An unconventional News Portal.

ನರೇಂದ್ರ ಮೋದಿ
    ...
    Babri-Masjid-LK-Advani
    ದೇಶ

    ಅದ್ವಾನಿ ಆಸೆಗಳಿಗೆ ಕೊನೆಯ ಮೊಳೆ: ‘ಬಾಬ್ರಿ ಮಸೀದಿ ದ್ವಂಸ ಪ್ರಕರಣ’ದ ಲಾಭ ಯಾರಿಗೆ?

    ಲಾಲ್ ಕೃಷ್ಣ ಅದ್ವಾನಿ, ಮುರಳಿ ಮನೋಹರ್ ಜೋಷಿ, ಉಮಾಭಾರತಿ…ಒಂದು ಕಾಲದ ‘ಹಿಂದುತ್ವ’ ನೆಲೆಯ ರಾಜಕೀಯದ ಬ್ರಾಂಡ್‌ ಇಮೇಜ್‌ಗಳು. 90ರ ದಶಕದಲ್ಲಿ ‘ಅಟಲ್, ಅದ್ವಾನಿ, ಕಮಲ್ ನಿಶಾನ್ (ಅಟಲ್, ಅದ್ವಾನಿ, ಕಮಲ ಲಾಂಛನ) ಲೇಖರ್ ಆಯೇಂಗೇ ಹಿಂದೂಸ್ಥಾನ್’ (ತಂದೇ ತರುತ್ತಾರೆ ಹಿಂದೂಸ್ಥಾನ) ಎಂಬ ಘೋಷಣೆ ದೇಶದ ಉದ್ದಗಲಕ್ಕೂ ಮೊಳಗಿಸಲಾಗುತ್ತಿತ್ತು. ಇವತ್ತು ಹಿಂದೂಸ್ಥಾನ ಬದಿಗಿರಲಿ, ಕಮಲ ಲಾಂಛನಕ್ಕೂ ಅದ್ವಾನಿ ನೆನಪಾಗುತ್ತಿಲ್ಲ. ಆದರೆ ದೇಶದ 1992ರಲ್ಲಿ ನಡೆದ ಬಾಬ್ರಿ ಮಸೀದಿ ದ್ವಂಸ ಪ್ರಕರಣ ಮಾತ್ರ ಅವರನ್ನು ಮರೆಯುವ ಹಾಗೆ ಕಾಣಿಸುತ್ತಿಲ್ಲ. ಬುಧವಾರ ಸುಪ್ರಿಂ..

    April 19, 2017
    ...
    modi_suratroadshow
    ದೇಶ

    ಪ್ರಧಾನಿ ಮೋದಿಯ 8ನೇ ಭೇಟಿ: ಗುಜರಾತ್ ಚುನಾವಣೆ ಹಿನ್ನೆಲೆಯಲ್ಲಿ ಸಿಕ್ಕ ‘ರಾಷ್ಟ್ರೀಯ ಪ್ರಚಾರ’

    ಈ ವರ್ಷದ ಕೊನೆಯಲ್ಲಿ ಗುಜರಾತ್‌ ಚುನಾವಣೆ ದೇಶದ ಗಮನ ಸೆಳೆಯುವ ಸಾಧ್ಯತೆಗಳು ನಿಚ್ಚಳವಾಗಿವೆ. ಭಾನುವಾರ ಭುವನೇಶ್ವರದಲ್ಲಿ ನಡೆದ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಣಿಯನ್ನು ಮುಗಿಸಿದ ಪ್ರಧಾನಿ ಮೋದಿ, ನೇರವಾಗಿ ಸೂರತ್‌ಗೆ ಕಾಲಿಟ್ಟಿದ್ದಾರೆ. ಇಂದೂ ಕೂಡ ಗುಜರಾತ್‌ನಲ್ಲಿ ಹಲವು ಸರಕಾರಿ ಯೋಜನೆಗಳಿಗೆ ಶಿಲಾನ್ಯಾಸ ಮಾಡಲಿದ್ದಾರೆ. ಈ ಎಲ್ಲಾ ಬೆಳವಣಿಗೆಗಳು ಮುಂಬರುವ ಗುಜರಾತ್‌ ವಿಧಾನಸಭಾ ಚುನಾವಣೆಯನ್ನು ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಕೊಂಚ ಸೀರಿಯಸ್‌ ಆಗಿಯೇ ತೆಗೆದುಕೊಂಡಿದೆ ಎಂಬುದರ ಮುನ್ಸೂಚನೆಯನ್ನು ನೀಡುತ್ತಿವೆ. ಭಾನುವಾರ ಪ್ರೈಂ ಶೋ: ರಜಾ ದಿನವಾದ ಭಾನುವಾರ ಸಂಜೆ..

