An unconventional News Portal.

ಜಪಾನ್
    ...
    modi-japan-bullet-train
    ದೇಶ

    ಜಪಾನ್‌ ಯಾಕೆ ಬುಲೆಟ್‌ ರೈಲು ಯೋಜನೆಗೆ ಭಾರತದಲ್ಲಿ ಲಕ್ಷ ಕೋಟಿಗಳ ಹೂಡಿಕೆ ಮಾಡುತ್ತಿದೆ?

    ಇದು ಭಾರತ- ಜಪಾನ್‌ ಭಾಯಿ ಭಾಯಿ ಅನ್ನೋ ಕಾಲ. ಕಳೆದ 6 ವರ್ಷಗಳ ಅಂತರದಲ್ಲಿ ಭಾರತ ಮತ್ತು ಜಪಾನ್ ನಡುವೆ ಆರಂಭಗೊಂಡ ಹೊಸ ಆರ್ಥಿಕ ಸಂಬಂಧ ಇವತ್ತು ನಿರ್ಣಾಯಕ ಹಂತಕ್ಕೆ ಬಂದು ನಿಂತಿದೆ. ಭಾರತದಲ್ಲಿ ನಡೆಯುತ್ತಿರುವ ಮೆಟ್ರೊ ರೈಲು ಯೋಜನೆಯಿಂದ ಆರಂಭಗೊಂಡು, ಮಹಾನಗರಗಳ ನೀರು ಸರಬರಾಜು, ಒಳಚರಂಡಿ ವ್ಯವಸ್ಥೆವರೆಗೆ ಜಪಾನ್‌ ಹಣ ಹರಿದು ಬಂದಿದೆ. ಇದೀಗ ಗುಜರಾತಿನ ಅಹ್ಮದಾಬಾದ್‌ ಮತ್ತು ಮುಂಬೈ ನಡುವೆ ಬುಲೆಟ್‌ ರೈಲು ಯೋಜನೆಗೆ ದೀರ್ಘಾವಧಿ ಸಾಲವನ್ನು ನೀಡಲು ಜಪಾನ್ ಮುಂದೆ ಬಂದಿದೆ. ಹೀಗೆ,..

    September 14, 2017
    ...
    north-koria-1
    ವಿದೇಶ

    ‘ಬಾಂಬ್ ಸಮಾಚಾರ’: ಉತ್ತರ ಕೊರಿಯದ ‘ಪ್ರಬಲ ಕಂಪನ’ ಮೂರನೇ ಮಹಾಯುದ್ಧಕ್ಕೆ ನಾಂದಿ ಹಾಡುತ್ತಾ?

    ಯುದ್ಧವನ್ನು ಮೈಮೇಲೆ ಎಳೆದುಕೊಂಡಿರುವ ಅಣ್ಣ; ಅದನ್ನು ಪಕ್ಕದಲ್ಲಿ ಆತಂಕದಿಂದಲೇ ಗಮನಿಸುತ್ತಿರುವ, ಅದೇ ವೇಳೆ ಏನೂ ಸಮಸ್ಯೆಯಾಗಲ್ಲ ಎಂಬ ಭರವಸೆಯನ್ನು ಉಳಿಸಿಕೊಂಡಿರುವ ತಮ್ಮ. ಇದು ಎರಡನೇ ಮಹಾಯುದ್ಧದ ಸಮಯದಲ್ಲಿ ಬೇರ್ಪಡೆಗೊಂಡ, ಇವತ್ತು ಒಂದಾಗುವ ಮುಂಚೆಯೇ ಮೂರನೇ ವಿಶ್ವಯುದ್ಧ ಆರಂಭಕ್ಕೆ ನಾಂದಿ ಹಾಡಲು ಹೊರಟು ನಿಂತಿರುವ ಎರಡು ಅವಳಿ ದೇಶಗಳ ಕತೆ. ಒಂದು ನಾರ್ತ್ ಕೊರಿಯಾ/ ಉತ್ತರ ಕೊರಿಯ ಎಂದು ಜನಪ್ರಿಯವಾಗಿ ಗುರುತಿಸುವ ಡೆಮಾಕ್ರಟಿಕ್ ಪೀಪಲ್ ರಿಪಬ್ಲಿಕ್ ಆಫ್ ಕೊರಿಯ. ಮತ್ತೊಂದು ದಕ್ಷಿಣ ಕೊರಿಯ ಅಥವಾ ಅಧಿಕೃತ ಹೆಸರು ರಿಪಬ್ಲಿಕ್..

