An unconventional News Portal.

ತೀರ್ಥಹಳ್ಳಿ

ಡೊನಾಲ್ಡ್‌ ಟ್ರಂಪ್‌ ಅಧಿಕಾರಕ್ಕೇರಿ ಒಂದು ವರ್ಷ: ವಿಶ್ವದ ದೊಡ್ಡಣ್ಣನ ಸರಕಾರವೇ ಸ್ಥಗಿತ!

ಇದು ಅಮೆರಿಕಾದಲ್ಲಿ ನಡೆದ ಕುತೂಹಲಕಾರಿ ಬೆಳವಣಿಗೆ. 45ನೇ ಅಧ್ಯಕ್ಷರನ್ನಾಗಿ ಉದ್ಯಮಿ ಟ್ರಂಪ್‌ರನ್ನು ಆಯ್ಕೆ ಮಾಡಿಕೊಂಡ ಇಲ್ಲಿನ ಜನ, ವರ್ಷ ಕಳೆಯುವ ಮುನ್ನವೇ ಸರಕಾರವೇ ಸ್ಥಗಿತಗೊಂಡ ಘಟನೆಗೆ ಸಾಕ್ಷಿಯಾಗಿದ್ದಾರೆ.

    ...
    ಸುದ್ದಿ ಸಾರ

    ಕಾಲು ಕಳೆದುಕೊಳ್ಳುವ ಹಂತದಲ್ಲಿದ್ದ ಯುವಕನಿಗೆ ಚಿಕಿತ್ಸೆಯ ಭರವಸೆ

    ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಮೂಲಕ ಕನ್‌ಸ್ಟ್ರಕ್ಷನ್ ಕಂಪನಿಯ ರಸ್ತೆ ಕೆಲಸದಲ್ಲಿ ಕಾಲಿಗೆ ತೀವ್ರವಾಗಿ ಗಾಯಮಾಡಿಕೊಂಡಿದ್ದ ಯುವಕನಿಗೆ ಕೊನೆಗೂ ಚಿಕಿತ್ಸೆಯ ಭರವಸೆ ಸಿಕ್ಕಿದೆ. 2015 ಆಗಸ್ಟ್ ತಿಂಗಳಿನಲ್ಲಿ ನ್ಯಾಷನಲ್ ಕನ್‌ಸ್ಟ್ರಕ್ಷನ್ ಕಂಪನಿಗೆ ಸೇರಿದ ಕಂಪನಿಯಲ್ಲಿ ರಸ್ತೆ ಕೆಲಸ ಮಾಡುತ್ತಿದ್ದಾಗ ಜಿಲ್ಲೆಯ ಗಾಜನೂರು ಮೂಲದ ಯುವಕ ನಾಗರಾಜ ಕಾಲಿಗೆ ಗಾಯ ಮಾಡಿಕೊಂಡಿದ್ದರು. “ಕಬ್ಬಿಣದ ರಾಡುಗಳನ್ನು ತುಂಡು ಮಾಡುವ ಯಂತ್ರದಿಂದ ನಾಗರಾಜನ ಕಾಲು ಗಾಯವಾಗಿತ್ತು. ಈ ಸಮಯದಲ್ಲಿ ಚಿಕಿತ್ಸೆ ಕೊಡಿಸುವುದಾಗಿ ನಿರ್ಮಾಣ ಕಂಪನಿಯ ಕಡೆಯವರು ಹೇಳಿದ್ದರೂ ಯಾವುದೇ ನೆರವು ಸಿಕ್ಕಿರಲಿಲ್ಲ. ಸೋಮವಾರ ನಿರ್ಮಾಣ..

    September 19, 2016
    ...
    ರಾಜ್ಯ

    ಸಿದ್ದಗಂಗಾ ಮಠದ ಹೆಸರಿನಲ್ಲಿ ಪಂಗನಾಮ: ಔಷಧಿ ಕೊಡುತ್ತೇವೆಂದು ಬಂದು 50 ಸಾವಿರ ಕಿತ್ತರು!

    ಪಾರ್ಶ್ವವಾಯು ಪೀಡಿತರೊಬ್ಬರಿಗೆ ಸಿದ್ದಗಂಗಾ ಮಠದ ಟ್ರಸ್ಟ್ ವತಿಯಿಂದ ಔಷಧಿ ಕೊಡುತ್ತೇವೆ ಎಂದು ಬಂದ ಖದೀಮರಿಬ್ಬರು 50 ಸಾವಿರ ಕಿತ್ತುಕೊಂಡು ಪರಾರಿಯಾದ ಘಟನೆ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯಿಂದ ವರದಿಯಾಗಿದೆ. ಶನಿವಾರ ಮಧ್ಯಾಹ್ನದ ವೇಳೆಗೆ ತೀರ್ಥಹಳ್ಳಿಯ ಕವಲೇದುರ್ಗ ಸಮೀಪದ ಕೋಗೊಡಿಗೆ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಪಾರ್ಶ್ವವಾಯು ಕಾಯಿಲೆಯಿಂದ ಬಳಲುತ್ತಿರುವ ಮಹಿಳೆಯೊಬ್ಬರಿಗೆ ಔಷಧಿ ನೀಡುವುದಾಗಿ ಹೇಳಿಕೊಂಡಿದ್ದಾರೆ. ಆರಂಭದಲ್ಲಿ ಇದು ಸಿದ್ದಗಂಗಾ ಮಠದ ಟ್ರಸ್ಟ್ ಕಡೆಯಿಂದ ಉಚಿತ ಸೇವೆ ಎಂದು ಹೇಳಿದ್ದಾರೆ. ನಂತರ 25 ಸಾವಿರ ರೂಪಾಯಿ ಬೇಡಿಕೆ ಇಟ್ಟಿದ್ದಾರೆ. ಕೊನೆಗೆ 50 ಸಾವಿರ..

