An unconventional News Portal.

ದೌರ್ಜನ್ಯ
    ...
    AP9_1_2017_000171B
    ಫೋಕಸ್

    ‘ಬೌದ್ಧ ದೇಶದ ಅಲ್ಪಸಂಖ್ಯಾತರು’: ರೋಹಿಂಗ್ಯಾ ಮುಸ್ಲಿಂರು, ಧರ್ಮ ಮತ್ತು ಮಿತಿ ಮೀರಿದ ದಾಳಿಗಳು…

    1920-40ರಲ್ಲಿ ದೇಶಗಳ ನಡುವೆ ಯುದ್ಧಗಳು ನಡೆದು ಮಹಾಸಮರಗಳು ನಡೆದು ಹೋಗಿದ್ದವು. ಆದರೆ ಇವತ್ತು ದೇಶಗಳ ಗಡಿಯನ್ನು ಮೀರಿ ಮನುಷ್ಯನ ನಡುವೆ ನಡೆಯುತ್ತಿರುವ ಯುದ್ಧಗಳು ಧಾರ್ಮಿಕ ನೆಲೆಗೆ ಅಪ್ಪಿಕೊಳ್ಳುತ್ತಿವೆ. ಸದ್ಯ ವಿಶ್ವದಲ್ಲಿ ನಡೆಯುತ್ತಿರುವುದು ಜನಾಂಗಗಳ ನಡುವಿನ ಯುದ್ಧ. ಅದು ಹಿಂದೂ ವರ್ಸಸ್ ಮುಸ್ಲಿಂ ಇರಬಹುದು, ಮುಸ್ಲಿಂ ವರ್ಸಸ್ ಕ್ರಿಶ್ಚಿಯನ್ ಇರಬಹುದು ಅಥವಾ ನಮ್ಮದೇ ಪಕ್ಕದ ದೇಶ ಮಯನ್ಮಾರ್‌ನಲ್ಲಿ ನಡೆಯುತ್ತಿರುವ ಬೌದ್ಧಿಸ್ಟ್ ವರ್ಸಸ್ ರೊಹಿಂಗ್ಯಾ ಇರಬಹುದು. ನಿಲ್ಲದ ರೊಹಿಂಗ್ಯಾ ಮುಸ್ಲಿಮರ ಮೇಲಿನ ದಾಳಿ… ಮಯನ್ಮಾರ್ ಭೇಟಿ ವೇಳೆ ರೋಹಿಂಗ್ಯಾ ವಿಷಯ ಪ್ರಸ್ತಾಪಿಸಲಿರುವ..

    September 4, 2017
    ...
    gideon-1
    ಪತ್ರಿಕೆ

    ಆಕ್ರಮಿಸಿಕೊಂಡ ದೇಶದೊಳಗೆ ಸತ್ಯ ಹೇಳುತ್ತಿರುವ ಪತ್ರಕರ್ತ; ಇಸ್ರೇಲಿನ ಗಿಡಾನ್ ಲೆವಿ!

