An unconventional News Portal.

ದಿಡ್ಡಳ್ಳಿ
    ...
    diddalli-nanjappa-death
    ರಾಜ್ಯ

    ‘ದಿಡ್ಡಳ್ಳಿ ಫಾಲೋಅಪ್’: ಸಂಕಷ್ಟಗಳ ಸುಧಾರಣೆ ಹಾದಿಯಲ್ಲಿ ಈ ಸಾವು ನ್ಯಾಯವೇ?

    ‘ಲೈನ್ ಮನೆ’ ಜೀತದ ನೋವಿನಲ್ಲೇ ಪ್ರಾಣ ಬಿಟ್ಟ ಆದಿವಾಸಿ ನಂಜಪ್ಪ.. ದಿಡ್ಡಳ್ಳಿಗೆ ಕಾಲಿಟ್ಟ ಹೋರಾಟಗಾರರ ವಿರುದ್ಧ ಪೊಲೀಸರಿಗೆ ದೂರು.. ಪುನರ್ವಸತಿಗೆ ಸರಕಾರದ ಕಡೆಯಿಂದ ನಿಧಾನಗತಿಯ ಪ್ರಕ್ರಿಯೆ.. ಇವಿಷ್ಟು ರಾಜ್ಯದ ಸುದ್ದಿಕೇಂದ್ರದಲ್ಲಿ ವಾರಗಳ ಕಾಲ ಜಾಗ ಪಡೆದುಕೊಂಡಿದ್ದ ದಿಡ್ಡಳ್ಳಿ ಆದಿವಾಸಿಗಳ ಹೋರಾಟದ ಸದ್ಯದ ಸ್ಥಿತಿಗತಿ. ಕೊಡಗಿನ ‘ಲೈನ್ ಮನೆ’ ಜೀತದಿಂದ ಬೇಸತ್ತು ದಿಡ್ಡಳ್ಳಿಯಲ್ಲಿ ಬಿಡಾರ ಹೂಡಿದ್ದ ಆದಿವಾಸಿ ಎರವರ ನಂಜಪ್ಪ ಭಾನುವಾರ ಬೆಳಿಗ್ಗೆ ಸಾವನ್ನಪ್ಪಿದ್ದಾರೆ. ವೈದ್ಯಕೀಯ ಭಾಷೆಯಲ್ಲಿ ಹೃದಯಾಘಾತ ಅವರ ಜೀವ ಬಲಿ ಪಡೆದುಕೊಂಡಿದ್ದರೆ, ವಾಸ್ತವದಲ್ಲಿ ಜೀತ ಪದ್ಧತಿ..

    January 8, 2017
    ...
    kodagu-missing-advt-1
    ರಾಜ್ಯ

    ಕೊಡಗಿನ ಕಾಫಿತೋಟಗಳ ‘ಲೈನ್ ಮನೆ’ ಅಂತರಂಗ ಬಿಚ್ಚಿಟ್ಟ ಸ್ಥಳೀಯ ಪತ್ರಿಕೆಯ ಜಾಹೀರಾತು!

    ದಿಡ್ಡಳ್ಳಿ ಆದಿವಾಸಿಗಳ ಸಮಸ್ಯೆಗಳಿಗೆ ಪರಿಹಾರ ಸಿಗುವ ಮುನ್ನವೇ ಕೊಡಗು ಜಿಲ್ಲೆಯ ಕಾಫಿ ತೋಟಗಳಲ್ಲಿನ ‘ಲೈನ್ ಮನೆ’ ಜೀತಕ್ಕೆ ತಾಜಾ ಉದಾಹರಣೆಯೊಂದು ಸಿಕ್ಕಿದೆ. ವಿರಾಜಪೇಟೆಯ ಚೆಂಬೆಬೆಳ್ಳೂರಿನ ತೋಟವೊಂದರಿಂದ ದಂಪತಿ ಮತ್ತು ವಿದ್ಯಾಭ್ಯಾಸ ಮಾಡುತ್ತಿದ್ದ ನಾಲ್ವರು ಮಕ್ಕಳು ಕಾಣೆಯಾಗಿದ್ದಾರೆ ಎಂಬ ಜಾಹೀರಾತೊಂದು ಸ್ಥಳೀಯ ಪತ್ರಿಕೆ ‘ಶಕ್ತಿ’ಯಲ್ಲಿ, ಬುಧವಾರ ಭಾವಚಿತ್ರ ಸಹಿತ ಪ್ರಕಟವಾಗಿದೆ. ಈ ಜಾಹೀರಾತನ್ನು ಖಾಸಗಿ ತೋಟದ ಮಾಲೀಕ ಎಂ. ಡಿ. ಅಪ್ಪಯ್ಯ ಎಂಬುವವರು ನೀಡಿದ್ದಾರೆ. ‘ಬೋಜ ಮತ್ತು ಶಾಂತಿ ಎಂಬುವವರು ಕಳೆದ ಒಂದೂವರೆ ತಿಂಗಳ ಹಿಂದೆ ಶಾಲೆಗೆ ಹೋಗುವ..

