An unconventional News Portal.

ಜಿಗ್ನೇಶ್ ಮೇವಾನಿ
  ...

  ಬಾಪೂ ನಾಡಿನಲ್ಲಿ ಬಿಜೆಪಿ ಪ್ರಯಾಸದ ಗೆಲುವು: ಫಲಿತಾಂಶದ ಅಂತರಾಳ; ಬದಲಾವಣೆ ತುಡಿತಕ್ಕೆ ಅಸ್ತು ಅಂದ ಮತದಾರ!

  ಗುಜರಾತ್ ಗದ್ದುಗೆಗೆ ಬಿಜೆಪಿ ಮರಳಿದೆ. ಆದರೆ ನಿರೀಕ್ಷೆ ಇಟ್ಟಷ್ಟು ಸೀಟುಗಳನ್ನು ಪಡೆಯುವಲ್ಲಿ ಪ್ರಧಾನಿ ಮೋದಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ತಮ್ಮ ತವರು ನೆಲದಲ್ಲಿಯೇ ವಿಫಲರಾಗಿದ್ದಾರೆ. ಕಾಂಗ್ರೆಸ್ ಊಹೆಗೂ ಮೀರಿ ಸ್ಪರ್ದೆ ನೀಡಿದೆ. ಅದಕ್ಕಿಂತ ಹೆಚ್ಚಾಗಿ, ಗುಜರಾತಿಗರು ಇಬ್ಬರು ಹೋರಾಟಗಾರರನ್ನು ವಿಧಾನಸಭೆಗೆ ಕಳುಹಿಸಿದ್ದಾರೆ; ಪರ್ಯಾಯ ರಾಜಕಾರಣದ ಕನಸಿಗೆ ನೀರೆರಿದ್ದಾರೆ. ಮೇಲ್ನೋಟಕ್ಕೆ ಗುಜರಾತ್ ಚುನಾವಣಾ ಫಲಿತಾಂಶ ಮತಗಟ್ಟೆಗಳ ಸಮೀಕ್ಷೆಗೆ ಹತ್ತಿರವಿದ್ದರೂ, ಅಂತರಾಳದಲ್ಲಿ ಆಲೋಚನೆಗೆ ದೂಡುವಂತಹ ಆಯಾಮಗಳನ್ನು ಹೊಂದಿದೆ ಎಂಬುದು ಗಮನಾರ್ಹ. ಕಳೆದ 22 ವರ್ಷಗಳಿಂದ ರಾಜ್ಯದಲ್ಲಿ ಬಿಜೆಪಿಗೆ, 2014ರಿಂದ […]

  December 18, 2017
  ...

  LIVE BLOG: ಅಧಿಕಾರದೆಡೆಗೆ ಬಿಜೆಪಿ ನಡಿಗೆ: ಗುಜರಾತ್ ವಿಧಾನಸಭೆ ಪ್ರವೇಶಿಸಿದ ಇಬ್ಬರು ಹೋರಾಟಗಾರರು

  ನಮಸ್ಕಾರ… ದೇಶದ ಗಮನ ಸೆಳೆದಿರುವ ಗುಜರಾತ್ ವಿಧಾನಸಭಾ ಚುನಾವಣೆ ಹಾಗೂ ಹಿಮಾಚಲ ಪ್ರದೇಶ ಚುನಾವಣೆಗಳ ಫಲಿತಾಂಶ ಇಂದು ಪ್ರಕಟವಾಗಲಿದೆ. ಬೆಳಗ್ಗೆ 8 ಗಂಟೆಗೆ, ಉಭಯ ರಾಜ್ಯಗಳಲ್ಲಿ ಮತ ಎಣಿಕೆ ಆರಂಭವಾಗಲಿದೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ‘ಬೆಳಗ್ಗೆ 11 ಗಂಟೆ ಹೊತ್ತಿಗೆ ಬಿಜೆಪಿ ವಿಜಯ ಖಾತ್ರಿ’ ಎಂದಿದ್ದಾರೆ. ಈಗಾಗಲೇ ಹೊರಬಿದ್ದಿರುವ ಮತಗಟ್ಟೆ ಸಮೀಕ್ಷೆಗಳು ಕೂಡ ಬಿಜೆಪಿ ವಿಜಯವನ್ನೇ ಸಾರಿವೆ. ಇಂತಹ ಎಲ್ಲಾ ಊಹೆಗಳ ಆಚೆಗೆ ಇಂದು ಮಧ್ಯಾಹ್ನದ ವೇಳೆಗೆ ಗುಜರಾತ್ ಗದ್ದುಗೆ ಯಾರ ಪಾಲಾಗಲಿದೆ? ಹಿಮಾಚಲ ಪ್ರದೇಶದಲ್ಲಿ […]

  December 18, 2017
  ...

