An unconventional News Portal.

ದಿಲ್ಲಿ
    ...
    throwball-delhi-2
    ದೇಶ

    ‘ಕ್ರೀಡಾ ರಾಜಕೀಯ’: ಕರ್ನಾಟಕದ ಮಹಿಳಾ ಕ್ರೀಡಾಪಟುಗಳ ಮೇಲೆ ದಿಲ್ಲಿಯಲ್ಲಿ ಹಲ್ಲೆ

    ಬೆಂಗಳೂರಿನಲ್ಲಿ ಮಹಿಳೆಯರ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ವಿಚಾರದಲ್ಲಿ ದಿಲ್ಲಿ ಕೇಂದ್ರಿತ ರಾಷ್ಟ್ರೀಯ ಮಾಧ್ಯಮಗಳು ‘ಸುದ್ದಿ ಗದ್ದಲ’ವನ್ನು ಎಬ್ಬಿಸಿವೆ. ಅದೇ ವೇಳೆ, ದಿಲ್ಲಿಯಲ್ಲಿ ನಡೆದ ರಾಷ್ಟ್ರೀಯ ಥ್ರೋ ಬಾಲ್ ಚಾಂಪಿಯನ್ಶಿಪ್ ಕ್ರೀಡಾಕೂಟದಲ್ಲಿ ಕರ್ನಾಟಕದ ವಿದ್ಯಾರ್ಥಿನಿಯರ ಮೇಲೆ ಹಲ್ಲೆ ನಡೆದಿದೆ. ಘಟನೆ ನಡೆದು 24 ಗಂಟೆಗಳು ಕಳೆದಿದ್ದರೂ, ಈವರೆಗೆ ತಮಿಳುನಾಡಿನ ವಾಹಿನಿಗಳನ್ನು ಹೊರತು ಪಡಿಸಿ, ರಾಷ್ಟ್ರೀಯ ಮಾಧ್ಯಮಗಳಾಗಲೀ, ಕರ್ನಾಟಕದ ಮಾಧ್ಯಮಗಳಲ್ಲಿ ‘ಗದ್ದಲ’ ಹಾಳಾಗಿ ಹೋಗಲೀ, ಸುದ್ದಿಯೂ ಪ್ರಸಾರವಾಗಿಲ್ಲ. ಈ ಸಮಯದಲ್ಲಿ ದಿಲ್ಲಿಯಲ್ಲಿ ನಡೆದ ಘಟನೆಯ ಕುರಿತು ‘ಸಮಾಚಾರ’ಕ್ಕೆ ಸಿಕ್ಕಿರುವ ಚಿತ್ರಗಳು, ವಿಡಿಯೋಗಳನ್ನು..

    January 6, 2017
    ...
    modi-jio-add-1
    ದೇಶ

    ಜಿಯೋ ಪ್ರಚಾರಕ್ಕೆ ಪ್ರಧಾನಿ ಭಾವಚಿತ್ರ ಬಳಕೆ: ಹೆಚ್ಚೆಂದರೆ 500 ರೂಪಾಯಿ ದಂಡ ಬೀಳಬಹುದು!

    ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರವನ್ನು ಅನುಮತಿ ಇಲ್ಲದೆ ‘ಜಿಯೋ’ ಸಿಮ್ ವ್ಯಾಪಾರದ ಪ್ರಚಾರಕ್ಕೆ ಬಳಸಿಕೊಂಡ ಆರೋಪ ಮೇಲೆ ರಿಲಾಯನ್ಸ್ ಕಂಪನಿ ಮೇಲೆ ದಂಡ ಹಾಕುವ ಸಾಧ್ಯತೆ ಇದೆ. ಅದು ಎಷ್ಟು ಎಂದು ಹೇಳಿದರೆ ನೀವು ಅಚ್ಚರಿ ಪಡುತ್ತೀರ… ಬರೀ 500 ರೂಪಾಯಿಗಳು! ಹೌದು, ಮೂರು ತಿಂಗಳ ಹಿಂದೆ ಜಿಯೋ ಮಾರುಕಟ್ಟೆಗೆ ಬಿಡುಗಡೆ ಮಾಡುವ ಹೊತ್ತಿನಲ್ಲಿ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಭಾರಿ ಪ್ರಮಾಣದ ಜಾಹೀರಾತುಗಳನ್ನು ನೀಡಲಾಗಿತ್ತು. ಈ ಸಮಯದಲ್ಲಿ ಪ್ರಧಾನಿ ಮೋದಿ ಭಾವಚಿತ್ರವನ್ನು ಕಂಪನಿ ಬಳಸಿಕೊಂಡಿತ್ತು. ಆದರೆ, ಇದಕ್ಕೆ..