    ‘ಕಳೆದ ಮೂರು ದಶಕಗಳಿಂದ ಬರಹಗಾರ, ಪತ್ರಕರ್ತ ಗಿಡಾನ್ ಲೆವಿ ತಮ್ಮ ಕ್ಷೀಣದನಿಯಲ್ಲಿ ಭಯೋತ್ಪಾದಕರು ಆವರಿಸಿಕೊಂಡ ಪ್ರದೇಶದ ಕತೆಯನ್ನು ತಮ್ಮ ಓದುಗರಿಗೆ ಹೇಳಿಕೊಂಡು ಬರುತ್ತಿದ್ದಾರೆ…’; ಎಂದು ಬರೆಯುತ್ತಾನೆ ಇನ್ನೊಬ್ಬ ಪತ್ರಕರ್ತ ಜಾನ್ ಹರಿ. ಇಸ್ರೇಲ್ ದೇಶದ ಭಿನ್ನ ದನಿಯಾಗಿ ಗುರುತಿಸಿಕೊಂಡಿರುವ ಪತ್ರಕರ್ತ ಗಿಡಾನ್, ‘ದಿ ಇಂಡಿಪಂಡೆಂಟ್’ ಪತ್ರಿಕೆಗೆ 2010ರಲ್ಲಿ ನೀಡಿದ ಸಂದರ್ಶನಕ್ಕೆ ಬರೆದ ಮುನ್ನುಡಿಯಲ್ಲಿರುವ ವಾಕ್ಯಗಳಿವು. ಒಬ್ಬ ಪತ್ರಕರ್ತ ಇನ್ನೊಬ್ಬ ಪತ್ರಕರ್ತನ ಬಗ್ಗೆ ಬರೆಯಬೇಕಾದ ಅನಿವಾರ್ಯತೆಗಳು ಹೆಚ್ಚುತ್ತಿರುವ ಈ ದಿನಗಳಲ್ಲಿ ಗಿಡಾನ್ ಲೆವಿ ತರಹರ ವ್ಯಕ್ತಿ ಪರಿಚಯಗಳನ್ನು ಮಾಡಿಸುವ..

    July 5, 2017
    ...
    gau-rakshak-1
    ರಾಜ್ಯ

    ‘ಗೋ ರಕ್ಷಣೆ ನೆಪದಲ್ಲಿ ನಡೆದಿದ್ದು ಎರಡೇ ಕೃತ್ಯ’: ಇದು ಪೊಲೀಸ್ ಇಲಾಖೆ ಮಾಹಿತಿ ಎಂದ ಅಧಿಕಾರಿ

    “ನಾವು ಕಾನೂನು ಏನು ಹೇಳಿದೆಯೋ, ಅದನ್ನು ಫಾಲೋ ಮಾಡಿದ್ದೀವಿ. 1964ರಿಂದ ಇದ್ದ ಕಾನೂನು ಅದು. ಅದರಲ್ಲಿ ನ್ಯೂನತೆಗಳಿವೆ ಎಂದು ಈಗ ಹೇಳುತ್ತಿದ್ದಾರೆ. ರಾಜ್ಯದಲ್ಲಿ ಗೋ ರಕ್ಷಣೆಯ ಹೆಸರಿನಲ್ಲಿ ಎರಡೇ ದೌರ್ಜನ್ಯ ಕೃತ್ಯಗಳು ನಡೆದಿವೆ. ಹಾಗಂತ ಪೊಲೀಸ್‌ ಇಲಾಖೆ ನೀಡಿದ ಮಾಹಿತಿಯನ್ನು ನಾವು ಸುಪ್ರಿಂ ಕೋರ್ಟ್‌ಗೆ ಸಲ್ಲಿಸಿದ್ದೇವೆ. ಸುಪ್ರಿಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಕೆಗೆ ಮುನ್ನ, ಕಾನೂನು ಇಲಾಖೆಯಿಂದ ಹಿಡಿದು ಮುಖ್ಯ ಕಾರ್ಯದರ್ಶಿವರೆಗೆ ಅನುಮತಿ ಪಡೆದುಕೊಳ್ಳಲಾಗಿದೆ. ನ್ಯಾಯಾಲಯಕ್ಕೆ ನಾವು ಸುಳ್ಳು ಮಾಹಿತಿ ನೀಡಲು ಸಾಧ್ಯವಿಲ್ಲ…” ಹೀಗಂತ ಸ್ಪಷ್ಟ ಮಾತುಗಳಲ್ಲಿ ವಿವರಿಸಿದರು ಪಶು..

