An unconventional News Portal.

ಜಮ್ಮು ಮತ್ತು ಕಾಶ್ಮೀರ
    ...
    indian-army-1
    ದೇಶ

    ದೇಶಪ್ರೇಮಿಗಳ ‘ಸೇನಾಭಿಮಾನ’: ಪ್ರತಿ ಭಾರತೀಯನೂ ಮಿಲಿಟರಿಯನ್ನೇಕೆ ಪ್ರೀತಿಸಲೇ ಬೇಕು?

    ‘ನಾವು ಮನೆಯಲ್ಲಿ ಅರಾಮಾಗಿ ಹೆಂಡತಿ ಮಕ್ಕಳ ಜತೆಯಲ್ಲಿ ಊಟ ತಿಂಡಿ ಮಾಡಿಕೊಂಡು ಮಲಗಿರುವಾಗ, ಗಡಿಯಲ್ಲಿ ಜೀವವನ್ನು ಪಣಕ್ಕಿಟ್ಟು ದೇಶವನ್ನು ಕಾಯುವವರು ಸೈನಿಕರು…’, ‘ಸೈನಿಕರು ಎಂದರೆ ಒಣ ರೊಟ್ಟಿ ತಿಂದುಕೊಂಡು, ಮೂರೊತ್ತು ಸರಿಯಾದ ಊಟವೂ ಇಲ್ಲದೆ ನಮ್ಮನ್ನು ಕಾಯುವ ಯೋಧರು…’, ‘ಸೇನೆಯ ವಿಚಾರಕ್ಕೆ ಬಂದರೆ ಎಲ್ಲವೂ ನಗಣ್ಯ…’, ‘ನೀವು ದೇಶವನ್ನು ಇಷ್ಟಪಡುವವರೇ ಆಗಿದ್ದರೆ, ಸೇನೆಯನ್ನೂ ಇಷ್ಟಪಡಬೇಕು…’ ಈ ಮೇಲಿನ ವಾಕ್ಯಗಳು, ಪದಪುಂಜಗಳು ಭಾರತದ ಪ್ರಸ್ತುತ ಸಮಯದಲ್ಲಿ ಭಾವನಾತ್ಮಕವಾಗಿ ಬಳಕೆಯಾಗುತ್ತಿವೆ. ಆದರೆ ಇಂತಹ ವಾದಗಳು ಭಾರತಕ್ಕೆ ಮಾತ್ರವೇ ಸೀಮಿತವಾಗಿಲ್ಲ. ಮತ್ತು, ಭಾವನೆಗಳ..

    April 18, 2017
    ...
    Kashmir Stone Pelters
    ದೇಶ

    ಭಾರತೀಯ ಸೇನೆ; ಕಾಶ್ಮೀರದಲ್ಲಿರುವ ಭಾರತೀಯರು: ಇವರ ನಡುವೆ ಯಾಕಿಷ್ಟು ತಿಕ್ಕಾಟ?

    ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುತ್ತಿರುವ ಉಪಚುನಾವಣೆಯನ್ನು ಅಲ್ಲಿನ ಜನ ಸರಸಗಾಟಾಗಿ ತಿರಸ್ಕರಿಸುವುದರೊಂದಿಗೆ ‘ಕಾಶ್ಮೀರ ಪ್ರತ್ಯೇಕತಾವಾದಿ ಹೋರಾಟ‘ ತೀವ್ರ ಸ್ವರೂಪ ಪಡೆದುಕೊಂಡಿರುವ ಸೂಚನೆ ಸಿಕ್ಕಿದೆ. ಇದೇ ವೇಳೆಗೆ ಉಪಚುನಾವಣೆಯಲ್ಲಿ ಸ್ಪರ್ಧಿಸಿರುವ ಕಾಶ್ಮೀರದ ವಿರೋಧ ಪಕ್ಷ ನ್ಯಾಷನಲ್ ಕಾನ್ಫರೆನ್ಸ್ 11 ಸೆಕೆಂಡುಗಳ ವಿಡಿಯೋ ತುಣುಕೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಅಂತರಾಷ್ಟ್ರೀಯ ಚರ್ಚೆಗೆ ಗ್ರಾಸವಾಗಿದೆ. Here’s the video of the Kashmiri boy tied to the front of an Army jeep and used as..

