An unconventional News Portal.

ದೆಹಲಿ
    ...

    ಎಡಿಆರ್‌ ವರದಿಯಲ್ಲಿ ಸಿಎಂಗಳ ಆಸ್ತಿಪಾಸ್ತಿ: ಸಿದ್ದರಾಮಯ್ಯ ಬಳಿ ಆಸ್ತಿ ಎಷ್ಟಿದೆ?

    ‘ದೇಶದ 29 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳಿಗೆ ಸೇರಿದ ಎಲ್ಲ ಮುಖ್ಯಮಂತ್ರಿಗಳ ಪೈಕಿ 25 ಮುಖ್ಯಮಂತ್ರಿಗಳು ಕೋಟ್ಯಧಿಪತಿಗಳಾಗಿದ್ದಾರೆ,’ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್  ವಿಶ್ಲೇಷಣೆ ಮಾಡಿದ ವರದಿಯೊಂದು ಹೇಳಿದೆ. ಚುನಾವಣೆಗೆ ಸ್ಪರ್ಧಿಸಿದಾಗ ಅಭ್ಯರ್ಥಿಗಳು ‘ಚುನಾವಣಾ ಆಯೋಗ’ಕ್ಕೆ ಸಲ್ಲಿಸಿದ ಪ್ರಮಾಣ ಪತ್ರದ ಮಾಹಿತಿ ಆಧರಿಸಿ ಈ ವಿಶ್ಲೇಷಣೆ ಮಾಡಲಾಗಿದೆ. ದೇಶದ ಎಲ್ಲಾ ಮುಖ್ಯಮಂತ್ರಿಗಳು ಹೊಂದಿರುವ ಆಸ್ತಿ, ವಿದ್ಯಾರ್ಹತೆ ಮತ್ತು ಅವರ ವಿರುದ್ಧ ಇರುವ ಎಲ್ಲ ಪ್ರಕರಣಗಳು ಇದರಲ್ಲಿವೆ. ನ್ಯಾಶನಲ್ ಎಲೆಕ್ಷನ್ ವಾಚ್‌ನಲ್ಲಿಯೂ ಈ ಕುರಿತು ಮಾಹಿತಿ […]

    February 13, 2018
    ...

    ದೆಹಲಿಯಲ್ಲಿ ಎಂಟು ತಿಂಗಳ ಕಂದಮ್ಮನ ಮೇಲೆ ಅತ್ಯಾಚಾರ: ಎತ್ತ ಸಾಗುತ್ತಿದೆ ‘ವಿಶ್ವಗುರು’?

    ರಾಷ್ಟ್ರದ ರಾಜಧಾನಿಯಲ್ಲಿ ಆಘಾತಕಾರಿ ಘಟನೆಯೊಂದು ಜರುಗಿದೆ. ದೆಹಲಿಯ ಶಾಲಿಮಾರ್ ಬಾಗ್‌ ಪ್ರದೇಶದಲ್ಲಿ 8 ತಿಂಗಳ ಹೆಣ್ಣು ಮಗುವಿನ ಮೇಲೆ 28 ವಯಸ್ಸಿನ ಸೋದರ ಸಂಬಂಧಿಯಿಂದಲೇ ಅತ್ಯಾಚಾರ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ಲೈಂಗಿಕ ಹಿಂಸಾಚಾರದ ವಿರುದ್ಧ ಹೋರಾಡುತ್ತಿರುವ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೋಮವಾರ ಈ ಘಟನೆ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ತಾಯಿಯು ತಮ್ಮ ಮಗುವನ್ನು ಸಹೋದರ ಸಂಬಂಧಿ ಮನೆಯಲ್ಲಿ ಬಿಟ್ಟು ಗಂಡನೊಂದಿಗೆ ಕೆಲಸಕ್ಕೆ ಹೋಗಿದ್ದರು. ಈ ಸಂದರ್ಭದಲ್ಲಿ ಕುಡಿದ ಮತ್ತಿನಲ್ಲಿ ಹಸುಗೂಸಿನ ಮೇಲೆ […]

    January 30, 2018
    ...