    May 5, 2017
    ...
    t-chalo-final
    ರಾಜ್ಯ

    ‘ತುಮಕೂರು ಚಲೋ’ ಒಂದು ದಿನ ಬಾಕಿ: ‘ಇದು ಹೊಸ ತಲೆಮಾರಿನ ದಲಿತ- ದಮನಿತರ ಹೋರಾಟ’

    ‘ಉಡುಪಿ ಚಲೋ’ ಕಾರ್ಯಕ್ರಮದ ಮೂಲಕ ರಾಜ್ಯದ ಸುದ್ದಿ ಕೇಂದ್ರಕ್ಕೆ ಬಂದಿದ್ದ ‘ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿ’ (ಡಿಡಿಎಸ್‌ಎಚ್‌ಎಸ್) ಗುರುವಾರ ‘ತುಮಕೂರು ಚಲೋ’ ಕಾರ್ಯಕ್ರಮ ಹಮ್ಮಿಕೊಂಡಿದೆ. ಇತ್ತಿಚೆಗೆ ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿ ದಲಿತ ಯುವಕನ ಮೇಲೆ ನಡೆದ ಬರ್ಬರ ಹಲ್ಲೆ ಮತ್ತು ರಾಜ್ಯ ಇತರೆ ಭಾಗಗಳಲ್ಲಿ ಕಳೆದ ಮೂರ್ನಾಲ್ಕು ತಿಂಗಳುಗಳ ಅಂತರದಲ್ಲಿ ನಡೆದ ದೌರ್ಜನ್ಯ ಪ್ರಕರಣಗಳು ‘ಚಲೋ’ ಹಮ್ಮಿಕೊಳ್ಳಲು ಕಾರಣ. ಈಗಾಗಲೇ ತುಮಕೂರಿನ ತಾಲೂಕುಗಳಲ್ಲಿ ವ್ಯಾಪಕ ಪ್ರಚಾರ ಪಡೆದುಕೊಂಡಿರುವ ಕಾರ್ಯಕ್ರಮಕ್ಕೆ ದೊಡ್ಡ ಸಂಖ್ಯೆಯಲ್ಲಿ ಜನ ಸೇರುವ ನಿರೀಕ್ಷೆ..

    February 15, 2017
    ...
    protest-cong-final
    ರಾಜ್ಯ

    ‘ಪ್ರಕಟಣೆ’: ಸಿದ್ದು ಸರಕಾರದಲ್ಲಿ ಸಾಹಿತಿ, ಬುದ್ದಿಜೀವಿ, ದಲಿತ ಹೋರಾಟಗಾರರನ್ನು ಹುಡುಕಿಕೊಡಿ!

    ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ದಲಿತ ಯುವಕ ಅಭಿಷೇಕ್ ಮೇಲಿನ ಅಮಾನುಷ ಹಲ್ಲೆ ಪ್ರಕರಣ ಹೋರಾಟದ ತಿರುವು ಪಡೆದುಕೊಳ್ಳುತ್ತಿರುವ ವೇಳೆಯಲ್ಲಿಯೇ, ರಾಜ್ಯದ ನಾನಾ ಕಡೆಗಳಲ್ಲಿ ದಲಿತ ಹಾಗೂ ಹಿಂದುಳಿದ ವರ್ಗಗಳ ಮೇಲೆ ‘ಜಾತಿ ದೌರ್ಜನ್ಯ’ಗಳಾಗುತ್ತಿರುವ ವರದಿಗಳು ಬರುತ್ತಿವೆ. ಮಂಡ್ಯ ಜಿಲ್ಲೆಯ ಕರಗೋಡು ಹೋಬಳಿಯ ಕೆ ಗೌಡನಕೆರೆ ಗ್ರಾಮದಲ್ಲಿ ಡಿ. 21ರಂದು ಕ್ಷೌರಿಕ ಸಮಾಜ ಕುಟುಂಬವೊಂದರ ಮೇಲೆ ಹಲ್ಲೆ ನಡೆಸಲಾಗಿದೆ. ಅವ್ಯಾವ್ಯ ಶಬ್ಧಗಳಿಂದ ನಿಂಧಿಸಿರುವ ಮೇಲ್ಜಾತಿಯವರು, ಕೊನೆಗೆ ಅವರ ಗುಡಿಸಲು ಮನೆಯನ್ನೇ ಸುಟ್ಟು ಹಾಕಿರುವುದು ಬೆಳಕಿಗೆ ಬಂದಿದೆ. ಈ ಕುರಿತು ಕರಗೋಡು ಪೊಲೀಸ್..

