An unconventional News Portal.

ದಲಿತ ಸಂಘರ್ಷ ಸಮಿತಿ
    ...
    prathiroda-samavesha-1
    GAURI LANKESH FILES

    ‘ಪ್ರತಿರೋಧಗಳ ಪ್ರಖರತೆ’; ಗೌರಿ ಸಾವಿನ ಸಂಚು ಭೇದಿಸಲು ತನಿಖೆಗೆ ಇಳಿದವರ ‘ಶಂಕೆ’ಗಳು!

    ಸಾವಿನಲ್ಲಿ ‘ತಂದೆಯನ್ನು ಮೀರಿಸಿದ ಮಗಳ’ ಹತ್ಯೆ ನಡೆದು ಇವತ್ತಿಗೆ ಮೂರು ದಿನದ ಮುಕ್ತಾಯವಾಗುತ್ತಿದೆ. ತಮ್ಮ 56ನೇ ವಯಸ್ಸಿನಲ್ಲಿ ಪತ್ರಕರ್ತೆ, ಹೋರಾಟಗಾರ್ತಿ, ಒಂಟಿ ಮಹಿಳೆಯಾಗಿ ಬೆಂಗಳೂರಿನಲ್ಲಿ ವಾಸಿಸುತ್ತಿದ್ದ ಗೌರಿ ಲಂಕೇಶ್ ಗುಂಡೇಟಿಗೆ ಬಲಿಯಾಗಿದ್ದು ಮಂಗಳವಾರ ರಾತ್ರಿ. ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ನಡೆದ ‘ಪತ್ರಕರ್ತರ ಮೊಟ್ಟ ಮೊದಲ ಹತ್ಯೆ ಪ್ರಕರಣ’ ಇದು. ಸ್ವಾತಂತ್ರ್ಯ ನಂತರದ ಸುದೀರ್ಘ ಅವಧಿಯ ನಾನಾ ಪಕ್ಷಗಳ ಆಳ್ವಿಕೆಯಲ್ಲಿ ಇಂತಹದೊಂದು ಘಟನೆಗೆ ಕರ್ನಾಟಕದ ರಾಜಧಾನಿ ಸಾಕ್ಷಿಯಾಗಿರಲಿಲ್ಲ. ನಾನಾ ಕಾರಣಗಳಿಗಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಹತ್ವ ಪಡೆದುಕೊಂಡಿರುವ ಈ ಪ್ರಕರಣದ..

    September 8, 2017
    ...
    t-chalo-final
    ರಾಜ್ಯ

    ‘ತುಮಕೂರು ಚಲೋ’ ಒಂದು ದಿನ ಬಾಕಿ: ‘ಇದು ಹೊಸ ತಲೆಮಾರಿನ ದಲಿತ- ದಮನಿತರ ಹೋರಾಟ’

    ‘ಉಡುಪಿ ಚಲೋ’ ಕಾರ್ಯಕ್ರಮದ ಮೂಲಕ ರಾಜ್ಯದ ಸುದ್ದಿ ಕೇಂದ್ರಕ್ಕೆ ಬಂದಿದ್ದ ‘ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿ’ (ಡಿಡಿಎಸ್‌ಎಚ್‌ಎಸ್) ಗುರುವಾರ ‘ತುಮಕೂರು ಚಲೋ’ ಕಾರ್ಯಕ್ರಮ ಹಮ್ಮಿಕೊಂಡಿದೆ. ಇತ್ತಿಚೆಗೆ ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿ ದಲಿತ ಯುವಕನ ಮೇಲೆ ನಡೆದ ಬರ್ಬರ ಹಲ್ಲೆ ಮತ್ತು ರಾಜ್ಯ ಇತರೆ ಭಾಗಗಳಲ್ಲಿ ಕಳೆದ ಮೂರ್ನಾಲ್ಕು ತಿಂಗಳುಗಳ ಅಂತರದಲ್ಲಿ ನಡೆದ ದೌರ್ಜನ್ಯ ಪ್ರಕರಣಗಳು ‘ಚಲೋ’ ಹಮ್ಮಿಕೊಳ್ಳಲು ಕಾರಣ. ಈಗಾಗಲೇ ತುಮಕೂರಿನ ತಾಲೂಕುಗಳಲ್ಲಿ ವ್ಯಾಪಕ ಪ್ರಚಾರ ಪಡೆದುಕೊಂಡಿರುವ ಕಾರ್ಯಕ್ರಮಕ್ಕೆ ದೊಡ್ಡ ಸಂಖ್ಯೆಯಲ್ಲಿ ಜನ ಸೇರುವ ನಿರೀಕ್ಷೆ..

