An unconventional News Portal.

ಡಿ. ಕೆ. ಶಿವಕುಮಾರ್
    ...
    dk-3
    ರಾಜ್ಯ

    ‘ಪ್ರತಿಯೊಬ್ಬರಿಗೂ ಉತ್ತರ ನೀಡುತ್ತೇನೆ’: ಐಟಿ ದಾಳಿ ನಂತರ ಡಿಕೆಶಿ ನೀಡಿದ ಹೇಳಿಕೆ ಹಿಂದಿರುವ ನಿಗೂಢಾರ್ಥಗಳು!

    “ಕಳೆದ ಮೂರು ದಿನಗಳಿಂದ ನನ್ನ ಮನೆ, ನನ್ನ ಸ್ನೇಹಿತರ ಮನೆ, ನನ್ನ ಸಂಬಂಧಿಕರ ಮನೆಗಳನ್ನು ಹಗಲೂ ರಾತ್ರಿ ಕಾಯ್ದಿದ್ದೀರಿ. ತಮ್ಮದೇ ವಿಚಾರಗಳನ್ನು ಮಾಧ್ಯಮಗಳ ಮೂಲಕ ಚಿತ್ರಿಸಿದ್ದೀರಿ. ಒಂದನ್ನು ಸ್ಪಷ್ಟಪಡಸುತ್ತೇನೆ; ನನ್ನ ಕಷ್ಟಕಾಲದಲ್ಲಿ ಜತೆಗಿದ್ದು ಪ್ರೋತ್ಸಾಹ ನೀಡಿದ, ಬೆಂಬಲ ನೀಡಿದ ಮಾಧ್ಯಮಗಳಿಗೆ, ಪಕ್ಷದ ನಾಯಕರಿಗೆ, ಕಾರ್ಯಕರ್ತರಿಗೆ ಹಾಗೂ ನಾನಾ ಪಕ್ಷಗಳ ನಾಯಕರು ಮತ್ತು ಅಧಿಕಾರಿಗಳಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ನಾನು ಕಾನೂನು ಬಿಟ್ಟು, ಸಂವಿಧಾನವನ್ನು ಬಿಟ್ಟು ನಡೆದುಕೊಂಡಿಲ್ಲ. ನನ್ನ ದೆಹಲಿ ಮನೆಯಲ್ಲಿ, ಎಲ್ಲೆಲ್ಲಿ ಐಟಿ ದಾಳಿ ನಡೆದಿದೆಯೋ, ಅದರ ಪಂಚನಾಮದ..

    August 5, 2017
    ...
    dks-1
    ರಾಜ್ಯ

    ಡಿಕೆಶಿ ‘ಬಂಧನ’ದ ಸುತ್ತ ಲೆಕ್ಕಾಚಾರಗಳು: ಐಟಿ ದಾಳಿಯ ಅಂತ್ಯ; ಹೊಸ ರಾಜಕೀಯ ಅಧ್ಯಾಯದ ಆರಂಭಕ್ಕೆ ಮುನ್ನುಡಿ!

    ಮೂರು ದಿನಗಳಿಂದ ರಾಜ್ಯದ ಪ್ರಭಾವಿ ಸಚಿವ ಡಿ. ಕೆ. ಶಿವಕುಮಾರ್ ಹಾಗೂ ಅವರ ಆಪ್ತರ ಮನೆಗಳ ಮೇಲೆ ನಡೆಯುತ್ತಿರುವ ಐಟಿ ದಾಳಿಯ ಅಂತ್ಯ, ಹೊಸ ರಾಜಕೀಯ ಅಧ್ಯಾಯವೊಂದರ ಆರಂಭಕ್ಕೆ ಮುನ್ನುಡಿ ಬರೆಯಲಿದೆ. ಹೀಗೊಂದು ವಿಶ್ಲೇಷಣೆ ಈಗ ರಾಜಕೀಯ ಹಾಗೂ ಕಾನೂನು ಪರಿಣಿತರ ವಲಯದಲ್ಲಿ ನಡೆಯುತ್ತಿದೆ. ಆದಾಯ ತೆರಿಗೆ ಇಲಾಖೆಯ ದಾಳಿ ಒಂದು ವೇಳೆ ಡಿ. ಕೆ. ಶಿವಕುಮಾರ್ ಅವರ ಬಂಧನದಲ್ಲಿ ಅಂತ್ಯವಾದರೆ, ಅದು ರಾಜ್ಯ ರಾಜಕೀಯದಲ್ಲಿ ಹೊಸ ಲೆಕ್ಕಾಚಾರಗಳಿಗೆ ಅನುವು ಮಾಡಿಕೊಡಲಿದೆ. ಅದರಲ್ಲೂ ವಿಶೇಷವಾಗಿ ಆಡಳಿತರೂಢ ಕಾಂಗ್ರೆಸ್..