    ಶೈಕ್ಷಣಿಕ ಕ್ಷೇತ್ರದ ಮೇಲೆ ಆಸೆ; ರಾಜಕಾರಣದ ಬಗ್ಗೆ ಪ್ರೀತಿ: ದಿಲ್ಲಿ ರಾಜಕಾರಣದಿಂದ ಜಂಗ್ ನಿರ್ಗಮನ

    ದೆಹಲಿ ರಾಜಕೀಯ ಅಖಾಡದ ‘ಜಂಗೀ’ ಕುಸ್ತಿ ಅಂತ್ಯವಾಗಿದೆ. ಅರವಿಂದ ಕೇಜ್ರಿವಾಲ್ ಜತೆ ತೊಡೆ ತಟ್ಟಿದ್ದ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್, ಅವಧಿ ಬಾಕಿ ಉಳಿದಿರುವಾಗಲೇ ಅಖಾಡದಿಂದ ಹಿಂದೆ ಸರಿದಿದ್ದಾರೆ. ಗುರುವಾರ ಸಂಜೆ ವೇಳೆಗೆ ಜಂಗ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ ಅಚ್ಚರಿಯ ವಿಚಾರ ಹೊರ ಬಿದ್ದಿದೆ. ಕೇಂದ್ರ ಸರಕಾರದ ಅಣತಿಯಂತೆ ನಡೆದುಕೊಳ್ಳುತ್ತಾರೆ ಎಂಬ ಆರೋಪವನ್ನು ಅವರು ಹೊತ್ತುಕೊಂಡಿದ್ದರು. ಅಂಥಹದ್ದೊಂದು ಆರೋಪ ಹೊರಿಸಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ‘ಜಂಗ್ ಮುಂದಿನ ದಿನಗಳು ಒಳ್ಳೆಯದಾಗಿರಲಿ’ ಎಂದು ಶುಭ ಹಾರೈಸಿದ್ದಾರೆ. ಮೂರುವರೆ […]

    December 23, 2016
    ...

    ‘ಸಾರ್ವಜನಿಕ ಸಾರಿಗೆ’: ಬಸ್ ದರದಲ್ಲಿ 75% ಇಳಿಕೆ; ದೆಹಲಿಯಲ್ಲಿ ಹೊಸವರ್ಷಕ್ಕೆ ಕೇಜ್ರಿವಾಲ್ ಕೊಡುಗೆ

    ಜನಪರ, ಆಕ್ರಮಣಕಾರಿ ಯೋಜನೆಗಳನ್ನು ಜಾರಿಗೆ ತರುತ್ತಿರುವ ಅರವಿಂದ್ ಕೇಜ್ರಿವಾಲ್ ಈ ಬಾರಿ ಬಸ್ ದರ ಕಡಿತ ಗೊಳಿಸಿ ಸುದ್ದಿಯಲ್ಲಿದ್ದಾರೆ. ದೆಹಲಿ ನಾಗರಿಕರಿಗೆ ಹೊಸ ವರ್ಷದ ಕೊಡುಗೆ ನೀಡಿರುವ ಕೇಜ್ರಿವಾಲ್ ಸರಕಾರಿ ಸ್ವಾಮ್ಯದ ಡಿಟಿಎಸ್ ಬಸ್ ದರಗಳನ್ನು ಬರೋಬ್ಬರಿ ಶೇಕಡಾ 75ರಷ್ಟು ಕಡಿತಗೊಳಿಸಿದ್ದಾರೆ. ಸಾರ್ವಜನಿಕ ಸಾರಿಗೆಯನ್ನು ಉತ್ತೇಜನಗೊಳಿಸಲು ಮತ್ತು ದೆಹಲಿಯಲ್ಲಿ ಮಾಲಿನ್ಯ ನಿಯಂತ್ರಣ ಸಾಧಿಸಲು ಎಎಪಿ ಸರಕಾರ ಈ ಕ್ರಮಕ್ಕೆ ಮುಂದಾಗಿದೆ. ಹೊಸ ವರ್ಷದಿಂದ ಆರಂಭವಾಗಿ ಜನವರಿ ಅಂತ್ಯದವರೆಗೆ ದೆಹಲಿಯಲ್ಲಿ ಕೇವಲ ಒಂದೇ ರೀತಿಯ ಬಸ್ ದರಗಳು ಇರಲಿವೆ. […]

    December 22, 2016
    ...