    January 27, 2017
    ...
    dalit
    ರಾಜ್ಯ

    ದಲಿತರ ಭೂಮಿ ಮೇಲೆ ಮಂತ್ರವಾದಿಯ ಕಣ್ಣು: ‘#ಚಲೋಉಡುಪಿ’ ಹೋರಾಟಗಾರರಿಗೆ ಮೊದಲ ಸವಾಲು!

    ಕರ್ನಾಟಕದಲ್ಲಿ ಅಹಿಂದ ಸರಕಾರ ಆಡಳಿತದಲ್ಲಿದೆ; ಹಾಗಂಥ ಸಿದ್ದರಾಮಯ್ಯ ಸುತ್ತಮುತ್ತ ಇರುವವರು ಹೇಳುತ್ತಾ ಬಂದಿದ್ದಾರೆ. ಆದರೆ ಈ ಸರಕಾರದ ಅವಧಿಯಲ್ಲೂ ದಲಿತರ ಮೇಲಿನ ದೌರ್ಜನ್ಯ ನಡದುಕೊಂಡು ಬರುತ್ತಿದೆ. ಇನ್ನೊಂದೆಡೆ ದಲಿತ ಭೂ ರಹಿತರಿಗೆ ಭೂಮಿ ನೀಡಿ ಅಂತ ‘ಊನಾ ಮಾದರಿ’ಯಲ್ಲಿ ‘ಉಡುಪಿ ಚಲೋ’ ಹೋರಾಟ ಕಾವು ಪಡೆದುಕೊಳ್ಳುತ್ತಿದೆ. ಅದಕ್ಕಾಗಿಯೇ ಹುಟ್ಟಿಕೊಂಡ ‘ಚಲೋ ಉಡುಪಿ’ ವಾಟ್ಸಾಪ್ ಗುಂಪುಗಳ ಪೈಕಿ ಒಂದಕ್ಕೆ ದೂರೊಂದರ ಮಾಹಿತಿ ಬಂದಿದೆ. ದಲಿತರಿಗೆ ಭೂಮಿ ನೀಡುವ ಜತೆಗೆ, ಈಗ ಇರುವ ಭೂಮಿಯನ್ನೂ ಉಳಿಸಿಕೊಡಿ ಅಂತ ಇಲ್ಲಿನ ಜನ ಕೇಳುತ್ತಿದ್ದಾರೆ; ಹಾಗೊಂದು ಬೇಡಿಕೆ ಬಂದಿರುವುದು ತುಮಕೂರು ಜಿಲ್ಲೆಯ..

    September 22, 2016
    ...
    irom-sharmila-1
    ದೇಶ

    ಚುನಾವಣಾ ಅಖಾಡಕ್ಕೆ ಶರ್ಮಿಳಾ: 16 ವರ್ಷಗಳ ಉಪವಾಸಕ್ಕೆ ಅಂತ್ಯ ಹಾಡಿದ ‘ಉಕ್ಕಿನ ಮಹಿಳೆ’!

