An unconventional News Portal.

ತನಿಖೆ
    ...

    ತೆರಿಗೆ ಇಲಾಖೆಗೆ ವಂಚನೆ: ಪ್ರತಿಷ್ಠಿತ ಐಟಿ ಕಂಪನಿಗಳ ಸಾವಿರಾರು ಉದ್ಯೋಗಿಗಳ ಅಕ್ರಮ ಬಯಲು

    ಐಬಿಎಂ, ವೊಡಾಫೋನ್, ಬಯೋಕಾನ್‌ ಮತ್ತು ಇನ್ಫೋಸಿಸ್‌ನಂತಹ ಮುಂತಾದ ಪ್ರತಿಷ್ಠಿತ  ಐಟಿ ಕಂಪನಿಗಳ ನೌಕರರಿಂದ ನಕಲಿ (ತಪ್ಪು ಮಾಹಿತಿಯ) ಐಟಿ ರಿಟರ್ನ್‌ ಸಲ್ಲಿಸಿ, ಆದಾಯ ತೆರಿಗೆ ರಿಫಂಡ್‌ ಮಾಡಿಸಿಕೊಳ್ಳಲು ನೆರವಾಗುತ್ತಿದ್ದ ಬೆಂಗಳೂರಿನ ಚಾರ್ಟರ್ಡ್ ಅಕೌಂಟೆಂಟ್ (ಸಿಎ) ಜಾಲವನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬಯಲಿಗೆಳೆದಿದ್ದಾರೆ. ಈ ಕುರಿತು ವಿಚಾರಣೆ ಆರಂಭವಾಗಿದೆ.  ದೇಶದ ಐಟಿ ಕ್ಷೇತ್ರದ ರಾಜಧಾನಿ ಎಂದು ಬೆಂಗಳೂರನ್ನು ಕರೆಯಲಾಗುತ್ತದೆ. ಇಲ್ಲಿನ ಹೆಸರಾಂತ ಚಾರ್ಟರ್ಡ್‌ ಅಕೌಂಟೆಂಟ್‌ ಕಚೇರಿಯ ಮೇಲೆ ಬುಧವಾರದಂದು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ. “ ಪ್ರತಿಷ್ಠಿತ […]

    January 26, 2018
    ...

    ಗಣಪತಿ ಆತ್ಮಹತ್ಯೆ ಪ್ರಕರಣ: ಬೂದಿ ಮುಚ್ಚಿದ ಕೆಂಡ ಕೆದಕುತ್ತಾ ಸಿಬಿಐ ತನಿಖೆ?

    ಪೊಲೀಸ್ ಅಧಿಕಾರಿ, ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ ಪ್ರಕರಣ; ಬೂದಿ ಮುಚ್ಚಿದ ಕೆಂಡದಂತೆ ನಿಧಾನವಾಗಿ ಹೊಗೆಯಾಡಲು ಆರಂಭಿಸಿದೆ. ಮಂಗಳವಾರ ಗಣಪತಿ ಅಸಹಜವಾಗಿ ಸಾವು ಕಂಡ ಮಡಿಕೇರಿಯ ವಿನಾಯಕ ಲಾಡ್ಜ್‌ನ ಕೊಠಡಿ ಸಂಖ್ಯೆ 315ರಲ್ಲಿ ಗುಂಡಿನ ಚೂರೊಂದನ್ನು ಸಿಬಿಐ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಪ್ರಕರಣ ನಡೆದು ಒಂದೂವರೆ ವರ್ಷಗಳ ನಂತರ ಲಾಡ್ಜ್‌ ಕೋಣೆಯಲ್ಲಿ ಗುಂಡಿನ ಚೂರು ಸಿಕ್ಕಿರುವುದು ಅಚ್ಚರಿಗೆ ಕಾರಣವಾಗಿದೆ. ಈ ಹಿಂದೆ, ರಾಜ್ಯ ಸರಕಾರದ ನೇತೃತ್ವದಲ್ಲಿ ನಡೆದ ಸಿಐಡಿ ತನಿಖೆಯ ವಸ್ತುನಿಷ್ಟತೆಯನ್ನು ಇದು ಪ್ರಶ್ನಿಸುವಂತೆ ಮಾಡಿದೆ. ಇದೇ ಜುಲೈ ತಿಂಗಳ ಮೊದಲ ವಾರದಲ್ಲಿ […]

    November 15, 2017
    ...