    ಕಾಂಗ್ರೆಸ್ ತಲೆದಂಡಕ್ಕೆ ಮುನ್ನುಡಿ ಬರೆಯುತ್ತಾ ‘ಮೇಟಿ ಪ್ರಕರಣ’?

    ಕೊನೆಗೂ ಅಬಕಾರಿ ಸಚಿವ, ಸಿಎಂ ಆಪ್ತ ಎಚ್ ವೈ ಮೇಟಿ ರಾಜಿನಾಮೆ ನೀಡಿದ್ದಾರೆ. ಸೆಕ್ಸ್ ಸಿಡಿಯೊಂದು ಅವರ ಸಚಿವ ಸ್ಥಾನವನ್ನು ಕಿತ್ತುಕೊಂಡಿದೆ. ವಿಧಾನಸಭೆ ಚುನಾವಣೆಗೆ ಸುಮಾರು ಒಂದೂವರೆ ವರ್ಷ ಇದೆ ಎನ್ನುವಾಗ ರಾಜ್ಯ ರಾಜಕೀಯದಲ್ಲಿ ಬೆಳವಣಿಗೆಗಳು ಗರಿಗೆದರಿವೆ. ಆಡಳಿತರೂಢ ಕಾಂಗ್ರೆಸ್ ಪಕ್ಷದ ಬಗೆಗಿನ ಅಭಿಪ್ರಾಯ ಬದಲಿಸುವ ಕೆಲಸಗಳು ಮುನ್ನಲೆಗೆ ಬಂದಿದ್ದು, ರಾಷ್ಟ್ರೀಯ ಪಕ್ಷಕ್ಕೆ ರಾಜ್ಯದಲ್ಲಿ ಎಳ್ಳು ನೀರು ಬಿಡುವ ಕೆಲಸ ಆರಂಭವಾಗಿದೆ. ಯಡಿಯೂರಪ್ಪ ಭವಿಷ್ಯ ನಿಜವಾಗುತ್ತಾ? ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸದ್ಯದಲ್ಲೇ 3 […]

    December 15, 2016
    ...

