An unconventional News Portal.

ಡಿಎಂಕೆ
  ...

  ‘ಚೆನ್ನೈ ಸಂಗಮಮಂ’: ಕರುಣಾನಿಧಿ ಪುತ್ರಿ ಕನಿಮೋಳಿಯ ಎರಡು ಮುಖಗಳು ಮತ್ತು 2ಜಿ ಹಗರಣದ ತೀರ್ಪು!

  ಬಹುನಿರೀಕ್ಷಿತ 2ಜಿ ಸ್ಪೆಕ್ಟ್ರಂ ಹಗರಣದ ತೀರ್ಪು ಹೊರಬಿದ್ದಿದೆ. ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾದ ಮಾಜಿ ದೂರಸಂಪರ್ಕ ಸಚಿವ ಎ. ರಾಜಾ ಮತ್ತು ಡಿಎಂಕೆ ಸಂಸದೆ ಕನಿಮೋಳಿ ನಿರ್ದೋಷಿಗಳು ಎಂದು ಪಟಿಯಾಲಾದ ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. ಪ್ರಕರಣದಲ್ಲಿ ಆರೋಪಿಗಳಾಗಿದ್ದ ಇತರ 15 ಜನರು ಹಾಗೂ ಮೂರು ಕಂಪೆನಿಗಳನ್ನು ಪ್ರಕರಣದಲ್ಲಿ ಖುಲಾಸೆಗೊಳಿಸಿ ನ್ಯಾಯಾಲಯ ತೀರ್ಪಿತ್ತಿದೆ. ಮಾಜಿ ದೂರ ಸಂಪರ್ಕ ಇಲಾಖೆ ಕಾರ್ಯದರ್ಶಿ ಸಿದ್ಧಾರ್ಥ್ ಬಹುರಾ, ರಾಜಾ ಖಾಸಗಿ ಕಾರ್ಯದರ್ಶಿ ಆರ್.ಕೆ. ಚಂಡೋಲಿಯಾ, ಸ್ವಾನ್ ಟೆಲಿಕಾಂ ಮಾಲಿಕ ಶಾಹಿದ್ ಉಸ್ಮಾನ್ […]

  December 21, 2017
  ...

  ‘ಅಮ್ಮ’ನಿಲ್ಲದ ಒಂದು ವರ್ಷ: ತಮಿಳುನಾಡು ಸಾಕ್ಷಿಯಾದ ಆರು ಪ್ರಮುಖ ರಾಜಕೀಯ ಬೆಳವಣಿಗೆಗಳು

  ‘ಅಮ್ಮ’ ಎಂದೇ ಪ್ರೀತಿಯಿಂದ ಕರೆಯಿಸಿಕೊಳ್ಳುತ್ತಿದ್ದ ನಟಿ, ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಸಾವಿಗೆ ಒಂದು ವರ್ಷ ತುಂಬಿದೆ. ನೆರೆರಾಜ್ಯದ ರಾಜಕೀಯದಲ್ಲಿ ದಶಕಗಳಿಂದ ಪ್ರಾಬಲ್ಯ ಸಾಧಿಸಿದ, ಅಧಿಕಾರದ ಗದ್ದುಗೆಯಲ್ಲಿ 6 ವರ್ಷಗಳನ್ನು ಕಳೆದಿದ್ದ ಕರ್ನಾಟಕ ಮೂಲದ ಜಯಲಲಿತಾ ಕಳೆದ ವರ್ಷ 2016, ಡಿ. 5ರಂದು ಚೆನ್ನೈನಲ್ಲಿ ಅಸುನೀಗಿದ್ದರು. ‘ಅಮ್ಮ’ನಿಂದಾಗಿ ತಮಿಳುನಾಡಿನ ರಾಜಕೀಯ ಗತಿ ಬದಲಿಸಿತ್ತು. ಇದೀಗ ‘ಅಮ್ಮ’ನಿಲ್ಲದೆಯೂ ಇಲ್ಲಿನ ರಾಜಕೀಯ ಪಥ ಬದಲಿಸಿದೆ. ಕಳೆದ ಒಂದು ವರ್ಷದಲ್ಲಿ ತಮಿಳುನಾಡಿನ ರಾಜಕೀಯದಲ್ಲಾದ ಆರು ಮಹತ್ವದ ಬದಲಾವಣೆಗಳನ್ನು ‘ಸಮಾಚಾರ’ ನಿಮ್ಮ ಮುಂದಿಡುತ್ತಿದೆ. ಈ ಬದಲಾವಣೆಗಳಿಗೂ, […]

  December 5, 2017
  ...

  ‘ಜಯಲಲಿತಾ ಮತ್ತು ದ್ರಾವಿಡ ಚಳವಳಿ’: ಬ್ರಾಹ್ಮಣ ವಿರೋಧಿ ತಮಿಳು ಪರಂಪರೆ ಹಳಿ ತಪ್ಪಿದ್ದೆಲ್ಲಿ?

  ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಸಾವಿನ ನಂತರ ಅವರ ವ್ಯಕ್ತಿತ್ವದ ಗುಣಗಾನ ಆರಂಭವಾಗಿದೆ. ಅದು ಸಹಜ ಕೂಡ. ಸತ್ತವರ ಕುರಿತು ಒಳ್ಳೆಯದನ್ನಷ್ಟೆ ಮಾತನಾಡಬೇಕು ಎಂಬ ಪ್ರತೀತಿ ನಮ್ಮಲ್ಲಿ ಇರುವುದರಿಂದ, ಇವತ್ತು ಜಯಲಲಿತಾ ಕುರಿತು ಹೊರಬರುತ್ತಿರುವ ವರದಿಗಳಲ್ಲಿ ಅವರ ಒಳ್ಳೆಯತನಗಳಷ್ಟೆ ಹೆಚ್ಚು ‘ಫೋಕಸ್’ ಆಗುತ್ತಿವೆ. ಅದೇ ವೇಳೆ, ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದ ಜಯಲಲಿತಾರ ಅಂತ್ಯಕ್ರಿಯೆ ‘ದ್ರಾವಿಡ ಸಂಪ್ರದಾಯ’ದಂತೆ ನಡೆದು ಹೋಗಿದೆ. ಯಾಕೆ ಹೀಗೆ? ಜಯಲಲಿತಾರ ಹುಟ್ಟಿನ ಹಿನ್ನೆಲೆ ಏನೇ ಇದ್ದರೂ, ಅವರು ಬೆಳೆದಿದ್ದು, ರಾಜಕೀಯವಾಗಿ ಪ್ರವರ್ಧಮಾನಕ್ಕೆ ಬಂದಿದ್ದು ದ್ರಾವಿಡ ಚಳವಳಿಯ ಮೂಸೆಯಲ್ಲಿ […]

  December 7, 2016
  ...

  ‘ಅಮ್ಮ’ ಇನ್ನಿಲ್ಲ…: ಮೈಸೂರಿನ ‘ಚಂದನದ ಗೊಂಬೆ’ಯ ಹೆಜ್ಜೆಗಳು ಚೆನ್ನೈ ಅಪೋಲೋದಲ್ಲಿ ಅಂತ್ಯ

  ಮೈಸೂರಿನಲ್ಲಿ ಹುಟ್ಟಿ, ಕನ್ನಡ ಚಿತ್ರರಂಗದಲ್ಲಿ ‘ಚಂದನದ ಗೊಂಬೆ’ಯಾಗಿ, ನಂತರ ಪಕ್ಕದ ತಮಿಳುನಾಡಿಗೆ ಕಾಲಿಟ್ಟು, ಮೇರು ನಟರ ಜತೆ ಹೆಜ್ಜೆ ಹಾಕುವ ಮೂಲಕ ಜನಪ್ರಿಯತೆ ಕಂಡಿದ್ದ ನಟಿ, ರಾಜಕೀಯಕ್ಕೂ ಕಾಲಿಡುವ ಮೂಲಕ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೇರಿ ಪಕ್ಷದ ಕಾರ್ಯಕರ್ತರ ಪಾಲಿಗೆ ‘ಪ್ರೀತಿಯ ಅಮ್ಮ’ ಅಂತ ಕರೆಸಿಕೊಂಡಿದ್ದ ಜಯಲಲಿತಾ ಜಯರಾಮನ್ ಜೀವನ ಪಯಣದ ಹಾದಿ ಕೊನೆಯಾಗಿದೆ. ತಮಿಳುನಾಡು ರಾಜಧಾನಿ ಚೆನ್ನೈನ ಪಂಚತಾರಾ ಆಸ್ಪತ್ರೆಯಲ್ಲಿ ಸೆಲ್ವಿ. ಜೆ. ಜಯಲಲಿತಾ ಸೋಮವಾರ ರಾತ್ರಿ 11. 30ಕ್ಕೆ ಅಸುನೀಗಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ. ಕಳೆದ 74 ದಿನಗಳ ಕಾಲ […]

  December 6, 2016
  ...

  ‘ಜಯಲಲಿತಾ ಹೆಲ್ತ್ ರಿಪೋರ್ಟ್’: ಅಮ್ಮ ಆರೋಗ್ಯ ಗಂಭೀರ; ಸ್ಪಷ್ಟತೆ ಇನ್ನೂ ದೂರ

  ತಮಿಳುನಾಡಿನ ಮುಖ್ಯಮಂತ್ರಿ, ಎಐಎಡಿಎಂ ಪಕ್ಷದ ಕಾರ್ಯಕರ್ತರ ಪಾಲಿನ ಆರಾಧ್ಯ ದೈವ ಜೆ. ಜಯಲಲಿತಾ ಆರೋಗ್ಯದ ಗಂಭೀರತೆ ಮುಂದುವರಿದೆ. ಸೋಮವಾರ ಮಧ್ಯಾಹ್ನ ತಾನೆ ಚೆನ್ನೈ ಅಪೊಲೋ ಆಸ್ಪತ್ರೆ ಬಿಡುಗಡೆ ಮಾಡಿರುವ ‘ಪ್ರಕಟಣೆ’ಯಲ್ಲಿ, ‘ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ನಿನ್ನೆ (ಭಾನುವಾರ) ಸಂಜೆ ಹೃದಯಾಘಾತಕ್ಕೆ ಒಳಗಾಗಿದ್ದರು. ಇವತ್ತೂ ಆರೋಗ್ಯ ಸ್ಥಿತಿಯಲ್ಲಿ ಗಂಭೀರತೆ ಮುಂದುವರಿದೆ. ಪರಿಣಿತ ತಜ್ಞ ವೈದ್ಯರು ನಿಗಾವಹಿಸಿದ್ದು, ಇಸಿಎಂಓ ಸೇರಿದಂತೆ ತೀವ್ರ ನಿಗಾ ಕ್ರಮಕ್ಕೆ ಒಳಗಾಗಿದ್ದಾರೆ’ ಎಂದು ತಿಳಿಸಿದೆ. ಜಯಲಲಿತಾ 74 ದಿನಗಳ ಹಿಂದೆ ಸದ್ಯ ಚಿಕಿತ್ಸೆ ಪಡೆಯುತ್ತಿರುವ ಚೆನ್ನೈನ ಅಪೊಲೋ ಆಸ್ಪತ್ರೆಗೆ ಅನಾರೋಗ್ಯದ […]

  December 5, 2016

Top