An unconventional News Portal.

ನಾಸಾ
  ...

  ‘ಸ್ಟೋರಿ ಆಫ್ ಮಾರ್ಸ್ ಮಿಶನ್’: ಕುತೂಹಲ ಮೂಡಿಸಿದ ‘ಅಯಸ್ಕಾಂತೀಯ ಹೊದಿಕೆ’!

  ಮಂಗಳಯಾನಕ್ಕೆ ಸಿದ್ಧತೆಗಳು ನಡೆಯುತ್ತಿರುವ ಹೊತ್ತಿಗೇ ವಿಜ್ಞಾನಿಗಳು ಹೊಸ ಆಲೋಚನೆಯೊಂದನ್ನು ಹರಿಬಿಟ್ಟಿದ್ದಾರೆ. ಮಂಗಳ ಗ್ರಹದ ವಾತಾವರಣವನ್ನು ಕಾಪಾಡಲು ಬೃಹತ್ ಗಾತ್ರದ ಅಯಸ್ಕಾಂತೀಯ ಹೊದಿಕೆಯನ್ನು ರೂಪಿಸಿದರೆ, ಮುಂದಿನ ದಿನಗಳಲ್ಲಿ ಕೆಂಪು ಗ್ರಹದ ಮೇಲೂ ಮನುಷ್ಯ ಮನೆ ಮಾಡಿಕೊಂಡಿರಲು ಸಾಧ್ಯ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 2030ರ ಹೊತ್ತಿಗೆ ಮೊದಲ ಬಾರಿಗೆ ಮನುಷ್ಯನನ್ನು ಮಂಗಳ ಗ್ರಹದ ಮೇಲೆ ಇಳಿಸಲು ಅಮೆರಿಕಾದ ಬಾಹ್ಯಕಾಶ ಸಂಸ್ಥೆ ನಾಸಾ ಸಿದ್ಧತೆ ಮಾಡಿಕೊಳ್ಳುತ್ತಿದೆ. 90ರ ದಶಕದಲ್ಲಿ ಶುರುವಾದ ಈ ಯೋಜನೆಗಾಗಿ ಸಾಕಷ್ಟು ಪ್ರಯೋಗಗಳು ಜಾರಿಯಲ್ಲಿವೆ. ಹೀಗಿರುವಾಗಲೇ, ಬೃಹತ್ ಅಯಸ್ಕಾಂತೀಯ […]

  March 7, 2017
  ...

  ‘ನೋಡಲು ಮರೆಯದಿರಿ…’: ಇಂದು ರಾತ್ರಿ ಆಕಾಶದಲ್ಲಿ ‘ಸೂಪರ್ ಮೂನ್’ ಚಮಾತ್ಕಾರ!

  ಇಂದು (ನವೆಂಬರ್ 14) ರಾತ್ರಿ ಕಾಣಿಸಿಕೊಳ್ಳುವ ಹುಣ್ಣಿಮೆಯ ಚಂದ್ರ ತುಂಬಾ ವಿಶೇಷವಾದುದು. ರಾತ್ರಿ ಚಂದ್ರ ಎಂದಿಗಿಂತ ದೊಡ್ಡದಾಗಿ ಮತ್ತು ಪ್ರಕಾಶಮಾನವಾಗಿ ಉದಯಿಸಲಿದೆ. ಚಂದ್ರ ಭೂಮಿಗೆ ಅತೀ ಸಮೀಪ ಬರುತ್ತಿರುವುದೇ ಇದಕ್ಕೆ ಕಾರಣ. 68 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಇಷ್ಟು ಸಮೀಪದಲ್ಲಿ ಚಂದ್ರ ಕಾಣಿಸಿಕೊಳ್ಳುತ್ತಿದ್ದು, ಮಿಸ್ ಮಾಡಿದ್ರೆ ‘ಸೂಪರ್ ಮೂನ್’ ನೋಡಲು ಮತ್ತೆ 2034 ನವೆಂಬರ್ 25ರ ವರೆಗೆ ಕಾಯಬೇಕಾಗುತ್ತದೆ. ಈ ಹಿಂದೆ 1948ರ ಜನವರಿಯಲ್ಲಿ ಚಂದ್ರ ಇಷ್ಟೇ ಹತ್ತಿರದಲ್ಲಿ ಕಾಣಿಸಿಕೊಂಡಿತ್ತು. ಸೋಮವಾರ ರಾತ್ರಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವುದಕ್ಕಿಂತ […]

  November 14, 2016
  ...

  ‘ವಿಜ್ಞಾನ ವಿಸ್ಮಯ’: ಬಾಹ್ಯಾಕಾಶ ಕೇಂದ್ರದಲ್ಲೂ ಮೊಗ್ಗರಳಿ, ಹೂವಾದಾಗ…!

