An unconventional News Portal.

ಚೈನಾ
    ...
    north-koria-1
    ವಿದೇಶ

    ‘ಬಾಂಬ್ ಸಮಾಚಾರ’: ಉತ್ತರ ಕೊರಿಯದ ‘ಪ್ರಬಲ ಕಂಪನ’ ಮೂರನೇ ಮಹಾಯುದ್ಧಕ್ಕೆ ನಾಂದಿ ಹಾಡುತ್ತಾ?

    ಯುದ್ಧವನ್ನು ಮೈಮೇಲೆ ಎಳೆದುಕೊಂಡಿರುವ ಅಣ್ಣ; ಅದನ್ನು ಪಕ್ಕದಲ್ಲಿ ಆತಂಕದಿಂದಲೇ ಗಮನಿಸುತ್ತಿರುವ, ಅದೇ ವೇಳೆ ಏನೂ ಸಮಸ್ಯೆಯಾಗಲ್ಲ ಎಂಬ ಭರವಸೆಯನ್ನು ಉಳಿಸಿಕೊಂಡಿರುವ ತಮ್ಮ. ಇದು ಎರಡನೇ ಮಹಾಯುದ್ಧದ ಸಮಯದಲ್ಲಿ ಬೇರ್ಪಡೆಗೊಂಡ, ಇವತ್ತು ಒಂದಾಗುವ ಮುಂಚೆಯೇ ಮೂರನೇ ವಿಶ್ವಯುದ್ಧ ಆರಂಭಕ್ಕೆ ನಾಂದಿ ಹಾಡಲು ಹೊರಟು ನಿಂತಿರುವ ಎರಡು ಅವಳಿ ದೇಶಗಳ ಕತೆ. ಒಂದು ನಾರ್ತ್ ಕೊರಿಯಾ/ ಉತ್ತರ ಕೊರಿಯ ಎಂದು ಜನಪ್ರಿಯವಾಗಿ ಗುರುತಿಸುವ ಡೆಮಾಕ್ರಟಿಕ್ ಪೀಪಲ್ ರಿಪಬ್ಲಿಕ್ ಆಫ್ ಕೊರಿಯ. ಮತ್ತೊಂದು ದಕ್ಷಿಣ ಕೊರಿಯ ಅಥವಾ ಅಧಿಕೃತ ಹೆಸರು ರಿಪಬ್ಲಿಕ್..

    September 5, 2017
    ...
    india-china
    ದೇಶ

    ಭಾರತ- ಚೈನಾ ನಡುವೆ ಯುದ್ಧದ ಕಾರ್ಮೊಡ; ಬೆನ್ನಲ್ಲೇ ಶಾಂತಿ ಮಂತ್ರ: ಇದು ಬಿಲಿಯನ್ ಡಾಲರ್ ವಾಣಿಜ್ಯ ಸಂಬಂಧದ ಕತೆ!

    ಭಾರತ- ಚೈನಾ ನಡುವಿನ ಗಡಿ ವಿವಾದದ ‘ಶಾಂತಿಯುತ ಉಪಸಂಹಾರ’ಕ್ಕೆ ಕೇಂದ್ರ ಸರಕಾರ ನಡೆಸುತ್ತಿರುವ ಪ್ರಯತ್ನದ ಹಿಂದಿರುವುದು ವಾಣಿಜ್ಯ ಉದ್ದೇಶಗಳು. ಕಳೆದ ವಾರ ರಾಜ್ಯಸಭೆಯಲ್ಲಿ ಮಾತನಾಡಿದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, “ಡೋಕ್ ಲಾ ಗಡಿಯಲ್ಲಿ ಸೃಷ್ಟಿಯಾಗಿರುವ ಸಂಘರ್ಷಕ್ಕೆ ಉಬಯ ದೇಶಗಳ ನಡುವೆ ರಾಜತಾಂತ್ರಿಕ ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳಲಾಗುವುದು,” ಎಂದು ತಿಳಿಸಿದ್ದಾರೆ. ಇದಾದ ಮರುದಿನವೇ ಚೈನಾ ಗಡಿಯಿಂದ ಭಾರತೀಯ ಸೇನೆಯನ್ನು ಹಿಂತೆಗೆದುಕೊಳ್ಳುವಂತೆ ತಾಕೀತು ಮಾಡಿತ್ತು. ಕಳೆದ ಕೆಲವು ತಿಂಗಳಿನಿಂದ ಉಬಯ ದೇಶಗಳ ನಡುವೆ ಸಂಘರ್ಷ ನಡೆಯುತ್ತಿದೆ. ಗಡಿ..

