An unconventional News Portal.

ಚಲೋ ಉಡುಪಿ
    ...
    diddalli-chalo
    ರಾಜ್ಯ

    ‘ಚಲೋ ಮಡಿಕೇರಿ’; ಡಿ.23ರಂದು ಮಂಜಿನ ನಗರಿಯಲ್ಲಿ ಆದಿವಾಸಿಗಳ ಬೃಹತ್ ಸಮಾವೇಶ

    ‘ಚಲೋ ಉಡುಪಿ’ ಮಾದರಿಯಲ್ಲಿ ಇದೀಗ ‘ಚಲೋ ಮಡಿಕೇರಿ’ ಸಮಾವೇಶಕ್ಕೆ ‘ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ’ ಕರೆ ನೀಡಿದೆ. ಭಾನುವಾರ ಕೊಡಗಿನ ವಿರಾಜಪೇಟೆ ತಾಲೂಕಿನ ದಿಡ್ಡಳ್ಳಿಯಲ್ಲಿ ನಡೆದ ಬೃಹತ್ ‘ಸಂಕಲ್ಪ ಸಭೆ’ಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಡಿಸೆಂಬರ್ 22 ರಂದು ದಿಡ್ಡಳ್ಳಿಯಿಂದ ನಿರಾಶ್ರಿತ ಆದಿವಾಸಿಗಳು ಮಡಿಕೇರಿಯತ್ತ ಕಾಲ್ನಡಿಗೆ ಜಾಥಾ ಹೊರಡಲಿದ್ದಾರೆ. 23ರಂದು ನಗರದಲ್ಲಿ ಸಮಾವೇಶ ನಡೆಯಲಿದೆ. ಇಲ್ಲಿಗೆ ರಾಜ್ಯ ಹಾಗೂ ಜಿಲ್ಲೆಯ ಆದಿವಾಸಿಗಳು, ಹೋರಾಟಗಾರರು ಆಗಮಿಸಲಿದ್ದಾರೆ ಎಂದು ಕೇಂದ್ರ ಸಮಿತಿಯ ನೂರ್ ಶ್ರೀಧರ್ ಮಾಹಿತಿ..

    December 19, 2016
    ...
    diddalli
    ರಾಜ್ಯ

    ಭೂಮಿ, ವಸತಿ ಹಕ್ಕು ವಂಚಿತರ ನಡಿಗೆ ‘ದಿಡ್ಡಳ್ಳಿ’ ಕಡೆಗೆ; ಕೊಡಗಿನಲ್ಲಿಂದು ಸಿದ್ದು ಸರಕಾರಕ್ಕೆ ಛೀಮಾರಿ

    ದಿಡ್ಡಳ್ಳಿಗೆ ನಡೆಯೋಣ… ಹೀಗಂತ ‘ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ’ಯ ಹೋರಾಟಗಾರರು ಮತ್ತು ಸಮಾನ ಮನಸ್ಕರು ಇವತ್ತು ಮಂಜಿನ ನಾಡು ಕೊಡಗಿನ ದಿಡ್ಡಳ್ಳಿಯ ಸೇರಿದ್ದಾರೆ. ಕಳೆದ ಡಿಸೆಂಬರ್ 7ರ ಮುಂಜಾನೆ ಇಲ್ಲಿನ ವಿರಾಜಪೇಟೆ ತಾಲೂಕಿನ ದಿಡ್ಡಳ್ಳಿಯಲ್ಲಿದ್ದ 577 ಕುಟುಂಬಗಳನ್ನು ಅರಣ್ಯ ಇಲಾಖೆ ಬೀದಿಪಾಲು ಮಾಡಿತ್ತು. ಕಳೆದ 6 ತಿಂಗಳಿನಿಂದ ಈ ಕುಟುಂಬಗಳು ಇಲ್ಲಿನ ಸರಕಾರಿ ಭೂಮಿಯಲ್ಲಿ ಕಟ್ಟಿಕೊಂಡಿದ್ದ ಮನೆಯನ್ನು ಕೆಡವಿ, ಲಾಠಿ ಬೀಸಿ ಅವರನ್ನೆಲ್ಲಾ ಅಲ್ಲಿಂದ ಓಡಿಸಲಾಗಿತ್ತು. ಇದೀಗ ಈ ವಸತಿ ವಂಚಿತರಿಗೆ ಮೂಲಭೂತ..