    September 5, 2017
    ...
    team-indus-rover
    ರಾಜ್ಯ

    ಚಂದ್ರನ ಮೇಲೊಂದು ‘ರೋವರ್’ ರೇಸ್; ‘ಇಸ್ರೋ’ ಸಹಾಯದಿಂದ ಬೆಂಗಳೂರು ಟೀಮ್ ಗೆಲ್ಲುತ್ತಾ 204 ಕೋಟಿ?

    (ಬೆಂಗಳೂರಿನ ‘ಟೀಮ್ಇಂಡಸ್’ ಸಂಸ್ಥೆಯ ‘ಈಕಾ’ ರೋವರ್ ಹೀಗಿರಲಿದೆ) ಗೂಗಲ್ ಪ್ರಾಯೋಜಕತ್ವದ ಸ್ಪರ್ಧೆಯೊಂದು ಚಂದ್ರನ ಮೇಲ್ಮೈ ಮೇಲೆ ಆಯೋಜನೆಯಾಗಿದೆ. ಇದರ ಹೆಸರು ‘ಲೂನಾರ್ ಎಕ್ಸ್’. ಇದು ಅಂತಿಂಥ ಆಟವಲ್ಲ. ಇಲ್ಲಿ ಗೆದ್ದವರು ಬರೋಬ್ಬರಿ 204 ಕೋಟಿ ರೂಪಾಯಿ ಜೇಬಿಗಿಳಿಸಲಿದ್ದಾರೆ. ವಿಶ್ವ ಹಿಂದೆಂದೂ ಕಂಡಿರದ ವಿಜ್ಞಾನದ ಬೃಹತ್ ಸ್ಪರ್ಧೆಯಿದು. ನೀವು ‘ಲೂನಾರ್ ಎಕ್ಸ್’ ಪ್ರಶಸ್ತಿ ಪಡೆಯಬೇಕಾ? ಮಾಡಬೇಕಾಗಿದ್ದು ಇಷ್ಟೆ. ರೋವರ್ ಒಂದನ್ನು ಚಂದ್ರನ ಮೇಲೆ ಇಳಿಸಿ, 500 ಮೀಟರ್ ಚಲಿಸುವಂತೆ ಮಾಡಬೇಕು. ನಂತರ ಅಲ್ಲಿಂದ ಎಚ್.ಡಿ ಕ್ವಾಲಿಟಿಯ ಚಿತ್ರಗಳನ್ನ ಭೂಮಿಗೆ ರವಾನಿಸಬೇಕು…

    December 28, 2016
    ...
    Japana Tsunami
    ಸುದ್ದಿ ಸಾರ

    ‘ಇದು ಜಪಾನ್ ವಿಶೇಷ’: ಭಾರಿ ಭೂಕಂಪ, ಸುನಾಮಿಗೂ ಅಲ್ಲಾಡದ ಪುಟ್ಟ ದೇಶ

    ಮಂಗಳವಾರ ಮುಂಜಾನೆ ರಿಕ್ಟರ್ ಮಾಪಕದಲ್ಲಿ 7.4 ತೀವ್ರತೆಯ ಭೂಕಂಪ ಉತ್ತರ ಜಪಾನಿನಲ್ಲಿ ಸಂಭವಿಸಿದೆ. ಪರಿಣಾಮ ಪೆಸಿಫಿಕ್ ಮಹಾಸಾಗರಕ್ಕೆ ಹೊಂದಿಕೊಂಡ ಕರಾವಳಿಯಲ್ಲಿ 1 ಮೀಟರ್ ಎತ್ತರದ ಸುನಾಮಿ ಅಲೆಗಳು ಎದ್ದಿವೆ. ಹೀಗಿದ್ದರೂ ಯಾವುದೇ ಜೀವಹಾನಿಯ ವರದಿಯಾಗಿಲ್ಲ; ಇದು ಜಪಾನ್ ವಿಶೇಷ. ಮಾರ್ಚ್ 2011ರಲ್ಲಿ ಜಪಾನಿನಲ್ಲಿ ಭೀಕರ ಭೂಕಂಪ ಸಂಭವಿಸಿತ್ತು. ರಿಕ್ಟರ್ ಮಾಪಕದಲ್ಲಿ 9 ತೀವ್ರತೆಯ ಭೂಕಂಪಕ್ಕೆ ಭಾರೀ ಸುನಾಮಿ ಅಲೆಗಳು ಎದ್ದು ಅಪಾರ ಜೀವ ಆಸ್ತಿ-ಪಾಸ್ತಿ ಹಾನಿ ಸಂಭವಿಸಿತ್ತು. ಅದೇ ಭೂಕಂಪದ ನಂತರ ನಿರಂತರ ಕಂಪನಗಳು ಜಪಾನಿನಲ್ಲಿ ಸಂಭವಿಸುತ್ತಿವೆ,..