    ಹರ್ಷಕುಮಾರ್ ಕುಗ್ವೆ ಮಣಿಪುರದ ‘ಐರನ್ ಲೇಡಿ’ ಎಂದೇ ಕರೆಯಲಾಗುವ ಇರೋಮ್ ಶರ್ಮಿಳಾ ಇದೇ ಆಗಸ್ಟ್ 9 ರಂದು ತನ್ನ ಹದಿನಾರು ವರ್ಷಗಳ ಸುದೀರ್ಘ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸುವ ನಿರ್ಧಾರವನ್ನು ಪ್ರಕಟಿಸಿದ್ದಾಳೆ. ಇದು ದೇಶದಲ್ಲಿ; ವಿಶೇಷವಾಗಿ ಮಣಿಪುರದಲ್ಲಿ ಸಂಚಲನ ಮೂಡಿಸಿದೆ. ಯಾಕೆಂದರೆ ತನ್ನ ಈ ಉಪವಾಸದ ಕಾರಣದಿಂದಾಗಿಯೇ ಜಗತ್ತಿನ ಜನರ ಗಮನ ಸೆಳೆದಾಕೆ ಇರೋಮ್ ಶರ್ಮಿಳಾ. ತಾನು ನಡೆಸಿಕೊಂಡು ಬಂದಿದ್ದ ಹೋರಾಟ ತಾರ್ಕಿಕ ಅಂತ್ಯ ಕಾಣುವ ಮೊದಲೇ ಉಪವಾಸ ಸತ್ಯಾಗ್ರಹ ಕೈ ಬಿಡುವ ನಿರ್ಧಾರ ಕೈಗೊಂಡಿರುವುದು ಹಲವರ ಹುಬ್ಬೇರಲು ಕಾರಣವಾಗಿದೆ. ತನ್ನ ಉಪವಾಸ..

    July 27, 2016
    ...
    Angestellte wird belstigt
    ಮೀಡಿಯಾ 2.0

    ಒತ್ತಡದ ಪತ್ರಿಕೋದ್ಯಮದಲ್ಲಿ ತಮ್ಮನ್ನು ತಾವು ಉಳಿಸಿಕೊಳ್ಳಲು ಹೆಣಗುತ್ತಿರುವ ಪತ್ರಕರ್ತೆಯರು!

    ಒಂದು ಕಾಲದಲ್ಲಿ ಪುರುಷರಿಗೇ ಮೀಸಲಾಗಿದ್ದ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಈಗ ಮಹಿಳೆಯರ ಪಾಲು ದೊಡ್ಡದಿದೆ. ಬದಲಾದ ಸನ್ನಿವೇಷದಲ್ಲಿ ಎಲ್ಲಾ ಕ್ಷೇತ್ರಗಳಂತೆ ಇಲ್ಲೂ ಮಹಿಳೆಯರು ಪ್ರಾಬಲ್ಯ ಮೆರೆಯುತ್ತಿದ್ದಾರೆ. ಇನ್ನಷ್ಟು ಅವಕಾಶಗಳು ಸಿಕ್ಕರೆ ಅವರು ನಿರ್ಣಾಯಕ ಪಾತ್ರಗಳನ್ನೂ ನಿಭಾಯಿಸುವ ಮುನ್ಸೂಚನೆ ನೀಡಿದ್ದಾರೆ. ಒಂದು ಕಾಲದಲ್ಲಿ ಪುರುಷರು ಮಾತ್ರ ನಿಭಾಯಿಸಬಲ್ಲ ಕ್ಷೇತ್ರಗಳೆಂದು ಗುರುತಿಸುತ್ತಿದ್ದ ಪತ್ರಿಕೋದ್ಯಮದ ವಿಭಾಗಗಳಾದ ತನಿಖಾ ಪತ್ರಿಕೋದ್ಯಮ, ಕ್ಯಾಮೆರಾಮನ್, ಕ್ರೈಮ್ ಬೀಟ್ಗಳಲ್ಲೂ ಇವತ್ತು ಸಾಕಷ್ಟು ಮಹಿಳೆಯರು ಕಾಣಸಿಗುತ್ತಾರೆ. ಹೀಗೆ ದೊಡ್ಡ ಮಟ್ಟದಲ್ಲಿ ಮಾಧ್ಯಮ ಜಗತ್ತಿಗೆ ಪ್ರವೇಶಿಸುತ್ತಿರುವ ಪತ್ರಕರ್ತೆಯರು, ಮಾಧ್ಯಮ ತಂತ್ರಜ್ಞೆಯರು ಎದುರಿಸುವ ಸಮಸ್ಯೆಗಳಾವುವು? ಅವರುಗಳು..

    May 20, 2016

Top