  ಜಿಗ್ನೇಶ್ ಮೇವಾನಿ ಸಂದರ್ಶನ: ‘ಗುಜರಾತ್ ಚುನಾವಣೆಗಿಂತ 2019ರ ಲೋಕಸಭೆ ಚುನಾವಣೆ ಮುಖ್ಯ’

  ಹಿಂದೊಮ್ಮೆ ಭೂಕಂಪನಕ್ಕೆ ಹೆಸರಾಗಿದ್ದ ಗುಜರಾತಿನಲ್ಲಿ ಈಗ ಯುವಕಂಪನಗಳದ್ದೇ ಸುದ್ದಿ. ಜಿಗ್ನೇಶ್, ಹಾರ್ದಿಕ್ ಪಟೇಲ್ ಮತ್ತು ಅಲ್ಪೇಶ್ ಠಾಕೂರ್ ಎಂಬ ಈ ಮೂವರು ಯುವ ನಾಯಕರು ಬಜೆಪಿಗೆ ಎಂತಹ ಮರ್ಮಾಘಾತ ನೀಡಿದ್ದಾರೆಂದರೆ, 1995ರಿಂದಲೂ ಗೆಲುವಿನ ನಾಗಾಲೋಟದಲ್ಲಿದ್ದ ಬಿಜೆಪಿ ಈ ಬಾರಿಯ ಚುನಾವಣೆಯಲ್ಲಿ ದಿಡೀರ್ ಆಘಾತವನ್ನೆದುರಿಸಿದೆ. ನಾಳೆ ಗುಜರಾತ್ ಚುನಾವಣೆಗಳ ಮತ ಎಣಿಕೆಯಿದೆ. ಮತಗಟ್ಟೆ ಸಮೀಕ್ಷೆಗಳೆಲ್ಲಾ ಬಿಜೆಪಿಯೇ ಗೆಲುವು ಸಾಧಿಸುತ್ತದೆ ಎಂದು ಭವಿಷ್ಯ ನುಡಿದಿದ್ದರೂ ಗುಜರಾತಿನ ಯಾವೊಬ್ಬ ಬಿಜೆಪಿ ನಾಯಕನ ಮುಖದಲ್ಲೂ ನಂಬಿಕೆಯ ಕಳೆಯಿಲ್ಲ. ಸ್ವತಃ ಬಿಜೆಪಿಯ ಸಂಸದರೇ ಈ ಸಲ ಬೆಜೆಪಿ […]

  December 17, 2017
  ...

  ಗುಜರಾತ್ ಮೊದಲ ಹಂತದ ಮತದಾನ: ಇವಿಎಂಗಳಿಗೆ ಬ್ಲ್ಯೂಟೂತ್ ಕನೆಕ್ಷನ್ ಕೊಟ್ಟ ಕಾಂಗ್ರೆಸ್!

  ಗುಜರಾತ್ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನ ಇಂದು ಮುಕ್ತಾಯವಾಗಿದೆ. ಪ್ರಧಾನಿ ಮೋದಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಜೋಡಿಯ ತವರು ರಾಜ್ಯವಾಗಿರುವ ಗುಜರಾತ್‌ ಚುನಾವಣೆ ದೇಶದ ಗಮನಸೆಳೆಯುತ್ತಿದೆ. ಈ ಚುನಾವಣೆಯ ಫಲಿತಾಂಶ ಇತರ ರಾಜ್ಯಗಳ ಮುಂಬರುವ ಚುನಾವಣೆ ಮೇಲೆ ಪ್ರಭಾವ ಬೀರುವ ಸಾಧ್ಯತೆಗಳಿವೆ; ಅಷ್ಟೆ ಅಲ್ಲ ಮುಂಬರುವ ಲೋಕಸಭಾ ಚುನಾವಣೆವರೆಗೂ ಗುಜರಾತ್ ಫಲಿತಾಂಶ ಕಾವು ಕಾಯ್ದುಕೊಳ್ಳಲಿದೆ. ಹೀಗಾಗಿ ಕಳೆದ 22 ವರ್ಷಗಳಿಂದ ಬಾಪೂನಾಡಿನ ಅಧಿಕಾರ ಹಿಡಿದಿರುವ ಬಿಜೆಪಿ ಇದು ಅಗ್ನಿ ಪರೀಕ್ಷೆ. ಕಾಂಗ್ರೆಸ್ ಪಾಲಿಗೆ […]

  December 9, 2017
  ...