    April 15, 2017
    ...
    bsf-border-force-1
    ದೇಶ

    ಮೇಲಾಧಿಕಾರಿಗಳು v/s ಸೈನಿಕರು: ಇದು ‘ಬಾರ್ಡರ್ ಸ್ಮಗ್ಲಿಂಗ್ ಫೋರ್ಸ್’ನ ಇನ್ನೊಂದು ಮುಖ!

    ಅರೆಸೇನಾ ಪಡೆಗಳಲ್ಲಿ ಒಂದಾದ ಗಡಿ ರಕ್ಷಣಾ ಪಡೆ (ಬಿಎಸ್ಎಫ್) ಕ್ಯಾಂಪ್ಗಳಲ್ಲಿ ಅಧಿಕಾರಿಗಳು ಇಂಧನ ಮತ್ತು ಆಹಾರವನ್ನು ಸಾರ್ವಜನಿಕರಿಗೆ ಮಾರುಕಟ್ಟೆರ ಅರ್ಧ ಬೆಲೆಗೆ ಮಾರಿಕೊಳ್ಳುತ್ತಿದ್ದಾರೆ ಎಂಬ ಗಂಭೀರ ಸಂಗತಿಯನ್ನು ‘ದಿ ಎಕಾನಮಿಕ್ ಟೈಮ್ಸ್’ ವರದಿ ಮಾಡಿದೆ. ಶ್ರೀನಗರ ವಿಮಾನ ನಿಲ್ದಾಣ ಸಮೀಪದ ಹುಮ್ಹಾಮಾ ಬಿಎಸ್ಎಫ್ ಕೇಂದ್ರ ಕಚೇರಿಯ ಪಕ್ಕದಲ್ಲಿರುವ ಅಂಗಡಿಗಳ ಮಾಲಿಕರು ಪೆಟ್ರೋಲ್ ಮತ್ತು ಡೀಸೆಲ್ ಫಲಾನುಭವಿಗಳಾಗಿದ್ದಾರೆ. ಇದೇ ರೀತಿ ಆಹಾರಗಳನ್ನೂ ಮಾರುತ್ತಾರೆ ಎಂದು ಓರ್ವ ಜವಾನ ಹಾಗೂ ನಾಗರಿಕರು ಹೇಳಿರುವುದಾಗಿ ಪತ್ರಿಕೆ ವರದಿ ಮಾಡಿದೆ. “ಅವರು (ಬಿಎಸ್ಎಫ್..

    January 11, 2017
    ...
    Indian Army soldier
    ದೇಶ

    ಜಮ್ಮು- ಕಾಶ್ಮೀರದಲ್ಲೇಕೆ ಪದೇ ಪದೇ ಸೇನಾ ನೆಲೆಗಳ ಮೇಲೆ ದಾಳಿ ನಡೆಯುತ್ತಿದೆ?

    ಭಾರತೀಯ ಸೇನಾ ನೆಲೆಯ ಮೇಲೆ ಮಂಗಳವಾರ ಮುಂಜಾನೆ ಮತ್ತೊಂದು ದಾಳಿ ನಡೆದಿದೆ. ಜಮ್ಮು ಮತ್ತು ಕಾಶ್ಮೀರದ ನಾಗ್ರೋಟಾದಲ್ಲಿರುವ ಸೇನಾ ಘಟಕದ ಮೇಲೆ ನಡೆದ ಈ ದಾಳಿಯಲ್ಲಿ ಇಬ್ಬರು ಸೈನಿಕರು ಸಾವನ್ನಪ್ಪಿದ್ದಾರೆ; ಇಬ್ಬರು ಗಾಯಗೊಂಡಿದ್ದಾರೆ.  ಸದ್ಯ ಸೇನೆ ಮತ್ತು ಭಯೋತ್ಪಾದಕರ ಮಧ್ಯೆ ಗುಂಡಿನ ಚಕಮಕಿ ಮುಂದುವರಿದಿದೆ. ಸೇನಾ ನೆಲೆಯಲ್ಲಿ 2-3 ಉಗ್ರರು ಅಡಗಿಕೊಂಡಿರಬಹುದು ಎಂದು ವರದಿಗಳು ಹೇಳುತ್ತಿದೆ. 2016ರಿಂದೀಚೆಗೆ ಸುರಕ್ಷತಾ ಪಡೆಗಳ ಮೇಲೆ ನಡೆಯುತ್ತಿರುವ 6ನೇ ಭಯೋತ್ಪಾದಕ ಕೃತ್ಯ ಇದಾಗಿದೆ. ಸಂಘರ್ಷದ ನಾಡು ಜಮ್ಮು ಮತ್ತು ಕಾಶ್ಮೀರ: ಭಾರತ..

