An unconventional News Portal.

ನೋಟ್ ಬ್ಯಾನ್

ಧನ್ವಂತರಿ ಆಸ್ಪತ್ರೆಯಿಂದ ವಿಹಿಂಪ ವೇದಿಕೆಗೆ: ಕಟ್ಟರ್ ಹಿಂದುತ್ವವಾದಿಯ ಜೀವಭಯದ ಕತೆ!

“ನನ್ನನ್ನು ದಶಕಗಳ ಹಿಂದಿನ ಪ್ರಕರಣಗಳಲ್ಲಿ ಸಿಲುಕಿಸಿ, ನನ್ನ ಧ್ವನಿಯನ್ನು ಅಡಗಿಸುವ ಪ್ರಯತ್ನ ನಡೆಯುತ್ತಿದೆ. ರಾಜಸ್ಥಾನದ ಪೊಲೀಸರು ನನ್ನನ್ನು ಬಂಧಿಸಲು ಬಂದಿದ್ದರು. ಎನ್‌ಕೌಂಟರ್‌ನಲ್ಲಿ ನನ್ನ ಹತ್ಯೆಗೈಯುವ ಸಂಚು ರೂಪಿಸಲಾಗಿದೆ

    ...
    ದೇಶ

    ಬಾಪೂ ನಾಡಿನಲ್ಲಿ ಬಿಜೆಪಿ ಪ್ರಯಾಸದ ಗೆಲುವು: ಫಲಿತಾಂಶದ ಅಂತರಾಳ; ಬದಲಾವಣೆ ತುಡಿತಕ್ಕೆ ಅಸ್ತು ಅಂದ ಮತದಾರ!

    ಗುಜರಾತ್ ಗದ್ದುಗೆಗೆ ಬಿಜೆಪಿ ಮರಳಿದೆ. ಆದರೆ ನಿರೀಕ್ಷೆ ಇಟ್ಟಷ್ಟು ಸೀಟುಗಳನ್ನು ಪಡೆಯುವಲ್ಲಿ ಪ್ರಧಾನಿ ಮೋದಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ತಮ್ಮ ತವರು ನೆಲದಲ್ಲಿಯೇ ವಿಫಲರಾಗಿದ್ದಾರೆ. ಕಾಂಗ್ರೆಸ್ ಊಹೆಗೂ ಮೀರಿ ಸ್ಪರ್ದೆ ನೀಡಿದೆ. ಅದಕ್ಕಿಂತ ಹೆಚ್ಚಾಗಿ, ಗುಜರಾತಿಗರು ಇಬ್ಬರು ಹೋರಾಟಗಾರರನ್ನು ವಿಧಾನಸಭೆಗೆ ಕಳುಹಿಸಿದ್ದಾರೆ; ಪರ್ಯಾಯ ರಾಜಕಾರಣದ ಕನಸಿಗೆ ನೀರೆರಿದ್ದಾರೆ. ಮೇಲ್ನೋಟಕ್ಕೆ ಗುಜರಾತ್ ಚುನಾವಣಾ ಫಲಿತಾಂಶ ಮತಗಟ್ಟೆಗಳ ಸಮೀಕ್ಷೆಗೆ ಹತ್ತಿರವಿದ್ದರೂ, ಅಂತರಾಳದಲ್ಲಿ ಆಲೋಚನೆಗೆ ದೂಡುವಂತಹ ಆಯಾಮಗಳನ್ನು ಹೊಂದಿದೆ ಎಂಬುದು ಗಮನಾರ್ಹ. ಕಳೆದ 22 ವರ್ಷಗಳಿಂದ ರಾಜ್ಯದಲ್ಲಿ ಬಿಜೆಪಿಗೆ, 2014ರಿಂದ..

    December 18, 2017
    ...
    ದೇಶ

    ‘ಹ್ಯಾಪಿ ಬರ್ತ್‌ಡೆ ಡಿಮೋ’: ಕಪ್ಪು ಹಣವನ್ನು ಅನಾಯಾಸವಾಗಿ ಬದಲಿಸಿಕೊಂಡ ಕುಳಗಳ ಕತೆ!