    November 22, 2016
    ...
    north-korea-nuclear
    ವಿದೇಶ

    ಸರ್ವಾಧಿಕಾರಿ ಕೈಯಲ್ಲಿ ಬ್ರಹ್ಮಾಸ್ತ್ರ: ಅಣ್ವಸ್ತ್ರ ದೇಶಗಳ ಸಾಲಿನಲ್ಲಿ ಉತ್ತರ ಕೊರಿಯಾ; ಜಾಗತಿಕ ಆತಂಕ

    ಮನುಕುಲದ ವಿರೋಧಿ ಅಣ್ವಸ್ತ್ರಗಳನ್ನು ಹೊಂದಿರುವ ದೇಶಗಳ ಸಾಲಿಗೆ ಉತ್ತರ ಕೊರಿಯಾ ಹೊಸದಾಗಿ ಸೇರ್ಪಡೆಯಾಗಿದೆ. ‘ಅಣ್ವಸ್ತ್ರ ಸಿಡಿತಲೆಯ ಪರೀಕ್ಷೆ ಯಶಸ್ವಿಯಾಗಿದೆ’ ಎಂದು ಉತ್ತರ ಕೊರಿಯಾದ ಸರಕಾರಿ ವಾಹಿನಿ ಶುಕ್ರವಾರ ವರದಿ ಮಾಡಿದ್ದು, ಜಗತ್ತಿನಾದ್ಯಂತ ಆತಂಕ ಸೃಷ್ಟಿಸಿದೆ. ಶುಕ್ರವಾರ ದಕ್ಷಿಣ ಕೊರಿಯಾದ ಉತ್ತರ ಭಾಗದಲ್ಲಿ 5.3 ತೀವ್ರತೆಯ ಭೂ ಕಂಪನ ಸಂಭವಿಸಿದ್ದು ರಿಕ್ಟರ್ ಮಾಪಕದಲ್ಲಿ ದಾಖಲಾಗಿದೆ. ಇದೇ ರೀತಿಯ ಭೂಮಿ ಕಂಪಿಸಿದ ವಾರ್ತೆಗಳು ಅಮೆರಿಕಾದ ಭೂಗರ್ಭ ಇಲಾಖೆ ಮತ್ತು ಜಪಾನಿನ ಭೂಕಂಪ ಮತ್ತು ಸುನಾಮಿ ಪರಿವೀಕ್ಷಣಾ ಕೇಂದ್ರಗಳಿಗೂ ತಲುಪಿದೆ. ಭಾರಿ ಬಾಂಬ್ ಸ್ಪೋಟ..

    September 10, 2016
    ...
    japan attack
    ಮೀಡಿಯಾ 2.0

    ‘ಜಪಾನ್ & ಕ್ರೈಮ್’: ಇದು ಸುದ್ದಿಯಾದವರ ಪಾಲಿಗೆ ಸುದ್ದಿಯಾಗದ ಸುದ್ದಿ!

