An unconventional News Portal.

ಗುಜರಾತ್ ವಿಧಾನಸಭಾ ಚುನಾವಣೆ

ದೇಹ ಸೌಂದರ್ಯಗಳ ಮೆರೆದಾಟದ ಕಾಲದಲ್ಲಿ ಸಿನೆಮಾ ಮಾಡಿ ಗೆದ್ದ ಹಲ್ಲುಬ್ಬ ಇನ್ನಿಲ್ಲ…

ದೈಹಿಕ ಸೌಂದರ್ಯವೇ ಸಿನಿಮಾ ರಂಗದ ಮಾನದಂಡವಾಗಿದ್ದ ಕಾಲದಲ್ಲಿ ಸ್ಯಾಂಡಲ್‍ವುಡ್‍ನ ಹಲವು ಮಿಥ್‍ಗಳನ್ನು ಹೊಡೆದು ಹಾಕಿದರು ನಿರ್ದೇಶಕ ಕಂ ನಟ ಕಾಶೀನಾಥ್. ವ್ಯಕ್ತಿಗಳ ಆಕಾರಕ್ಕೆ ತಕ್ಕಂತೆ ಸ್ಕ್ರಿಪ್ಟ್  ಮಾಡಿ

  ...
  ದೇಶ

  ‘ಇನ್‌ಸೈಡರ್ ಅಕೌಂಟ್’: ಹೋರಾಟಗಾರ ಜಿಗ್ನೇಶ್ ಮೇವಾನಿ ಗೆಲುವು ಸಾಧ್ಯವಾಗಿದ್ದು ಹೇಗೆ?

  ಗುಜರಾತ್ ರಾಜ್ಯದಲ್ಲಿ ಡಿಸೆಂಬರ್ 8 ಮತ್ತು 14ರಂದು ಎರಡು ಹಂತಗಳಲ್ಲಿ ನಡೆದ ವಿಧಾನಸಭಾ ಚುನಾವಣೆಗಳ ಮತ ಎಣಿಕೆ ನಡೆದು ಇಂದು ಫಲಿತಾಂಶ ಪ್ರಕಟವಾಗುತ್ತಿದೆ. ಗುಜರಾತ್ ರಾಜ್ಯದ ವಿಧಾನ ಸಭಾ ಕ್ಷೇತ್ರಗಳ ಪೈಕಿ ಅತ್ಯಂತ ಕುತೂಹಲ ಮೂಡಿಸಿ, ಇಡೀ ದೇಶದ ಗಮನ ಸೆಳೆದಿರುವ ಕೆಲವು ಕ್ಷೇತ್ರಗಳಲ್ಲಿ ವಡಗಾಮ್ ಕ್ಷೇತ್ರವೂ ಒಂದು. ಕಳೆದ 20 ವರ್ಷಗಳಿಂದ ಗುಜರಾತಿನಲ್ಲಿ ತಡೆರಹಿತವಾಗಿ ಭಾರತೀಯ ಜನತಾ ಪಕ್ಷವೇ ಜಯಭೇರಿ ಬಾರಿಸುತ್ತಿತ್ತು. ಆದರೆ ಈ ಸಲದ ಚುನಾವಣೆಯಲ್ಲಿ ಬಲವಾದ ತಡೆ ನೀಡಿದವರೆಂದರೆ ಪಾಟೀದಾರ ಸಮುದಾಯದ 24ರ..

  December 18, 2017
  ...
  ದೇಶ

  ‘ಗುಜರಾತ್ ಫಲಿತಾಂಶ’: ಕೈಕೊಟ್ಟ ಸಮೀಕ್ಷೆಗಳು; ‘ಕೈ’ಹಿಡಿಯದ ಯೋಗೇಂದ್ರ ಯಾದವ್ ಊಹೆಗಳು!

  ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಗಮನ ಸೆಳೆದ ಹಲವು ವಿಚಾರಗಳಲ್ಲಿ ಯೋಗೇಂದ್ರ ಯಾದವ್ ನುಡಿದ ‘ಭವಿಷ್ಯ’ ಕೂಡ ಒಂದು. ದೇಶದ ಬಹುತೇಕ ಸರ್ವೆ ಏಜೆನ್ಸಿಗಳು, ಮಾಧ್ಯಮಗಳು ಪ್ರಧಾನಿ ಮೋದಿ ತವರು ರಾಜ್ಯ ಬಿಜೆಪಿಗೆ ಅನಾಯಾಸ ತುತ್ತಾಗಲಿದೆ ಎನ್ನುತ್ತಿದ್ದವು. ಅದೇ ವೇಳೆಯಲ್ಲಿ, ಚುನಾವಣಾ ವಿಶ್ಲೇಷಕರೂ ಆಗಿರುವ ಸ್ವರಾಜ್ ಅಭಿಯಾನದ ಯೋಗೇಂದ್ರ ಯಾದವ್ ಭಿನ್ನ ನೆಲೆಯ ಸಾಧ್ಯತೆಗಳನ್ನು ಜನರ ಮುಂದಿಟ್ಟರು. ಯೋಗೇಂದ್ರ ಯಾದವ್ ಸ್ವತಃ ಸೆಫಾಲಜಿಸ್ಟ್; ಚುನಾವಣೆಗಳ ವಿಶ್ಲೇಷಕರು. ಹಿಂದೆ ಆಮ್‌ ಆದ್ಮಿ ಪಕ್ಷದಲ್ಲಿದ್ದಾಗ, ದಿಲ್ಲಿಯ 2014 ಚುನಾವಣೆ ವೇಳೆಯಲ್ಲಿ ಎಎಪಿ..

  December 18, 2017
  ...
  LIVE

  LIVE BLOG: ಅಧಿಕಾರದೆಡೆಗೆ ಬಿಜೆಪಿ ನಡಿಗೆ: ಗುಜರಾತ್ ವಿಧಾನಸಭೆ ಪ್ರವೇಶಿಸಿದ ಇಬ್ಬರು ಹೋರಾಟಗಾರರು

  ನಮಸ್ಕಾರ… ದೇಶದ ಗಮನ ಸೆಳೆದಿರುವ ಗುಜರಾತ್ ವಿಧಾನಸಭಾ ಚುನಾವಣೆ ಹಾಗೂ ಹಿಮಾಚಲ ಪ್ರದೇಶ ಚುನಾವಣೆಗಳ ಫಲಿತಾಂಶ ಇಂದು ಪ್ರಕಟವಾಗಲಿದೆ. ಬೆಳಗ್ಗೆ 8 ಗಂಟೆಗೆ, ಉಭಯ ರಾಜ್ಯಗಳಲ್ಲಿ ಮತ ಎಣಿಕೆ ಆರಂಭವಾಗಲಿದೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ‘ಬೆಳಗ್ಗೆ 11 ಗಂಟೆ ಹೊತ್ತಿಗೆ ಬಿಜೆಪಿ ವಿಜಯ ಖಾತ್ರಿ’ ಎಂದಿದ್ದಾರೆ. ಈಗಾಗಲೇ ಹೊರಬಿದ್ದಿರುವ ಮತಗಟ್ಟೆ ಸಮೀಕ್ಷೆಗಳು ಕೂಡ ಬಿಜೆಪಿ ವಿಜಯವನ್ನೇ ಸಾರಿವೆ. ಇಂತಹ ಎಲ್ಲಾ ಊಹೆಗಳ ಆಚೆಗೆ ಇಂದು ಮಧ್ಯಾಹ್ನದ ವೇಳೆಗೆ ಗುಜರಾತ್ ಗದ್ದುಗೆ ಯಾರ ಪಾಲಾಗಲಿದೆ? ಹಿಮಾಚಲ ಪ್ರದೇಶದಲ್ಲಿ..