  ಜನವರಿ 16, 2016.. ಅಮೆರಿಕಾದ ಗಗನಯಾತ್ರಿ ಸ್ಕಾಟ್ ಕೆಲ್ಲಿ ಮೇಲಿನ ಚಿತ್ರವನ್ನು ಭೂಮಿಗೆ ರವಾನಿಸಿದ್ದರು. ಬಾಹ್ಯಾಕಾಶದಲ್ಲಿ ಬೆಳೆದ ಮೊದಲ ಹೂವಿನ ಚಿತ್ರವಿದು. ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ (ನಾಸಾ) ಪ್ರಾಯೋಜಿತ ‘ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ’ದಲ್ಲಿ ಈ ಜೀನಿಯಾ ಹೂವನ್ನು ಬೆಳೆಯಲಾಗಿತ್ತು. 2015ರ ನವೆಂಬರ್ 16ರಂದು ಆಕಾಶದಲ್ಲಿ ಹೂವು ಬೆಳೆಯುವ ಪ್ರಯತ್ನ ಆರಂಭವಾಗಿತ್ತು. ಅವತ್ತು ಅಮೆರಿಕಾದ ಇನ್ನೊಬ್ಬ ಗಗನಯಾತ್ರಿ ಕ್ಜೆಲ್ ಲಿಂಡ್’ಗ್ರೆನ್ ಜೀನಿಯಾ ಬೀಜವನ್ನು ಬಿತ್ತಿದ್ದರು. ಅದರೆ ಏನೇ ಮಾಡಿದರೂ ಗಿಡ ಸೊರಗಿ ಹೋಗಿತ್ತು. ಕ್ಜೆಲ್ ಲಿಂಡ್’ಗ್ರೆನ್ ಜೊತೆಗಿದ್ದ ಸ್ಕಾಟ್ […]

  October 18, 2016
  ...

  ಮಂಗಳನ ಮೇಲೆ ಮತ್ತೊಂದು ‘ಲ್ಯಾಂಡರ್’; ಕೆಂಪು ಗ್ರಹದ ಅಧಿಪತ್ಯಕ್ಕೆ ಹೆಚ್ಚಿದ ಪೈಪೋಟಿ!

  ಐತಿಹಾಸಿಕ ಸಾಧನೆಗೆ ವಿಶ್ವದ ಪ್ರಮುಖ ಎರಡು ಬಾಹ್ಯಾಕಾಶ ಸಂಸ್ಥೆಗಳು ಸಿದ್ಧವಾಗಿವೆ. ಯುರೋಪ್ ಮತ್ತು ರಷ್ಯಾದ ಬಾಹ್ಯಾಕಾಶ ಸಂಸ್ಥೆಗಳು ಜಂಟಿಯಾಗಿ ಮುಂದಿನ ವಾರ ಮಂಗಳ ಗ್ರಹದ ಮೇಲೆ ತಮ್ಮ ಲ್ಯಾಂಡರ್ಗಳನ್ನು ಇಳಿಸಲಿವೆ. ಈ ಮೂಲಕ ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾದ ನಂತರ ಈ ಸಾಧನೆ ಮಾಡಿದ ಮೊದಲ ಬಾಹ್ಯಾಕಾಶ ಸಂಸ್ಥೆಗಳು ಎಂಬ ಹಿರಿಮೆಗೆ ಇವು ಪಾತ್ರವಾಗಲಿವೆ. ‘ರಾಸ್ಕಾಸ್ಮೋಸ್ ಮಿಷನ್’ ಹೆಸರಲ್ಲಿ ಅಕ್ಟೋಬರ್ 19ರ ಬುಧವಾರ ಈ ಎರಡು ಬಾಹ್ಯಾಕಾಶ ಸಂಸ್ಥೆಗಳು ಲ್ಯಾಂಡರನ್ನು ಇಳಿಸಲಿವೆ. ಒಮ್ಮೆ ಲ್ಯಾಂಡರ್ ಕೆಂಪುಗ್ರಹದ ಮೇಲೆ […]

  October 12, 2016
  ...

  ‘ಮಾರ್ಟಿಯನ್ ಗಾರ್ಡನ್’: ಮಂಗಳನ ಮೇಲೊಂದು ಮನೆಯ ಮಾಡಿ; ತರಕಾರಿ ಬೆಳೆಯಲು ಹೊರಟರು!

  ಮಂಗಳ ಗ್ರಹದಲ್ಲಿ ಸಿಕ್ಕಿಹಾಕಿ ಕೊಂಡಾತ ಕೊನೆಗೆ ಅಲ್ಲಿಯೇ ಆಲೂಗಡ್ಡೆ ಬೆಳೆಯುವ ಕತೆಯನ್ನು ಹೊಂದಿದ್ದ ‘ದಿ ಮಾರ್ಟಿಯನ್’ ಎಂಬ ಹಾಲಿವುಡ್ ಸಿನಿಮಾ ಕಳೆದ ವರ್ಷ ಬಿಡುಗಡೆಯಾಗಿತ್ತು. ಆ ರೀಲ್ ಕತೆಯಂತೆಯೇ ರಿಯಲ್ ಲೈಫಿನಲ್ಲಿ ಅಂಥಹದ್ದೊಂದು ಸಾಧ್ಯತೆ ನಿಜವಾಗಿಸಲು ವಿಜ್ಞಾನಿಗಳೀಗ ಹೊರಟಿದ್ದಾರೆ. ಮುಂದಿನ 10-15 ವರ್ಷಗಳಲ್ಲಿ ಮಂಗಳ ಗ್ರಹಕ್ಕೆ ಮಾನವನನ್ನು ಕಳುಹಿಸಲು ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ ಮತ್ತು ಉದ್ಯಮಿ ಎಲೊನ್ ಮಸ್ಕ್ ಯೋಜನೆ ರೂಪಿಸಿದ್ದಾರೆ. ಹಾಗೆ ಕಳುಹಿಸಿದವರು ವಾಪಾಸ್ ಬರುವ ಮಾತೇ ಇಲ್ಲ. ಅದಕ್ಕಾಗಿ ಆಹಾರ ವಿಜ್ಞಾನಿಗಳೀಗ ಅಂತರಿಕ್ಷಯಾನಿಗಳು ಕೆಂಪು ಗ್ರಹದಲ್ಲಿ ಏನೇನು ಬೆಳೆಯಬಹುದು ಎಂಬ ಪಟ್ಟಿ […]

  October 10, 2016

Top