    ಮಂಗಳವಾರ ಜಪಾನಿನಲ್ಲಿ ಚಾಕು ಹಾಕಿ 19 ಜನರನ್ನು ಕೊಲೆ ಮಾಡಿದ ಸುದ್ದಿ ಸರಿಸುಮಾರು ಜಗತ್ತಿನ ಎಲ್ಲಾ ಮಾಧ್ಯಮಗಳಲ್ಲೂ ಮುಖ್ಯ ಸುದ್ದಿಯಾಗಿ ಜಾಗ ಆಕ್ರಮಿಸಿಕೊಂಡಿತ್ತು. ವಿದೇಶಗಳಿಗೆಲ್ಲಾ ಸುದ್ದಿ ನೀಡಿದ ಜಪಾನಿಗೆ ಮಾತ್ರ ಅದು ಮುಖ್ಯ ಸುದ್ದಿಯಾಗಿರಲೇ ಇಲ್ಲ. ವಿಶ್ವದ ಮುಂಚೂಣಿ ಆರ್ಥಿಕ ಶಕ್ತಿ; ವಿಶಿಷ್ಟ ಸಂಸ್ಕೃತಿ, ಶಿಸ್ತು ಬದ್ಧ ಜೀವನ ಶೈಲಿ ಹೊಂದಿರುವ ಜಪಾನಿನ ಅಪರಾಧ ಲೋಕವೇ ಭಿನ್ನ. ಇಲ್ಲಿನ ಮಾಧ್ಯಮಗಳು, ಜನರು, ಇವರೆಲ್ಲರಿಗೂ ಅಪರಾಧಗಳೆಂದರೆ ಅಸಡ್ಡೆ. ಜಪಾನಿನ ವಿಶಿಷ್ಟ ಅಪರಾಧ ಲೋಕದ ಕಥೆಯನ್ನು ‘ಸಮಾಚಾರ’ ವಿಭಿನ್ನವಾಗಿ ನಿಮ್ಮ..

    July 26, 2016
    ...
    bookbed-6
    ಸಮಾಚಾರ +

    ಪುಸ್ತಕ, ಓದು ಮತ್ತು ನಿದ್ದೆ: ಭಿನ್ನ ಆಲೋಚನೆಗಳಿಗೆ ಹೀಗೆಲ್ಲಾ ಹುಟ್ಟಿಕೊಳ್ಳುತ್ತವೆ!

    ಓದುವ ಹವ್ಯಾಸಕ್ಕೂ, ನಿದ್ದೆಗೂ ಅದೆಲ್ಲಿಂದ ಸಂಬಂಧವೊಂದು ಬೆಳೆದು ಬಂತೋ ಗೊತ್ತಿಲ್ಲ. ರಾತ್ರಿ ಮಲಗಿ ತಕ್ಷಣ ನಿದ್ದೆ ಬರುತ್ತಿಲ್ಲ ಎಂದರೆ, ಕೈಲೊಂದು ಪುಸ್ತಕ ಹಿಡಿದುಕೊಂಡು ಕೆಲ ಕಾಲ ಕಣ್ಣಾಡಿಸಿ. ತೂಕಡಿಕೆ ಬರುತ್ತೆ ಅನ್ನೋದನ್ನು ಮನಶಾಸ್ತ್ರಜ್ಞರೂ ಹೇಳುತ್ತಾರೆ. ಇದನ್ನು ಆಧಾರವಾಗಿಟ್ಟುಕೊಂಡೇ, ಜಪಾನ್ ದೇಶದ ಟೋಕಿಯೋದಲ್ಲಿ ಹೋಟೆಲ್ ಒಂದನ್ನು ವಿನ್ಯಾಸಗೊಳಿಸಲಾಗಿದೆ. ಇದು ಹೋಟೆಲ್ ಅನ್ನೋದಕ್ಕಿಂತ, ಮೇಲ್ನೋಟಕ್ಕೆ ಗ್ರಂಥಾಲಯದ ಹಾಗೆ ಕಾಣಿಸುತ್ತದೆ. ಸುಮಾರು 3000 ಜಪಾನಿ ಹಾಗೂ ಇಂಗ್ಲಿಷ್ ಪುಸ್ತಕಗಳನ್ನು ಇಲ್ಲಿ ನೀಟಾಗಿ ಜೋಡಿಸಿ ಇಡಲಾಗಿದೆ. ಇಲ್ಲಿಗೆ ಬರುವ ಗಿರಾಕಿಗಳಿಗೆ ಒಂದು ರಾತ್ರಿ ಕಳೆಯಲು ಜಪಾನಿ..

    April 27, 2016

Top