    December 3, 2016
    ...
    cauvery-delhi-umabharathi-meeting
    ರಾಜ್ಯ

    ‘ಕಾವೇರಿದ ಚಂಡು’ ಮತ್ತೆ ಸುಪ್ರಿಂ ಅಂಗಳಕ್ಕೆ: ನಿರ್ಧಾರಕ್ಕೆ ಬಾರದ ಕೇಂದ್ರ ಮಧ್ಯಸ್ಥಿಕೆ ಸಭೆ

    ನಿರೀಕ್ಷೆಯಂತೆಯೇ ಕೇಂದ್ರ ಸರಕಾರ ಕಾವೇರಿ ನದಿ ನೀರು ಹಂಚಿಕೆ ವಿಚಾರವನ್ನು ಗುರುವಾರ ಸುಪ್ರಿಂ ಕೋರ್ಟ್ ಅಂಗಳಕ್ಕೆ ವರ್ಗಾವಣೆ ಮಾಡಿದೆ. ನ್ಯಾಯಾಲಯದ ಸೂಚನೆ ಮೇರೆಗೆ ದಿಲ್ಲಿಯ ಶ್ರಮಶಕ್ತಿ ಭವನದಲ್ಲಿ ಕೇಂದ್ರ ಜಲಸಂಪನ್ಮೂಲ ಸಚಿವೆ ಉಮಾ ಭಾರತಿ ಅಧ್ಯಕ್ಷತೆಯಲ್ಲಿ ನಡೆದ ಸಭೆ ಯಾವುದೇ ನಿರ್ಧಾರ ತೆಗೆದುಕೊಳ್ಳುವಲ್ಲಿ ವಿಫಲವಾಗಿದೆ. ಸಭೆಯಲ್ಲಿ ಕರ್ನಾಟಕದ ಕಡೆಯಿಂದ ಸಿಎಂ ಸಿದ್ದರಾಮಯ್ಯ ಹಾಗೂ ತಮಿಳುನಾಡು ಕಡೆಯಿಂದ ಮುಖ್ಯ ಕಾರ್ಯದರ್ಶಿ ಪಿ. ರಾಮ ಮೋಹನ ರಾವ್ ಪಾಲ್ಗೊಂಡಿದ್ದರು. ತಮಿಳುನಾಡು ಮುಖ್ಯಮಂತ್ರಿ ಅನಾರೋಗ್ಯ ನಿಮಿತ್ತ ಆಸ್ಪತ್ರೆಗೆ ದಾಖಲಾಗಿರುವ ಹಿನ್ನೆಲೆಯಲ್ಲಿ, ರಾವ್ ಅವರ..