  ಬಹಿರಂಗ ಪ್ರಚಾರಕ್ಕೆ ತೆರೆ: ಗುಜರಾತ್ ಚುನಾವಣೆಯಲ್ಲಿ ಗೆಲ್ಲೋರು ಯಾರು? ಸೋಲೋರು ಯಾರು?

  ದೇಶದ ಗಮನ ಸೆಳೆಯುತ್ತಿರುವ ಗುಜರಾತ್ ಚುನಾವಣೆ ಮೊದಲ ಹಂತದ ಬಹಿರಂಗ ಪ್ರಚಾರಕ್ಕೆ ಇಂದು ಸಂಜೆ ತೆರೆ ಬೀಳಲಿದೆ. ಪ್ರಧಾನಿ ಮೋದಿ ತವರು ರಾಜ್ಯ ಹಾಗೂ ದೇಶದ ರಾಜಕೀಯದ ಒಲವು- ನಿಲುವುಗಳ ಭವಿಷ್ಯದ ಸೂಚನೆಯನ್ನೂ ಒಳಗೊಂಡ ಫಲಿತಾಂಶ ಇಲ್ಲಿ ಹೊರಬೀಳಲಿದೆ ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ. ಬಿಜೆಪಿಯ ಸ್ಟಾರ್ ಪ್ರಚಾರಕರಾಗಿ ಮೋದಿ ಅಖಾಡಕ್ಕಿಳಿದಿದ್ದಾರೆ. ಜತೆಗೆ, ಕೇಂದ್ರ ಸಚಿವರು ಹಾಗೂ ಆರು ಜನ ಮುಖ್ಯಮಂತ್ರಿಗಳನ್ನು ಬಿಜೆಪಿ ಮತಯಾಚನೆಗೆ ಇಳಿಸಿದೆ. ಡಿಸೆಂಬರ್ 9 ಮತ್ತು 14 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. […]

  December 7, 2017
  ...

  ಅಖಾಡಕ್ಕೆ ಪ್ರಧಾನಿ ಮೋದಿ: ಈ ಬಾರಿಯೂ ‘ಕೈ’ ತಪ್ಪುತ್ತಾ ಬಾಪೂ ನಾಡು?

  ದೇಶದ ಗಮನ ಸೆಳೆಯುತ್ತಿರುವ ಗುಜರಾತ್‌ ಚುನಾವಣೆಯ ಫಲಿತಾಂಶ; ಪ್ರಚಾರದ ಕೊನೆಯ ಹಂತದಲ್ಲಿ ನಡೆಯಲಿರುವ ಪ್ರಧಾನಿ ನರೇಂದ್ರ ಮೋದಿ ರ‍್ಯಾಲಿಗಳ ಮೇಲೆ ತೀರ್ಮಾನವಾಗಲಿದೆ… ಹೀಗಂತ ನವೆಂಬರ್ ತಿಂಗಳ ಆರಂಭದಲ್ಲಿ ವರದಿ ಮಾಡಿತ್ತು; ‘ಸಮಾಚಾರ’. ಇದೀಗ ಪ್ರಧಾನಿ ಮೋದಿ ರ‍್ಯಾಲಿಗಳಿಗೆ ಸೋಮವಾರ ಚಾಲನೆ ಸಿಕ್ಕಿದೆ. ಗುಜರಾತ್‌ ಚುನಾವಣೆ ದಿನಾಂಕಗಳು ಘೋಷಣೆಯಾದ ನಂತರ, ಇದೇ ಮೊದಲ ಬಾರಿಗೆ ಪ್ರಧಾನಿ ಮತಪ್ರಚಾರಕ್ಕೆ ಇಳಿದಿದ್ದಾರೆ. ಕೇಂದ್ರ ಸಚಿವರು, ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳ ಮುಖ್ಯಮಂತ್ರಿಗಳ ನಂತರ ತಾರಾ ಪ್ರಚಾರಕರಾಗಿ ಮೋದಿ ಗುಜರಾತ್‌ ಅಖಾಡಕ್ಕೆ ಆಗಮಿಸಿದ್ದಾರೆ. ಮೋದಿ ಆಗಮನಕ್ಕೂ ಮುನ್ನವೇ ಗುಜರಾತ್‌ ಚುನಾವಣಾ […]

  November 27, 2017
  ...