    August 4, 2017
    ...
    dks-2
    ರಾಜ್ಯ

    ಐಟಿ ತೋಡಿದ ‘ಹಳ್ಳ’ಕ್ಕೆ ಡಿಕೆಎಸ್ ಎಂಬ ‘ತೋಳ’ ಬಿದ್ದಾಗ; ಯಥಾಸ್ಥಿತಿಗೆ ಇಂಬು ನೀಡುತ್ತಿರುವ ಪ್ರತಿಕ್ರಿಯೆಗಳು!

    “ನಾನು ರಾಜಕಾರಣಿ ಮಾತ್ರವಲ್ಲ; ಉದ್ಯಮಿ ಕೂಡ…” ಹೀಗಂತ ಹಿಂದೊಮ್ಮೆ ಹೇಳಿಕೊಂಡಿದ್ದರು ಇಂಧನ ಸಚಿವ ಡಿ. ಕೆ. ಶಿವಕುಮಾರ್. ಸಾತನೂರು ಕ್ಷೇತ್ರದಿಂದ ತಮ್ಮ ರಾಜಕೀಯ ಜೀವನ ಆರಂಭಿಸಿದ ಶಿವಕುಮಾರ್ ಇವತ್ತಿಗೆ ಕಾಂಗ್ರೆಸ್ ಪಕ್ಷದ ಪ್ರಭಾವಿ ನಾಯಕ. ಗ್ರಾನೈಟ್ ಉದ್ಯಮ, ರಿಯಲ್ ಎಸ್ಟೇಟ್, ಕಲ್ಲು ಗಣಿಗಾರಿಕೆ ಮತ್ತಿತರ ಕ್ಷೇತ್ರಗಳಲ್ಲಿ ಹಣ ಗಳಿಸುವ ಮೂಲಗಳನ್ನು ಸೃಷ್ಟಿಕೊಂಡಿದ್ದಾರೆ. ಗುರುತರವಾದ ಆರೋಪಗಳನ್ನು ನಾನಾ ನ್ಯಾಯಾಲಯಗಳಲ್ಲಿ ಎದುರಿಸುತ್ತಿದ್ದಾರೆ. ಇವರ ಮೇಲೆ ಐಟಿ ದಾಳಿ ನಡೆದಿರುವುದು ರಾಜ್ಯದ ಜನರಿಗಾಗಲೀ, ಸ್ವತಃ ಶಿವಕುಮಾರ್ ಅವರಿಗಾಗಲೀ ಅಚ್ಚರಿ ಮೂಡಿಸುವ ಬೆಳವಣಿಗೆ ಏನಲ್ಲ…

    August 3, 2017
    ...
    DK-Shivakumar_Eagleton resort
    ರಾಜ್ಯ

    ರೆಸಾರ್ಟ್ ರಾಜಕೀಯಕ್ಕೆ ಐಟಿ ದಾಳಿಯ ಟ್ವಿಸ್ಟ್: ಒಂದೇ ಒಂದು ರಾಜ್ಯಸಭಾ ಸ್ಥಾನಕ್ಕಾಗಿ ಇಷ್ಟೆಲ್ಲಾ ನಡೆಸಬೇಕಾ?

    ರಾಜ್ಯಕ್ಕೆ ಚಿರಪರಿಚಿತವಾಗಿದ್ದ ‘ರೆಸಾರ್ಟ್ ರಾಜಕಾರಣ’ಕ್ಕೆ ಬುಧವಾರ ಬೆಳಗ್ಗೆ ಐಟಿ ದಾಳಿಯ ‘ಶಾಕ್’ ನೀಡಲಾಗಿದೆ. ಗುಜರಾತ್ ಕಾಂಗ್ರೆಸ್ ಶಾಸಕರು ಬಿಡಾರ ಹೂಡಿದ್ದ ಬಿಡದಿಯ ಈಗಲ್ಟನ್ ರೆಸಾರ್ಟ್ ಮೇಲೆ ಐಟಿ ಅಧಿಕಾರಿಗಳು ಬೆಳಗ್ಗೆ 7 ಗಂಟೆ ಸುಮಾರಿಗೆ ದಾಳಿ ನಡೆಸಿದ್ದಾರೆ. ಜತೆಗೆ, ಅವರ ಉಪಚಾರಕ್ಕೆ ನಿಂತಿದ್ದ ಇಂಧನ ಸಚಿವ ಡಿ. ಕೆ. ಶಿವಕುಮಾರ್ ಮನೆಗಳ ಮೇಲೆ ದಾಳಿ ನಡೆದಿದೆ. ಶಿವಕುಮಾರ್ ತಮ್ಮ, ಸಂಸದ ಡಿ. ಕೆ. ಸುರೇಶ್ ಹಾಗೂ ಅವರ ಆಪ್ತರ ಮನೆಗಳ ಮೇಲೂ ದಾಳಿ ನಡೆದಿದೆ ಎಂದು ವರದಿಗಳು..