    September 29, 2016
    ...
    chikungunya Delhi
    ಸುದ್ದಿ ಸಾರ

    ಸೊಳ್ಳೆ ಕಾಟಕ್ಕೆ ತತ್ತರಿಸಿದ ದೆಹಲಿ; ರಾಷ್ಟ್ರ ರಾಜಧಾನಿಯಲ್ಲಿ ಚಿಕುನ್ ಗುನ್ಯಾ ರುದ್ರ ನರ್ತನ

    ಸೊಳ್ಳೆ ಕಾಟಕ್ಕೆ ರಾಷ್ಟ್ರ ರಾಜಧಾನಿ ದೆಹಲಿ ತತ್ತರಿಸಿ ಹೋಗಿದೆ. ಇಲ್ಲಿನ ಹೊರವಲಯದ ಕರ್ಕಾರಧೂಮ ಪ್ರದೇಶದಲ್ಲಿ ಚಿಕುನ್ ಗುನ್ಯಾಗೆ ಸಾವಿನ ಸರಣಿ ಆರಂಭವಾಗಿದೆ. ಸ್ಥಳೀಯ ವೈದರ ಬಳಿ ಒಬ್ಬೊಬ್ಬರಾಗಿ ಬಂದು ಗಂಟು ನೋವು, ತಲೆ ನೋವು, ಜ್ವರ ಮತ್ತು ಅಸ್ವಸ್ಥತೆಯ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇವೆಲ್ಲಾ ಸೊಳ್ಳೆ ಮೂಲಕ ಹರಡುವ ಚಿಕುನ್ ಗುನ್ಯಾದ ಗುಣ ಲಕ್ಷಣಗಳಾಗಿವೆ. “ನಾನು ಪಕ್ಕದ ಆಸ್ಪತ್ರೆಗೆ ಹೋಗಿ ಪ್ಯಾರಾಸೆಟಮೋಲ್ ಮಾತ್ರ ತೆಗೆದುಕೊಳ್ಳುವಂತೆ ಹೇಳಿದೆ. ಆದರೆ ಅದು ಉಪಯೋಗಕ್ಕೆ ಬರುತ್ತಿಲ್ಲ,” ಎನ್ನುತ್ತಾರೆ 65 ವರ್ಷದ ಲೀಲಾ ವಾಟಿ…

    September 18, 2016
    ...
    sisodia-arnab-copy
    ಸುದ್ದಿ ಸಾರ

    ‘ಸಿಸೋಡಿಯಾ v/s ಅರ್ನಾಬ್ ಗೋಸ್ವಾಮಿ’: ಫಿನ್ಲೆಂಡ್ ಟೂರ್ ಸುತ್ತ ಏನಿದು ಹೊಸ ವಿವಾದ?

    ದಿಲ್ಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ವಿದೇಶಿ ಪ್ರವಾಸದ ವಿಚಾರದಲ್ಲಿ ಎಎಪಿ v/s ‘ಟೈಮ್ಸ್ ನೌ’ ಸಂಪಾದಕ ಅರ್ನಾಬ್ ಗೋಸ್ವಾಮಿ ನಡುವೆ ನೇರ ಯುದ್ಧ ಆರಂಭವಾಗಿದೆ. ‘ಟೈಮ್ಸ್ ನೌ ಹಾಗೂ ಸುದರ್ಶನ ಟಿವಿಗಳು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖವಾಣಿಗಳಂತೆ ವರ್ತಿಸುತ್ತಿರುವುದಿಂದ ಅವರ ಪ್ಯಾನಲ್ ಡಿಬೇಟ್ಗಳಿಂದ ದೂರ ಇರಿ’ ಎಂದು ಆಮ್ ಆದ್ಮಿ ಪಕ್ಷ ತನ್ನ ಸ್ವಯಂ ಸೇವಕರಿಗೆ ಕರೆ ನೀಡಿದೆ. ಈ ಮೂಲಕ ಕೇಜ್ರಿವಾಲ್ ವರ್ಸಸ್ ಮೋದಿ ಕದನ ಕಣವೀಗ, ಮನೀಶ್ ಸಿಸೋಡಿಯಾ ವರ್ಸಸ್ ಅರ್ನಾಬ್ ಗೋಸ್ವಾಮಿ..

    September 17, 2016
    ...
    jnu-elction-candidates
    ದೇಶ

    JNUSU ಚುನಾವಣೆ ಅಂತಿಮ ಫಲಿತಾಂಶ: ಕೆಂಬಾವುಟದ ‘ಐಕ್ಯತೆ’ಗೆ ಭರ್ಜರಿ ಗೆಲುವು; ಗಮನ ಸೆಳೆದ ‘ಬಾಪ್ಸಾ’!

