತ್ಯೆ ವಿರುದ್ಧ ಹೋರಾಡಿದ ಕೌಶಲ್ಯ ಕತೆ!

    ಮಾರ್ಚ್‌ 13, 2016; ತಮಿಳುನಾಡಿನ ತಿರುಪುರ ಜಿಲ್ಲೆಯ ಉದಮಲ್ಪೇಟೆ ಬಸ್‌ ನಿಲ್ದಾಣ. ಜನ ಪ್ರಯಾಣಕ್ಕಾಗಿ ಬಸ್‌ಗಳಿಗೆ ಕಾಯುತ್ತ ನಿಂತಿದ್ದರು. ಗುಂಪಿನಲ್ಲಿ ಶಾಪಿಂಗ್ ಮುಗಿಸಿಕೊಂಡು ಗೂಡಿಗೆ ಮರಳಲು ಅಣಿಯಾಗಿದ್ದ ಅದೊಂದು ಜೋಡಿಯೂ ಇತ್ತು. ಇದ್ದಕ್ಕಿದ್ದಂತೆ ಬಂದ ತಂಡವೊಂದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸತೊಡಗಿದರು. ಸಾರ್ವಜನಿಕರ ಎದುರಿಗೆ ಹುಡುಗ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡತೊಡಗಿದ. ಆತನ ದೇಹದ ಮೇಲೆ ಬೀಳುತ್ತಿದ್ದ ಮಚ್ಚಿನೇಟುಗಳನ್ನು ತಡೆಯಲು ಆಕೆ ಪ್ರಯತ್ನ ಪಡುತ್ತಿದ್ದಳು. ಆಕೆಯ ತಲೆಯಿಂದ ರಕ್ತ ಸೋರತೊಡಗಿತು. ಕೊನೆಗೆ, ಜನರೇ ಮುಂದೆ ಬಂದು ಹಲ್ಲೆಕೋರರನ್ನು ಹತೋಟಿಗೆ […]

    December 13, 2017
    ...

    ಸೋಮನಾಥ ನಾಯಕ್ vs ವೀರೇಂದ್ರ ಹೆಗ್ಗಡೆ: ಧರ್ಮಸ್ಥಳಕ್ಕೆ ಅವಮಾನ; ಏನಿದು ಪ್ರಕರಣ?

    ಕೋರ್ಟ್ ನೀಡಿದ್ದ ತಡೆಯಾಜ್ಞೆಯನ್ನೂ ಮೀರಿ ಧರ್ಮಸ್ಥಳ, ಧರ್ಮಾಧಿಕಾರಿ ಹಾಗೂ ಅವರ ಸಂಸ್ಥೆಗಳ ಮೇಲೆ ಆರೋಪಗಳನ್ನು ಮಾಡಿದ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಗುರುವಾಯನಕೆರೆ ನಾಗರಿಕ ಸೇವಾ ಟ್ರಸ್ಟ್‌ನ ಕೆ. ಸೋಮನಾಥ ನಾಯಕ್‌ಗೆ ಸ್ಥಳೀಯ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿದೆ… ಹೀಗೊಂದು ಸುದ್ದಿ ಹೊರ ಬಿದ್ದಿದೆ ಮತ್ತು ಅದು ಸತ್ಯದ ಒಂದು ಮುಖ ಅಷ್ಟೆ. ಧರ್ಮಸ್ಥಳದ ಆಡಳಿತಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹಾಗೂ ಅವರ ಕುಟುಂಬ ಸದಸ್ಯರ ಮೇಲೆ ಆರೋಪ ಮಾಡಿಕೊಂಡು ಬಂದ ಈ ಸೋಮನಾಥ ನಾಯಕ್ ಯಾರು? ಅವರ ಹಿನ್ನೆಲೆ […]

    August 30, 2017
    ...