    August 2, 2017
    ...
    by-election-results
    ರಾಜ್ಯ

    ಉಪಚುನಾವಣೆ: ‘ಕೈ’ಗೆ ನೆರವಾದ ಜಾತಿ ಸಮೀಕರಣ; ಕಮಲಕ್ಕೆ ಮುಳುವಾದ ಅಹಿಂದ ರಾಜಕಾರಣ

    ಒಂದು ಕಡೆ ಜಾತಿ ಲೆಕ್ಕಾಚಾರ, ಮತ್ತೊಂದು ಕಡೆ ಚುನಾವಣಾ ತಂತ್ರಗಾರಿಕೆ. ನಡುವೆ ಒಂದಷ್ಟು ಭೀಕರ ಭಾಷಣ, ವ್ಯಕ್ತಿಗತ ನೆಲೆಯ ಆರೋಪಗಳು. ಕೊನೆಯಲ್ಲಿ ಯಥೇಚ್ಚ ಹಣದ ಹರಿಯುವಿಕೆ… ಫಲಿತಾಂಶ ವ್ಯರ್ಥ ಕಸರತ್ತಿನಂತೆ ಭಾಸವಾಗಿದ್ದ ಎರಡು ಕ್ಷೇತ್ರಗಳ ಉಪಚುನಾವಣೆಯಲ್ಲಿ ಆಡಳಿತರೂಢ ಕಾಂಗ್ರೆಸ್ ಪಕ್ಷದ ಜಯ. ಗುಂಡ್ಲುಪೇಟೆ ಹಾಗೂ ನಂಜನಗೂಡು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಾದ ಗೀತಾ ಮಹದೇವ ಪ್ರಸಾದ್ ಹಾಗೂ ಕಳಲೆ ಕೇಶವಮೂರ್ತಿ ಅವರುಗಳನ್ನು ಅಲ್ಲಿನ ಮತದಾರರು ಕೈ ಹಿಡಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ಮತ್ತು ಯಡಿಯೂರಪ್ಪ ನಡುವಿನ ಪ್ರತಿಷ್ಠೆಯ..

    April 13, 2017
    ...
    dinesh-amin-mudabidire
    ರಾಜ್ಯ

    ಮಟ್ಟು, ಪೂಜಾರಿ, ಜೈನ್ ಮತ್ತು ‘ಬಿಲ್ಲವ ರಾಜಕಾರಣ’: ಚುನಾವಣಾ ಕಣಕ್ಕೆ ದಿನೇಶ್ ಅಮೀನ್?

    ದಕ್ಷಿಣ ಕನ್ನಡದ ಕಾಂಗ್ರೆಸ್ ಪಡಸಾಲೆಯಲ್ಲಿ ಮುಂದಿನ ವಿಧಾನಸಭೆ ಚುನಾವಣೆಯ ಲೆಕ್ಕಾಚಾರಗಳು ಶುರುವಾಗಿವೆ. ವಿಧಾನಸಭೆ ಕ್ಷೇತ್ರಗಳಿಗೆ ಅಭ್ಯರ್ಥಿಗಳು ಯಾರ್ಯಾರು ಎಂಬ ಚರ್ಚೆಗಳು ಆರಂಭವಾಗಿದ್ದು, ಮೂಡುಬಿದಿರೆ ಕ್ಷೇತ್ರಕ್ಕೆ ಕಾಂಗ್ರೆಸ್ ವಲಯದಿಂದ ಅಚ್ಚರಿಯ ರೀತಿಯಲ್ಲಿ ಪತ್ರಕರ್ತರೊಬ್ಬರ ಹೆಸರು ಕೇಳಿ ಬರುತ್ತಿದೆ. ಅವರು ಮತ್ಯಾರೂ ಅಲ್ಲ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು. “ಮುಂದಿನ ಮೂಡುಬಿದಿರೆ ಕ್ಷೇತ್ರದ ಕಾಂಗ್ರೆಸ್ ಸಾಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿ ದಿನೇಶ್ ಅಮೀನ್ ಮಟ್ಟು ಕೂಡಾ ಇದ್ದಾರೆ,” ಎನ್ನುತ್ತಾರೆ ಮಂಗಳೂರು ಕಾಂಗ್ರೆಸ್ಸಿನ ಹಿರಿಯರೂ ಆದ ಮಾಜಿ ಶಾಸಕರೊಬ್ಬರು. ದಿನೇಶ್ ಆಪ್ತವಲಯದವರೇ ಹೇಳುವ ಪ್ರಕಾರ,..

