An unconventional News Portal.

ಕ್ರೀಡೆ

ಧನ್ವಂತರಿ ಆಸ್ಪತ್ರೆಯಿಂದ ವಿಹಿಂಪ ವೇದಿಕೆಗೆ: ಕಟ್ಟರ್ ಹಿಂದುತ್ವವಾದಿಯ ಜೀವಭಯದ ಕತೆ!

“ನನ್ನನ್ನು ದಶಕಗಳ ಹಿಂದಿನ ಪ್ರಕರಣಗಳಲ್ಲಿ ಸಿಲುಕಿಸಿ, ನನ್ನ ಧ್ವನಿಯನ್ನು ಅಡಗಿಸುವ ಪ್ರಯತ್ನ ನಡೆಯುತ್ತಿದೆ. ರಾಜಸ್ಥಾನದ ಪೊಲೀಸರು ನನ್ನನ್ನು ಬಂಧಿಸಲು ಬಂದಿದ್ದರು. ಎನ್‌ಕೌಂಟರ್‌ನಲ್ಲಿ ನನ್ನ ಹತ್ಯೆಗೈಯುವ ಸಂಚು ರೂಪಿಸಲಾಗಿದೆ

  ...
  ದೇಶ

  ಮುಂಬೈ ಇಂಡಿಯನ್ಸ್ ಓನರ್ ನೀತಾ ಅಂಬಾನಿ: ಭರತನಾಟ್ಯದಿಂದ ಕಾರ್ಪೊರೇಟ್ ರಂಗಸ್ಥಳಕ್ಕೆ!

  ಆತ ರಿಲಾಯನ್ಸ್ ಜಿಯೋ ಟೆಲಿಕಾಂ ಕಂಪನಿಯಲ್ಲಿ ಟವರ್‌ ರಿಪೇರಿ ಮಾಡುವ ಸಾಮಾನ್ಯ ಉದ್ಯೋಗಿ. ಭಾನುವಾರ ಐಪಿಎಲ್ ಪಂದ್ಯಾವಳಿಯ ಕೊನೆಯ ಹಣಾಹಣಿಯ ರೋಚಕತೆಯನ್ನು ತನ್ನ ಪುಟ್ಟ ಮೊಬೈಲ್ ಪರದೆಯ ಮೇಲೆ ಆಸ್ವಾದಿಸುತ್ತಿದ್ದ ಆತ, “ಮುಂಬೈ ಗೆದ್ರೆ ಜಿಯೋ ಆಫರ್ ಮುಂದುವರಿಯಬಹುದು,” ಎಂಬ ಭರವಸೆಯನ್ನು ಇಟ್ಟುಕೊಂಡಿದ್ದ. ಆತನ ಆಶಯ ಹುಸಿ ಹೋಗಲಿಲ್ಲ. ಐಪಿಎಲ್ ಟೂರ್ನಿಯನ್ನು ಮುಂಬೈ ಇಂಡಿಯನ್ಸ್ ಜಯಗಳಿಸಿತು. ಇದರಿಂದ ಜಿಯೋ ಆಫರ್‌ ಅವಧಿ ಹೆಚ್ಚಾಗುತ್ತೋ, ಬಿಡುತ್ತೋ ಗೊತ್ತಿಲ್ಲ. ಆದರೆ, ಸಹಜವಾಗಿಯೇ ಇದು ತಂಡದ ಪ್ರೊಮೋಟರ್ಗಳಾದ ನೀತಾ ಅಂಬಾನಿ ಮತ್ತು ಇತರ..

  May 22, 2017
  ...
  ರಾಜ್ಯ

  ‘ಬಿಗ್ ಬ್ರದರ್’ನಿಂದ ‘ಬಿಗ್ ಬಾಸ್’ವರೆಗೆ: ಖಾಸಗಿತನದ ಮಾರಾಟ; ಕುತೂಹಲ ಎಂಬ ಬಂಡವಾಳ!