    ಜೆಎನ್ಯು (ಜವಹರ್ ಲಾಲ್ ನೆಹರೂ ಯುನಿವರ್ಸಿಟಿ) ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ‘Left Unity’ ಎಲ್ಲಾ ನಾಲ್ಕು ಸ್ಥಾನಗಳಲ್ಲಿ ಜಯಗಳಿಸಿದೆ. ಈ ಮೂಲಕ ಎಡಪಂಥೀಯ ಚಿಂತನೆಯ ‘ಕುಲುಮೆ’ ಎನ್ನಿಸಿಕೊಂಡಿರುವ ದೇಶದ ಪ್ರತಿಷ್ಠಿಯ ವಿಶ್ವವಿದ್ಯಾನಿಲಯದಲ್ಲಿ ಮತ್ತೊಮ್ಮೆ ಕೆಂಬಾವುಟ ಹಾರಾಡಿದೆ. ಇದರ ಜತೆಗೆ, ‘ಬಿರ್ಸಾ ಪುಲೆ ಅಂಬೇಡ್ಕರ್ ವಿದ್ಯಾರ್ಥಿ ಸಂಘ’ (ಬಾಪ್ಸಾ) ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಅತಿ ಹೆಚ್ಚು ಮತ ಪಡೆದ ಪಕ್ಷವಾಗಿ ಹೊರಹೊಮ್ಮಿದೆ. ಆದರೆ, ಯಾವುದೇ ಸ್ಥಾನಗಳಲ್ಲಿ ಗೆಲುವು ಕಾಣುವಲ್ಲಿ ಬಾಪ್ಸಾ ಅಭ್ಯರ್ಥಿಗಳು ವಿಫಲವಾಗಿದ್ದಾರೆ. ಬಿಜೆಪಿ ಬೆಂಬಲಿತ ವಿದ್ಯಾರ್ಥಿ ಸಂಘಟನೆ ಎಬಿವಿಪಿ ಮತ್ತು..

    September 10, 2016
    ...
    sandeep-kumar-delhi-sex-cd
    ಸುದ್ದಿ ಸಾರ

    ದಿಲ್ಲಿ ರಾಜಕಾರಣದಲ್ಲಿ ‘ಸೆಕ್ಸ್ ಸೀಡಿ’ ಮೇಲಾಟ: ಮುಸುಕಿನ ಗುದ್ದಾಟಕ್ಕೆ ಬಳಕೆಯಾಯಿತಾ ‘ಹನಿ ಟ್ರ್ಯಾಪ್’?

    ರಾಜಕೀಯದ ರಾಢಿ ದೇಶದ ರಾಜಧಾನಿ ದಿಲ್ಲಿಯನ್ನು ಆವರಿಸಿದೆ. ಕಳೆದ ವಾರ ಬಿದ್ದ ಮಳೆಯ ನೀರು, ರಸ್ತೆಗಳನ್ನು ಸಮುದ್ರವನ್ನಾಗಿಸಿ ಕೊನೆಗೆ ಯಮುನಾ ನದಿಯನ್ನು ಸೇರಿಕೊಂಡಿತು. ಅದೇ ವೇಳೆಗೆ ಬಯಲಾದ ಆಮ್ ಆದ್ಮಿ ಪಕ್ಷ (ಎಎಪಿ)ಯ ವಿಧಾನಸಭಾ ಸದಸ್ಯ ಸಂದೀಪ್ ಕುಮಾರ್ ‘ಲೈಂಗಿಕ ಹಗರಣ’ ಇಲ್ಲೀಗ ಭಾರಿ ಸದ್ದು ಮಾಡುತ್ತಿದೆ. ಒಂದು ಕಡೆ ಇದೊಂದು ‘ಹನಿ ಟ್ರ್ಯಾಪ್’ ಎಂದು ಎಎಪಿ ಮೂಲಗಳು ಹೇಳುತ್ತಿವೆಯಾದರೂ, ಬಹಿರಂಗವಾಗಿ ತಮ್ಮ ಪಕ್ಷದ ಚುನಾಯಿತ ಪ್ರತಿನಿಧಿಯೊಬ್ಬರ ಮೇಲೆ ಬಂದಿರುವ ಆರೋಪವನ್ನು ಸಮರ್ಥಿಸುವ ಪರಿಸ್ಥಿತಿ ಇಲ್ಲದಂತಾಗಿದೆ. ಶನಿವಾರ ಸಂಜೆ ವೇಳೆಗೆ,..