    December 18, 2016
    ...
    bhumi-horata-1
    ರಾಜ್ಯ

    ಭೂಮಿ ಹಂಚಿಕೆಗೆ ಎರಡು ವರ್ಷದ ಗಡುವು: ‘ಹೈಪವರ್ ಕಮಿಟಿ’ ರಚನೆಗೆ ಮುಂದಾದ ಸರಕಾರ

    ‘ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ’ಯ ಹೋರಾಟಕ್ಕೆ ಮೊದಲ ಯಶಸ್ಸು ಸಿಕ್ಕಿದೆ. ಸಮಿತಿಯ ಹಕ್ಕೊತ್ತಾಯಗಳನ್ನು ಸರಕಾರ ತಾತ್ವಿಕವಾಗಿ ಒಪ್ಪಿಕೊಂಡಿದ್ದು ನಿರ್ಧಿಷ್ಟ ತೀರ್ಮಾನಗಳನ್ನು ತೆಗೆದುಕೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆ ಹೋರಾಟಗಾರರ ಪರವಾಗಿ ಎಚ್.ಎಸ್. ದೊರೆಸ್ವಾಮಿ, ನೂರ್ ಶ್ರೀಧರ್, ಡಿ.ಎಚ್. ಪೂಜಾರ್, ಎನ್. ವೆಂಕಟೇಶ್, ಕುಮಾರ್ ಸಮಾತಳ, ಸ್ವರ್ಣ ಭಟ್ ಅವರನ್ನೊಳಗೊಂಡ ನಿಯೋಗ ಮಾತುಕತೆ ನಡೆಸಿ, ರಾಜ್ಯದ ಭೂಮಿ ಮತ್ತು ವಸತಿ ಪರಿಸ್ಥಿತಿ ಬಗ್ಗೆ ಸುದೀರ್ಘ ಚರ್ಚೆ ನಡೆಸಿತು. ಈ ಸಂದರ್ಭ ಚರ್ಚೆಯಲ್ಲಿ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ..

    November 23, 2016
    ...
    Protest 01
    ರಾಜ್ಯ

    ಬೆಳಗಾವಿ ಅಧಿವೇಶನಕ್ಕೆ ಪ್ರತಿಭಟನೆಗಳ ಸ್ವಾಗತ: ವಿರೋಧ ಪಕ್ಷಗಳ ಸ್ಥಾನದಲ್ಲಿ ಹೋರಾಟಗಾರರು

    ಸೋಮವಾರದಿಂದ ಆರಂಭವಾಗಲಿರುವ ಬೆಳಗಾವಿ ಚಳಿಗಾಲದ ಅಧಿವೇಶನಕ್ಕೆ ಸ್ವಾಗತ ಕೋರಲು ಪ್ರತಿಭಟನಾಕಾರರು ಸಿದ್ಧವಾಗಿದ್ದಾರೆ. ಸರಕಾರಕ್ಕೆ ಚಾಟಿ ಬೀಸಲು ಹಲವು ಜನಪರ ಸಂಘಟನೆಗಳು ತಯಾರಾಗಿದ್ದು ಮತ್ತೊಂದು ಸುತ್ತಿನ ‘ಭೂಮಿ ಹೋರಾಟ’ ಆರಂಭವಾಗಿದೆ. ಮುಖ್ಯವಾಗಿ ನೂರಾರು ಸಂಘಟನೆಗಳು ಒಟ್ಟಾಗಿ ‘ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ’ ಹೆಸರಿನಲ್ಲಿ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿಯವರ ಮುಂದಾಳತ್ವದಲ್ಲಿ ಎಡಬಿಡದೆ ಅಹೋರಾತ್ರಿ ಹಕ್ಕೊತ್ತಾಯ ಧರಣಿ ನಡೆಸಲು ಉದ್ದೇಶಿಸಿದ್ದಾರೆ. ದೇವರಾಜ ಅರಸು ಜಾರಿಗೆ ತಂದಿದ್ದ ‘ಭೂ ಸುಧಾರಣೆ ಕಾಯ್ದೆ’ಯ ಪರಿಣಾಮಕಾರಿ ಜಾರಿಗೆ ಒತ್ತಾಯಿಸಿ ನಡೆಸುತ್ತಿರುವ ಎರಡನೇ ಹೋರಾಟ ಇದಾಗಿದ್ದು,..

    November 20, 2016
    ...
    kanakande-krishna-matha
    ರಾಜ್ಯ

    ‘ಕನಕ ನಡೆ’ ಉಡುಪಿ ರಥಬೀದಿಗಷ್ಟೆ ಸೀಮಿತ: ಗೊಂದಲದ ಗೂಡಾದ ಭಾನುವಾರದ ‘ಕ್ಲೈಮ್ಯಾಕ್ಸ್’!