    April 17, 2017
    ...
    Tamil Nadu Farmers
    ದೇಶ

    ಬೆತ್ತಲೆ ಪ್ರತಿಭಟನೆಗೆ ಸೊಪ್ಪು ಹಾಕದ ‘ಪ್ರಧಾನ ಸೇವಕ’; ರೈತರ ಸಮಸ್ಯೆಗೆ ಯಾಕಿಲ್ಲ ಬೆಲೆ?

    ಕರ್ನಾಟಕದಲ್ಲಿ ದಿಡ್ಡಳ್ಳಿ ಆದಿವಾಸಿಗಳ ಬೆತ್ತಲೆ ಪ್ರತಿಭಟನೆ ಭಾರಿ ಸುದ್ದಿಗೆ ಗ್ರಾಸವಾಗಿತ್ತು. ಇದಕ್ಕೆ ಅಂದು ಪ್ರತಿಕ್ರಿಯೆ ನೀಡಿದ್ದ ನಾಡಿನ ಮುಖ್ಯಮಂತ್ರಿ ಸಿದ್ದರಾಮಯ್ಯ “ನಾವೇನಾದರೂ ಬೆತ್ತಲೆ ಪ್ರತಿಭಟನೆ ಮಾಡಲು ಹೇಳಿದ್ದೆವಾ?” ಎಂಬ ಬೇಜವಾಬ್ದಾರಿ ನಡವಳಿಕೆಯಿಂದಾಗಿ ತೀವ್ರ ಟೀಕೆಗೆ ಗುರಿಯಾಗಿದ್ದರು. ಈ ಸಂದರ್ಭ ನಡೆದ ಮಡಿಕೇರಿ ಚಲೋದಲ್ಲಿ ಮಾತನಾಡಿದ್ದ ಹೋರಾಟಗಾರ ನೂರ್ ಶ್ರೀಧರ್ “ಬೆತ್ತಲೆ ಪ್ರತಿಭಟನೆ ಅಸಹಾಯಕತೆಯ ಪರಮಾವಧಿ,” ಎಂದಿದ್ದರು. ಇದೇ ಅಸಹಾಯಕತೆಯ ಪರಮಾವಧಿಗೆ ತಮಿಳುನಾಡು ರೈತರೀಗ ಬಂದಿದ್ದಾರೆ. ಪರಿಣಾಮ ರಾಷ್ಟ್ರ ರಾಜಧಾನಿಯಲ್ಲಿರುವ ಪ್ರಧಾನಿಮಂತ್ರಿ ನಿವಾಸದ ಆವರಣ ಅಸಹಾಯಕ ಬೆತ್ತಲೆ ಪ್ರತಿಭಟನೆಗೆ..

    April 11, 2017
    ...
    farmer-india-1
    ದೇಶ

    ನಮ್ಮ ಬ್ಯಾಂಕುಗಳೇಕೆ ರೈತರ ಅಕೌಂಟ್‌ನಿಂದ ಹೇಳದೆ ಕೇಳದೆ ಹಣ ಕಡಿತ ಮಾಡುತ್ತಿವೆ?