    September 4, 2016
    ...
    sports-bike-1
    ಸುದ್ದಿ ಸಾರ

    ಇ ಕಾಮರ್ಸ್ ವೆಬ್ ತಾಣ ಬಳಸಿ ಬೈಕ್ ದರೋಡೆ ಮಾಡಿದ ಬಾಲಕ!

    ಇ- ಕಾಮರ್ಸ್ ವೆಬ್ಸೈಟ್ ಜಾಹೀರಾತುಗಳನ್ನು ಬಳಸಿಕೊಂಡು ಕಳ್ಳತನ ಮಾಡಿದ ಆರೋಪದ ಮೇಲೆ ದಿಲ್ಲಿಯ ಬಾಲಕನೊಬ್ಬ ಪೊಲೀಸರ ಅತಿಥಿಯಾಗಿದ್ದಾನೆ. ಇಲ್ಲಿನ ಉತ್ತಮ ನಗರ ನಿವಾಸಿ ಅನ್ವರ್ ಎಂಬಾತ ತನ್ನ ಸ್ಪೋರ್ಟ್ಸ್ ಬೈಕ್ ಮಾರಾಟ ಮಾಡಲು ಇ- ಕಾಮರ್ಸ್ ವೆಬ್ ತಾಣದಲ್ಲಿ ಜಾಹೀರಾತನ್ನು ಪ್ರಕಟಿಸಿದ್ದ. ಇದಕ್ಕೆ ಕರೆ ಮಾಡಿದ್ದ ಇಬ್ಬರು ಬಾಲಕರು ಬೈಕ್ ಖರೀದಿಸುವುದಾಗಿ ಹೇಳಿಕೊಂಡಿದ್ದರು. ಅನ್ವರ್ ಬೈಕ್ ತಂದು ತೋರಿಸುತ್ತಲೇ ಟೆಸ್ಟ್ ರೈಡ್ ತೆಗೆದುಕೊಂಡ ಹೋದ ಬಾಲಕರು ನಾಪತ್ತೆಯಾಗಿದ್ದರು. ಈ ಕುರಿತು ಎರಡು ದಿನಗಳ ಹಿಂದೆ ಪೊಲೀಸರಿಗೆ ದೂರು ನೀಡಲಾಗಿತ್ತು…

    July 11, 2016
    ...
    air-india-plane-pti
    ದೇಶ

    ರೈಲ್ವೆ ಟಿಕೆಟ್ ದರಕ್ಕೆ ಇಳಿದ ಏರ್ ಇಂಡಿಯಾ ಟಿಕೆಟ್ ಬೆಲೆ: ದಿಲ್ಲಿ- ಬೆಂಗಳೂರು ಮಾರ್ಗದಲ್ಲಿ ‘ಸೂಪರ್ ಸೇವರ್’!