    ಸೈದ್ಧಾಂತಿಕ ಸಂಘರ್ಷಕ್ಕೆ ಸಿದ್ಧವಾಗಿದ್ದ ಉಡುಪಿಯಲ್ಲಿ ಭಾನುವಾರ ನಡೆಯುವ ಬೆಳವಣಿಗೆಗಳ ಬಗ್ಗೆ ಗೊಂದಲ ಆವರಿಸಿಕೊಂಡಿದೆ. ‘ಚಲೋ ಉಡುಪಿ’ ಹಿನ್ನೆಲೆಯಲ್ಲಿ ಉಡುಪಿಯನ್ನು ಸ್ವಚ್ಛ ಮಾಡುತ್ತೇವೆ ಎಂದು ಹೊರಟಿದ್ದ ‘ಕನಕ ನಡೆ’ ಆಯೋಜಕರು ಸಾಂಕೇತಿಕ ಸ್ವಚ್ಛತೆಗಷ್ಟೇ ಸೀಮಿತರಾಗಿದ್ದಾರೆ ಎಂದು ತಿಳಿದು ಬಂದಿದೆ. ಇನ್ನೊಂದು ಕಡೆ ‘ಕನಕ ನಡೆ’ ವಿರೋಧಿಸಿ ‘ಸ್ವಾಭಿಮಾನಿ ನಡೆ’ ಮಾಡಲು ಹೊರಟವರಿಗೆ ಶುಕ್ರವಾರದ ಅಂತ್ಯದವರೆಗೂ ಪೊಲೀಸ್ ಇಲಾಖೆಯ ಅನುಮತಿ ಸಿಕ್ಕಿಲ್ಲ. ಮೂಲಗಳ ಮಾಹಿತಿಗಳ ಪ್ರಕಾರ ಎರಡೂ ‘ನಡೆ’ಗಳ ಮೇಲೆ ಕೊನೆಯ ಕ್ಷಣದಲ್ಲಿ ಪೊಲೀಸ್ ಇಲಾಖೆ ನಿಷೇಧ ಹೇರುವ ಸಾಧ್ಯತೆಗಳಿವೆ. ಆದರೆ, 23ರಂದು ಉಡುಪಿಯಲ್ಲಿ..

    October 22, 2016
    ...
    udupi-kanaka-nade
    ರಾಜ್ಯ

    ಕನಕ ನಡೆಗೆ ದಲಿತ- ದಮನಿತರ ‘ಪರ್ಯಾಯ’: ಮತ್ತೊಂದು ಸಂಘರ್ಷಕ್ಕೆ ಸಾಕ್ಷಿಯಾಗಲಿದೆಯಾ ಉಡುಪಿ?

    ರಾಜ್ಯದಲ್ಲಿ ಮತ್ತೊಂದು ಸುತ್ತಿನ ಸೈದ್ಧಾಂತಿಕ ಸಂಘರ್ಷಕ್ಕೆ ಉಡುಪಿ ಸಾಕ್ಷಿಯಾಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ. ಪ್ರತಿಕ್ರಿಯೆ ರೂಪದಲ್ಲಿ ‘ನಮೋ ಬ್ರಿಗೇಡ್’ (ಇವತ್ತಿನ ಯುವ ಬ್ರಿಗೇಡ್) ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ತಂಡ ನೀಡಿದ್ದ ‘ಕನಕ ನಡೆ’ಗೆ ವಿರುದ್ಧವಾಗಿ ‘ದಲಿತ ಧಮನಿತರ ಹೋರಾಟ ಸಮಿತಿ’ ‘ಸ್ವಾಭಿಮಾನಿ ನಡೆ’ ಮಾಡುವುದಾಗಿ ಬುಧವಾರ ಘೋಷಿಸಿದೆ. ಹೀಗಾಗಿ ಇದೇ 23ನೇ ತಾರೀಖು, ಉಡುಪಿಯಲ್ಲಿ ಸೈದ್ಧಾಂತಿಕ ವಿಚಾರಗಳಲ್ಲಿ ವಿರುದ್ಧ ದ್ರುವಗಳಾಗಿರುವ ಎರಡು ತಂಡಗಳು ಒಟ್ಟಿಗೇ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿವೆ. ಸಹಜವಾಗಿಯೇ, ಇದು ಸಾಮಾಜಿಕ ಜಾಲತಾಣಗಳ ಆಚೆಗೆ, ವಾಸ್ತವದಲ್ಲಿ ಪರ ಮತ್ತು ವಿರೋಧದ..