    ಹರಿಯಾಣ ರಾಜ್ಯದ ಭಿವಾನಿ ಜಿಲ್ಲೆಯ ಬನ್ಸಿ ಲಾಲ್‌ ಎಂಬ ರೈತರೊಬ್ಬರ ‘ಕಿಸನ್ ಕ್ರೆಡಿಟ್ ಕಾರ್ಡ್‌’ನ ಬ್ಯಾಂಕ್‌ ಅಕೌಂಟಿನಿಂದ ಇತ್ತೀಚೆಗೆ 2, 480ರೂಪಾಯಿಗಳನ್ನು ಹೇಳದೆ ಕೇಳದೆ ಕಡಿತಗೊಳಿಸಲಾಯಿತು. ವಿಚಾರಿಸಿದಾಗ ‘ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ’ (ಪಿಎಂಎಫ್‌ಬಿವೈ) ಅಡಿಯಲ್ಲಿ, ಬೆಳೆ ವಿಮೆಯ ಪ್ರೀಮಿಯಂ ಹಣದ ರೂಪದಲ್ಲಿ ಅದನ್ನು ಬ್ಯಾಂಕು ನೇರವಾಗಿ ಇನ್ಸ್‌ಶೂರೆನ್ಸ್‌ ಕಂಪನಿ ಅಕೌಂಟಿಗೆ ವರ್ಗಾವಣೆ ಮಾಡಿದ್ದಾಗಿ ತಿಳಿದು ಬಂತು. ತಮ್ಮ ಅನುಮತಿ ಇಲ್ಲದೆ ವಿಮೆ ತುಂಬಿದ ಬಗ್ಗೆ ಇನ್ನಷ್ಟು ವಿಚಾರಿಸಿದರೆ ಬ್ಯಾಂಕಿನ ಕಡೆಯಿಂದ ಈವರೆಗೂ ಸಮಾಧಾನಕರ ಪ್ರತ್ಯುತ್ತರ ಬಂದಿಲ್ಲ. ಸದ್ಯ ಬನ್ಸಿ..

    March 31, 2017
    ...
    adhar-security-failed-1
    ದೇಶ

    ಗಮನಿಸಿ; ಆಧಾರ್ ಮಾಹಿತಿ ಸೋರಿಕೆ ಆಗಿದೆ: ಕೊನೆಗೂ ಒಪ್ಪಿಕೊಂಡ ಮೋದಿ ಸರಕಾರ

    ನಿಮ್ಮ ಆಧಾರ್‌ ಕಾರ್ಡ್‌ ಜತೆಗೆ ಬ್ಯಾಂಕ್‌ ಅಕೌಂಟ್ ಮತ್ತಿತರ ವೈಯಕ್ತಿಕ, ಸೂಕ್ಷ್ಮ ಮಾಹಿತಿಗಳನ್ನು ಜೋಡಿಸಿಟ್ಟುಕೊಂಡಿದ್ದೀರಾ? ಹಾಗಾದರೆ ಎಚ್ಚರಾಗಿ, ನಿಮ್ಮ ಗೌಪ್ಯ ಮಾಹಿತಿ ಸೋರಿಕೆಯಾಗಿರುವ ಎಲ್ಲಾ ಸಾಧ್ಯತೆಗಳೂ ಇವೆ. ಇದೇ ಮೊದಲ ಬಾರಿಗೆ ಕೇಂದ್ರದ ನರೇಂದ್ರ ಮೋದಿ ಸರಕಾರ ಅಧಿಕೃತವಾಗಿ ಯುಐಡಿ ಅಥವಾ ಆಧಾರ್‌ ಕಾರ್ಡ್ ಮಾಹಿತಿ ಸಾರ್ವಜನಿಕಗೊಳ್ಳುವ ಸಾಧ್ಯತೆಯನ್ನು ಒಪ್ಪಿಕೊಂಡಿದೆ. ಈವರೆಗೂ ಸರಕಾರ ಆಧಾರ್‌ ಕಾರ್ಡ್‌ ಪಡೆದುಕೊಳ್ಳಲು ನಾಗರಿಕರು ನೀಡಿರುವ ಮಾಹಿತಿ ಸೋರಿಕೆಯಾಗಬಹುದು ಎಂಬ ಎಚ್ಚರಿಕೆಗಳನ್ನು ಕಡೆಗಣಿಸುತ್ತಲೇ ಬಂದಿತ್ತು. ಜತೆಗೆ, ಆದಾಯ ತೆರಿಗೆ ಪಾವತಿ ಸೇರಿದಂತೆ ಸಿಮ್‌..