    ಹುಟ್ಟು, ಮದುವೆ, ಮಗು ಮತ್ತು ವೇಶ್ಯೆ: ಇದು ಪೆರ್ನಾ ಜಾತಿ ಹೆಂಗಸರ ಅನಿವಾರ್ಯ ಕರ್ಮ

    ಸೀತಾ ಮನೆಗೆ ಬಂದಾಗ ಆಕೆಯ ಗಂಡ ಇನ್ನೂ ನಿದ್ದೆ ಮಂಪರಿನಲ್ಲಿಯೇ ಇದ್ದ. ರಾತ್ರಿ ಹೊತ್ತು ದೆಹಲಿಯ ಬೀದಿ ಬದಿಯಲ್ಲಿ ವೇಶ್ಯೆಯಾಗಿ ಆಕೆ ನಿಂತಿದ್ದಳು. ಬೆಳಕಾಗುವ ವೇಳೆಗೆ ಮನೆಗೆ ಬಂದಿದ್ದಳು. ಬಂದವಳೆ ಸ್ನಾನ ಮಾಡಿ, ಬೆಳಗಿನ ಉಪಹಾರ ಸಿದ್ಧಪಡಿಸಿ, ಮಕ್ಕಳನ್ನು ಶಾಲೆಗೆ ಹೊರಡಿಸುತ್ತಿದ್ದಳು. ಈ ಎಲ್ಲಾ ಕೆಲಸಗಳು ಮುಗಿದ ನಂತರವೇ ಆಕೆಯ ವಿಶ್ರಾಂತಿ ಸಮಯ ಶುರುವಾಗಿತ್ತು. ದೆಹಲಿ ನಗರಕ್ಕೆ ಹೊಂದಿಕೊಂಡ ನಜಾಫ್ಘರ್ ಭಾಗದಲ್ಲಿ ಸೀತಾ ಮನೆ ಇದೆ. ಆಕೆ ನಿತ್ಯ ಬದುಕಿದಾಗಿ ಏನು ಮಾಡುತ್ತಾಳೆ ಎಂಬುದರಲ್ಲಿ ಯಾವ ಮುಚ್ಚು ಮರೆಯೂ ಇಲ್ಲ. ಅದು ಎಲ್ಲರಿಗೂ ಗೊತ್ತು. […]

    November 30, 2016
    ...

    ‘ಗೂಢಚರ್ಯೆ ಆರೋಪ’: ಪಾಕಿಸ್ತಾನ ರಾಯಭಾರಿ ಕಚೇರಿ ಸಿಬ್ಬಂದಿ ಬಂಧನ!

    ಭಾರತ-ಪಾಕಿಸ್ತಾನ ಮಧ್ಯೆ ಕಾವೇರಿದ ವಾತಾವರಣ ಜಾರಿಯಲ್ಲಿರುವ ಹೊತ್ತಲ್ಲೇ ಪಾಕಿಸ್ತಾನ ರಾಯಭಾರ ಕಚೇರಿಯ ಸಿಬ್ಬಂದಿಯೊಬ್ಬರನ್ನು ಗುರುವಾರ ಬೆಳಿಗ್ಗೆ ಬಂಧಿಸಲಾಗಿದೆ. ಗೂಢಚರ್ಯೆ ಆರೋಪದ ಮೇಲೆ ರಾಯಭಾರ ಕಚೇರಿ ಸಿಬ್ಬಂದಿ ಮೆಹ್ಮೂದ್ ಅಖ್ತರ್ ರನ್ನು ವಿಚಾರಣೆಗಾಗಿ ಅರೆಸ್ಟ್ ಮಾಡಲಾಗಿದೆ. ಡಿಪ್ಲೊಮ್ಯಾಟಿಕ್ ಪಾಸ್ ಪೋರ್ಟ್ ಹೊಂದಿರುವ ಮೆಹ್ಮೂದ್ ಅಖ್ತರ್ ರನ್ನು ದೆಹಲಿ ಕ್ರೈಂ ಬ್ರಾಂಚ್ ಪೊಲೀಸರು ಬಂಧಿಸಿದ್ದು ಸದ್ಯ ಚಾಣಾಕ್ಯಪುರಿ ಜೈಲಿನಲ್ಲಿಅಖ್ತರ್ ವಿಚಾರಣೆ ನಡೆಯುತ್ತಿದೆ. ಮೂಲಗಳ ಪ್ರಕಾರ ಅಖ್ತರ್ ಬಳಿಯಲ್ಲಿ ಭಾರತದ ರಕ್ಷಣಾ ಇಲಾಖೆಗೆ ಸೇರಿದ ರಣತಂತ್ರಗಳ ದಾಖಲೆಗಳು ಪತ್ತೆಯಾಗಿವೆ ಎನ್ನಲಾಗಿದೆ. ಈ […]

    October 27, 2016
    ...

    ಉರಿ ದಾಳಿ ಸುತ್ತ: 36 ಗಂಟೆಗಳಲ್ಲಿ ಮಿಂಚಿನ ‘ಪಥ ಸಂಚಲನ!

