An unconventional News Portal.

ನಿತೀಶ್ ಕುಮಾರ್
    ...

    ಎಡಿಆರ್‌ ವರದಿಯಲ್ಲಿ ಸಿಎಂಗಳ ಆಸ್ತಿಪಾಸ್ತಿ: ಸಿದ್ದರಾಮಯ್ಯ ಬಳಿ ಆಸ್ತಿ ಎಷ್ಟಿದೆ?

    ‘ದೇಶದ 29 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳಿಗೆ ಸೇರಿದ ಎಲ್ಲ ಮುಖ್ಯಮಂತ್ರಿಗಳ ಪೈಕಿ 25 ಮುಖ್ಯಮಂತ್ರಿಗಳು ಕೋಟ್ಯಧಿಪತಿಗಳಾಗಿದ್ದಾರೆ,’ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್  ವಿಶ್ಲೇಷಣೆ ಮಾಡಿದ ವರದಿಯೊಂದು ಹೇಳಿದೆ. ಚುನಾವಣೆಗೆ ಸ್ಪರ್ಧಿಸಿದಾಗ ಅಭ್ಯರ್ಥಿಗಳು ‘ಚುನಾವಣಾ ಆಯೋಗ’ಕ್ಕೆ ಸಲ್ಲಿಸಿದ ಪ್ರಮಾಣ ಪತ್ರದ ಮಾಹಿತಿ ಆಧರಿಸಿ ಈ ವಿಶ್ಲೇಷಣೆ ಮಾಡಲಾಗಿದೆ. ದೇಶದ ಎಲ್ಲಾ ಮುಖ್ಯಮಂತ್ರಿಗಳು ಹೊಂದಿರುವ ಆಸ್ತಿ, ವಿದ್ಯಾರ್ಹತೆ ಮತ್ತು ಅವರ ವಿರುದ್ಧ ಇರುವ ಎಲ್ಲ ಪ್ರಕರಣಗಳು ಇದರಲ್ಲಿವೆ. ನ್ಯಾಶನಲ್ ಎಲೆಕ್ಷನ್ ವಾಚ್‌ನಲ್ಲಿಯೂ ಈ ಕುರಿತು ಮಾಹಿತಿ […]

    February 13, 2018
    ...

    ‘ಮೋದಿ ಅಲೆ’ಗೆ ಸಿಗದ ಸ್ಥಾನಮಾನ: ಮತ್ತೆ ಅಧಿಕಾರ ಹಿಡಿಯಲು ಬಿಜೆಪಿಯ ‘ಸಪ್ತ ಸೂತ್ರಗಳು’!

    ಈಗಾಗಲೇ ಅಧಿಕಾರದಲ್ಲಿ ಮೂರೂವರೆ ವರ್ಷಗಳನ್ನು ಕಳೆದಿರುವ ಭಾರತೀಯ ಜನತಾ ಪಕ್ಷ, ಮತ್ತೆ ಅಧಿಕಾರಕ್ಕೆ ಏರುವ ಕನಸು ಕಟ್ಟಿಕೊಂಡಿದೆ. ಈ ಹಿನ್ನೆಲೆಯಲ್ಲಿ ದಿಲ್ಲಿಯಲ್ಲಿ ನಡೆದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಮಹತ್ವದ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ. ಮಂಗಳವಾರ ನಡೆದ ಸಭೆಯಲ್ಲಿ ಮರಳಿ ಅಧಿಕಾರಕ್ಕೆ ಬರಲು ‘ಸಪ್ತ ಸೂತ್ರ’ಗಳನ್ನು ಪಕ್ಷ ಮುಂದಿಟ್ಟಿದೆ. ವಿಶೇಷ ಅಂದರೆ, ಎಲ್ಲಿಯೂ ಮೋದಿ ಅಲೆಯಾಗಲೀ, ವ್ಯಕ್ತಿ ಕೇಂದ್ರಿತ ಚುನಾವಣಾ ಪ್ರಚಾರದ ಮಾದರಿಯಾಗಲೀ ಸ್ಥಾನ ಪಡೆದುಕೊಂಡಿಲ್ಲ ಎಂಬುದು ವಿಶೇಷ. 2014ರಲ್ಲಿ ಬಿಜೆಪಿ ‘ಮೋದಿ ಅಲೆ’ಯನ್ನು ನೆಚ್ಚಿಕೊಂಡು ಚುನಾವಣೆಗೆ ಇಳಿದಿತ್ತು ಮತ್ತು ಅದರಲ್ಲಿ […]

    September 27, 2017
    ...

    ನಿತೀಶ್ ಕುಮಾರ್ ನಿರ್ಗಮನ: ಪರ್ಯಾಯ ರಾಜಕೀಯ ನಾಯಕನ ಸ್ಥಾನ ಖಾಲಿ ಇದೆ; ಗಮನಿಸಿ!