    October 20, 2016
    ...
    sulibele-kanaka-nade
    ರಾಜ್ಯ

    ‘ಉಲ್ಟಾ ಪಲ್ಟಾ’: #ಕನಕ ನಡೆ ಯಾರ ವಿರುದ್ಧವೂ ಅಲ್ಲ; ಚಕ್ರವರ್ತಿ ಸೂಲಿಬೆಲೆ ಸ್ಪಷ್ಟೀಕರಣ!

    ಚಲೋ ಉಡುಪಿ ಸಮಾವೇಶದ ಬೆನ್ನಿಗೇ ಚಕ್ರವರ್ತಿ ಸೂಲಿಬೆಲೆ ನಡೆಸಲು ಹೊರಟಿರುವ ‘ಕನಕ ನಡೆ’ ಪರ ವಿರೋಧ ಚರ್ಚೆಗೆ ಗ್ರಾಸವಾಗಿದೆ. ಇದೊಂದು ಕಮ್ಯೂನಿಸ್ಟ್ ವಿರೋಧಿ ನಡಿಗೆ ಎಂಬ ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿವೆ. ಈ ಸಂದರ್ಭದಲ್ಲಿ ‘ಸಮಾಚಾರ’ದ ಜೊತೆ ಮುಕ್ತವಾಗಿ ‘ಕನಕ ನಡೆ’ ಸಂಘಟಕ, ‘ನಮೋ ಬ್ರಿಗೇಡ್’ (ಇವತ್ತಿನ ಯುವ ಬ್ರಿಗೇಡ್) ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಮಾತನಾಡಿದ್ದಾರೆ. ‘ಕನಕ ನಡೆ’ ಯಾರ ವಿರುದ್ಧವೂ ಅಲ್ಲ; ಬದಲಿಗೆ ಸ್ವಚ್ಚ ಭಾರತ್ ಅಭಿಯಾನ ಭಾಗವಾಗಿ ಉಡುಪಿಯನ್ನು ಸ್ವಚ್ಚಗೊಳಿಸಲು ಹೊರಟಿರುವುದಾಗಿ ಅವರು ಸ್ಪಷ್ಟೀಕರಣ ನೀಡಿದ್ದಾರೆ…

    October 13, 2016
    ...
    chalo udupi
    ರಾಜ್ಯ

    ಉಡುಪಿ ಪಂಕ್ತಿ ಭೇದಕ್ಕೆ 2 ತಿಂಗಳ ಗಡುವು: #ಚಲೋಉಡುಪಿ ಸಮಾರೋಪದಲ್ಲಿ ಜಿಗ್ನೇಶ್ ಮೇವಾನಿ

    ಉಡುಪಿಗೆ ಹರಿದು ಬಂದ ಜನಸಾಗರ, ಸಂಪೂರ್ಣ ನೀಲಿ ಮಯವಾದ ಕಡಲತಡಿಯ ಜಿಲ್ಲಾ ಕೇಂದ್ರ, ಪಂಕ್ತಿ ಭೇದಕ್ಕೆ ಎರಡು ತಿಂಗಳ ಗಡುವು ನೀಡಿದ ಜಿಗ್ನೇಶ್.. ಭೂಮಿ ಹಾಗೂ ಆಹಾರದ ಹಕ್ಕನ್ನು ಪ್ರತಿಪಾದನೆಗೆ ಸಾಕ್ಷಿಯಾದ ಸಾವಿರಾರು ಜನ…ಇದು ಭಾನುವಾರ ಉಡುಪಿ ಜಿಲ್ಲಾ ಕೇಂದ್ರದಲ್ಲಿ ಸಮಾರೋಪಗೊಂಡ ‘ಚಲೋ ಉಡುಪಿ’ ಸಮಾವೇಶದ ಹೈಲೈಟ್ಸ್. “ಉಡುಪಿ ಮಠದಲ್ಲಿ ನಡೆಯುತ್ತಿರುವ ಪಂಕ್ತಿ ಬೇಧ ನಿಲ್ಲಿಸಲು ನಾವೆಲ್ಲ 2 ತಿಂಗಳ ಗಡುವು ನೀಡೋಣ. ಒಂದೊಮ್ಮೆ ನಿಲ್ಲದಿದ್ದಲ್ಲಿ ನಾವು ಮುತ್ತಿಗೆಯನ್ನು ಹಾಕುತ್ತೇವೆ. ಜೈಲಿಗೆ ಹೋಗುವುದಕ್ಕೂ ಸೈ ಎಂದು,” ‘ಊನಾ..

    October 10, 2016

Top