    March 31, 2017
    ...
    corporate-loan-1
    ದೇಶ

    ನಮ್ಮ ‘ಬ್ಯಾಂಕಿಂಗ್ ವ್ಯವಸ್ಥೆ’ ನಿಜಕ್ಕೂ ಯಾರ ಅನುಕೂಲಕ್ಕಾಗಿ ಕೆಲಸ ಮಾಡುತ್ತಿದೆ?

    ದೇವೆಂದರ್ ಶರ್ಮಾ ಅಹ್ಮದಾಬಾದ್‌ನಲ್ಲಿ ನ್ಯಾನೋ ಕಾರ್‌ ತಯಾರಿಕಾ ಘಟಕ ಸ್ಥಾಪನೆಗೆ ಗುಜರಾತ್ ಸರಕಾರ 456. 79 ಕೋಟಿ ಮೊತ್ತದ ಸಾಲವನ್ನು ಟಾಟಾ ಕಂಪನಿಗೆ ನೀಡಿತು. ಅದೂ 0.1% ಬಡ್ಡಿ ದರದಲ್ಲಿ; 20 ವರ್ಷಗಳ ಕಾಲವಧಿಗೆ. ಇನ್ನೊಂದು ಅರ್ಥದಲ್ಲಿ ಬಡ್ಡಿರಹಿತ, ದೀರ್ಘಕಾಲಿಕ ಸಾಲವನ್ನು ನೀಡಲಾಯಿತು. ಪಂಜಾಬ್ ಸರಕಾರ ಸ್ಟೀಲ್ ಉದ್ಯಮಿ ಲಕ್ಷ್ಮಿ ಮಿತ್ತಲ್ ಒಡೆತನದ ಬಟಿಂಡಾ ರಿಪೈನರಿಯಲ್ಲಿ 1, 200 ಕೋಟಿ ರೂಪಾಯಿ ಹೂಡಿಕೆ ಮಾಡಿತು. ಅದೇ ವೇಳೆಯಲ್ಲಿ ಹಳ್ಳಿಯ ಬಡ ಮಹಿಳೆಯೊಬ್ಬರು ಕುರಿಗಳನ್ನು ಕೊಳ್ಳಬೇಕು ಎಂದು 5 ಸಾವಿರ ಸಾಲಕ್ಕಾಗಿ..

    March 30, 2017
    ...
    yogi-adithyanath-1
    ದೇಶ

    Mockery Of Democracy: ಇದ್ದಲ್ಲೇ ಎದ್ದು ನಿಂತ ‘ದೇವಸ್ಥಾನದ ಅರ್ಚಕ’ ಯೋಗಿ!