    November 29, 2016
    ...
    modi and T S Thakur
    ದೇಶ

    ‘ನ್ಯಾಯಾಂಗ ನೇಮಕಾತಿಯಲ್ಲಿ RSS ಹಸ್ತಕ್ಷೇಪ’: ನ್ಯಾ. ಠಾಕೂರ್ ನಿವೃತ್ತಿಯ ನಿರೀಕ್ಷೆಯಲ್ಲಿ ‘ಮೋದಿ ಸರಕಾರ’!

    “ಸುಪ್ರಿಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆ) ತೀರಥ್ ಸಿಂಗ್ ಠಾಕೂರ್ ನಿವೃತ್ತಿಗಾಗಿ ಕೇಂದ್ರ ಸರಕಾರ ಕಾಯುತ್ತಿದೆ.” – ಹೀಗಂತ ಹಿರಿಯ ವಕೀಲ ಬಿ.ಟಿ. ವೆಂಕಟೇಶ್ ಗಂಭೀರ ಆರೋಪ ಮಾಡಿದ್ದಾರೆ. ನ್ಯಾಯಮೂರ್ತಿಗಳ ನೇಮಕದಲ್ಲಿ ವಿಳಂಬವಾಗುತ್ತಿದೆ ಎಂಬ ಸಿಜೆ ಆರೋಪಕ್ಕೆ ಸಂಬಂಧಪಟ್ಟಂತೆ ‘ಸಮಾಚಾರ’ದ ಜತೆ ಮಾತನಾಡಿದ ಅವರು ಕೇಂದ್ರ ಸರಕಾರದ ಮೇಲೆ ಈ ಆರೋಪ ಹೊರಿಸಿದ್ದಾರೆ. ಬಿ. ಟಿ. ವೆಂಕಟೇಶ್ ಕರ್ನಾಟಕದ ಹೈ ಕೋರ್ಟ್ನ ಹಿರಿಯ ವಕೀಲರು. “ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ, ಸುಪ್ರಿಂ ಕೋರ್ಟ್ ಸೇರಿದಂತೆ ನ್ಯಾಯಾಲಯಗಳಿಗೆ..

    November 2, 2016
    ...
    ಮಗನ ಸಾವಿನ ವೇದನೆಯ್ಲಿ ಜುನೈದ್ ತಾಯಿ
    ಸುದ್ದಿ ಸಾರ

    ‘ಕಾಶ್ಮೀರ ಸಂಘರ್ಷ’ಕ್ಕೆ 4 ತಿಂಗಳು: ಕಣಿವೆ ರಾಜ್ಯದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ

    13 ವರ್ಷದ ಬಾಲಕನ ಸಾವಿನೊಂದಿಗೆ ಕಾಶ್ಮೀರದಲ್ಲಿ ಹಿಂಸಾಚಾರ ಮತ್ತೆ ಭುಗಿಲೆದ್ದಿದೆ. ಶುಕ್ರವಾರ ನಡೆದ ಹಿಂಸಾಚಾರದಲ್ಲಿ ಪೆಲ್ಲೆಟ್ ಗನ್ ದಾಳಿಯಿಂದ ಶ್ರೀನಗರದ ಸೈದ್ಪುರ ಪ್ರದೇಶದ ನಿವಾಸಿ ಜುನೈದ್ ಅಹ್ಮದ್ ಭಟ್ ಗಂಭೀರ ಗಾಯಗೊಂಡಿದ್ದ. ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮುಂಜಾನೆ ಬಾಲಕ ಮೃತನಾಗಿದ್ದು ಮತ್ತೆ ಪ್ರತಿಭಟನೆಗಳು ತಾರಕಕ್ಕೇರಿವೆ. ಜುನೈದ್ ಸಾವಿನೊಂದಿಗೆ ಕಳೆದು ಮೂರು ತಿಂಗಳಿನಿಂದ ಕಾಶ್ಮೀರದಲ್ಲಿ ನಡೆಯುತ್ತಿರುವ ಸಂಘರ್ಷಕ್ಕೆ ಬಲಿಯಾದವರ ಸಂಖ್ಯೆ 91ಕ್ಕೆ ಏರಿಕೆಯಾಗಿದೆ. ಶುಕ್ರವಾರದಂದು ಪುಲ್ವಾಮ, ಶೋಪಿಯಾನ್ ಮತ್ತು ಉತ್ತರ..