  ದಕ್ಷಿಣ ಭಾರತದ ಮನೋರಂಜನಾ ವಾಹಿನಿಗಳಲ್ಲಿ ಪ್ರಸಾರವಾಗುತ್ತಿರುವ ಕಾರ್ಯಕ್ರಮಗಳ ಪೈಕಿ ಅತೀ ಹೆಚ್ಚು ಹೂಡಿಕೆ ಕಂಡ ‘ಬಿಗ್ ಬಾಸ್- ಕನ್ನಡ’ ಕಾರ್ಯಕ್ರಮದ ನಾಲ್ಕನೇ ಅವತರಿಣಿಕೆಗೆ ಶನಿವಾರ ತೆರೆ ಬೀಳಲಿದೆ. ಉಳಿದಿರುವ ಐವರ ಪೈಕಿ ಒಬ್ಬರು 50 ಲಕ್ಷದ ಬಹುಮಾನದ ಮೊತ್ತ (ಇದರಲ್ಲಿ ತೆರಿಗೆ ಕಳೆದು 30 ಲಕ್ಷ ಕೈಗೆ ಬರಬಹುದು)ವನ್ನು ಗೆದ್ದುಕೊಳ್ಳಲಿದ್ದಾರೆ. ವಿಜೇತರನ್ನು ವೀಕ್ಷಕರು ಕಳುಹಿಸುವ ಎಸ್ಎಂಎಸ್ಗಳು ನಿರ್ಧರಿಸಲಿವೆ. ಕಳೆದ ಮೂರು ತಿಂಗಳಿನಿಂದ ‘ಕಲರ್ಸ್ ಕನ್ನಡ’ ಮತ್ತು ‘ಕಲರ್ಸ್ ಸೂಪರ್’ ಚಾನಲ್ಗಳಲ್ಲಿ ಈ ಕಾರ್ಯಕ್ರಮ ಪ್ರಸಾರವಾಗುತ್ತಿದೆ. ‘ಬಿಗ್ ಬಾಸ್’ ಎಂಬ ಕಾರ್ಯಕ್ರಮ ಅದರ..

  January 27, 2017
  ...
  ದೇಶ

  ‘ಕ್ರೀಡಾ ರಾಜಕೀಯ’: ಕರ್ನಾಟಕದ ಮಹಿಳಾ ಕ್ರೀಡಾಪಟುಗಳ ಮೇಲೆ ದಿಲ್ಲಿಯಲ್ಲಿ ಹಲ್ಲೆ

  ಬೆಂಗಳೂರಿನಲ್ಲಿ ಮಹಿಳೆಯರ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ವಿಚಾರದಲ್ಲಿ ದಿಲ್ಲಿ ಕೇಂದ್ರಿತ ರಾಷ್ಟ್ರೀಯ ಮಾಧ್ಯಮಗಳು ‘ಸುದ್ದಿ ಗದ್ದಲ’ವನ್ನು ಎಬ್ಬಿಸಿವೆ. ಅದೇ ವೇಳೆ, ದಿಲ್ಲಿಯಲ್ಲಿ ನಡೆದ ರಾಷ್ಟ್ರೀಯ ಥ್ರೋ ಬಾಲ್ ಚಾಂಪಿಯನ್ಶಿಪ್ ಕ್ರೀಡಾಕೂಟದಲ್ಲಿ ಕರ್ನಾಟಕದ ವಿದ್ಯಾರ್ಥಿನಿಯರ ಮೇಲೆ ಹಲ್ಲೆ ನಡೆದಿದೆ. ಘಟನೆ ನಡೆದು 24 ಗಂಟೆಗಳು ಕಳೆದಿದ್ದರೂ, ಈವರೆಗೆ ತಮಿಳುನಾಡಿನ ವಾಹಿನಿಗಳನ್ನು ಹೊರತು ಪಡಿಸಿ, ರಾಷ್ಟ್ರೀಯ ಮಾಧ್ಯಮಗಳಾಗಲೀ, ಕರ್ನಾಟಕದ ಮಾಧ್ಯಮಗಳಲ್ಲಿ ‘ಗದ್ದಲ’ ಹಾಳಾಗಿ ಹೋಗಲೀ, ಸುದ್ದಿಯೂ ಪ್ರಸಾರವಾಗಿಲ್ಲ. ಈ ಸಮಯದಲ್ಲಿ ದಿಲ್ಲಿಯಲ್ಲಿ ನಡೆದ ಘಟನೆಯ ಕುರಿತು ‘ಸಮಾಚಾರ’ಕ್ಕೆ ಸಿಕ್ಕಿರುವ ಚಿತ್ರಗಳು, ವಿಡಿಯೋಗಳನ್ನು..