    ‘ಯೋಗ’ ಎಂಬುದು ನಾಮಪದ. ಹೊಂದಿಕೆ, ಕೂಡುವುದು, ಇಂದ್ರಿಯ ನಿಗ್ರಹ, ಪ್ರಾಪ್ತಿ, ಧ್ಯಾನ, ಅದೃಷ್ಟ ಹೀಗೆ ಹಲವು ಅರ್ಥಗಳು ಈ ಪದಕ್ಕೆ ಕನ್ನಡದಲ್ಲಿವೆ. ದೇಶದ ಅತಿ ದೊಡ್ಡ ರಾಜ್ಯ ಉತ್ತರ ಪ್ರದೇಶದ ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಿರುವ ಆದಿತ್ಯನಾಥ್ ಅವರಿಗೆ ‘ಯೋಗ’ ಒಲಿದಿದೆ ಎಂಬ ವ್ಯಾಖ್ಯಾನಗಳು ಕಳೆದ ಎರಡು ದಿನಗಳ ಅಂತರದಲ್ಲಿ ಕರ್ನಾಟಕದ ಮಾಧ್ಯಮಗಳ ಮೂಲಕ ಸಾರಿ ಸಾರಿ ಹೇಳಲಾಗುತ್ತಿದೆ. ಅವುಗಳ ಪ್ರಕಾರ, ಉತ್ತರ ಪ್ರದೇಶದ ಗೋರಖ್‌ಪುರ್ ಜಿಲ್ಲೆಯ ಸಂಸದರಾಗಿರುವ ಆದಿತ್ಯನಾಥರಿಗೆ ಒಲಿದಿರುವುದು ‘ಯೋಗ’! ವಾಸ್ತವದಲ್ಲಿ ಆ ರಾಜ್ಯದ ಯಾವುದೇ..

    March 20, 2017
    ...
    anti-incumbency-1
    ದೇಶ

    ಯುಪಿ ಎಂದರೆ ದೇಶವಲ್ಲ; ಆಡಳಿತ ವಿರೋಧಿ ಅಲೆಯ ಕಡೆ ಗಮನ ಯಾಕಿಲ್ಲ?

    ಸದ್ಯ ಹೊರಬಿದ್ದಿರುವ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಮುಂಬರುವ ಲೋಕಸಭಾ ಚುನಾವಣೆಯ ದಿಕ್ಸೂಚಿಯಾ? ಈ ವಿಶ್ಲೇಷಣೆಯನ್ನು ಒಪ್ಪಿಕೊಳ್ಳುವುದೇ ಆದರೆ, ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಭಾರತೀಯ ಜನತಾ ಪಕ್ಷ (ಬಿಜೆಪಿ) ಸಂಭ್ರಮಾಚರಣೆ ಪಕ್ಕಕ್ಕಿಟ್ಟು ಆತ್ಮಾವಲೋಕ ಮಾಡಿಕೊಳ್ಳಬೇಕಿರುವ ಹೊತ್ತಿದು. ಉತ್ತರ ಪ್ರದೇಶ, ಉತ್ತರಾಖಾಂಡ್, ಗೋವಾ, ಮಣಿಪುರ ಮತ್ತು ಪಂಜಾಬ್ ರಾಜ್ಯಗಳಲ್ಲಿ ಜನ ನೀಡಿರುವ ‘ಮ್ಯಾನ್‌ಡೇಟ್’ ಆಡಳಿತದ ವಿರುದ್ಧವಾಗಿದೆ ಎಂಬುದು ಗಮನಾರ್ಹ. ವಿಶೇಷವಾಗಿ ಉತ್ತರ ಪ್ರದೇಶ, ಪಂಜಾಬ್ ಮತ್ತು ಉತ್ತರಖಾಂಡ್‌ ರಾಜ್ಯಗಳಲ್ಲಿ ಜನ ಸ್ಪಷ್ಟವಾಗಿ ತಮ್ಮನ್ನು ಆಳುತ್ತಿದ್ದವರನ್ನು ತಿರಸ್ಕರಿಸುವ ಮೂಲಕ ಹೊಸಬರನ್ನು..