  December 18, 2017
  ...
  ದೇಶ

  ಬಾಪೂ ನಾಡಿನ ‘ಹನಿಟ್ರ್ಯಾಪ್‌ ಸರಣಿ’: ಹಾರ್ದಿಕ್ ಪಟೇಲ್, ಬಿಜೆಪಿ ಮತ್ತು ‘ಡರ್ಟಿ ಪಾಲಿಟಿಕ್ಸ್’

  ನಿರೀಕ್ಷೆಯಂತೆಯೇ ಗುಜರಾತ್‌ ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿ ‘ಸೀಡಿಯ’ ಮೊರೆ ಹೋಗಿದೆ; ಹಾರ್ದಿಕ್ ಪಟೇಲ್ ಹೋಲುವ ಖಾಸಗಿ ದೃಶ್ಯಗಳು ಹರಿದಾಡುತ್ತಿವೆ. ಇಲ್ಲಿ ಪಾಟೀದಾರ್ ಸಮುದಾಯದ ಮೀಸಲಾತಿ ಬೇಡಿಕೆ ಮುಂದಿಟ್ಟುಕೊಂಡು ಹೋರಾಟ ನಡೆಸುತ್ತಿರುವ ನಾಯಕ, 24 ವರ್ಷದ ಹಾರ್ದಿಕ್ ಪಟೇಲ್ ಹೋಲುವ ‘ಸೆಕ್ಸ್‌ ಸಿಡಿ’ಯೊಂದು ಹೊರಬಿದ್ದಿದೆ. ಮೊದಲು ಸಾಮಾಜಿಕ ಮಾಧ್ಯಮಗಳಲ್ಲಿ, ನಂತರ ಗುಜರಾತ್‌ನ ಸುದ್ದಿ ವಾಹಿನಿಗಳಲ್ಲಿ ಕಳೆದ 24 ಗಂಟೆಯಿಂದ ಈ ಪ್ರಕರಣ ಭಾರಿ ಸದ್ದು ಮಾಡುತ್ತಿದೆ. ಇದರ ಹಿಂದೆ ಬಿಜೆಪಿಯ ರಾಜಕೀಯ ತಂತ್ರಗಾರಿಕೆ ಇದೆ ಎಂದು ಮಾಧ್ಯಮಗಳ ವರದಿಗಳು ಹೇಳುತ್ತಿವೆ. ಸೀಡಿಯಲ್ಲೇನಿದೆ?: ..

  November 14, 2017
  ...
  ದೇಶ

  ಧರ್ಮ ಮೀರಿಸಿದ ಜಾತಿ ಅಜೆಂಡಾ: ಮೋದಿ- ಶಾ ಜೋಡಿಗೆ ಈ ಬಾರಿ ಗುಜರಾತ್‌ ಸುಲಭದ ತುತ್ತಲ್ಲ

  “ನನ್ನ 30 ವರ್ಷಗಳ ಪತ್ರಿಕೋದ್ಯಮದ ಅನುಭವದಲ್ಲಿ ಇಂತಹದೊಂದು ಚುನಾವಣೆಯ ಅಖಾಡವನ್ನು ನೋಡಿರಲಿಲ್ಲ,” ಎಂದರು ಆಶಿಶ್ ಅಮಿನ್. ಅಹಮದಬಾದ್‌ನಲ್ಲಿರುವ ‘ನವ ಗುಜರಾತ್‌ ಸಮಯ್‌’ ಪತ್ರಿಕೆಯ ರಾಜಕೀಯ ವಿಭಾಗದಲ್ಲಿ ಅವರೀಗ ಪ್ರಧಾನ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಮುಂಬರುವ ಗುಜರಾತ್‌ ಚುನಾವಣೆಯ ಹಿನ್ನೆಲೆಯಲ್ಲಿ ಅನುಭವಿ ವರದಿಗಾರ ಅಮಿನ್‌ ಸಾಕಷ್ಟು ಒಳನೋಟಗಳೊಂದಿಗೆ ಮಾತನಾಡುತ್ತಿದ್ದಾರೆ. “ಇದೇ ಮೊದಲ ಬಾರಿಗೆ ಜಾತಿ ವಿಚಾರ ಚುನಾವಣೆಯ ಕೇಂದ್ರಸ್ಥಾನಕ್ಕೆ ಬಂದಿದೆ. ಕಳೆದ 22 ವರ್ಷಗಳಲ್ಲಿ ಗುಜರಾತ್‌ ಚುನಾವಣೆಗಳು ನಡೆದಿದ್ದು ಧರ್ಮ ಮತ್ತು ಅಭಿವೃದ್ಧಿಯ ತಳಹದಿಯ ಮೇಲೆ. ಆದರೆ ಇದೇ ಮೊದಲ..

  October 24, 2017

FOOT PRINT

Top