  January 6, 2017
  ...
  ಕ್ರೀಡೆ

  ಲೋಧಾ V/S ಬಿಸಿಸಿಐ: ಕ್ರಿಕೆಟ್ ನಿಯಂತ್ರಣ ಮಂಡಳಿ ಮೇಲೆ ಸುಪ್ರಿಂ ಗದಾ ಪ್ರಹಾರ!

  ಲೋಧಾ ಸಮಿತಿಯ ತೀರ್ಮಾನಗಳನ್ನು ತಳ್ಳಿ ಹಾಕಲು ಹೋದ ಬಿಸಿಸಿಐಗೆ ಸುಪ್ರಿಂ ಕೋರ್ಟ್ ಸರಿಯಾಗಿ ಚಾಟಿ ಬೀಸಿದೆ. ಶುಕ್ರವಾರ ಮಹತ್ವದ ತೀರ್ಪು ನೀಡಿರುವ ನಾಯ್ಯಾಲಯ ಬಿಸಿಸಿಐ ಮತ್ತು ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ನಡುವಿನ ಹಣಕಾಸು ವ್ಯವಹಾರಗಳನ್ನು ತಕ್ಷಣಕ್ಕೆ ನಿಲ್ಲಿಸುವಂತೆ ಸೂಚನೆ ನೀಡಿದೆ. ‘ಲೋಧಾ ಸಮಿತಿ’ ತೀರ್ಮಾನಗಳ ಅನ್ವಯ ಸುಧಾರಣೆಗಳನ್ನು ಮೊದಲು ಜಾರಿಗೆ ತನ್ನಿ. ಅಲ್ಲಿವರೆಗೆ ಬಿಸಿಸಿಐ ಪಂದ್ಯಗಳ ಹಣ ಪಾವತಿಯ ವಿಚಾರದಲ್ಲೂ ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ ಹಣ ಬಿಡುಗಡೆ ಮಾಡದಂತೆ ಕಟುವಾಗಿ ಎಚ್ಚರಿಕೆ  ನೀಡಿದೆ. ಶುಕ್ರವಾರ ನಡೆದ ವಿಚಾರಣೆಯಲ್ಲಿ..

  October 21, 2016
  ...
  ಸುದ್ದಿ ಸಾರ

  ಬಿಸಿಸಿಐ vs ಲೋಧಾ: ನ್ಯೂಜಿಲ್ಯಾಂಡ್ ಸರಣಿ ಮೇಲೆ ತೂಗುಗತ್ತಿ

  ನ್ಯಾಯಮೂರ್ತಿ ಲೋಧಾ ಮತ್ತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾಳಗ ತಾರಕಕ್ಕೇರಿದೆ. ಲೋಧಾ ಸಮಿತಿ ಬಿಸಿಸಿಐನ ಬ್ಯಾಂಕ್ ಖಾತೆಗಳ ವ್ಯವಹಾರ ನಿಲ್ಲಿಸುವಂತೆ ಸೂಚಿಸಿದ್ದರಿಂದ ಅನಿವಾರ್ಯವಾಗಿ ನ್ಯೂಜಿಲ್ಯಾಂಡ್ ಜೊತೆಗಿನ ಸರಣಿ ಅರ್ಧಕ್ಕೆ ಮೊಟಕುಗೊಳಿಸಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ. ಈ ಮೂಲಕ ಹಣದ ಅಮಲಿನಲ್ಲಿ ತೇಲುತ್ತಿದ್ದ ಬಿಸಿಸಿಐಗೆ ಕೊನೆಗೂ ಕಾನೂನಿನ ಬಿಸಿ ಮುಟ್ಟಿದೆ. ಸದ್ಯ ಭಾರತ ಮತ್ತು ನ್ಯೂಜಿಲ್ಯಾಂಡ್ ಮಧ್ಯೆ ಕ್ರಿಕೆಟ್ ಸರಣಿ ನಡೆಯುತ್ತಿದೆ. ಇನ್ನೂ ಒಂದು ಟೆಸ್ಟ್ ಹಾಗೂ 5 ಏಕದಿನ ಪಂದ್ಯಗಳು ಬಾಕಿ ಉಳಿದಿವೆ. ಹೀಗಿರುವಾಗಲೇ ಸರಣಿ..