    ಗೌರಿ ಹತ್ಯೆ ಪ್ರಕರಣದಲ್ಲಿ ‘ತಿಪ್ಪೆ ಸಾರಿಸಿದ’ ಎಸ್‌ಐಟಿ: ಇಬ್ಬರು ಶಂಕಿತರ ಮೂರು ರೇಖಾಚಿತ್ರ ಬಿಡುಗಡೆ!

    ಬೆಂಗಳೂರಿನಲ್ಲಿ ಪತ್ರಕರ್ತೆ- ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆ ನಡೆದು 40 ದಿನಗಳ ನಂತರ ಇಬ್ಬರು ಶಂಕಿತರ ಮೂರು ರೇಖಾಚಿತ್ರಗಳನ್ನು ಎಸ್‌ಐಟಿ ಶನಿವಾರ ಬಿಡುಗಡೆ ಮಾಡಿದೆ; ಈ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದ ಪ್ರಕರಣದಲ್ಲಿ ತಿಪ್ಪೆ ಸಾರಿಸುವ ಕೆಲಸ ಮಾಡಿದೆ. ತನಿಖಾ ತಂಡಕ್ಕೆ ಲಭ್ಯವಾಗಿದ್ದ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸೆರೆ ಸಿಕ್ಕ ಶಂಕಿತರ ಚಹರೆಯನ್ನು ಆಧರಿಸಿ ಹಾಗೂ ಪ್ರತ್ಯಕ್ಷದರ್ಶಿಗಳು ನೀಡಿದ ಮಾಹಿತಿ ಮೇರೆಗೆ ಕಲಾವಿದರು ರೇಕಾಚಿತ್ರಗಳನ್ನು ಬಿಡಿಸಿದ್ದಾರೆ. “ಇದರಲ್ಲಿ ಇರಡು ರೇಖಾಚಿತ್ರಗಳು ನಿಖರವಾಗಿದ್ದು, ಇನ್ನೊಂದು ಚಿತ್ರ ಸಾಮ್ಯತೆಯ ಸಮೀಪದಲ್ಲಿದೆ,” ಎಂದು […]

    October 14, 2017
    ...

    ಮೂರು ದಿನಕ್ಕೆ ‘ಮೂವತ್ತಾರು ಥಿಯರಿ’: ಗೌರಿ ಲಂಕೇಶ್ ಹತ್ಯೆ ಪ್ರಕರಣ ಇನ್ನೂ ಮಿಸ್ಟರಿ!

    ರಾಜ್ಯದ ರಾಜಧಾನಿಯಲ್ಲಿ ನಡೆದ ಪತ್ರಕರ್ತೆ- ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆ ಪ್ರಕರಣ ದಿನ ಕಳೆದಂತೆ ನಿಗೂಢತೆಗೆ ಹೆಚ್ಚು ಸುತ್ತಿಕೊಳ್ಳುತ್ತಿದೆ. 13 ದಿನಗಳ ಹಿಂದೆ ರಾಜರಾಜೇಶ್ವರಿನಗರದ ತಮ್ಮ ಮನೆಯ ಮುಂದೆ ಗೌರಿ ಗುಂಡೇಟಿಗೆ ಬಲಿಯಾಗಿದ್ದರು. ಪ್ರಕರಣ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿತ್ತು. ರಾಜ್ಯ ಸರಕಾರ ಕುಟುಂಬದವರ ಒತ್ತಾಯದ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಗೆ ಎಸ್‌ಐಟಿ ರಚಿಸಿತ್ತು. ಸುಮಾರು 100 ಜನರ ತಂಡ ಕಳೆದ 12 ದಿನಗಳಲ್ಲಿ ನಾನಾ ಜಾಡು ಹಿಡಿದು ತನಿಖೆ ನಡೆಸುತ್ತಿದೆ. ಇತ್ತೀಚಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸೆನ್ಸೇಷನ್ ಹುಟ್ಟುಹಾಕಿರುವ, ನ್ಯೂಸ್‌ […]

    September 18, 2017
    ...

    ಮಣ್ಣಲ್ಲಿ ಮಣ್ಣಾದ ಗೌರಿ ದೇಹ: ‘ಹತ್ಯೆ ಮಾಡಿದವರು ತರಬೇತಿ ಹೊಂದಿದವರೇ ಆಗಿರಬೇಕಿಲ್ಲ’; ಎಫ್‌ಎಸ್ಎಲ್ ಮಾಹಿತಿ

    ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಘಟನಾ ಸ್ಥಳದಲ್ಲಿ ಸಿಕ್ಕಿರುವ ‘ನಾಲ್ಕು ಕಾಟ್ರಿಡ್ಜ್‌’ಗಳು ಪ್ರಮುಖ ಸುಳಿವು ನೀಡುವ ಸಾಧ್ಯತೆ ಇದೆ ಎಂದು ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್ಎಲ್)ದ ಮೂಲಗಳು ‘ಸಮಾಚಾರ’ಕ್ಕೆ ತಿಳಿಸಿವೆ. ಮಂಗಳವಾರ ಬೆಂಗಳೂರಿನ ರಾಜರಾಜೇಶ್ವರಿನಗರದ ಮನೆಯ ಮುಂದೆಯೇ ಗೌರಿ ಲಂಕೇಶರನ್ನು ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆ ಮಾಡಿದ್ದರು. 24 ಗಂಟೆಗಳ ಅವಧಿಯಲ್ಲಿ ಇದು ರಾಷ್ಟ್ರ ಮಟ್ಟದಲ್ಲಿ ಸಂಚಲನ ಮೂಡಿಸಿದೆ. ಗೌರಿ ಹತ್ಯೆ ಖಂಡಿಸಿ ವ್ಯಕ್ತವಾಗುತ್ತಿರುವ ಅಭಿಪ್ರಾಯಗಳು ರಾಜಕೀಯ ಚರ್ಚೆಗೆ ನಾಂದಿ ಹಾಡಿವೆ. ಆದರೆ, ಅದನ್ನೂ ಮೀರಿ ಈ ಪ್ರಕರಣದಲ್ಲಿ […]

    September 6, 2017
    ...

    ‘ಕಪ್ಪು ಹಣ’ದ ವಿರುದ್ಧ ಪ್ರಧಾನಿ ಮೋದಿ ಹೋರಾಟ: ಪಾಕ್‌ನಲ್ಲಿ ಶಿಕ್ಷೆ; ಭಾರತದಲ್ಲಿ…?

    ಮಳೆ ನಿಂತ ಮೇಲೂ ಹನಿಗಳು ಉದುರುವುದು ಇನ್ನೂ ನಿಂತಿಲ್ಲ. ‘ಪನಾಮ ಪೇಪರ್ಸ್‌’ ಹೆಸರಿನಲ್ಲಿ ಕಳೆದ ವರ್ಷ ಏಪ್ರಿಲ್ ತಿಂಗಳಿನಲ್ಲಿ ಜಾಗತಿಕ ಮಟ್ಟದಲ್ಲಿ ಬಿಡುಗಡೆಗೊಂಡ ದಾಖಲೆಗಳು ಪಾಕಿಸ್ತಾನದ ಪ್ರಧಾನಿಯ ಹುದ್ದೆಯನ್ನೇ ಈಗ ಬಲಿ ತೆಗೆದುಕೊಂಡಿವೆ. ಪಾಕ್‌ ಆಡಳಿತ ಪಕ್ಷದ ಚುಕ್ಕಾಣಿ ಹಿಡಿದಿದ್ದ ನವಾಝ್‌ ಷರೀಫ್‌ ಅವರನ್ನು ಹುದ್ದೆಯಿಂದ ಅಲ್ಲಿನ ಸುಪ್ರಿಂ ಕೋರ್ಟ್‌ ಕೆಳಗಿಳಿಸಿದೆ. ನವಾಝ್‌ ಷರೀಪ್‌ ಅವರ ರೀತಿಯಲ್ಲಿಯೇ ಭಾರತದ ಪ್ರಭಾವಿಗಳ ಹೆಸರುಗಳನ್ನೂ ಈ ‘ಪನಾಮ ಪೇಪರ್ಸ್‌’ ಒಳಗೊಂಡಿದ್ದವು. ನೆರೆಯ ದೇಶದಲ್ಲಿಆ ಕುರಿತು ತನಿಖೆ ನಡೆದು ತೀರ್ಪು ಹೊರಬಿದ್ದಿದೆ. ಆದರೆ […]

    July 29, 2017
    ...

    ‘ಪ್ರೀತಿ ಮಾಯೆ ಹುಷಾರು’: ಐಸಿಸ್ ನಾಯಕನನ್ನು ಮದುವೆಯಾಗಿ ಓಡಿಬಂದಾಕೆ ಎಫ್‌ಬಿಐ ಏಜೆಂಟ್!