    ಬಿಹಾರದ ಮಹಾ ಘಟ್ಬಂಧನದಿಂದ ನಿತೀಶ್ ಕುಮಾರ್ ‘ನಿರ್ಗಮನ’ದ ನಂತರ ರಾಷ್ಟ್ರ ರಾಜಕೀಯದಲ್ಲಿ ಪರ್ಯಾಯ ನಾಯಕತ್ವ ಸ್ಥಾನ ಖಾಲಿ ಬಿದ್ದಿದೆ. 1.3 ಬಿಲಿಯನ್ ಪ್ರಜೆಗಳನ್ನು ಹೊಂದಿರುವ ದೇಶದ ರಾಜಕೀಯ ವ್ಯವಸ್ಥೆಯಲ್ಲಿ ವಿರೋಧ ಪಕ್ಷಗಳು ಮಂಕಾಗಿವೆ. ಪ್ರಧಾನಿ ಮೋದಿ ಮುಂದಿನ ಲೋಕಸಭಾ ಚುನಾವಣೆ ವೇಳೆಗೆ ಸಮರ್ಥ ಎದುರಾಳಿಗಳಿಲ್ಲದೆ ಚುನಾವಣೆಯ ಅಖಾಡಕ್ಕೆ ಇಳಿಯುವ ಸ್ಪಷ್ಟ ಸೂಚನೆ ಸಿಕ್ಕಿದೆ. ನೆಹರೂ ಮತ್ತು ಇಂದಿರಾ ಗಾಂಧಿ ನಂತರ ಮತ್ತೆ ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಆರೋಗ್ಯಕರ ಪ್ರತಿರೋಧ ಇಲ್ಲದ ಸ್ಥಿತಿ ತಲುಪಿದೆ. ಸಂವಿಧಾನದಲ್ಲಿ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಇರುವಷ್ಟೆ […]

    July 28, 2017
    ...

    ಪಾಠ ಒಂದು; ಅವಕಾಶವಾದಿ ನಾಯಕರಿಂದ ರಾಜಕೀಯ ಪರ್ಯಾಯ ನಿರೀಕ್ಷಿಸುವುದು ಮೂರ್ಖತನ!

    ‘ಬಿಮಾರು ರಾಜ್ಯ’ ಎಂದು ಗುರುತಿಸಿಕೊಂಡಿರುವ ಬಿಹಾರದಲ್ಲಿ ನಡೆದ ನಾಟಕೀಯ ರಾಜಕೀಯ ಬದಲಾವಣೆಯಲ್ಲಿ ನಿತೀಶ್ ರಾಜೀನಾಮೆ ನೀಡಿದ್ದಾರೆ. ಅದರ ಬೆನ್ನಲ್ಲೇ ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರಕ್ಕೂ ಸಿದ್ಧತೆ ನಡೆಸುತ್ತಿದ್ದಾರೆ. 2015ರಲ್ಲಿ ಅವರು ರಾಷ್ಟ್ರೀಯ ಜನತಾದಳ(ಆರ್‌ಜೆಡಿ) ಮತ್ತು ಕಾಂಗ್ರೆಸ್ ಬೆಂಬಲದೊಂದಿಗೆ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿದಿದ್ದರು. ಈ ಬಾರಿ ಬಿಜೆಪಿ ಬೆಂಬಲದೊಂದಿಗೆ ಮುಖ್ಯಮಂತ್ರಿ ಗಾಧಿ ಏರುತ್ತಿದ್ದಾರೆ. ಹಾಗೆ ನೋಡಿದರೆ, ಬಿಹಾರದ ಸದ್ಯದ ರಾಜಕೀಯ ಬೆಳವಣಿಗೆಗಳು ಅನಿರೀಕ್ಷಿತವೇನಲ್ಲ. ಬಿಜೆಪಿಯ ಪ್ರಭಾವಳಿಯಿಂದ ಹೊರತಾದ, ರಾಜಕೀಯ ಪರ್ಯಾಯವನ್ನು ನಿರ್ಮಿಸುವ ನಿಟ್ಟಿನಲ್ಲಿ 2015ರಲ್ಲಿ ಬಿಹಾರ ವಿಧಾನಸಭಾ […]

    July 27, 2017
    ...

    ಮೋದಿ ಸರಕಾರಕ್ಕೆ ಎರಡು ವರ್ಷ: ಶುರುವಾಗುತ್ತಾ ರಾಜಕೀಯ ಪರ್ಯಾಯದ ಹೊಸ ಪರ್ವ?

    ಬಿಜೆಪಿ ನೇತೃತ್ವದ ಕೇಂದ್ರ ಸರಕಾರ 2 ವರ್ಷದ ಆಡಳಿತವನ್ನು ಪೂರ್ಣಗೊಳಿಸಿರುವ ಬೆನ್ನಲ್ಲೇ ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಪರ್ಯಾಯವೊಂದು ರಚನೆಗೊಳ್ಳುವ ಕುರಿತು ವಿಶ್ಲೇಷಣೆಗಳು ಶುರುವಾಗಿವೆ. ಬಿಜೆಪಿ ಹಾಗೂ ಪ್ರಧಾನಿ ಮೋದಿ ಆಡಳಿತಕ್ಕೆ ಪರ್ಯಾಯವಾಗಿ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ, ಉತ್ತರ ಪ್ರದೇಶದಿಂದ ಮಾಯಾವತಿ ಅಥವಾ ಮುಲಾಯಂ ಸಿಂಗ್ ಯಾದವ್ ಮತ್ತು ದಿಲ್ಲಿ ಮುಖ್ಯಮಂತ್ರಿ ಕೇಜ್ರಿವಾಲ್ ನೇತೃತ್ವದಲ್ಲಿ ರಾಷ್ಟ ರಾಜಕಾರಣ ಹೊಸ ತಿರುವು ಪಡೆದುಕೊಳ್ಳಲಿದೆ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ. […]

    May 28, 2016
    ...