  October 4, 2016
  ...
  ದೇಶ

  ‘ಪ್ಯಾರಲಂಪಿಕ್ಸ್’ನಲ್ಲಿ ರಾಷ್ಟ್ರಗೀತೆ ಮೊಳಗಿಸಿದವರು ಮತ್ತು ಪ್ರಚಾರದ ಹೊರತಾದ ಉದ್ದೇಶಗಳು!

  ಭಾರತದ ಕ್ರೀಡಾಪಟುಗಳು ಒಲಂಪಿಕ್ಸಿನಲ್ಲಿ ಮಿಂಚದಿದ್ದರೂ ಪ್ಯಾರಲಂಪಿಕ್ಸಿನಲ್ಲಿ ಮಿಂಚುತ್ತಿದ್ದಾರೆ. ಎರಡು ಚಿನ್ನ, ಒಂದು ಬೆಳ್ಳಿ, ಒಂದು ಕಂಚಿನೊಂದಿಗೆ ದೇಶದ ಕ್ರೀಡಾಪಟುಗಳು ಪ್ಯಾರಲಂಪಿಕ್ಸ್ ಕ್ರೀಡಾಕೂಟದಲ್ಲಿ ಎರಡು ಬಾರಿ ರಾಷ್ಟ್ರಗೀತೆ ಮೊಳಗಿಸಿದ್ದಾರೆ. ಭಾರತವನ್ನು 42ನೇ ಸ್ಥಾನದಲ್ಲಿ ತಂದು ಬಿಟ್ಟಿದ್ದಾರೆ. ಸಾಮಾನ್ಯರಿಗೆ ಸಾಧ್ಯವಾಗದ್ದನ್ನು ಈ ವಿಶೇಷ ಚೇತನರು ಸಾಧಿಸಿ ತೋರಿಸಿದ್ದಾರೆ. ಮರಿಯಪ್ಪನ್ ತಂಗವೇಲು ಪುರುಷರ ಹೈ ಜಂಪ್ ನಲ್ಲಿ ಚಿನ್ನದ ಪದಕ ಗೆದ್ದಿದ್ದರೆ, ಜಾವೆಲಿನ್ ಎಸೆತದಲ್ಲಿ ದೇವೇಂದ್ರ ಝಝರಿಯಾ ಚಿನ್ನ ಗೆದ್ದಿದ್ದಾರೆ. 2004ರ ಅಥೆನ್ಸ್ ಪ್ಯಾರಲಂಪಿಕ್ನಲ್ಲಿ ಚಿನ್ನ ಗೆದ್ದಿದ್ದ ದೇವೇಂದ್ರ ಈ ಬಾರಿ ಮತ್ತೆ..

  September 17, 2016
  ...
  ದೇಶ

  ಒಲಂಪಿಕ್ ‘ಬೆಳ್ಳಿ ಪದಕ’ಕ್ಕೆ ಮುತ್ತಿಕ್ಕಿದ ಪಿ. ವಿ. ಸಿಂಧು; ನೆರವಿಗೆ ಬಾರದ ಮೋದಿ ಸರಕಾರದ ‘ಯುದ್ಧ ಕಾಲದ ಶಸ್ತ್ರಭ್ಯಾಸ’!