    ಸದಾ ಕೋಮು ಘಟನೆಗಳ ಕಾರಣಕ್ಕೆ ಸುದ್ದಿಯಲ್ಲಿರುವ ಕರ್ನಾಟಕದ ಕರಾವಳಿ ಜಿಲ್ಲೆ ಮಂಗಳವಾರ ವಿಚಿತ್ರ ಕಾರಣವೊಂದಕ್ಕೆ ಸುದ್ದಿಯಲ್ಲಿತ್ತು. ಉಡುಪಿಯ ಕುಂದಾಪುರದ ಹಿಂದೂ–ಮುಸ್ಲಿಂ ಜೋಡಿಯೊಂದು ಸರಳ ವಿವಾಹವಾಗುವ ಮೂಲಕ ಜಾತಿ, ಭಾಷೆ, ಧರ್ಮ, ದೇಶ, ಸಂಸ್ಕೃತಿಗಳನ್ನು ಮೀರುವ ‘ಪ್ರೀತಿ‘ ಮತ್ತೊಮ್ಮೆ ಸುದ್ದಿ ಕೇಂದ್ರಕ್ಕೆ ಬಂದಿತ್ತು. ಎಲ್ಲಿ ಹಿಂದೂ–ಮುಸ್ಲಿಂ ಜೋಡಿ ಜತೆ ಜತೆಗೆ ಓಡಾಡುವುದು ಕಷ್ಟವಿತ್ತೋ, ಅದೇ ನೆಲದಲ್ಲಿ ಹುಟ್ಟಿದ ಅಂತರ್ಧರ್ಮೀಯ ಪ್ರೀತಿ ಮದುವೆಯ ಬಂಧನಕ್ಕೆ ಒಳಗಾಗಿ, ಜೋಡಿಗಳಿಬ್ಬರು ಸರಳ ವಿವಾಹವಾಗಿದ್ದು ಎಲ್ಲರ ಹುಬ್ಬೇರಿಸಿತ್ತು. ಇದೀಗ ಅಂಥಹದ್ದೇ ಪ್ರಕರಣವೊಂದು ತಡವಾಗಿ ಅಮೆರಿಕಾದಿಂದ ವರದಿಯಾಗಿದೆ. […]

    May 3, 2017
    ...

    ‘ಹತ್ಯೆಯಾದ ಯುವತಿಯ ಚಾರಿತ್ರ್ಯ ಹರಣ’: ಪಾತಕ ಕಾರ್ಯಕ್ರಮಗಳ ನಿರ್ಮಾಪಕರಿಗೆ ಒಂದು ಪತ್ರ!

    ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ಬೆಳಂಬೆಳಗ್ಗೆಯೇ ಯುವತಿಯೊಬ್ಬಳ ಹತ್ಯೆ ನಡೆಯಿತು. ಅದಾದ ಎರಡು ಗಂಟೆಗಳ ಅಂತರದಲ್ಲಿ ಪೊಲೀಸರು, “ಕೊಲೆಗೀಡಾದ ಶೋಭಾಗೆ ಇನ್ನೊಬ್ಬ ವ್ಯಕ್ತಿಯ ಜತೆ ಸಂಬಂಧ ಇತ್ತು. ಆಕೆ ಮದುವೆಗೆ ನಿರಾಕರಿಸಿದ ಹಿನ್ನೆಲೆಯಲ್ಲಿ ಕೊಲೆ ನಡೆಯಿತು,” ಎಂದು ಹೇಳಿಕೆ ನೀಡಿದರು. ರಾಜಧಾನಿ ಬೆಂಗಳೂರಿನಲ್ಲಿ ನಡೆದ ಯುವತಿಯ ಹತ್ಯೆ ಎಂಬ ಕಾರಣಕ್ಕೆ ಸುದ್ದಿ ವಾಹಿನಿಗಳಲ್ಲಿ ಆ ಸುದ್ದಿ ಪ್ರಾಮುಖ್ಯತೆ ಪಡೆದುಕೊಂಡಿತು. ಗಂಟೆ ಗಟ್ಟಲೆ ಕ್ರೈಂ ಎಪಿಸೋಡ್ ಪ್ರಸಾರವಾದವು. ಇದು ಕನ್ನಡದ ಅಷ್ಟೂ ಸುದ್ದಿವಾಹಿನಿಗಳಲ್ಲಿ ದಿನಕ್ಕೆ ಅರ್ಧ ಗಂಟೆ ಲೆಕ್ಕದಲ್ಲಿ ಪ್ರಸಾರವಾಗುವ ‘ಅಪರಾಧ […]

    April 21, 2017
    ...