    ‘ಅತ್ಯಾಚಾರಗಳ ಮಹರಾಜ್’ಗೆ 20 ವರ್ಷ ಜೈಲು: 15 ವರ್ಷಗಳ ನಂತರ ಸಾಧ್ವಿಗಳಿಗೆ ಧಕ್ಕಿತು ನ್ಯಾಯ

    ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿ ಎಂದು ಘೋಷಿಸಲ್ಪಟ್ಟಿದ್ದ, ಹರಿಯಾಣದ ಸ್ವಘೋಷಿತ ದೇವಮಾವನ ಗುರ್ಮೀತ್ ರಾಮ್ ರಹೀಮ್ಗೆ 20 ವರ್ಷಗಳ ಶಿಕ್ಷೆ ಪ್ರಮಾಣವನ್ನು ಸಿಬಿಐ ವಿಶೇಷ ನ್ಯಾಯಾಲಯ ಪ್ರಕಟಿಸಿತು. ಭಾರಿ ಬಿಗಿ ಭದ್ರತೆ ನಡುವೆ ರಾಮ್ ರಹೀಮ್ ಬಂಧನಕ್ಕೆ ಒಳಪಟ್ಟಿರುವ ರೋಹ್ಟಾಕ್ ಜೈಲಿಗೆ ಭೇಟಿ ನೀಡಿದ ನ್ಯಾಯಾಧೀಶ ಜಗ್ದೀಪ್ ಸಿಂಗ್ ಶಿಕ್ಷೆ ಪ್ರಮಾಣವನ್ನು ಪ್ರಕಟಿಸಿದರು. ಶುಕ್ರವಾರ ಪಂಚಕುಲಾದ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಇದೇ ನ್ಯಾಯಾಧೀಶರು, ಇಬ್ಬರು ಸಾಧ್ವಿಗಳ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ರಾಮ್ ರಹೀಮ್ ತಪ್ಪಿತಸ್ಥ ಎಂದು ತೀರ್ಪು ನೀಡಿದ್ದರು. […]

    August 28, 2017
    ...

    ‘ಧರ್ಮ, ಉದ್ಯಮ, ಜನಪ್ರಿಯತೆ’: ರಾಮ್ ರಹೀಮ್ ಪ್ರಕರಣದಿಂದ ಕಲಿಯಬೇಕಿರುವ ಪ್ರಮುಖ ಪಾಠ ಇಷ್ಟೆ

    “ನಾನು ನಿನ್ನನ್ನು ಇಲ್ಲಿಯೇ ಕೊಂದು ಹೂತು ಹಾಕಬಲ್ಲೆ. ನಿನ್ನ ಕುಟುಂಬದ ಸದಸ್ಯರು ನನ್ನ ಅನುಯಾಯಿಗಳು ಮತ್ತು ನನ್ನ ಬಗ್ಗೆ ಅವರಿಗೆ ಕುರುಡು ನಂಬಿಕೆ ಇದೆ. ನನಗೆ ಸರಕಾರಗಳ ಮಟ್ಟದಲ್ಲಿಯೂ ಸಂಪರ್ಕಗಳಿವೆ. ಹರಿಯಾಣ ಮತ್ತು ಪಂಜಾಬ್ ಮುಖ್ಯಮಂತ್ರಿಗಳು ಮತ್ತು ಕೇಂದ್ರ ಸಚಿವರುಗಳು ನನ್ನ ಬಳಿ ಸಹಾಯ ಕೋರಿ ಬರುತ್ತಾರೆ. ಅವರು ನನ್ನ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ನಾನು ಮನಸ್ಸು ಮಾಡಿದರೆ ಸರಕಾರಿ ಸೇವೆಯಲ್ಲಿರುವ ನಿನ್ನ ಕುಟುಂಬ ಸದಸ್ಯರನ್ನು ಕೆಲಸದಿಂದ ಕಿತ್ತು ಹಾಕಿಸುತ್ತೇನೆ. ನನ್ನ ಹಿಂಬಾಲಕರಿಂದ ಅವರನ್ನು […]

    August 26, 2017
    ...

    ‘ಗರ್ಭದ ಭಾರ’ ಹೊರುತ್ತಿರುವ ಮಕ್ಕಳು: ಭ್ರೂಣ ತೆಗೆಸಲು ಕೋರಿ ಅರ್ಜಿ ಸಲ್ಲಿಸುತ್ತಿರುವ ಸಂತ್ರಸ್ಥೆಯರು

    ಹತ್ತು ವರ್ಷದ ಮಗಳ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಭ್ರೂಣವನ್ನು ತೆಗೆಸಲು ಕೋರಿ ಪೋಷಕರು ಅರ್ಜಿ ಸಲ್ಲಿಸಿರುವ ಹಿನ್ನೆಲೆಯಲ್ಲಿ, ಸುಪ್ರಿಂ ಕೋರ್ಟ್‌ ವೈದ್ಯರಿಗೆ ಪರೀಕ್ಷೆ ನಡೆಸುವಂತೆ ಸೂಚನೆ ನೀಡಿದೆ. ಇದು ದೇಶದಲ್ಲಿ ಮಕ್ಕಳ ಮೇಲೆ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳು ಮತ್ತು ನಂತರದ ಸಾಮಾಜಿಕ ಪರಿಣಾಮಗಳಿಗೆ ಹಿಡಿದ ಕನ್ನಡಿದಂತಿದೆ. ಬಾಲಕಿ ತನ್ನ ಸಂಬಂಧಿಯೊಬ್ಬನಿಂದ ನಿರಂತರ ಅತ್ಯಾಚಾರಕ್ಕೆ ಒಳಗಾದ ಘಟನೆ ಚಂಡೀಘಡದಲ್ಲಿ ವರದಿಯಾಗಿತ್ತು. ಆರೋಪಿಯನ್ನು ಪೊಲೀಸರು ಬಂಧಿಸಿ ಜೈಲಿಗೂ ಕಳುಹಿಸಿದ್ದರು. ನಂತರ ಬಾಲಕಿಗೆ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿದ ನಂತರ ಆಕೆ […]

    July 25, 2017

Top