    October 8, 2016
    ...
    kashmir-1
    ದೇಶ

    ‘ಹತ್ಯೆ ಮೂಡಿಸಿದ ಕಂಪನ’: ಶ್ರೀನಗರದಿಂದ ಆರ್ಮಿ ಎಂಜಿನಿಯರ್; ಚಿಕ್ಕಮಗಳೂರು ರಘು ನೀಡದ ‘ನೇರ ಪ್ರಸಾರ’!

    ಪ್ರಶಾಂತವಾಗಿದೆ; ಕಣಿವೆ ರಾಜ್ಯದಲ್ಲಿ ಕೇಸರಿ ಪಕ್ಷವೊಂದು ವಿಧಾನಸಭೆ ಪ್ರವೇಶಿಸುವ ಮೂಲಕ ಇತಿಹಾಸದ ಹೆಜ್ಜೆಗಳು ಮರೆತು ಹೋಗಿವೆ; ಜನ ಪ್ರತ್ಯೇಕ ರಾಷ್ಟ್ರದ ಪರಿಕಲ್ಪನೆಯನ್ನು ಬದಿಗಿಟ್ಟು ಭಾರತೀಯರಾಗಿದ್ದಾರೆ; ದೇಶಭಕ್ತಿ ಅಲ್ಲಿಯೂ ಚಿಮ್ಮುತ್ತಿದೆ; ಪ್ರಧಾನಿ ನರೇಂದ್ರ ಮೋದಿ ಪ್ರಭಾವ ಜಮ್ಮು ಮತ್ತು ಕಾಶ್ಮೀರವನ್ನು ವ್ಯಾಪಿಸಿದೆ; ಕಳೆದ ಎಂಟು ವರ್ಷಗಳಿಂದ ಒಂದೇ ಒಂದು ಕಾಶ್ಮೀರಿ ಪಂಡಿತರ ಮನೆಗಳ ಮೇಲೆ ದಾಳಿ ನಡೆದಿಲ್ಲ;…. ಹೀಗೆ ಸಾಲು ಸಾಲು ಶುಭ ಸೂಚಕ ಸುದ್ದಿಗಳನ್ನು ಓದಿಕೊಂಡು, ನೋಡಿಕೊಂಡು ಬಂದವರಿಗೆ ಕಳೆದ 96 ಗಂಟೆಗಳ ರಾಷ್ಟ್ರೀಯ ಬೆಳವಣಿಗೆಗಳು ಬೆಚ್ಚಿ ಬೀಳಿಸಿವೆ. ಭಾರತ ಎಂಬ ‘ಅಖಂಡ..

    July 12, 2016
    ...
    Slain-Burhan
    ದೇಶ

    ವನಿ ಎಂಬ 21ರ ತರುಣ: ನಮ್ಮ ಪಾಲಿನ ಈ ಭಯೋತ್ಪಾದಕ ಕಾಶ್ಮೀರಿಗಳ ಕಣ್ಣಲ್ಲಿ ಹೀರೊ ಆಗಿದ್ದೇಕೆ?