  ಧರ್ಮ ಮೀರಿಸಿದ ಜಾತಿ ಅಜೆಂಡಾ: ಮೋದಿ- ಶಾ ಜೋಡಿಗೆ ಈ ಬಾರಿ ಗುಜರಾತ್‌ ಸುಲಭದ ತುತ್ತಲ್ಲ

  “ನನ್ನ 30 ವರ್ಷಗಳ ಪತ್ರಿಕೋದ್ಯಮದ ಅನುಭವದಲ್ಲಿ ಇಂತಹದೊಂದು ಚುನಾವಣೆಯ ಅಖಾಡವನ್ನು ನೋಡಿರಲಿಲ್ಲ,” ಎಂದರು ಆಶಿಶ್ ಅಮಿನ್. ಅಹಮದಬಾದ್‌ನಲ್ಲಿರುವ ‘ನವ ಗುಜರಾತ್‌ ಸಮಯ್‌’ ಪತ್ರಿಕೆಯ ರಾಜಕೀಯ ವಿಭಾಗದಲ್ಲಿ ಅವರೀಗ ಪ್ರಧಾನ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಮುಂಬರುವ ಗುಜರಾತ್‌ ಚುನಾವಣೆಯ ಹಿನ್ನೆಲೆಯಲ್ಲಿ ಅನುಭವಿ ವರದಿಗಾರ ಅಮಿನ್‌ ಸಾಕಷ್ಟು ಒಳನೋಟಗಳೊಂದಿಗೆ ಮಾತನಾಡುತ್ತಿದ್ದಾರೆ. “ಇದೇ ಮೊದಲ ಬಾರಿಗೆ ಜಾತಿ ವಿಚಾರ ಚುನಾವಣೆಯ ಕೇಂದ್ರಸ್ಥಾನಕ್ಕೆ ಬಂದಿದೆ. ಕಳೆದ 22 ವರ್ಷಗಳಲ್ಲಿ ಗುಜರಾತ್‌ ಚುನಾವಣೆಗಳು ನಡೆದಿದ್ದು ಧರ್ಮ ಮತ್ತು ಅಭಿವೃದ್ಧಿಯ ತಳಹದಿಯ ಮೇಲೆ. ಆದರೆ ಇದೇ ಮೊದಲ […]

  October 24, 2017
  ...

  ‘ಉಲ್ಟಾ ಪಲ್ಟಾ’: #ಕನಕ ನಡೆ ಯಾರ ವಿರುದ್ಧವೂ ಅಲ್ಲ; ಚಕ್ರವರ್ತಿ ಸೂಲಿಬೆಲೆ ಸ್ಪಷ್ಟೀಕರಣ!

  ಚಲೋ ಉಡುಪಿ ಸಮಾವೇಶದ ಬೆನ್ನಿಗೇ ಚಕ್ರವರ್ತಿ ಸೂಲಿಬೆಲೆ ನಡೆಸಲು ಹೊರಟಿರುವ ‘ಕನಕ ನಡೆ’ ಪರ ವಿರೋಧ ಚರ್ಚೆಗೆ ಗ್ರಾಸವಾಗಿದೆ. ಇದೊಂದು ಕಮ್ಯೂನಿಸ್ಟ್ ವಿರೋಧಿ ನಡಿಗೆ ಎಂಬ ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿವೆ. ಈ ಸಂದರ್ಭದಲ್ಲಿ ‘ಸಮಾಚಾರ’ದ ಜೊತೆ ಮುಕ್ತವಾಗಿ ‘ಕನಕ ನಡೆ’ ಸಂಘಟಕ, ‘ನಮೋ ಬ್ರಿಗೇಡ್’ (ಇವತ್ತಿನ ಯುವ ಬ್ರಿಗೇಡ್) ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಮಾತನಾಡಿದ್ದಾರೆ. ‘ಕನಕ ನಡೆ’ ಯಾರ ವಿರುದ್ಧವೂ ಅಲ್ಲ; ಬದಲಿಗೆ ಸ್ವಚ್ಚ ಭಾರತ್ ಅಭಿಯಾನ ಭಾಗವಾಗಿ ಉಡುಪಿಯನ್ನು ಸ್ವಚ್ಚಗೊಳಿಸಲು ಹೊರಟಿರುವುದಾಗಿ ಅವರು ಸ್ಪಷ್ಟೀಕರಣ ನೀಡಿದ್ದಾರೆ. […]

  October 13, 2016
  ...

