An unconventional News Portal.

ಜನಾರ್ಧನ ರೆಡ್ಡಿ
    ...
    janashri-reddy-final
    ಟಿವಿ

    ‘ಸಂಬಳ ಕೊಡಿ; ಇಲ್ಲವೇ ಪ್ರತಿಭಟನೆ ಎದುರಿಸಿ’: ಜನಾರ್ಧನ ರೆಡ್ಡಿಗೆ ‘ಜನಶ್ರೀ’ ಸಿಬ್ಬಂದಿ ಡೆಡ್‌ಲೈನ್

    ‘ಸಂಬಳ ಕೊಡಿ; ಇಲ್ಲವೇ ಪ್ರತಿಭಟನೆ ಎದುರಿಸಿ…’  ಇದು ಬೆಂಗಳೂರಿನ ಕೋರಮಂಗಲದಲ್ಲಿರುವ ‘ಜನಶ್ರೀ ನ್ಯೂಸ್‌’ ಕಚೇರಿಯಲ್ಲಿ ನಿನ್ನೆಯಿಂದ ಪ್ರತಿಭಟನೆ ಆರಂಭಿಸಿರುವ 123 ಸಿಬ್ಬಂದಿಗಳು ಹಾಗೂ ಪತ್ರಕರ್ತರು ನೀಡಿರುವ ಕೊನೆಯ ಎಚ್ಚರಿಕೆ. ಬಿಜೆಪಿ ನಾಯಕ, ಮಾಜಿ ಸಚಿವ, ಅಕ್ರಮ ಗಣಿ ಹಗರಣದ ಪ್ರಮುಖ ಆರೋಪಿ ಜನಾಧರ್ನ ರೆಡ್ಡಿ ಮಾಲೀಕತ್ವದ ಸುದ್ದಿ ವಾಹಿನಿಯಲ್ಲಿ ಸಂಬಳ ಇಲ್ಲದೆ ಸಿಬ್ಬಂದಿಗಳು ಹಾಗೂ ಪತ್ರಕರ್ತರು ಪರದಾಡುತ್ತಿರುವ ಸ್ಥಿತಿಯನ್ನು ‘ಸಮಾಚಾರ’ ನಿಮ್ಮೆದುರಿಗೆ ಇಟ್ಟಿತ್ತು. ಇದರ ಮುಂದುವರಿದ ಬೆಳವಣಿಗೆಯಲ್ಲಿ, ಗಾಂಧಿ ಜಯಂತಿಯ ದಿನ, ಅಕ್ಟೋಬರ್‌ 2ರಿಂದ ಸುದ್ದಿ ಪ್ರಸಾರವನ್ನು ಸ್ಥಗಿತಗೊಳಿಸಿ..

    October 3, 2017
    ...
    reddy-janashri-letter-final
    ಟಿವಿ

    ಸಂಭ್ರಮದಿಂದ ದಸರಾ ಆಚರಣೆ: ಸಂಬಳ ಸಿಗದೆ ‘ಜನಶ್ರೀ’ ಸಿಬ್ಬಂದಿಯ ಬದುಕು- ಬವಣೆ!

    ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿರುವ ರಾಜ್ಯದಲ್ಲಿ ಹೊಸ ಸುದ್ದಿ ವಾಹಿನಿಗಳ ಆರಂಭಕ್ಕೆ ಭರ್ಜರಿ ತಯಾರಿಗಳು ನಡೆಯುತ್ತಿವೆ. ಅದೇ ವೇಳೆ ‘ಆರು ತಿಂಗಳಿನಿಂದ ಸಂಬಳ ಆಗಿಲ್ಲ’ ಎಂದು ಬಿಜೆಪಿ ನಾಯಕರೊಬ್ಬರು ಮಾಲೀಕರಾಗಿರುವ ಸುದ್ದಿವಾಹಿನಿಯಲ್ಲಿ ಕೆಲಸ ಮಾಡುತ್ತಿರುವ ಪತ್ರಕರ್ತರು, ಸಿಬ್ಬಂದಿಗಳು ಅಳಲು ತೋಡಿಕೊಳ್ಳುತ್ತಿದ್ದಾರೆ. ಈ ಸಂಬಂಧ ಅವರುಗಳು ಬರೆದ ಎರಡು ಪ್ರತ್ಯೇಕ ಪತ್ರಗಳು ‘ಸಮಾಚಾರ’ಕ್ಕೆ ಲಭ್ಯವಾಗಿವೆ. ಒಂದು ಪತ್ರ ಕೈಬರಹದಲ್ಲಿದ್ದು, ಎರಡು ಪುಟಗಳಲ್ಲಿ ವಾಹಿನಿಯಲ್ಲಿ ಕೆಲಸ ಮಾಡುತ್ತಿರುವ ಪತ್ರಕರ್ತರ ಆರ್ಥಿಕ ಸಂಕಷ್ಟಗಳನ್ನು ವಿವರಿಸುತ್ತದೆ. ಮತ್ತೊಂದು ಪತ್ರದಲ್ಲಿ ಪ್ರತಿಭಟನೆಯ ದಾರಿ ತುಳಿಯುವ ಮುನ್ಸೂಚನೆ..