    ಉರಿ ಸೇನಾ ನೆಲೆಯ ಮೇಲೆ ದಾಳಿ ಹಿನ್ನಲೆಯಲ್ಲಿ ದೆಹಲಿ ಮಟ್ಟದಲ್ಲಿ ಮಿಂಚಿನ ಬೆಳವಣಿಗೆಗಳು ನಡೆಯುತ್ತಿದ್ದು, ದೇಶದ ಜನ ಕುತೂಹಲದಿಂದ ನೋಡುತ್ತಿದ್ದಾರೆ. ಒಂದು ಹಂತದಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ದ ಮೇಲೆ ದಾಳಿ ನಡೆಯುವ ಮಾತುಗಳೂ ಚಾಲ್ತಿಯಲ್ಲಿರುವುದರಿಂದ ಭಾರತದ ಮುಂದಿನ ನಿರ್ಧಾರದತ್ತ ಇಡೀ ಜಗತ್ತಿನ ಚಿತ್ತ ನೆಟ್ಟಿದೆ. ಹಾಗೇನಾದರೂ ಆದಲ್ಲಿ ಎರಡೂ ರಾಷ್ಟ್ರಗಳ ನಡುವೆ ‘ಪರೋಕ್ಷ’ ಯುದ್ಧ ಆರಂಭವಾಗಲಿದ್ದು, ಜಾಗತಿಕ ಆತಂಕ ಸೃಷ್ಟಿಯಾಗಿದೆ. ಈ ಎಲ್ಲಾ ಹಿನ್ನಲೆಯಲ್ಲಿ ಭಾನುವಾರ ಬೆಳಿಗ್ಗೆ ಕಾಶ್ಮೀರದ ಉರಿ ಸೇನಾ ನೆಲೆ ಮೇಲೆ ನಡೆದ ದಾಳಿಗೆ […]

    September 20, 2016
    ...

    ಸೊಳ್ಳೆ ಕಾಟಕ್ಕೆ ತತ್ತರಿಸಿದ ದೆಹಲಿ; ರಾಷ್ಟ್ರ ರಾಜಧಾನಿಯಲ್ಲಿ ಚಿಕುನ್ ಗುನ್ಯಾ ರುದ್ರ ನರ್ತನ

    ಸೊಳ್ಳೆ ಕಾಟಕ್ಕೆ ರಾಷ್ಟ್ರ ರಾಜಧಾನಿ ದೆಹಲಿ ತತ್ತರಿಸಿ ಹೋಗಿದೆ. ಇಲ್ಲಿನ ಹೊರವಲಯದ ಕರ್ಕಾರಧೂಮ ಪ್ರದೇಶದಲ್ಲಿ ಚಿಕುನ್ ಗುನ್ಯಾಗೆ ಸಾವಿನ ಸರಣಿ ಆರಂಭವಾಗಿದೆ. ಸ್ಥಳೀಯ ವೈದರ ಬಳಿ ಒಬ್ಬೊಬ್ಬರಾಗಿ ಬಂದು ಗಂಟು ನೋವು, ತಲೆ ನೋವು, ಜ್ವರ ಮತ್ತು ಅಸ್ವಸ್ಥತೆಯ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇವೆಲ್ಲಾ ಸೊಳ್ಳೆ ಮೂಲಕ ಹರಡುವ ಚಿಕುನ್ ಗುನ್ಯಾದ ಗುಣ ಲಕ್ಷಣಗಳಾಗಿವೆ. “ನಾನು ಪಕ್ಕದ ಆಸ್ಪತ್ರೆಗೆ ಹೋಗಿ ಪ್ಯಾರಾಸೆಟಮೋಲ್ ಮಾತ್ರ ತೆಗೆದುಕೊಳ್ಳುವಂತೆ ಹೇಳಿದೆ. ಆದರೆ ಅದು ಉಪಯೋಗಕ್ಕೆ ಬರುತ್ತಿಲ್ಲ,” ಎನ್ನುತ್ತಾರೆ 65 ವರ್ಷದ ಲೀಲಾ ವಾಟಿ. […]

    September 18, 2016

Top