    March 11, 2017
    ...
    election-live-4
    LIVE

    LIVE: ಉತ್ತರ ಪ್ರದೇಶದಲ್ಲಿ ಬಿಜೆಪಿ ಮುನ್ನಡೆ, ಪಂಜಾಬ್‌ನಲ್ಲಿ ಕಾಂಗ್ರೆಸ್- ಎಎಪಿ ಟಫ್ ಫೈಟ್

    ದೇಶದ ರಾಜಕೀಯದ ದಿಕ್ಸೂಚಿಯನ್ನೇ ಬದಲಾಯಿಸಲಿದೆ ಎಂದು ಬಿಂಬಿತವಾಗಿರುವ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶದ ‘ನೇರ ಪ್ರಸಾರ’ ಇದು. ಇಲ್ಲಿಂದ ಮುಂದೆ ನಾಲ್ಕಾರು ಗಂಟೆಗಳ ಕಾಲ ‘ಸಮಾಚಾರ’ ಐದೂ ರಾಜ್ಯಗಳಲ್ಲಿ ನಡೆಯುವ ಮತ ಎಣಿಕೆಯ ಅಪ್ಡೇಟ್ ಜತೆಗೆ, ಒಂದಷ್ಟು ಒಳನೋಟಗಳ ಮಾಹಿತಿಯನ್ನು ನೀಡಲಿದೆ. ಇದು ಡಿಜಿಟಲ್ ಮಾಧ್ಯಮದ ಟಿಪಿಕಲ್ ‘ಲೈವ್’ ಅನ್ನುವುದಕ್ಕಿಂತ, ಚುನಾವಣಾ ಫಲಿತಾಂಶದ ಸುತ್ತ ‘ಟೀಕೆ- ಟಿಪ್ಪಣಿ’ಗಳು. ನಿಮ್ಮ ಅಭಿಪ್ರಾಯಗಳನ್ನೂ ದಾಖಲಿಸಿ…

    March 11, 2017
    ...
    varanasi-narendra-roadshow-1
    ದೇಶ

    ವಾರಣಾಸಿಯತ್ತ ಎಲ್ಲರ ಚಿತ್ತ: ಯುಪಿ ಚುನಾವಣೆಯಲ್ಲಿ ಏನಿದು ‘ಕ್ಷೇತ್ರ ಮಹಾತ್ಮೆ’?

    ಉತ್ತರ ಪ್ರದೇಶ ಚುನಾವಣೆಯ ಕೊನೆಯ ಹಂತದ ಮತದಾನಕ್ಕೆ ಇನ್ನು 48 ಗಂಟೆಗಳಷ್ಟೆ ಬಾಕಿ ಇರುವಾಗ, ವಾರಣಾಸಿಯನ್ನು ಕೇಂದ್ರವಾಗಿಟ್ಟುಕೊಂಡು ಪ್ರಮುಖ ಪಕ್ಷಗಳು ಬಲ ಪ್ರದರ್ಶನಕ್ಕೆ ಇಳಿದಿವೆ. ಬಿಜೆಪಿ ಮತ್ತು ಸಮಾಜವಾದಿ ಪಕ್ಷಗಳು ವಾರಣಾಸಿಯ ಬೀದಿಗಳಲ್ಲಿ ಮತದಾರರನ್ನು ಸೆಳೆಯುವ ತಂತ್ರ ಅನುಸರಿಸಿದ್ದರೆ, ವಾರಣಾಸಿಯ ಹೊರಭಾಗದ ದಲಿತ ಬಸ್ತಿಗಳಲ್ಲಿ ಬಿಎಸ್‌ಪಿ ಕೊನೆಯ ಹಂತದಲ್ಲಿ ಮತದಾರರನ್ನು ಆಕರ್ಷಿಸುವ ರ್ಯಾಲಿಗಳನ್ನು ಆಯೋಜಿಸಿದೆ. ಪ್ರಧಾನಿ ಮೋದಿ ಕಳೆದ ಮೂರು ದಿನಗಳಿಂದ ವಾರಣಾಸಿಯಲ್ಲಿಯೇ ವಾಸ್ತವ್ಯ ಹೂಡಿದ್ದಾರೆ. ಹಸುಗಳಿಗೆ ಮೇವು ನೀಡುತ್ತಿದ್ದಾರೆ. ಲಕ್ಷಾಂತರ ಜನರ ಸಭೆಗಳಲ್ಲಿ ಭಾಗವಹಿಸುತ್ತಿದ್ದಾರೆ. ವಾರಣಾಸಿಯನ್ನು ಕೇಂದ್ರವಾಗಿಟ್ಟುಕೊಂಡು..

    March 6, 2017

Top