    ನವೆಂಬರ್ 8, 2016.. ನಾಳೆಗೆ ಸರಿಯಾಗಿ ಒಂದು ವರ್ಷ. ದೇಶದ ಜನಪ್ರಿಯ ಪ್ರಧಾನಿ ನರೇಂದ್ರ ಮೋದಿ ಆರ್ಥಿಕ ವ್ಯವಸ್ಥೆಯ ಬದಲಾವಣೆಗೆ ಮಹತ್ವದ ತೀರ್ಮಾನವೊಂದನ್ನು ತೆಗೆದುಕೊಂಡ ದಿನ. ಚಲಾವಣೆಯಲ್ಲಿದ್ದ 500 ಹಾಗೂ 1000 ರೂ. ಮುಖಬೆಲೆಯ ನೋಟುಗಳ ಮಾನ್ಯತೆಯನ್ನು ತತಕ್ಷಣದಿಂದಲೇ ರದ್ಧುಗೊಳಿಸಿದರು. ರಾತ್ರಿ ಎಂಟು ಗಂಟೆ ಸುಮಾರಿಗೆ ಪ್ರಧಾನಿ ಅವರ ಘೋಷಣೆ ಹೊರಬೀಳುತ್ತಿದ್ದಂತೆ ಬೆಂಗಳೂರಿನ ಬಿಲ್ಡರ್‌ ಒಬ್ಬರ ಮನೆಯಲ್ಲಿ ಸಂಚಲನ ಸೃಷ್ಟಿಯಾಯಿತು. ಆ ಹೊತ್ತಿಗೆ ಅವರ ಮನೆಯಲ್ಲಿ ಇದ್ದದ್ದು ಸುಮಾರು 15 ಕೋಟಿ ನಗದು ಹಣ ಮತ್ತು ಅದರಲ್ಲಿ ಬಹುತೇಕ..

    November 7, 2017
    ...
    ದೇಶ

    ‘ಅನಾಣ್ಯೀಕರಣ’: ಹೊಸ ಸುತ್ತಿನ ‘ನೋಟಿನ ನಾಟಕ’ ತೆರೆಗೆ ಬರಲು 24 ಗಂಟೆಗಳಷ್ಟೆ ಬಾಕಿ!

    ಅನಾಣ್ಯೀಕರಣದ ಸಂಕಷ್ಟಗಳ ಪರಿಹಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಕೇಳಿಕೊಂಡ 50 ದಿನ ಮುಗಿಯಲು ಇನ್ನು 24 ಗಂಟೆಗಳಷ್ಟೆ ಬಾಕಿ ಉಳಿದಿವೆ. ಅನಾಣ್ಯೀಕರಣ ಘೋಷಣೆಯಾಗಿ ಈ 50 ದಿನಗಳಲ್ಲಿ ಚಲಾವಣೆಗೆ ಬಂದ ಹೊಸದಾಗಿ ಮುದ್ರಿತ ನೋಟುಗಳ ಸಂಖ್ಯೆ ತೀರಾ ಅಲ್ಪ ಪ್ರಮಾಣದ್ದು. ಇದರ ಬೆನ್ನಿಗೇ ನೋಟು ಮುದ್ರಣದ ಪ್ರಮಾಣ ಇಳಿಕೆಯಾಗುವ ಲಕ್ಷಣಗಳು ಕಾಣಿಸುತ್ತಿದ್ದು, ಸಮಸ್ಯೆ ಮತ್ತಷ್ಟು ಬಿಗುಡಾಯಿಸುವ ಸಾಧ್ಯತೆಗಳಿವೆ. ಅನಾಣ್ಯೀಕರಣ ಘೋಷಣೆಯಾದ ನಂತರ ಓವರ್ ಟೈಮ್ ಕೆಲಸ ಮಾಡುತ್ತಿದ್ದ ಸಾಲ್ದಾನಿ ನೋಟು ಮುದ್ರಣ ಘಟಕದ ಸಿಬ್ಬಂದಿಗಳು ನಮ್ಮಿಂದ ಇನ್ನು ಕೆಲಸ..