    December 5, 2016
    ...
    devegowda-1
    ರಾಜ್ಯ

    ಬ್ರದರ್’ಗಳು ಬಿಟ್ಟ ಬಾಣಕ್ಕೆ ಗೌಡರಿಗಾದ ಮರ್ಮಘಾತ ಮತ್ತು ಸ್ಥಳೀಯ ಪಕ್ಷವೊಂದರ ಅವಸಾನ!

    ಕುಟುಂಬದ ಯಜಮಾನರ ನಿರ್ಧಾರಗಳಲ್ಲಿನ ಗೊಂದಲ, ಮನೆ ಮಂದಿಗೆಲ್ಲಾ ಅಧಿಕಾರದ ಹಪಾಹಪಿ, ಅಪಾತ್ರರಿಗೆ ಮಣೆ ಹಾಕಿದ್ದಕ್ಕೆ ತೆರಬೇಕಾದ ದಂಡ, ತತ್ವ ಸಿದ್ಧಾಂತಗಳನ್ನು ಇಟ್ಟುಕೊಂಡು ಜತೆಯಲ್ಲಿದ್ದವರಿಗೆ ಬಗೆದ ದ್ರೋಹ. ಇವುಗಳ ಜತೆಗೆ ಶವಪೆಟ್ಟಿಗೆಗೆ ಕೊನೆಯ ಮೊಳೆ ಎಂಬಂತೆ ರಾಜಕೀಯ ವಿರೋಧಿಗಳು ಹೆಣೆದ ರಣತಂತ್ರ… ಫಲಿತಾಂಶ; ಅವಸಾನದ ಅಂಚಿನಲ್ಲಿ ಬಂದು ನಿಂತ ರೈತರ ಪರ, ಜಾತ್ಯಾತೀತ ಪಕ್ಷ ಎಂಬ ಹಣೆಪಟ್ಟಿಯನ್ನು ಕಟ್ಟಿಕೊಂಡಿದ್ದ ಸ್ಥಳೀಯ ಪಕ್ಷ ಜಾತ್ಯಾತೀತ ಜನತಾದಳ. ವಿಧಾನ ಪರಿಷತ್ ಹಾಗೂ ರಾಜ್ಯಸಭಾ ಚುನಾವಣೆಗಳ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಮಾಜಿ ಪ್ರಧಾನಿ..

    June 13, 2016
    ...
    dks-yadiyurappa-1
    ರಾಜ್ಯ

    ಡಿ-ನೋಟಿಫಿಕೇಶನ್ ಮೇಲ್ಮನವಿ: ಯಡ್ಡಿ ಕಣ್ಣಿಗೆ ಸುಣ್ಣ; ಡಿಕೆಶಿ ಕಣ್ಣಿಗೆ ಬೆಣ್ಣೆ?

    ‘ಒಂದು ಕಣ್ಣಿಗೆ ಸುಣ್ಣ; ತನ್ನ ಕಣ್ಣಿಗೆ ಮಾತ್ರ ಬೆಣ್ಣೆ’ ಎಂಬಂತಿದೆ ಡಿ- ನೋಟಿಫಿಕೇಶನ್ ವಿಚಾರದಲ್ಲಿ ಮೇಲ್ಮನವಿ ಸಲ್ಲಿಸುತ್ತಿರುವ ರಾಜ್ಯ ಸರಕಾರದ ನಿಲುವು. ಬಿಜೆಪಿ ರಾಜ್ಯಾಧ್ಯಕ್ಷ ಬಿ. ಎಸ್. ಯಡಿಯೂರಪ್ಪ ವಿರುದ್ಧದ ಡಿ- ನೋಟಿಫಿಕೇಶನ್ ಪ್ರಕರಣಗಳಲ್ಲಿ ಮೇಲ್ಮನವಿ ಸಲ್ಲಿಸಿದ್ದ ಸರಕಾರ, ತನ್ನದೇ ಸಂಪುಟ ಸಚಿವ ಡಿ. ಕೆ. ಶಿವಕುಮಾರ್ ವಿಚಾರದಲ್ಲಿ ಈ ಗಟ್ಟಿತನವನ್ನು ತೋರಿಸಿಲ್ಲ ಎಂಬ ದೂರುಗಳೀಗ ಕೇಳಿ ಬರುತ್ತಿವೆ. ವಿವಾದಕ್ಕೆ ಕಾರಣವಾಗಿದ್ದ ಬೆನ್ನಿಗಾನಹಳ್ಳಿ ಡಿ- ನೋಟಿಫಿಕೇಶನ್ ಪ್ರಕರಣದಲ್ಲಿ ಸಚಿವ ಡಿ. ಕೆ. ಶಿವಕುಮಾರ್ ಹೆಸರು ಕೇಳಿಬಂದಿತ್ತು. ಪ್ರಕರಣವನ್ನು ಲೋಕಾಯುಕ್ತ..

    April 23, 2016

Top