    ‘ಬ್ಲಾಕ್‌ಮೇಲ್’ ಬೆನ್ನಲ್ಲೇ ಅನುಮಾನ ಮೂಡಿಸಿದ ಜನಶ್ರೀ ಅಕೌಂಟೆಂಟ್ ಸಾವಿನ ಪ್ರಕರಣ

    ಜನಶ್ರೀ ಸುದ್ದಿ ವಾಹಿನಿಯ ‘ಬ್ಲಾಕ್‌ ಮೇಲ್’ ಪ್ರಕರಣ ಹೊರಬಿದ್ದ ಬೆನ್ನಲ್ಲೇ, ಅದರ ಅಕೌಂಟೆಂಟ್ ಒಬ್ಬರ ಸಾವಿನ ಸುತ್ತ ಈತ ದಟ್ಟ ಅನುಮಾನ ಹೊಗೆಯಾಡುತ್ತಿದೆ. ವಾಹಿನಿಯಲ್ಲಿ ಸುಮಾರು ನಾಲ್ಕು ವರ್ಷಗಳಿಂದ ಅಕೌಂಟೆಂಟ್ ಆಗಿದ್ದ ಕಾರ್ತಿಕ ಲಾರೆನ್ಸ್‌ ಕಳೆದ ಗುರುವಾರ ಬ್ಯಾಪ್ಟಿಸ್ಟ್‌ ಆಸ್ಪತ್ರೆಯ ಐಸಿಯುನಲ್ಲಿ ಸಾವನ್ನಪ್ಪಿದ್ದರು. ಸದ್ಯ ಪ್ರಕರಣ ಹೆಬ್ಬಾಳ ಟ್ರಾಫಿಕ್ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದು, ಮರಣೊತ್ತರ ಪರೀಕ್ಷೆಯ ವರದಿಯ ನಿರೀಕ್ಷೆಯಲ್ಲಿ ಪೊಲೀಸರಿದ್ದಾರೆ. ಆದರೆ ಕಾರ್ತಿಕ್ ಸಾವಿನ ಹಿನ್ನೆಲೆಯನ್ನು ಗಮನಿಸಿದರೆ ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಡುವ ಅಂಶಗಳು ಬೆಳಕಿಗೆ ಬರುತ್ತವೆ. ಏನಿದು ಪ್ರಕರಣ?: […]

    April 17, 2017
    ...

    ಸೌಜನ್ಯ ಕೊಲೆ ಪ್ರಕರಣ: ಸಿಬಿಐ ತನಿಖಾಧಿಕಾರಿಗಳು ಎಸಗಿದ ಹದಿಮೂರು ತಪ್ಪುಗಳು

    ದಕ್ಷಿಣ ಕನ್ನಡ ಜಿಲ್ಲೆಯ ಜನರ ಭಾವನೆಗಳನ್ನು ತಟ್ಟುವ ಮೂಲಕ ಭಾರಿ ಪ್ರತಿಭಟನೆಗಳಿಗೆ ಕಾರಣವಾದ ಧರ್ಮಸ್ಥಳ ಮೂಲದ ‘ಸೌಜನ್ಯ ಕೊಲೆ ಪ್ರಕರಣ’ ಮತ್ತೆ ಸುದ್ದಿ ಕೇಂದ್ರಕ್ಕೆ ಬಂದಿದೆ. ಈವರೆಗೂ ನಡೆಸಿರುವ ತನಿಖೆಯಲ್ಲಿ ಲೋಪಗಳಿರುವುದರಿಂದ ‘ಹೆಚ್ಚಿನ ತನಿಖೆ’ ನಡೆಸುವಂತೆ ಸಿಬಿಐಗೆ ವಿಶೇಷ ನ್ಯಾಯಾಲಯ ಫೆ. 7ರಂದು ಆದೇಶ ನೀಡಿದೆ. ಪ್ರಕರಣದ ವಿಚಾರಣೆ ಪ್ರಗತಿಯಲ್ಲಿರುವಾಗಲೇ ನ್ಯಾಯಾಲಯ ನೀಡಿರುವ ಈ ಆದೇಶದಿಂದಾಗಿ ಹೊಸ ತಿರುವು ಸಿಕ್ಕಿದೆ. ಜತೆಗೆ, ಪ್ರತಿಷ್ಠಿತ ತನಿಖಾ ಸಂಸ್ಥೆ- ಸಿಬಿಐ- ಬಗ್ಗೆಯೇ ಅನುಮಾನಗಳು ಮೂಡುವಂತೆ ಮಾಡಿವೆ. ಪ್ರಕರಣ ಸಂಬಂಧಪಟ್ಟಂತೆ ಈವರೆಗೆ ನ್ಯಾಯಾಲಯದಲ್ಲಿ  14 ಸಾಕ್ಷಿಗಳು ನೀಡಿರುವ ಹೇಳಿಕೆಗಳು, ಸೌಜನ್ಯ […]

    February 11, 2017
  • 1
  • 2

Top