    January 5, 2017
    ...
    chalo-madikeri-5
    ರಾಜ್ಯ

    ‘ಚಲೋ ಮಡಿಕೇರಿ’ ಯಶಸ್ವಿ; ‘ಶಾಶ್ವತ ಪರಿಹಾರಕ್ಕೆ ತಿಂಗಳೊಳಗೆ ಅಂತಿಮ ರೂಪ’ –ಆಂಜನೇಯ ಭರವಸೆ

    ಕಳೆದ 16 ದಿನಗಳಿಂದ ರಾಜ್ಯದ ಜನರ ಗಮನ ಸೆಳೆದಿದ್ದ ದಿಡ್ಡಳ್ಳಿ ಹೋರಾಟ ಕೊನೆಗೂ ನಿರ್ಣಾಯಕ ಘಟ್ಟ ತಲುಪಿದೆ. ಶುಕ್ರವಾರ ದಿಡ್ಡಳ್ಳಿಗೆ ಭೇಟಿ ನೀಡಿದ ಸಮಾಜ ಕಲ್ಯಾಣ ಸಚಿವ ಎಚ್ ಆಂಜನೇಯ ಮತ್ತು ಕಾರ್ಯದರ್ಶಿ ಮಣಿವಣ್ಣನ್ ತಿಂಗಳೊಳಗೆ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಸಿ ಸಮಸ್ಯೆಗೆ ಪರಿಹಾರವನ್ನು ಅಂತಿಮಗೊಳಿಸಲಾಗುವುದು ಎಂದು ಹೋರಾಟಗಾರರ ನಿಯೋಗಕ್ಕೆ ಭರವಸೆ ನೀಡಿದ್ದಾರೆ. ಇದರೊಂದಿಗೆ ಅನಿರ್ಧಿಷ್ಟಾವಧಿ ಧರಣಿಯನ್ನು ಸದ್ಯಕ್ಕೆ ನಿಲ್ಲಿಸಲಾಗಿದೆ ಎಂದು ಸಿರಿಮನೆ ನಾಗರಾಜ್ ಸ್ಪಷ್ಟಪಡಿಸಿದ್ದಾರೆ. ದಿಡ್ಡಳ್ಳಿಯಲ್ಲಿ ಪ್ರತ್ಯಕ್ಷರಾದ ಆಂಜನೇಯ: ದಿಡ್ಡಳ್ಳಿ ಆದಿವಾಸಿಗಳ ಮನೆ..

    December 24, 2016
    ...
    diddalli-protest
    ರಾಜ್ಯ

    ಇಳೀ ವಯಸ್ಸಿನಲ್ಲಿ ಆಕ್ರೋಶ ಹೊರಹಾಕಿದ ದೊರೆಸ್ವಾಮಿ: ದಿಡ್ಡಳ್ಳಿ ಆದಿವಾಸಿಗಳಿಗೆ ತಕ್ಷಣದ ನೆರವು

    “ನಾವು ಅಲ್ಲಿಗೆ (ದಿಡ್ಡಳ್ಳಿ) ಹೋಗಿಯೇ ಹೋಗುತ್ತೇವೆ. ಜೈಲಿಗೆ ಕಳುಹಿಸುತ್ತೀರೋ ಕಳುಹಿಸಿ ನೋಡಿ,” ಹೀಗಂತ ಗುಡುಗಿದವರು ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ. ದಿಡ್ಡಳ್ಳಿ ನಿರಾಶ್ರಿತ ಆದಿವಾಸಿಗಳ ವಿಚಾರವಾಗಿ ಸಮಾಜ ಕಲ್ಯಾಣ ಇಲಾಖೆ ಕಾರ್ಯದರ್ಶಿ ಪಿ. ಮಣಿವಣ್ಣನ್ ರನ್ನು ಭೂಮಿ ಮತ್ತು ವಸತಿ ಹಕ್ಕು ವಂಚಿತರ ನಿಯೋಗ ಗುರುವಾರ ಭೇಟಿಯಾಗಿ ಮಾತುಕತೆ ನಡೆಸಿತು. ಈ ಸಂದರ್ಭ ಸರಕಾರ ದಿಡ್ಡಳ್ಳಿಯಲ್ಲಿ ಸೆಕ್ಷನ್ 144 ಜಾರಿಗೊಳಿಸಿದದರ ವಿರುದ್ಧ ಅವರು ಆಕ್ರೋಶ ವ್ಯಕ್ತಪಡಿಸಿದರು. “ನಕ್ಸಲರು ಬರುತ್ತಾರೆ ಎಂದೆಲ್ಲಾ ಸರಕಾರ ಸುಮ್ಮನೆ ಹೇಳಬಾರದು. ಯಾರು ನಕ್ಸಲರು. ಅವರನ್ನು (ನೂರ್..

