An unconventional News Portal.

ಜ್ಯೋತಿಷ್ಯ
  ...

  ‘ಕಾವಿಧಾರಿಗಳ ಕಾಮ ಪುರಾಣಂ’: ನ್ಯೂಸ್‌ ಚಾನಲ್‌ಗಳಲ್ಲಿ ರಾಸಲೀಲೆ ಆಚರಣೆಗೆ ಒಂದು ದಶಕ!

  ಅವತ್ತು ಮನೆಯಲ್ಲಿದ್ದ ಆ ಮಗುವಿಗೆ ಶಾಲೆ ರಜೆ. ಬೆಳಗ್ಗೆ ಎದ್ದು, ಹಾಲು ಕುಡಿದು, ಟಿವಿ ಆನ್‌ ಮಾಡಿಕೊಂಡು ಕುಳಿತಿತ್ತು. ಬೆಳಗ್ಗೆ ಕಚೇರಿಗೆ ಹೊರಡಲು ಅಣಿಯಾಗಿದ್ದ ತಂದೆ ‘ನ್ಯೂಸ್ ಚಾನಲ್’ ಹಾಕು ಪುಟ್ಟ ಎಂದರು. ಮಗು ಕನ್ನಡ ಸುದ್ದಿವಾಹಿನಿಯ ನಂಬರ್ ಒತ್ತಿತು ರಿಮೋಟ್‌ನಲ್ಲಿ. ‘ಕಾವಿ ಧರಿಸಿ ಸ್ವಾಮಿಯ ಪಲ್ಲಂಗದಾಟ; ಈತನ ಜತೆ ಮಂಚ ಏರಿದ ಹೆಂಗಸರ ಸಂಖ್ಯೆ ಎಷ್ಟು ಗೊತ್ತು?; ಇಷ್ಟಕ್ಕೂ ಈ ಸ್ವಾಮಿ ರಾಸಲೀಲೆ ನಡೆಯುವಾಗ ಯಾರಿದ್ದರು ಗೊತ್ತಾ?’ ಹೀಗೆ ಹೆಣ್ಣು ದನಿಯೊಂದು ಹಿನ್ನೆಲೆಯಲ್ಲಿ ಅರಚಿಕೊಳ್ಳುತ್ತಿತ್ತು. ಅಡುಗೆ […]

  December 7, 2017
  ...

  ನಾವು ಸುಳ್ ಹೇಳಲ್ಲ: ಸುದ್ದಿ ಟಿವಿ; ಇದು ‘ಕಾಂಗ್ರೆಸ್ ಸಂಗಾತಿ’!

  ಫೆಬ್ರವರಿ 23, 2016ರ ಮಧ್ಯಾಹ್ನ… ರಾಜ್ಯದಲ್ಲಿ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಯ ಫಲಿತಾಂಶ ಹೊರಬಿದ್ದ ದಿನವದು. ಅವತ್ತಿಗೆ ‘ಸುದ್ದಿ ಟಿವಿ’ ಶಾಂತಿ ನಗರ ಬಸ್ ಸ್ಟ್ಯಾಂಡ್ ಎದುರಿಗೆ ಇರುವ ‘ಖೈಖಾ ಬಿಸಿನೆಸ್ ಪಾರ್ಕ್’ ಕಟ್ಟಡದ ಒಂದನೇ ಮಹಡಿಯಲ್ಲಿನ್ನೂ ಭ್ರೂಣಾವಸ್ಥೆಯಲ್ಲಿತ್ತು. ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದ ಬಗ್ಗೆ ಚರ್ಚಾ ಕಾರ್ಯಕ್ರಮವನ್ನು ಇದ್ದ ಚಿಕ್ಕ ಜಾಗದಲ್ಲಿಯೇ ತರಬೇತಿ ಕಾರಣಕ್ಕೆ ಮಧ್ಯಾಹ್ನ ನಡೆಸಲಾಯಿತು. ಪ್ಯಾನಲ್ನಲ್ಲಿ ವಾಹಿನಿಯ ಪ್ರಧಾನ ಸಂಪಾದಕ ಶಶಿಧರ್ ಭಟ್ ಅತಿಥಿಯಾಗಿ ಪಾಲ್ಗೊಂಡಿದ್ದರು. ಆ್ಯಂಕರ್ ಚರ್ಚೆಯನ್ನು ಆರಂಭಿಸುತ್ತ ಭಟ್ಟರಿಗೆ ಪ್ರಶ್ನೆಯೊಂದನ್ನು ಕೇಳಿದರು. ತಕ್ಷಣ […]

  October 9, 2016
  ...

  ಸಿಎಂ ಕಾರು, ಕಪ್ಪು ಕಾಗೆ ಮತ್ತು ಮಾಧ್ಯಮ ‘ಅಪಶಕುನಿ’ಗಳಿಗೆ ಆದ ಕಪಾಳಮೋಕ್ಷ!

  ಗುರುವಾರ ಮುಂಜಾನೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಗೃಹ ಕಚೇರಿ ಕೃಷ್ಣಾ ಮುಂದೆ ಕನ್ನಡ ಸುದ್ದಿ ವಾಹಿನಿಗಳ ಪಾಲಿಗೆ ‘ಅಘಾತ’ಕಾರಿ ಘಟನೆಯೊಂದು ನಡೆದು ಹೋಯ್ತು. ಇಡೀ ರಾಜ್ಯವನ್ನೇ ‘ಬೆಚ್ಚಿ ಬೀಳಿಸಿದ’ ಪ್ರಕರಣದಲ್ಲಿ ಘಟನೆಗೆ ಕಾರಣವಾಗಿದ್ದು ಒಂದು ಸಣ್ಣ ಕಾಗೆ ಮರಿ… ನಿರೂಪಣೆ ಯಾಕೋ ಕೊಂಚ ಅತಿಯಾಯಿತು ಅಂತ ಅನ್ನಿಸುತ್ತಿದೆಯಾ? ಗುರುವಾರ ಸಂಜೆ ಹೊತ್ತಿಗೆ ಟಿವಿ ನೋಡುತ್ತಿದ್ದವರಿಗೆ ಇದೇ ಭಾವವೊಂದು ಮೂಡಿತ್ತು. ಮನೆ ಮುಂದೆ ನಿಲ್ಲಿಸಿದ್ದ ಮುಖ್ಯಮಂತ್ರಿ ಕಾರಿನ ಮೇಲೆ ಕೆಲ ನಿಮಿಷಗಳ ಕಾಲ ಕೂತ ಕಾಗೆ ಮರಿ ಅಲ್ಲಿಂದ ಕದಲಿಲ್ಲ. ಸಿಬ್ಬಂದಿ ಓಡಿಸಲು […]

  June 3, 2016

Top