    ದೇವಿ ವಿರುದ್ಧ ಮದ್ಯ ನಿಷೇಧ ಕಾಯ್ದೆ ಅಸ್ತ್ರ ಬಳಕೆ: ಬಂಧನಕ್ಕೆ ಬಿಹಾರ ಸರಕಾರ ಆದೇಶ

    ಸಾರಾಯಿ ನಿಷೇಧ ಕಾನೂನು ಉಲ್ಲಂಘನೆ ಆರೋಪದ ಮೇಲೆ ನಿತೀಶ್ ಕುಮಾರ್ ಸರಕಾರ ಬಿಹಾರದ ಆಡಳಿತಾರೂಢ ಜೆಡಿಯುನ ಮನೋಹರಾ ದೇವಿಯ ವಿರುದ್ಧ ಬಂಧನಾದೇಶ ಹೊರಡಿಸಿದೆ. ಓವರ್ ಟೇಕ್ ಮಾಡಿದ್ದಕ್ಕಾಗಿ ಯುವಕನೊಬ್ಬನನ್ನು ಗುಂಡಿಕ್ಕಿ ಕೊಂದ ಮಗನನ್ನು ರಕ್ಷಣೆ ಮಾಡುತ್ತಿರುವ ಆರೋಪದ ಮೇಲೆ ಮನೋಹರ ದೇವಿಯನ್ನು ಪಕ್ಷದಿಂದ ಮಂಗಳವಾರವಷ್ಟೆ ಅಮಾನತು ಮಾಡಲಾಗಿತ್ತು. ನಂತರ ಅವರು ಬಚ್ಚಿಟ್ಟುಕೊಂಡಿದ್ದಾರೆಂದು ಹೇಳಲಾಗಿತ್ತು. ಪಾಟ್ನಾದಿಂದ ಸುಮಾರು 100 ಕಿ. ಮೀ. ದೂರದ ಗಯಾದಲ್ಲಿರುವ ದೇವಿ ಮನೆಯಲ್ಲಿ ಕಳ್ಳಭಟ್ಟಿ ಸಾರಾಯಿ ಪತ್ತೆಯಾಗಿದ್ದು, ಈ ಸಂಬಂಧ ರಾಜ್ಯ ಸರಕಾರ ಬಂಧನಕ್ಕೆ ಆದೇಶ ನೀಡಿದೆ. ಬಿಹಾರದಲ್ಲಿ ಮದ್ಯ […]

    May 11, 2016
    ...

    ಬಿಹಾರದಾದ್ಯಂತ ಮದ್ಯ ಮಾರಾಟ ನಿಷೇಧ: ಸಿಎಂ ನಿತೀಶ್ ಕುಮಾರ್ ದಿಟ್ಟ ಹೆಜ್ಜೆ

    ಮಹತ್ವದ ಬೆಳವಣಿಗೆಯಲ್ಲಿ ಮಂಗಳವಾರ ಬಿಹಾರ ಸರಕಾರ ರಾಜ್ಯಾದ್ಯಂತ ಮದ್ಯ ಮಾರಾಟವನ್ನು ನಿಷೇಧಿಸಿದೆ. ಏ. 1ರಂದು ಬಿಹಾರದ ಗ್ರಾಮೀಣ ಭಾಗದಲ್ಲಿ ‘ದೇಶಿ ಉತ್ಪಾದಿತ ವಿದೇಶಿ ಮದ್ಯ’ (ಐಎಂಎಫ್ಎಲ್)ವನ್ನು ನಿಷೇಧಿಸಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಆದೇಶ ಹೊರಡಿಸಿದ್ದರು. ಇದಾಗಿ ನಾಲ್ಕು ದಿನಗಳ ನಂತರ ಇಂದು (ಮಂಗಳವಾರ) ಮಾಧ್ಯಮಗಳ ಜತೆ ಮಾನಾಡಿದ ಅವರು, “ರಾಜಧಾನಿ ಪಾಟ್ನಾ ಸೇರಿದಂತೆ ಹಲವು ನಗರಗಳಲ್ಲಿ ಮದ್ಯ ನಿಷೇಧಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮುಖ್ಯವಾಗಿ ಮಹಿಳೆಯರು ಮದ್ಯ ಮಾರಾಟ ನಿಷೇಧಕ್ಕೆ ಒತ್ತಾಸೆ ತೋರಿಸಿದ್ದಾರೆ. ಹೀಗಾಗಿ, ಸಂಪುಟ ಸಭೆಯಲ್ಲಿ ರಾಜ್ಯಾದ್ಯಂತ ಮದ್ಯ […]

    April 5, 2016

Top