    August 7, 2017
    ...
    army-india
    ದೇಶ

    ‘ಯುದ್ಧ ನಡೆದರೆ 10 ದಿನಗಳಲ್ಲಿ ಮದ್ದುಗುಂಡುಗಳು ಖಾಲಿ’: ಸೇನೆಯ ಅಂತರಂಗ ಬಿಚ್ಚಿಟ್ಟ ಸಿಎಜಿ ವರದಿ

    ಭಾರತೀಯ ಸೇನೆ ಮದ್ದು ಗುಂಡುಗಳ ಕೊರತೆಯನ್ನು ಎದುರಿಸುತ್ತಿದೆ. ಒಂದು ವೇಳೆ ಯುದ್ಧ ನಡೆದರೆ 10 ದಿನಗಳ ಒಳಗಾಗಿ ಸೈನಿಕರ ಕೈಲಿರುವ ಬಹುತೇಕ ಮದ್ದು ಗುಂಡುಗಳು ಖಾಲಿಯಾಗುತ್ತವೆ… ಹೀಗೊಂದು ಆತಂಕಕಾರಿ ಮಾಹಿತಿಯನ್ನು ಬಹಿರಂಗಪಡಿಸಿದೆ ಶುಕ್ರವಾರ ಸಂಸತ್‌ನಲ್ಲಿ ಮಂಡನೆಯಾದ ‘ಸಿಎಜಿ’ ವರದಿ. ಯುದ್ಧದ ಕಾರ್ಮೋಡವನ್ನು ಆವರಿಸಿರುವ ಈ ಸಮಯದಲ್ಲಿ ದೇಶದ ಸೇನೆಯ ಕಾರ್ಯಕ್ಷಮತೆಯ ಕುರಿತು ಅಬ್ಬರ ಪ್ರಚಾರ ನಡೆಯುತ್ತಿದೆ. ಭಾರತೀಯ ಸೇನೆ ಹೊಂದಿರುವ ಅತ್ಯಾಧುನಿಕ ಆಯುಧಗಳ ಮಾಹಿತಿ ಹರಿದು ಬರುತ್ತಿದೆ. ಅದೇ ಸಮಯದಲ್ಲಿ ಸಾಮಾನ್ಯ ಸೈನಿಕರಿಗೆ ಅಗತ್ಯವಾಗಿರುವ ಮದ್ದು ಗುಂಡುಗಳ ಸರಬರಾಜಿನಲ್ಲಿ ಇರುವ..

    July 22, 2017
    ...
    plastic-rice-china
    ರಾಜ್ಯ

    ತಲ್ಲಣ ಮೂಡಿಸಿದ ‘ಶಂಕಿತ ಪ್ಲಾಸ್ಟಿಕ್ ಅಕ್ಕಿ’: ಜಾಗತಿಕ ವದಂತಿಯ ಹಿಂದಿರುವ ಸತ್ಯಾಂಶ ಏನು?

    ಪ್ಲಾಸ್ಟಿಕ್‌ನಿಂದ ಆಹಾರ ಪದಾರ್ಥಗಳನ್ನು ಉತ್ಪಾದನೆ ಮಾಡಲಾಗುತ್ತಿದೆ ಎಂಬ ಗಾಳಿ ಸುದ್ದಿಗಳಿಗೆ ಈಗ ರಾಜ್ಯದ ಜನ ಆಹಾರವಾಗುತ್ತಿದ್ಧಾರೆ. ಕಳೆದ ಕೆಲವು ದಿನಗಳ ಅಂತರದಲ್ಲಿ ಮುಖ್ಯವಾಹಿನಿಯ ಮಾಧ್ಯಮಗಳಲ್ಲಿ ಈ ಕುರಿತು ಸುದ್ದಿ ಭಿತ್ತರ ಆರಂಭಗೊಂಡ ಹಿನ್ನೆಲೆಯಲ್ಲಿ, ಜಾಗತಿಕವಾಗಿ ಬೆಳೆದು ಬಂದ ವದಂತಿಯೊಂದಕ್ಕೆ ಇನ್ನಷ್ಟು ಪುಷ್ಟೀಕರಣ ಸಿಕ್ಕಂತಾಗಿದೆ. ವಿಶೇಷ ಏನೆಂದರೆ, ‘ಪ್ಲಾಸ್ಟಿಕ್ ಅಕ್ಕಿ’ ಎಂಬ ಗಾಳಿ ಸುದ್ದಿ ಕರ್ನಾಟಕ ಮಾತ್ರವಲ್ಲ, ತಲೆಂಗಾಣ ಸೇರಿದಂತೆ ನಾನಾ ರಾಜ್ಯಗಳು, ಫಿಲಿಪ್ಪೀನ್, ನೆದರ್‌ಲ್ಯಾಂಡ್ ಸೇರಿದಂತೆ ಹಲವು ದೇಶಗಳಲ್ಲಿ ಹರಿದಾಡುತ್ತಿದೆ. 2010ರಿಂದ ಈಚೆಗೆ ಈ ಕುರಿತು ದೊಡ್ಡ ಮಟ್ಟದಲ್ಲಿ..