  ‘ಸಾಮಾನ್ಯ ಜ್ಞಾನ’: ಏನಿದು ಪಂಕ್ತಿ ಭೇದ?; ಊಟದ ಆಚರಣೆಗೆ ಯಾಕಿಷ್ಟು ವಿರೋಧ?

  ದಲಿತ ಹಾಗೂ ದಮನಿತರ ಸ್ವಾಭಿಮಾನಿ ಜಾಥಾದ ಸಮಾರೋಪ ಸಮಾವೇಶ ಉಡುಪಿಯಲ್ಲಿ ಇದೇ ಭಾನುವಾರ ನಡೆಯಿತು. ಈ ಸಂದರ್ಭ ‘ಉಡುಪಿ ಮಠ’ದಲ್ಲಿ ನಡೆಯುತ್ತಿರುವ ‘ಪಂಕ್ತಿ ಭೇದ’ಕ್ಕೆ ಕೊನೆಹಾಡಲು ಗುಜರಾತ್ ಮೂಲದ ಹೋರಾಟಗಾರ ಜಿಗ್ನೇಶ್ ಮೇವಾನಿ ಎರಡು ತಿಂಗಳ ಗಡುವು ನೀಡಿದ್ದರು. ಇದಾದ ಬೆನ್ನಿಗೆ ಈಗ ಪಂಕ್ತಿ ಭೇದದ ಸುತ್ತ ಪರ-ವಿರೋಧ ಚರ್ಚೆಗಳು ಆರಂಭವಾಗಿವೆ. ಏನಿದು ‘ಪಂಕ್ತಿ ಭೇದ’? ಮಠ ಮತ್ತು ದೇವಸ್ಥಾನಗಳಲ್ಲಿ ಬ್ರಾಹ್ಮಣರು ಮತ್ತು ಉಳಿದ ಜಾತಿಗಳ ನಡುವೆ ಊಟಕ್ಕಾಗಿ ಪ್ರತ್ಯೇಕ ಸಾಲುಗಳ ವ್ಯವಸ್ಥೆ ಮಾಡುವುದೇ ಪಂಕ್ತಿ (ಊಟದ […]

  October 13, 2016
  ...

  ಉಡುಪಿ ಪಂಕ್ತಿ ಭೇದಕ್ಕೆ 2 ತಿಂಗಳ ಗಡುವು: #ಚಲೋಉಡುಪಿ ಸಮಾರೋಪದಲ್ಲಿ ಜಿಗ್ನೇಶ್ ಮೇವಾನಿ

  ಉಡುಪಿಗೆ ಹರಿದು ಬಂದ ಜನಸಾಗರ, ಸಂಪೂರ್ಣ ನೀಲಿ ಮಯವಾದ ಕಡಲತಡಿಯ ಜಿಲ್ಲಾ ಕೇಂದ್ರ, ಪಂಕ್ತಿ ಭೇದಕ್ಕೆ ಎರಡು ತಿಂಗಳ ಗಡುವು ನೀಡಿದ ಜಿಗ್ನೇಶ್.. ಭೂಮಿ ಹಾಗೂ ಆಹಾರದ ಹಕ್ಕನ್ನು ಪ್ರತಿಪಾದನೆಗೆ ಸಾಕ್ಷಿಯಾದ ಸಾವಿರಾರು ಜನ…ಇದು ಭಾನುವಾರ ಉಡುಪಿ ಜಿಲ್ಲಾ ಕೇಂದ್ರದಲ್ಲಿ ಸಮಾರೋಪಗೊಂಡ ‘ಚಲೋ ಉಡುಪಿ’ ಸಮಾವೇಶದ ಹೈಲೈಟ್ಸ್. “ಉಡುಪಿ ಮಠದಲ್ಲಿ ನಡೆಯುತ್ತಿರುವ ಪಂಕ್ತಿ ಬೇಧ ನಿಲ್ಲಿಸಲು ನಾವೆಲ್ಲ 2 ತಿಂಗಳ ಗಡುವು ನೀಡೋಣ. ಒಂದೊಮ್ಮೆ ನಿಲ್ಲದಿದ್ದಲ್ಲಿ ನಾವು ಮುತ್ತಿಗೆಯನ್ನು ಹಾಕುತ್ತೇವೆ. ಜೈಲಿಗೆ ಹೋಗುವುದಕ್ಕೂ ಸೈ ಎಂದು,” ‘ಊನಾ […]

  October 10, 2016

Top