    ಇನ್ನು ಮುಂದೆ ದಿಲ್ಲಿ- ಬೆಂಗಳೂರು ನಡುವಿನ ಏರ್ ಇಂಡಿಯಾ ವಿಮಾನಯಾನ ದರದಲ್ಲಿ ಭಾರಿ ಇಳಿಕೆಯಾಗಲಿದೆ. ಕೊನೆಯ ನಾಲ್ಕು ಗಂಟೆಗಳ ಅವಧಿಯಲ್ಲಿ ನಿಗದಿತ ಸೀಟುಗಳಿಗೆ ರಾಜಧಾನಿ ಎಕ್ಸ್ಪ್ರೆಸ್ ರೈಲಿನ 2 ಟೈರ್ ಎಸಿ ಬೋಗಿಗಳ ಟಿಕೆಟ್ ದರವನ್ನು ಏರ್ ಇಂಡಿಯಾ ಪ್ರಕಟಿಸಿದೆ. ವಿಮಾನಯಾನ ಕ್ಷೇತ್ರದಲ್ಲಿ ದರ ಪೈಪೋಟಿ ಹಾಗೂ ಸಂಸ್ಥೆಯ ಸದ್ಯದ ಆರ್ಥಿಕ ಪರಿಸ್ಥತಿಯ ಹಿನ್ನೆಲೆಯಲ್ಲಿ, ಸರಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಮೊದಲ ಹಂತದಲ್ಲಿ ನಾಲ್ಕು ಪ್ರಮುಖ ಮಾರ್ಗಗಳ ನಡುವಿನ ಪ್ರಯಾಣ ದರವನ್ನು ಕಡಿತಗೊಳಿಸಲು ಮುಂದಾಗಿದೆ. ದಿಲ್ಲಿ- ಮುಂಬೈ, ದಿಲ್ಲಿ- ಚೆನ್ನೈ, ದಿಲ್ಲಿ- ಕೋಲ್ಕತ್ತಾ..

    July 11, 2016
    ...
    delhi-traffic-pollution
    ದೇಶ

    ನಗರ ಮಾಲಿನ್ಯ ತಡೆಗೆ ಕ್ರಮ: ದಿಲ್ಲಿ ರಸ್ತೆಗಳಿಂದ ಡೀಸೆಲ್ ಟ್ಯಾಕ್ಸಿ ನಿಷೇಧ

    ಹೆಚ್ಚುತ್ತಿರುವ ನಗರ ಮಾಲಿನ್ಯ ತಡೆಗೆ ‘ನೈಸರ್ಗಿಕ ಅನಿಲ'(CNG) ಬಳಕೆಗೆ ಸುಪ್ರಿಂ ಕೋರ್ಟ್ ಸ್ಪಷ್ಟ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ, ಭಾನುವಾರದಿಂದ ದೇಶದ ರಾಜಧಾನಿ ದಿಲ್ಲಿಯ ರಸ್ತೆಗಳಿಂದ ಡೀಸೆಲ್ ವಾಹನಗಳನ್ನು ಹೊರಗಿಡುವ ಪ್ರಕ್ರಿಯೆ ಆರಂಭವಾಗಿದೆ. ದಿಲ್ಲಿಯಲ್ಲಿ ಸುಮಾರು 27 ಸಾವಿರ ಡೀಸೆಲ್ ಚಾಲಿತ ವಾಹನಗಳು ಬಳಕೆಯಲ್ಲಿದ್ದವು. ಹಿಂದೆಯೇ ಡೀಸೆಲ್ ವಾಹನ ಸಂಚಾರವನ್ನು ನಿಷೇಧಿಸಲು ನ್ಯಾಯಾಲಯ ಹೇಳಿತ್ತಾದರೂ, ಗಡುವು ಮುಂದಕ್ಕೆ ಹಾಕಲು ಮನವಿ ಮಾಡಿಕೊಳ್ಳಲಾಗಿತ್ತು. ಆದರೆ, ಗಡುವನ್ನು ಮುಂದುವರಿಸಲು ಸುಪ್ರಿಂ ಕೋರ್ಟ್ ಶನಿವಾರ ನಿರಾಕರಿಸಿದ ಹಿನ್ನೆಲೆಯಲ್ಲಿ, ಡೀಸೆಲ್ ವಾಹನಗಳನ್ನು ರಸ್ತೆಗಳಿಂದ ಹೊರಗಿಡುವ ಪ್ರಕ್ರಿಯೆ ಶುರುವಾಗಲಿದೆ…

    May 1, 2016
  • 1
  • 2

ENTER YOUR E-MAIL

Name
Email *
February 2017
M T W T F S S
« Jan    
 12345
6789101112
13141516171819
20212223242526
2728  

Top