    June 9, 2017
    ...
    corruption-india-2
    ಸುದ್ದಿ ಸಾರ

    ಏಷಿಯಾ ಖಂಡದ ದೇಶಗಳ ಪೈಕಿ ಭ್ರಷ್ಟಾಚಾರದಲ್ಲಿ ಭಾರತವೇ ನಂ. 1!

    ಏಷಿಯಾ ಖಂಡದ ದೇಶಗಳ ಪೈಕಿ ‘ಭ್ರಷ್ಟಾಚಾರದ ದರ’ ಅತ್ಯಂತ ಹೆಚ್ಚಿರುವುದು ಭಾರತದಲ್ಲಿ ಎನ್ನುತ್ತಿದೆ ‘ಟ್ರಾನ್ಸ್‌ಫರೆನ್ಸಿ ಇಂಟರ್‌ನ್ಯಾಷನಲ್’ ಮಂಗಳವಾರ ಬ್ಯಾಂಕಾಕ್‌ನಲ್ಲಿ ಬಿಡುಗಡೆ ಮಾಡಿರುವ ಸಮೀಕ್ಷಾ ವರದಿ. ಕೆಲವು ಆತಂಕಕಾರಿ ಮಾಹಿತಿ ಒಳಗೊಂಡಿರುವ ಸಮೀಕ್ಷಾ ವರದಿಯಲ್ಲಿ, ಪ್ರತಿ ಮೂವರು ಭಾರತೀಯರಲ್ಲಿ ಇಬ್ಬರು ಅನಿವಾರ್ಯವಾಗಿ ಲಂಚ ನೀಡಬೇಕಾದ ಪರಿಸ್ಥಿತಿ ಇದೆ ಎಂಬುದು ಬಯಲಾಗಿದೆ. ಭಾರತದಲ್ಲಿ ಶೇ. 69ರಷ್ಟು ಜನ ಲಂಚ ನೀಡುತ್ತಿದ್ದರೆ, ನಂತರ ಸ್ಥಾನದಲ್ಲಿ ವಿಯಟ್ನಾಂನಲ್ಲಿ ಶೇ. 65ರಷ್ಟು ಮಂದಿ ಕಳೆದ 12 ತಿಂಗಳ ಅಂತರದಲ್ಲಿ ಲಂಚ ನೀಡಿದ್ದಾರೆ. ನೆರೆಯ ಪಾಕಿಸ್ತಾನದಲ್ಲಿ..

    March 7, 2017
    ...
    wang-1
    ಫೋಕಸ್

    ‘ಗಡಿ ಎಂಬ ಬೇಲಿ’ಯೊಳಗೆ ಬಂಧಿಯಾದವನು 5 ದಶಕಗಳ ನಂತರ ತಾಯ್ನಾಡಿಗೆ ಕಾಲಿಟ್ಟ ಕತೆ!