  ಒಲಂಪಿಕ್ ಕ್ರೀಡಾಕೂಟದ ಕೊನೆಯ ಕ್ಷಣಗಳಲ್ಲಿ ಭಾರತಕ್ಕೆ ಮತ್ತೊಂದು ‘ಪದಕ’ ಸಿಕ್ಕಿದೆ. ಶಟಲ್ ಬ್ಯಾಡ್ಮಿಂಟನ್ ವಿಭಾಗದಲ್ಲಿ, ದಕ್ಷಿಣ ಭಾರತದ ಆಟಗಾರ್ತಿ ಪುಸಾರ್ಲ ವೆಂಕಟ ಸಿಂಧು ಬೆಳ್ಳಿ ಪದಕವನ್ನು ಪಡೆದುಕೊಂಡಿದ್ದಾರೆ. ಯಾರೂ ನಿರೀಕ್ಷಿಸದ ರೀತಿಯಲ್ಲಿ ಫೈನಲ್ ಪ್ರವೇಶಿಸಿ; ಪದಕ ಗೆಲ್ಲುವುದರೊಂದಿಗೆ ದೇಶದೊಳಗಿನ ಒಲಂಪಿಕ್ ಕನಸಿಗೆ ನೀರೆದಿದ್ದಾರೆ. ಫೈನಲ್ ಪಂದ್ಯದಲ್ಲಿ ಸ್ಪೇನಿನ ಕ್ಯಾರೋಲಿನ್ ಮರಿನ್ ವಿರುದ್ಧ ವಿರೋಚಿತ ಸೋಲು ಕಂಡರು. ಮೊದಲ ಸೆಟ್ ನಲ್ಲಿ 21-19ರಿಂದ ಸೆಟ್ ಗೆದ್ದು ಗೆಲುವಿನತ್ತ ಮುಖ ಮಾಡಿದ್ದ ಸಿಂಧು ನಂತರದ ಎರಡೂ ಸೆಟ್ ಗಳಲ್ಲಿ 12-21, 15-21 ರಿಂದ..

  August 19, 2016
  ...
  ವಿದೇಶ

  ಒಲಂಪಿಕ್ಸ್‌ನಿಂದ ಹೊರಬಿದ್ದ ಘಟಾನುಘಟಿಗಳು: ಭಾರತದ ನೀರಸ ಪ್ರದರ್ಶನಕ್ಕೆ ಚೀನಾ ನೀಡಿದ ಕಾರಣಗಳಿವು!

  ರಿಯೋ ಒಲಂಪಿಕ್ಸ್‌ನಲ್ಲೂ ಭಾರತೀಯರ ನೀರಸ ಪ್ರದರ್ಶನ ಮುಂದುವರಿದಿದೆ. ಗುರುವಾರ ದೇಶದ ಘಟಾನುಘಟಿ ಆಟಗಾರರು ಸೋಲನುಭಸಿದ್ದಾರೆ. ಈ ಹಿನ್ನೆಲೆಯಲ್ಲಿ ಒಲಂಪಿಕ್ಸ್‌ನಲ್ಲಿ ಭಾರತದ ನೀರಸ ಪ್ರದರ್ಶನಕ್ಕೆ ಕಾರಣಗಳೇನು ಎಂದು ಚೀನಾದ ಮಾಧ್ಯಮಗಳು ವಿಶ್ಲೇಷಣೆ ಮಾಡಿವೆ. ಒಲಂಪಿಕ್ಸ್ನಲ್ಲಿ ಗುರುವಾರ ಭಾರತದ ಪಾಲಿಗೆ ಸೋಲಿನ ದಿನ. ದೇಶದ ಭರವಸೆಯ ಆಟಗಾರರು ತಮ್ಮ ಒಲಂಪಿಕ್ಸ್ ಯಾತ್ರೆ ಮುಗಿಸಿದ್ದಾರೆ. ಮಹಿಳೆಯರ ಬ್ಯಾಡ್ಮಿಂಟನ್ ಡಬಲ್ಸ್ ನಲ್ಲಿ ಜ್ವಲಾ ಗುಟ್ಟಾ ಮತ್ತು ಅಶ್ವಿನಿ ಪೊನ್ನಪ್ಪ, ಪುರಷರ ಡಬಲ್ಸ್ ಬ್ಯಾಟ್ಮಿಂಟನಿನಲ್ಲಿ ಮನು ಅತ್ರಿ ಮತ್ತು ಬಿ. ಸುಮಿತ್ ರೆಡ್ಡಿ ಸೋಲನುಭವಿಸಿದ್ದಾರೆ. ಪಿ. ವಿ…

  August 11, 2016

FOOT PRINT

Top