    December 29, 2016
    ...
    ದೇಶ

    ‘ಕ್ಯಾಶ್ ಲೆಸ್ ಎಕಾನಮಿ’: ಭಾರತದಲ್ಲಿ ಇದು ಹೇಗೆ ಸಾಧ್ಯ? ಎಷ್ಟರ ಮಟ್ಟಿಗೆ ಅಗತ್ಯ?

    “ನಾವು ಕ್ಯಾಶ್‌ಲೆಸ್‌ ಭಾರತದತ್ತ ತೆರಳದೇ ಇರಲು ಕಾರಣಗಳೇ ಇಲ್ಲ,” ಹೀಗಂಥ ಮೋದಿ ನವೆಂಬರ್ 27ರಂದು ಭಾಷಣ ಮಾಡಿದ್ದರು. ಅದಕ್ಕೂ ಸ್ವಲ್ಪ ಮೊದಲು ಮಾತನಾಡಿದ್ದ ಹಣಕಾಸು ಸಚಿವ ಅರುಣ್ ಜೇಟ್ಲಿ “ಭಾರತವನ್ನು ನಗದು ರಹಿತ ಅರ್ಥ ವ್ಯವಸ್ಥೆಯತ್ತ ಕೊಂಡೊಯ್ಯುತ್ತೇವೆ,” ಎಂದಿದ್ದರು. ಇತ್ತ ಕರ್ನಾಟಕದಲ್ಲಿ ಬ್ರಿಗೇಡ್ ಬಾಯ್ಗಳು ‘ಕ್ಯಾಶ್‌ಲೆಸ್‌ ದುನಿಯಾ’ ಅಂತ ಊರೂರು ಸುತ್ತಿ ಭಾಷಣ ಬಿಗಿಯುತ್ತಿದ್ದಾರೆ. ‘ನಗದು ವ್ಯವಹಾರ ಮುಕ್ತ ಅರ್ಥ ವ್ಯವಸ್ಥೆ’ಯೇ ಆದರ್ಶ ಎನ್ನುವ ಚರ್ಚೆಗಳನ್ನು ಹುಟ್ಟುಹಾಕುತ್ತಿದ್ದಾರೆ. ಆದರೆ ನಿಜಕ್ಕೂ ಇಂಡಿಯಾ ಕ್ಯಾಶ್‌ಲೆಸ್‌ ಆಗುತ್ತಾ? ಹೀಗೊಂದು ಸಾಧ್ಯತೆ ಇದೆಯಾ?..