    September 23, 2017
    ...
    janashri-vajipeyi-reddy-final
    ಟಿವಿ

    ಗಣಿ ಧಣಿಯ ಜನಮನದಲ್ಲಿ ‘ಬ್ಲಾಕ್ ಮೇಲ್’ ಅಬ್ಬರ: ಜನಶ್ರೀ ಸಿಇಓ ಬಂಧನದ ಸುತ್ತ…

    ಕನ್ನಡದ ಸುದ್ದಿ ವಾಹಿನಿಗಳ ಪಾಲಿಗೆ ಇದೊಂದು ಬಾಕಿ ಇತ್ತು. ಇಷ್ಟು ದಿನ ತೆರೆಮರೆಯಲ್ಲಿ ನಡೆಯುತ್ತಿದ್ದ ಕೆಲವು ಪತ್ರಕರ್ತರ ಹಾಗೂ ವಾಹಿನಿಗಳ ‘ಬ್ಲಾಕ್‌ ಮೇಲ್‌’ ದಂಧೆಗೆ ಈ ಅಧಿಕೃತ ಮುದ್ರೆ ಬಿದ್ದಿದೆ. ಜನಶ್ರೀ ಸುದ್ದಿವಾಹಿನಿಯ ಸಿಇಓ ಲಕ್ಷ್ಮೀಪ್ರಸಾದ್ ವಾಜಪೇಯಿ ಬಂಧನವಾಗಿದೆ. ಕೋರಮಂಗಲ ಪೊಲೀಸರು ಆತ ಸೇರಿದಂತೆ ಇಬ್ಬರನ್ನು ಶುಕ್ರವಾರ ರಾತ್ರಿ ಚಾನಲ್‌ ಕಚೇರಿಯಲ್ಲಿಯೇ ವಶಕ್ಕೆ ಪಡೆದಿದ್ದಾರೆ. ಈ ಮೂಲಕ ದಿನದಿಂದ ದಿನಕ್ಕೆ ನೈತಿಕವಾಗಿ ಅಧಃಪತನಗೊಳ್ಳುತ್ತಿರುವ ಸುದ್ದಿ ವಾಹಿನಿಗಳ ಅಂತರಾಳದ ದರ್ಶನವಾದಂತಾಗಿದೆ. ಏನಿದು ಬೆಳವಣಿಗೆ?:  ಜನಶ್ರೀ ವಾಹಿನಿ ಅತ್ಯಂತ ಕೆಟ್ಟ..

    April 15, 2017
    ...
    janashri-news-kannada-1
    ಟಿವಿ

    ಕನ್ನಡದ ವಾಹಿನಿಗಳಲ್ಲಿ ವಲಸೆ, ಸ್ಥಾನ ಪಲ್ಲಟ: ಜನಶ್ರೀ ಕಾಯಕಲ್ಪದ ವಿಚಾರದಲ್ಲಿ ರೆಡ್ಡಿ ನಿಲುವು ಸ್ಪಷ್ಟ!

    ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯ ತಯಾರಿಯ ಭಾಗವಾಗಿ, ರಾಜ್ಯದ ಮಾಧ್ಯಮಗಳಲ್ಲಿ ಮತ್ತೊಂದು ಸುತ್ತಿನ ವಲಸೆ, ಪಲ್ಲಟಗಳು ನಡೆಯಲಿವೆ. ಇದಕ್ಕೆ ಕಾರಣ, ತಮ್ಮ ಜನಶ್ರೀ ಸುದ್ದಿವಾಹಿನಿಗೆ ಹೊಸತಾಗಿ ಕಾಯಕಲ್ಪ ನೀಡಲು ಗಣಿಧಣಿ ಜನಾರ್ಧನ ರೆಡ್ಡಿ ತೆಗೆದುಕೊಂಡಿರುವ ತೀರ್ಮಾನ. ಇದನ್ನು ಅವರ ಕುಟುಂಬದ ಮೂಲಗಳು ‘ಸಮಾಚಾರ’ಕ್ಕೆ ಖಚಿತಪಡಿಸಿವೆ. “ಸದ್ಯ ಜನಶ್ರೀ ಟಿವಿಯನ್ನು ಮತ್ತೆ ಒಂದು ಹಂತಕ್ಕೆ ತೆಗೆದುಕೊಂಡು ಬರಲು ಯೋಚಿಸಿದ್ದೇವೆ. ಇದಕ್ಕಾಗಿ ಈಗಾಗಲೇ ನಾಲ್ವರು ಹೂಡಿಕೆದಾರರು ಮುಂದೆ ಬಂದಿದ್ದಾರೆ. ಚಾನಲ್ಗೆ ಒಂದು ಮಟ್ಟಿನ ಕಾಯಕಲ್ಪ ಸಿಕ್ಕ ನಂತರ ನಾವೇ ಅದನ್ನು..