    ಕಳೆದ ಶನಿವಾರ ಚೈನಾದ ಕ್ಸಿಯಾನ್ಯಾಂಗ್ ನಗರ ಒಬ್ಬ ವಿಶೇಷ ಅತಿಥಿಯ ಆಗಮನಕ್ಕೆ ಕಾದಿತ್ತು. ‘ತವರಿಗೆ ಸ್ವಾಗತ, ಇದೊಂದು ಕಠಿಣ ಪ್ರಯಾಣವಾಗಿತ್ತು’. ಅನ್ನುವ ಫಲಕಗಳನ್ನು ಹಿಡಿದಿದ್ದ ಜನ ತಮ್ಮ ಮನೆ ಮಗನನ್ನ ಸ್ವಾಗತಿಸಿದರು. ಆ ವ್ಯಕ್ತಿ ಬರೊಬ್ಬರಿ 54ವರ್ಷಗಳ ಬಳಿಕ ತನ್ನೂರಿಗೆ, ತನ್ನ ದೇಶಕ್ಕೆ ಮರಳಿದ್ದ. ಅದಕ್ಕೂ ಮುನ್ನ ಭಾರತದ ನಾನಾ ಜೈಲುಗಳಲ್ಲಿ ನಂತರ ಇಲ್ಲಿಯೇ ಸಂಸಾರಿಗನಾಗಿ ಬದುಕು ಸವೆಸಿದ್ದ.  ಈ ಸುದೀರ್ಘ ಅವಧಿಯಲ್ಲಿ ಆತನ ಮಕ್ಕಳು ಮುದುಕರಾಗಿದ್ದರು, ಸಣ್ಣ ಹಳ್ಳಿಗಳು ಬೆಳೆದು ದೊಡ್ಡ ದೊಡ್ಡ ನಗರಗಳಾಗಿದ್ದವು. ಆ ಊರಿನ..

    February 13, 2017
    ...
    silicon_valley_corporation
    ವಿದೇಶ

    ಭಾರತದ ಐಟಿ ಇಂಡಸ್ಟ್ರಿಗೆ ಟ್ರಂಪ್ ಮಾರಕ: ‘ಸಿಲಿಕಾನ್ ವ್ಯಾಲಿ’ಯಿಂದ ಭಾರತೀಯರ ಗುಳೇ?

    ಕಳೆದ ಶುಕ್ರವಾರ ಅಮೆರಿಕಾದ ವಾಷಿಂಗ್ಟನ್ ಶ್ವೇತಭವನದ ಮುಂದೆ ಪ್ರಮಾಣ ವಚನ ಸ್ವೀಕರಿಸುತ್ತಿದ್ದ ನೂತನ ಅಧ್ಯಕ್ಷ ಡೋನಾಲ್ಡ್ ಟ್ರಂಪ್, “ಅಮೆರಿಕ ಉತ್ಪನ್ನಗಳನ್ನು ಕೊಳ್ಳಿರಿ; ಅಮೆರಿಕನ್ನರನ್ನೇ ಕೆಲಸಕ್ಕೆ ನೇಮಿಸಿಕೊಳ್ಳಿ” ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ. ಈ ಮೂಲಕ ಮುಂದಿನ ಕೆಲವು ದಿನಗಳಲ್ಲಿ ಅಮೆರಿಕಾದ ಮಾರುಕಟ್ಟೆಯನ್ನು ನೆಚ್ಚಿಕೊಂಡಿರುವ ವಿದೇಶಿ ಕಂಪನಿಗಳಿಗೆ ಹಾಗೂ ವಲಸಿಗರಾಗಿ ಕೆಲಸ ಮಾಡುತ್ತಿರುವ ವಿದೇಶಿಗರಿಗೆ ಇನ್ನು ಮುಂದೆ ಅಮೆರಿಕಾದ ಆರ್ಥಿಕ ವ್ಯವಸ್ಥೆಯಲ್ಲಿ ಹೆಚ್ಚಿನ ಪಾಲು ದಕ್ಕುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಈಗಾಗಲೇ ಚೈನಾ ‘ತನ್ನ ದೇಶದ ಕಂಪನಿಗಳ ಹಾಗೂ ಕಾರ್ಮಿಕರ..

    January 23, 2017
    ...
    sivakasi2
    ದೇಶ

    ಅರಿವಿನ ಹಬ್ಬ ದೀಪಾವಳಿ ಮತ್ತು ಪಟಾಕಿ ಉದ್ಯಮದ ಒಡಲಾಳದಲ್ಲಿ ಚೈನಾ ಮೂಡಿಸಿದ ತಲ್ಲಣಗಳು!