    December 20, 2016
    ...
    ದೇಶ

    ಅನಾಣ್ಯೀಕರಣ ಮತ್ತು 1971ರ ಇಂದಿರಾ ಗಾಂಧಿ; ಮೋದಿ ಮಾತಿಗಿಲ್ಲ ವಾಸ್ತವದ ಸ್ಪರ್ಷ

    ಅನಾಣ್ಯೀಕರಣ ಘೋಷಣೆಯ ನಂತರ ದಿನಕ್ಕೊಂದು ರಾಗ ಹಾಡುತ್ತಿರುವ ನರೇಂದ್ರ ಮೋದಿ ಈಗ ಇಂದಿರಾ ಗಾಂಧಿ ಮೇಲೆ ಗೂಬೆ ಕೂರಿಸಲು ಹೊರಟಿದ್ದಾರೆ. ‘ಅನಾಣ್ಯೀಕರಣ 1971ರಲ್ಲೇ ಮಾಡಬೇಕಿತ್ತು. ಆಗ ಮಾಡದ್ದನ್ನು ಈಗ ಮಾಡಿದ್ದೇವೆ. ಇಂದಿರಾ ಗಾಂಧಿಗೆ ಅನಾಣ್ಯೀಕರಣ ಮಾಡಲು ಧೈರ್ಯವಿರಲಿಲ್ಲ,’ ಎನ್ನುವ ಅರ್ಥದಲ್ಲಿ ಮಾತನಾಡಿದ್ದಾರೆ. 1971ರಲ್ಲಿ ನಡೆದಿದ್ದೇನು? ಸದ್ಯ ನರೇಂದ್ರ ಮೋದಿ ಹೇಳಿರುವ ಪ್ರಕಾರ “1971ರಲ್ಲೇ ಅನಾಣ್ಯೀಕರಣ ಅಗತ್ಯವಾಗಿತ್ತು. 1971ರ ನಂತರ ಇದನ್ನು ಮಾಡದೇ ಹೋದುದು ನಮಗೆಲ್ಲಾ ದೊಡ್ಡ ನಷ್ಟವಾಗಿದೆ,” ಎಂದು ಹೇಳಿದ್ದಾರೆ. ಮಾತ್ರವಲ್ಲ ತಮ್ಮ ಸಂಸದರನ್ನು ಉದ್ದೇಶಿಸಿ ಮಾತನಾಡಿರುವ..

    December 17, 2016
    ...
    ದೇಶ

    ಪತಂಜಲಿ ಮೇಲೆ 11 ಲಕ್ಷ ದಂಡ; ಬಿಜೆಪಿ ಜತೆಗಿನ ಸಂಬಂಧ ‘ಮುಗಿದ ಅಧ್ಯಾಯ’ ಎಂದ ರಾಮ್‍ದೇವ್

    ದಾರಿ ತಪ್ಪಿಸುವ ಜಾಹೀರಾತು ನೀಡಿದ್ದಕ್ಕಾಗಿ ಸ್ವದೇಶಿ ಉತ್ಪನ್ನಗಳ ಸ್ವಘೋಷಿತ ಪ್ರವರ್ತಕ ಬಾಬಾ ರಾಮ್‍ದೇವ್ ಹಾಗೂ ಆಚಾರ್ಯ ಬಾಲಕೃಷ್ಣ ಒಡೆತನದ ಕಂಪೆನಿಗೆ 11 ಲಕ್ಷ ದಂಡ ವಿಧಿಸಲಾಗಿದೆ. ರಾಮ್‍ದೇವ್ ಗೆ ಸೇರಿದ ಪತಂಜಲಿ ಆರ್ಯುವೇದ ಸಂಸ್ಥೆ ಬೇರೆಯವರು ತಯಾರಿಸಿದ ಉತ್ಪನ್ನವನ್ನು ತಾನೇ ತಯಾರಿಸಿದ್ದು ಎಂದು ಸುಳ್ಳು ಜಾಹೀರಾತು ನೀಡಿತ್ತು. ಹರಿದ್ವಾರದ ಸ್ಥಳೀಯ ನ್ಯಾಯಾಲಯ ಪತಂಜಲಿ ಆಯುರ್ವೇದಕ್ಕೆ ಸೇರಿದ 5 ಘಟಕಗಳಿಗೆ 11 ಲಕ್ಷ ರೂಪಾಯಿ ದಂಡ ವಿಧಿಸಿ ಆದೇಶ ಹೊರಡಿಸಿದೆ. ಸಂಸ್ಥೆಯು ತನ್ನ ಉತ್ಪನ್ನಗಳ ಬಗ್ಗೆ “ಸುಳ್ಳು ಬ್ರಾಂಡಿಂಗ್..

    December 16, 2016
    ...
    ದೇಶ

    ಪರಮ ಗುರು; ಪ್ರಚಂಡ ಶಿಷ್ಯ: ಕೊನೆಗೂ ಮೌನ ಮುರಿದ ಬಿಜೆಪಿ ಭೀಷ್ಮನ ಮನಸ್ಸಿನಲ್ಲೇನಿದೆ?