      ಜುಲೈ 8, 2016.. ಬೆಳಗ್ಗೆ 4. 30ರ ನಸುಕನ ವೇಳೆಯಲ್ಲಿ ಕಾಶ್ಮೀರಾದ ಆ ಪುಟ್ಟ ಹಳ್ಳಿಯ ಮಿಲಿಟರಿ ಪಡೆಗಳಿಂದ ಸುತ್ತುವರಿದಿತ್ತು. ಹಿಜ್ಬುಲ್ ಮುಜಾಹಿದೀನ್ ಸಂಘಟನೆಯ ಕಮಾಂಡರ್ ಬುರ್ಹಾನ್ ವನಿ ಹಾಗೂ ಆತನ ಸಹಚರರ ಚಹರೆಗಳನ್ನು ಮಿಲಿಟರಿ ಬಂದೂಕುಗಳು ಹುಡುಕಲು ಶುರುಮಾಡಿದವು. ಊರಿನ ಜನ ಕೈಲಿ ಕಲ್ಲುಗಳನ್ನು ಹಿಡಿದುಕೊಂಡು ಸೇನೆಯ ವಿರುದ್ಧ ಅಖಾಡಕ್ಕೆ ಇಳಿದರು. ಎರಡೂವರೆ ಗಂಟೆಗಳ ಈ ಕಾರ್ಯಚರಣೆ, ಅದಕ್ಕೆ ಸ್ಥಳೀಯ ವಿರೋಧ, ಕೊನೆಯಲ್ಲಿ ಮೂರು ಹೆಣಗಳು. ಅದರಲ್ಲಿ ಒಂದು ವನಿಯದ್ದು. ಆತನ ವಯಸ್ಸು ಕೇವಲ..

    July 11, 2016
    ...
    CURFEW IN SRINAGAR
    ದೇಶ

    72 ಗಂಟೆಗಳಲ್ಲಿ 22 ಬಲಿ: ಕಾಶ್ಮೀರಾದಲ್ಲಿ ಮುಂದುವರಿದ ಜನ- ಸೇನೆ ಮುಖಾಮುಖಿ

    ಕಣಿವೆ ರಾಜ್ಯದಲ್ಲಿ ಭುಗಿಲೆದ್ದ ಹಿಂಸಾಚಾರ 72 ಗಂಟೆಗಳು ಕಳೆದ ನಂತರವೂ ನಿಲ್ಲುವ ಲಕ್ಷಣಗಳು ಕಾಣಿಸುತ್ತಿಲ್ಲ. ಮೂರನೇ ದಿನವಾದ ಸೋಮವಾರವೂ ಪ್ರತಿಭಟನಾಕಾರರು ಮತ್ತು ರಕ್ಷಣಾ ಪಡೆಗಳ ನಡುವೆ ಘರ್ಷಣೆ ಮುಂದುವರಿದಿದೆ. ಈವರೆಗೆ ಸತ್ತವರ ಸಂಖ್ಯೆ 22ಕ್ಕೆ ಏರಿಕೆಯಾಗಿದೆ. ರಾಜ್ಯದ ವಿವಿಧ ಪ್ರದೇಶಗಳಲ್ಲಿ ಹೇರಿದ್ದ ಕರ್ಫ್ಯೂ ರೀತಿಯ ನಿರ್ಬಂಧವ್ನು ಅನಿರ್ಧಿಷ್ಟಾವಧಿಗೆ ಮುಂದೂಡಲಾಗಿದೆ. ಶನಿವಾರ ಹಿಂಸಾಚಾರಕ್ಕೆ ಒಟ್ಟು 12 ಜನ ಸಾವನ್ನಪ್ಪಿದ್ದರೆ, ಭಾನುವಾರ ಬೆಳಗ್ಗೆಯಿಂದ ಇಲ್ಲೀವರಗೆ 10 ಜನ ಅಸುನೀಗಿದ್ದಾರೆ. ಸಾವಿಗೀಡಾದವರಲ್ಲಿ ಓರ್ವ ಪೊಲೀಸ್ ಅಧಿಕಾರಿಯೂ ಸೇರಿದ್ದಾರೆ. ಗುಂಪೊಂದು ಪೊಲೀಸ್ ಅಧಿಕಾರಿಯನ್ನು ಕೊಲೆ ಮಾಡಿದ್ದರೆ, ಉಳಿದವರೆಲ್ಲ ಸೇನೆಯ..

    July 11, 2016

Top