    February 15, 2017
    ...
    tanvir-seth-protest
    ಸುದ್ದಿ ಸಾರ

    ಶಿಕ್ಷಣ ಸಚಿವರ ನಿವಾಸಕ್ಕೇ ಲಗ್ಗೆ ಇಟ್ಟ ಪ್ರತಿಭಟನಾಕಾರರು

    ರಾಜ್ಯದ ಸರಕಾರಿ ಶಾಲೆಗಳ ಬಲವರ್ಧನೆಗೆ ಆಗ್ರಹಿಸಿ ದಲಿತ ಸಂಘಟನೆಗಳು ಹಾಗೂ ಸಮಾನ ಶಿಕ್ಷಣಕ್ಕಾಗಿ ಜನಾಂದೋಲನ ಸಂಘಟನೆಯ ಕಾರ್ಯಕರ್ತರು ಶಿಕ್ಷಣ ಸಚಿವ ತನ್ವೇರ್ ಸೇಠ್ ಅವರ ಅಧಿಕೃತ ನಿವಾಸಕ್ಕೆ ಮುತ್ತಿಗೆ ಹಾಕಿದ ಘಟನೆ ಸೋಮವಾರ ನಡೆದಿದೆ. ಬೆಂಗಳೂರಿನ ವಿಂಡ್ಸರ್ ಮ್ಯಾನರ್ ರಸ್ತೆಯಲ್ಲಿರುವ ಶಿಕ್ಷಣ ಸಚಿವರ ಅಧಿಕೃತ ನಿವಾಸಕ್ಕೆ ನಾನಾ ಕಡೆಗಳಿಂದ ಬೆಳಗ್ಗೆ 11 ಗಂಟೆ ಸುಮಾರಿಗೆ ಪ್ರತಿಭಟನೆ ಜಾಥ ಬಂದವರು ಮನೆಯ ಒಳಗೇ ಪ್ರವೇಶಿಸಿದರು. ನಂತರ ಪೊಲೀಸರು ಬಂದರಾದರೂ ಪ್ರತಿಭಟನಾಕಾರರು ಸ್ಥಳದಿಂದ ಕದಲಿಲ್ಲ. ಹೊರಗೆ ಟ್ರಾಫಿಕ್ ಸಮಸ್ಯೆಯೂ ತಲೆದೋರಬಹುದು..

    January 23, 2017
    ...
    dugugu-and-raghaveshwara
    ರಾಜ್ಯ

    ರಾಘವೇಶ್ವರ ಸ್ವಾಮಿ ರಕ್ಷಣೆಗೆ ‘ವಾರೆಂಟ್’ ಬಳಕೆ: ದಲಿತ ಮುಖಂಡನ ಬಂಧನ ಗುರುವಾರವೇ ಯಾಕಾಯ್ತು?

    ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನಲ್ಲಿ ಗುರುವಾರ ಸಂಜೆ ನಡದ ಬೆಳವಣಿಗೆಗಳು ಅಚ್ಚರಿಗೆ ಕಾರಣವಾಗಿವೆ. ತಾಲೂಕಿನ ಡಿಎಸ್ಎಸ್ ಮುಖಂಡ ಹಾಗೂ ಚಳವಳಿಗಳ ಜತೆ ಗುರುತಿಸಿಕೊಂಡಿದ್ದ ಪರಮೇಶ್ವರ ದೂಗೂರು ಅವರನ್ನ ಸಾಗರ ಗ್ರಾಮಾಂತರ ಪೋಲಿಸರು ನ್ಯಾಯಾಲಯದ ಆದೇಶದ ಮೇರೆಗೆ ಬಂಧಿಸಿದ್ದಾರೆ. ಶುಕ್ರವಾರ ನಡೆಯಲಿರುವ ಸಾಗರದ ಹೆಗ್ಗೊಡಿನ ವಿದ್ಯಾಭಿವೃದ್ಧಿ ಸಂಘ ಪ್ರೌಢಶಾಲೆಯ ಸುವರ್ಣಮಹೋತ್ಸವ ಕಾರ್ಯಕ್ರಮದಲ್ಲಿ ಹೊಸನಗರ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮಿ ಅತಿಥಿಯಾಗಿ ಭಾಗವಹಿಸುತ್ತಿದ್ದಾರೆ. ಅತ್ಯಾಚಾರ ಪ್ರಕರಣದ ಆರೋಪಿಯಾಗಿದ್ದವರು ಶಾಲಾ ಕಾರ್ಯಕ್ರಮದಲ್ಲಿ ಪಾಲ್ಗೊಳುವುದಕ್ಕೆ ರಾಘವೇಶ್ವರ ಶ್ರೀ ವಿರುದ್ಧ ಇರುವ ಸಮುದಾಯದಿಂದ ವಿರೋಧ ವ್ಯಕ್ತವಾಗಿತ್ತು…

    November 4, 2016

Top