    ಹಿರಿಯ ರಾಜಕಾರಣಿ, ಬಿಜೆಪಿಯ ಭೀಷ್ಮ ಎಲ್.ಕೆ ಅಡ್ವಾಣಿ ಅನಾಣ್ಯೀಕರಣದ ನಂತರ ಮೊದಲ ಬಾರಿಗೆ ಮೌನ ಮುರಿದಿದ್ದಾರೆ. ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ತೆರೆ ಮರೆಗೆ ಸರಿದಿದ್ದ ಅಡ್ವಾಣಿ ಇದೀಗ ಮತ್ತೆ ಪ್ರತ್ಯಕ್ಷರಾಗಿದ್ದಾರೆ. ಸಂಸತ್ತಿನ ಚಳಿಗಾಲದ ಅಧಿವೇಶನ ಚರ್ಚೆಗಳಿಲ್ಲದೆ ಪ್ರತಿ ದಿನ ಮುಂದೂಡಲ್ಪಡುತ್ತಿದೆ. ಇಂದೂ ಕೂಡಾ ಸ್ಪೀಕರ್ ಸುಮಿತ್ರಾ ಮಹಾಜನ್ ದಿನದ ಮಟ್ಟಿಗೆ ಕಲಾಪ ಮುಂದೂಡುತ್ತಿದ್ದಂತೆ ಅಡ್ವಾಣಿ ಬೇಸರಗೊಂಡಿದ್ದಾರೆ. “ನಾನು ರಾಜಿನಾಮೆ ಕೊಡಬೇಕು ಎಂದೆನಿಸುತ್ತಿದೆ,” ಎಂದು ವಿಷಾಧ ವ್ಯಕ್ತಪಡಿಸಿದ್ದಾರೆ. ಸಂಪುಟ ಸಚಿವೆ ಸ್ಮೃತಿ ಇರಾನಿ ಮತ್ತು ರಾಜನಾಥ್ ಸಿಂಗ್..

    December 15, 2016
    ...
    ದೇಶ

    ನಾಪತ್ತೆಯಾಗಿದ್ದ ಪ್ರಧಾನಿ ಲೋಕಸಭೆಯಲ್ಲಿ ಪ್ರತ್ಯಕ್ಷ: ಅನಾಣ್ಯೀಕರಣ ವಿರೋಧಿಸಿ 28ಕ್ಕೆ ‘ಭಾರತ್ ಬಂದ್’

    ಅನಾಣ್ಯೀಕರಣದ ವಿರುದ್ಧ ವಿಪಕ್ಷಗಳು ಮುಗಿಬಿದ್ದಿದ್ದರಿಂದ ಉಭಯ ಸದನಗಳ ಕಲಾಪ ಆರನೇ ದಿನವೂ ಚರ್ಚೆಯಿಲ್ಲದೆ ಮುಂದೂಡಲ್ಪಟ್ಟಿದೆ. ಆದರೆ ಸರಕಾರದ ಮುಖ್ಯಸ್ಥ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಾತ್ರ ಮಾತನಾಡುತ್ತಿಲ್ಲ. ಆ್ಯಪ್ ನಲ್ಲೇ ಜನರಿಗೆ ದರ್ಶನ ಕೊಡಲು ಮುಂದಾಗಿದ್ದ ಪ್ರಧಾನಿ ಬುಧವಾರ ಲೋಕ ಸಭೆಯಲ್ಲಿ ಪ್ರತ್ಯಕ್ಷರಾದರೂ ಬಾಯಿ ಬಿಡಲಿಲ್ಲ. ಇದೀಗ ಪ್ರಧಾನಿ ಪ್ರತಿಕ್ರಿಯೆಗೆ ಆಗ್ರಹಿಸಿ ವಿರೋಧ ಪಕ್ಷಗಳು 28ನೇ ತಾರೀಕು ‘ಭಾರತ್ ಬಂದ್’ಗೆ ಕರೆ ನೀಡಿವೆ. ನವೆಂಬರ್ 8ರ ರಾತ್ರಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಘೋಷಿಸಿದ ಅನಾಣ್ಯೀಕರಣಕ್ಕೆ ವಿರೋಧ ಪಕ್ಷಗಳಿಂದ..

    November 24, 2016

FOOT PRINT

Top