    December 22, 2016
    ...
    coffee-workers-1
    ರಾಜ್ಯ

    ದಿಡ್ಡಳ್ಳಿ ಆದಿವಾಸಿಗಳ ‘ಲೈನ್ ಮನೆ ಜೀತ’ ಮತ್ತು ಕೊಡಗಿನ ಕಾಫಿ ತೋಟಗಳ ಅಂತರಾಳ

    ಇದು ಉಳ್ಳವರು ಮತ್ತು ಏನೂ ಇರದವರ ನಡುವಿನ ವರ್ಗ ಸಂಘರ್ಷ… ಕಳೆದ 13 ದಿನಗಳಿಂದ ಕೊಡುಗು ಜಿಲ್ಲೆಯ ಮಾಚಿದೇವ ಮೀಸಲು ಅರಣ್ಯದಲ್ಲಿ ಹುಟ್ಟಿಕೊಂಡಿರುವ ‘ಮಾನವೀಯತೆಯ ಬಿಕ್ಕಟ್ಟು’ ಆದಿವಾಸಿಗಳು, ಅವರ ಬದುಕು ಮತ್ತು ಕಾಫಿ ತೋಟಗಳ ಸುಂದರ ಹಸಿರು ಪರಿಸರದ ಮರೆಯಲ್ಲಿಯೇ ಕೊಳೆತು ನಾರುತ್ತಿದ್ದ ವೃಣವನ್ನು ಹೊರಜಗತ್ತಿಗೆ ಪರಿಚಯಿಸಿದೆ. ಈ ಮೂಲಕ ನಾಗರೀಕ ಸಮಾಜ, ಅರಣ್ಯದ ಜತೆಗೇ ಬದುಕು ಕಟ್ಟಿಕೊಂಡು ಬಂದಿದ್ದ ಆದಿವಾಸಿಗಳ ಕಡೆಗೆ ಹಿಂದೆಂದೂ ಇಲ್ಲದಷ್ಟು ಕಕ್ಕುಲತೆಯಿಂದ ನೋಡುವಂತೆ ಮಾಡಿದೆ. ಈ ವಿಚಾರದಲ್ಲಿ ಇನ್ನೊಂದಿಷ್ಟು ಆಳಕ್ಕಿಳಿದರೆ ರಾಜ್ಯಾದ್ಯಂತ ಇಂತಹದೇ ಬಿಕ್ಕಟ್ಟೊಂದು..

    December 20, 2016
    ...
    diddalli-chalo
    ರಾಜ್ಯ

    ‘ಚಲೋ ಮಡಿಕೇರಿ’; ಡಿ.23ರಂದು ಮಂಜಿನ ನಗರಿಯಲ್ಲಿ ಆದಿವಾಸಿಗಳ ಬೃಹತ್ ಸಮಾವೇಶ

    ‘ಚಲೋ ಉಡುಪಿ’ ಮಾದರಿಯಲ್ಲಿ ಇದೀಗ ‘ಚಲೋ ಮಡಿಕೇರಿ’ ಸಮಾವೇಶಕ್ಕೆ ‘ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ’ ಕರೆ ನೀಡಿದೆ. ಭಾನುವಾರ ಕೊಡಗಿನ ವಿರಾಜಪೇಟೆ ತಾಲೂಕಿನ ದಿಡ್ಡಳ್ಳಿಯಲ್ಲಿ ನಡೆದ ಬೃಹತ್ ‘ಸಂಕಲ್ಪ ಸಭೆ’ಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಡಿಸೆಂಬರ್ 22 ರಂದು ದಿಡ್ಡಳ್ಳಿಯಿಂದ ನಿರಾಶ್ರಿತ ಆದಿವಾಸಿಗಳು ಮಡಿಕೇರಿಯತ್ತ ಕಾಲ್ನಡಿಗೆ ಜಾಥಾ ಹೊರಡಲಿದ್ದಾರೆ. 23ರಂದು ನಗರದಲ್ಲಿ ಸಮಾವೇಶ ನಡೆಯಲಿದೆ. ಇಲ್ಲಿಗೆ ರಾಜ್ಯ ಹಾಗೂ ಜಿಲ್ಲೆಯ ಆದಿವಾಸಿಗಳು, ಹೋರಾಟಗಾರರು ಆಗಮಿಸಲಿದ್ದಾರೆ ಎಂದು ಕೇಂದ್ರ ಸಮಿತಿಯ ನೂರ್ ಶ್ರೀಧರ್ ಮಾಹಿತಿ..

    December 19, 2016

ENTER YOUR E-MAIL

Name
Email *
January 2017
M T W T F S S
« Dec    
 1
2345678
9101112131415
16171819202122
23242526272829
3031  

Top