    ಹಿಂದೂಗಳು ಬಹು ಸಂಖ್ಯಾತರಾಗಿರುವ ಭಾರತದಲ್ಲಿ ದೀಪಾವಳಿ ಪ್ರಮುಖ ಹಬ್ಬ. ಈ ಹಬ್ಬಕ್ಕೆ ದೇಶದಾದ್ಯಂತ ಸಾವಿರಾರು ಕೋಟಿ ರೂಪಾಯಿಯ ಪಟಾಕಿ ಸುಡಲಾಗುತ್ತದೆ. ಪಟಾಕಿ ತಯಾರಿಕೆಯ ಸುತ್ತ ಕಟ್ಟಿಕೊಂಡ ಬದುಕುಗಳು, ಸಾವಿರಾರು ಕೋಟಿಯ ಉದ್ಯಮ, ಅದರೊಳಗಿನ ತಲ್ಲಣಗಳು ‘ಬೆಳಕಿನ ಹಬ್ಬ’ದ ತಳದಲ್ಲಿರುವ ಕತ್ತಲೆಯ ಕತೆಯನ್ನು ಹೇಳುತ್ತವೆ. ಈ ಕತೆಗೆ ಕಿವಿಯಾಗಬೇಕಾದರೆ ಇವತ್ತು ಭಾರತದ ಪಟಾಕಿ ತಯಾರಿಕೆಯ ರಾಜಧಾನಿ ಎಂದೇ ಬಿಂಬಿಸಲ್ಪಡುವ ತಮಿಳುನಾಡಿನ ಶಿವಕಾಶಿಯ ಸದ್ಯದ ಒಡಲ ಕರೆಗೆ ಕೇಳಿಸಿಕೊಳ್ಳಬೇಕಿದೆ. ಸ್ಪೋಟಕಗಳ ರಾಜಧಾನಿ ಶಿವಕಾಶಿಯ ಭವಿಷ್ಯದ ದಿನಗಳು ಅಂಧಕಾರದತ್ತ ಮುಖಮಾಡಿದಂತೆ ಭಾಸವಾಗುತ್ತವೆ. ದೇಶವನ್ನೆಲ್ಲಾ..

    October 30, 2016
    ...
    china-toddler-chenguan-1
    ಫೋಕಸ್

    ಚೈನಾದ ಪುಟ್ಟ ಪೋರನ ಆಕ್ರೋಶದ ಹಿಂದಿರುವ ಅಸಲಿ ಕಾರಣ ಇಷ್ಟೆ!

    ಚೈನಾದ ಪುಟ್ಟ ಬಾಲಕ ಸ್ಥಳೀಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದ ವಿಡಿಯೋ ಜಗತ್ತಿನಾದ್ಯಂತ ಹರಿದಾಡಿದ ಬೆನ್ನಲ್ಲೇ, ಅಂತರ್ಜಾಲದಿಂದ ದೃಶ್ಯಾವಳಿಯನ್ನು ತೆಗೆಯುವಂತೆ ಸರಕಾರ ಸೂಚನೆ ನೀಡಿದೆ. “ನನ್ನ ಅಜ್ಜಿಯನ್ನು ಮುಟ್ಟಬೇಡಿ! ದೂರ ಹೋಗಿ!” ಎಂದು ಎರಡು ವರ್ಷದ ಬಾಲಕ ‘ಚೆಂಗುವಾನ್’ ಎಂದು ಕರೆಯುವ ಸ್ಥಳೀಯ ಅಧಿಕಾರಿಗಳ ವಿರುದ್ಧ ಸಿಟ್ಟಿಗೆದ್ದು ಕೂಗಾಡಿದ್ದ ದೃಶ್ಯಗಳನ್ನು ಎಲ್ಲರೂ ಕಣ್ತಿಂಬಿಕೊಂಡಿದ್ದರು. ಆದರೆ, ಅಷ್ಟು ಚಿಕ್ಕ ವಯಸ್ಸಿನಲ್ಲಿ ಅಧಿಕಾರಿಗಳ ವಿರುದ್ಧ ಆಕ್ರೋಶ ಹುಟ್ಟಲು ಕಾರಣಗಳೇನು? ಎಂಬುದು ಮಾತ್ರ ಚರ್ಚೆಗೆ ಬರಲೇ ಇಲ್ಲ. ಚೈನಾದಲ್ಲಿ ನಗರದ ಶುಚಿತ್ವವನ್ನು ಕಾಪಾಡಲು..

    April 18, 2016

Top