    May 8, 2016
    ...
    janardhan-reddy-yaddy
    ರಾಜ್ಯ

    ಬಿಜೆಪಿಯ ಮಿಶನ್- 150: ಈ ಬಾರಿಯೂ ಹರಿಯುತ್ತಾ ಗಣಿಧಣಿಗಳ ಕೋಟಿ ಕೋಟಿ!

    ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಇನ್ನೂ 700+ ದಿನಗಳ ಬಾಕಿ ಇವೆ ಎನ್ನುವಾಗಲೇ ಭಾರತೀಯ ಜನತಾ ಪಕ್ಷದೊಳಗೆ ಸಕಲ ಸಿದ್ಧತೆಗಳು ಶುರುವಾಗಿವೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ 150 ಸೀಟುಗಳನ್ನು ಗೆಲ್ಲುವ ಗುರಿಯನ್ನು ಇಟ್ಟುಕೊಂಡು ಚುನಾವಣೆಯನ್ನು ಎದುರಿಸಲು ನೀಲನಕ್ಷೆಯೊಂದು ತಯಾರಾಗಿದೆ. ಅದರ ಒಂದು ಅಂಶವಾಗಿ ಗಣಿಧಣಿ, ಮಾಜಿ ಸಚಿವ ಜನಾರ್ಧನ ರೆಡ್ಡಿ ಹಾಗೂ ಕುಟುಂಬದ ಜತೆ ಯಡಿಯೂರಪ್ಪ ಹಲವು ಸುತ್ತಿನ ಮಾತುಕತೆ ನಡೆಸಿದ್ದಾರೆ. ಹಿಂದಿನ ಬಾರಿ ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಕೇಸರಿ ಪಕ್ಷವನ್ನು ಅಧಿಕಾರ ತರುವಲ್ಲಿ ಮಹತ್ವದ ಪಾತ್ರ ವಹಿಸಿದ್ದವರು..

    May 8, 2016
    ...
    bellary-mining-tehelka
    ರಾಜ್ಯ

    ಅಕ್ರಮ ಗಣಿ ಹಗರಣ: ವಿಶೇಷ ನ್ಯಾಯಾಲಯದಲ್ಲಿ ಹೊಸ ದೋಷಾರೋಪ ಪಟ್ಟಿ ಸಲ್ಲಿಕೆ

    ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲ್ಲೂಕಿನ ಬೇಲಿಕೇರಿ ಬಂದರು ಮೂಲಕ ಅಕ್ರಮ ಅದಿರು ರಫ್ತು ಮಾಡಿದ ಪ್ರಕರಣದಲ್ಲಿ ಇಬ್ಬರು ಶಾಸಕರು ಸೇರಿದಂತೆ 38 ಮಂದಿ ವಿರುದ್ಧ ವಿಶೇಷ ತನಿಖಾದಳ(ಎಸ್‍ಐಟಿ)ಶನಿವಾರ ಚಾರ್ಜ್‍ಶೀಟ್ ಸಲ್ಲಿಸಿದೆ. ವಿಜಯನಗರ ಶಾಸಕ ಆನಂದ್ ಸಿಂಗ್, ಕೂಡ್ಲಗಿ ಶಾಸಕ ನಾಗೇಂದ್ರ, ಮಾಜಿ ಸಚಿವ ಜನಾರ್ಧನ ರೆಡ್ಡಿ ಬಲಗೈ ಬಂಟ ಸ್ವಸ್ತಿಕ್ ನಾಗರಾಜ್, ಖಾರದಪುಡಿ ಮಹೇಶ್, ಶಾಮ್‍ಸಿಂಗ್, ನಂದಾಸಿಂಗ್ ಸೇರಿದಂತೆ ಒಟ್ಟು 38 ಮಂದಿ ವಿರುದ್ಧ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಹೊಸತಾಗಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಪ್ರಕರಣದ ತನಿಖೆ ನಡೆಸುತ್ತಿರುವ..

    April 30, 2016

Top