    May 11, 2016
    ...
    ರಾಜ್ಯ

    ಪೊಲೀಸರ ಪ್ರತಿಷ್ಠೆಗೆ ಬೇಸತ್ತು ‘ಬೈಕ್ ದೇಣಿಗೆ’ ಕೊಡಲು ಮುಂದಾದ ಕಾಲೇಜು ವಿದ್ಯಾರ್ಥಿ!

    ಅಣ್ಣ ಮಾಡಿದ ತಪ್ಪಿಗೆ ತಮ್ಮನೊಬ್ಬ ಪೊಲೀಸ್ ಠಾಣೆ ಕಟ್ಟೆ ಕಾದು ಕಾದು ಸಾಕಾಗಿ, ಕೊನೆಗೆ ಬೈಕನ್ನು ‘ನೀವೇ ಇಟ್ಟಿಕೊಳ್ಳಿ’ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗೆ ಎಸ್ಎಂಎಸ್ ಕಳಿಸಿದ ವಿಲಕ್ಷಣ ಘಟನೆ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನಲ್ಲಿ ನಡೆದಿದೆ. ತೀರ್ಥಹಳ್ಳಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅವರ ಕ್ಷೇತ್ರ. ತೀರ್ಥಹಳ್ಳಿಯಿಂದ ಕುಪ್ಪಳ್ಳಿ ಮಾರ್ಗದಲ್ಲಿ ಸಿಗುವ ದೇವಂಗಿ ಸಮೀಪದ ಹಳ್ಳಿಯ ಶಶಾಂಕ್ ಎಂಬಾತ ಈ ಕತೆಯ ಕೇಂದ್ರಬಿಂದು. ಈತನ ಸಹೋದರ ಅಭಿಷೇಕ್ ಭಾರತೀಯ ಸೇನೆಯಲ್ಲಿ ಯೋಧ…

    April 2, 2016
    ...
    ರಾಜ್ಯ

    ‘ಅದು ಅನ್ನ ನೀಡುವ ಮನೆ; ಕನ್ನ ಹಾಕುವ ಜಾಗ ಅಲ್ಲ…’: ಆರೋಪಿ ಆಂಜನಪ್ಪ ಹೇಳಿದ್ದೇನು?

    ಮಲೆನಾಡಿನ ಸುಡು ಬಿಸಿಲಿನ ದಿನದ ಒಂದು ಮುಂಜಾನೆ ನಿಧಾನಕ್ಕೆ ತೆರೆದುಕೊಳ್ಳುತ್ತಿತ್ತು. ಬೆಳಗ್ಗೆ 7 ಗಂಟೆಯ ಸಮಯ. ರಾಷ್ಟ್ರಕವಿ ಕುವೆಂಪು ಅವರ ಊರು ಕುಪ್ಪಳ್ಳಿಯಿಂದ ಕೆಲವೇ ಮೀಟರುಗಳ ಅಂತರದಲ್ಲಿರುವ ಗಡಿಕಲ್ಲಿನಲ್ಲಿ ಆಂಜನಪ್ಪ ಎಂದಿನಂತೆ ಅಂಗಡಿಯಿಂದ ಹಾಲು ತೆಗೆದುಕೊಂಡು ಮನೆಯ ಕಡೆ ಹೆಜ್ಜೆ ಹಾಕುತ್ತಿದ್ದ. ಆತ ಜೈಲಿನಿಂದ ಷರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆ ಹೊಂದಿ ಕೆಲವೇ ದಿನಗಳಾಗಿದ್ದವು…ಭಾರಿ ಸದ್ದು ಮಾಡಿದ್ದ ಮೇರು ಕವಿಯ ಪದಕ ಕಳವು ಪ್ರಕರಣದ ಎರಡನೇ ಆರೋಪಿ ಈತ. ಪರಿಸರದ ಕತೆ ‘ಆಂಜನಪ್ಪ‘! ಆಂಜನಪ್ಪ ಮೂಲತಃ ದಾವಣಗೆರೆಯವನು. ಆದರೆ..

    April 2, 2016

FOOT PRINT

Top