An unconventional News Portal.

ಕಿಮ್ಮನೆ ರತ್ನಾಕರ್
    ...
    PU-board-exam-paper
    ರಾಜ್ಯ

    ಪಿಯುಸಿ ಫಲಿತಾಂಶ ಕಂಪ್ಲೀಟ್ ಡಿಟೇಲ್ಸ್: ಬಡವರ ಮಕ್ಕಳ ಸಾಧನೆ, ನಕಲು ತಡೆಯಿಂದ ಫಲಿತಾಂಶ ಕುಸಿತ

    ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಈ ಬಾರಿ ಶೇ 57. 20 ರಷ್ಟು ಫಲಿತಾಂಶ ಬಂದಿದೆ. ಎಂದಿನಂತೆ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಕಳೆದ ಸಾಲಿನ ಫಲಿತಾಂಶಕ್ಕೆ ಹೋಲಿಸಿದರೆ ಈ ಬಾರಿ ಶೇ 3.32 ರಷ್ಟು ಫಲಿತಾಂಶ ಕುಸಿತ ಕಂಡಿದೆ. ಜಿಲ್ಲಾವಾರು ಫಲಿತಾಂಶದಲ್ಲಿ ದಕ್ಷಿಣ ಕನ್ನಡ( 90.480) ಮೊದಲ ಸ್ಥಾನ ಪಡೆದರೆ, ಉಡುಪಿ( 90.35) ಎರಡನೇ ಸ್ಥಾನ, ಕೊಡಗು(79.35) ಮೂರನೇ ಸ್ಥಾನ ಹಾಗೂ ಯಾದಗಿರಿ (44.16) ಕೊನೆಯ ಸ್ಥಾನಗಳಿಸಿವೆ. ಕಲಾ ವಿಭಾಗದಲ್ಲಿ ಶೇ. 42.12, ವಾಣಿಜ್ಯ ವಿಭಾಗ ಶೇ.64.16,..

    May 25, 2016
    ...
    sslc-results-1
    ರಾಜ್ಯ

    SSLC ಫಲಿತಾಂಶ ಕಂಪ್ಲೀಟ್ ಡೀಟೆಲ್ಸ್: ಗ್ರಾಮೀಣ ಮಕ್ಕಳ ಮೇಲುಗೈ; ದಾಖಲೆ ಬರೆದ ಪ್ರಥಮ ರ್ಯಾಂಕ್!

    ಪ್ರಸಕ್ತ ಸಾಲಿನ ಎಸ್ಎಸ್ಎಲ್ಸಿ ಫಲಿತಾಂಶ  ಸೋಮವಾರ ಪ್ರಕಟಗೊಂಡಿದ್ದು ರಾಜ್ಯಾದ್ಯಂತ ಶೇ. 79.16 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ನಿರೀಕ್ಷೆಯಂತೆಯೇ ಇದರಲ್ಲಿ ಬಾಲಕಿಯರ ಸಂಖ್ಯೆ ಹೆಚ್ಚಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಫಲಿತಾಂಶ ಶೇ.2 ರಷ್ಟು ಕುಸಿತ ಕಂಡಿದೆ. ಅಚ್ಚರಿ ಎಂಬಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ರಾಜ್ಯದಲ್ಲೇ ಅತಿ ಹೆಚ್ಚು ಫಲಿತಾಂಶ ದಾಖಲಿಸಿದ ಜಿಲ್ಲೆಯಾಗಿ ಹೊರಹೊಮ್ಮಿದೆ. ಬುದ್ದಿವಂತರ ಜಿಲ್ಲೆ ಎಂದೇ ಕರೆಯಲ್ಪಡುವ ಉಡುಪಿ ಎರಡನೆ ಸ್ಥಾನ ಪಡೆದರೆ, ಮಂಗಳೂರು ತೃತೀಯ ಸ್ಥಾನ ಪಡೆದಿದೆ. ಉತ್ತರ ಕನ್ನಡ ಜಿಲ್ಲೆ 4 ನೇ ಸ್ಥಾನದಲ್ಲಿದ್ದರೆ, ಬಳ್ಳಾರಿ ಕೊನೆಯ ಸ್ಥಾನದಲ್ಲಿದೆ. ಪರೀಕ್ಷೆಗೆ ಹಾಜರಾದ 7,88,442..

    May 16, 2016
    ...
    kimmane-rathnakar-education-puc
    ರಾಜ್ಯ

    ಪಿಯು ಮೌಲ್ಯಮಾಪನ ಪರ್ಯಾಯದ ಸುತ್ತ ಅಪಸ್ವರ: ಮುಂದುವರಿದ ಬಿಕ್ಕಟ್ಟು

    ಕಳೆದ 16 ದಿನಗಳಿಂದ ಉಪನ್ಯಾಸಕರು ನಡೆಸುತ್ತಿರುವ ಪ್ರತಿಭಟನೆ ಹಿನ್ನೆಲೆಯಲ್ಲಿ ಪಿಯುಸಿ ಮೌಲ್ಯಮಾಪನ ಸುತ್ತ ಅತಂತ್ರ ಪರಿಸ್ಥಿತಿ ಮುಂದುವರಿದಿದೆ. ಒಂದೆಡೆ ಪ್ರತಿಭಟನಾಕಾರರ ಬೇಡಿಕೆಗೆ ಮಣಿಯದ ಸರಕಾರ ಪರ್ಯಾಯ ವ್ಯವಸ್ಥೆಯ ಮಾತುಗಳನ್ನು ಜಪಿಸಲು ಶುರುಮಾಡಿ ವಾರದ ಮೇಲಾಗಿದೆ. ಆದರೆ, ಈವರೆಗೂ ಪಿಯುಸಿ ಮೌಲ್ಯ ಮಾಪನ ಪ್ರಕ್ರಿಯೆಗೆ ಚಾಲನೆ ನೀಡಲು ಸಾಧ್ಯವಾಗಲಿಲ್ಲ. ಭಾನುವಾರ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್, “ಅನುದಾನ ರಹಿತ ಕಾಲೇಜುಗಳ 7 ಸಾವಿರ ಉಪನ್ಯಾಸಕರಿಗೆ ಮೌಲ್ಯಮಾಪನಕ್ಕೆ ಹಾಜರಾಗಿವಂತೆ ಆದೇಶ ನೀಡಲಾಗಿದೆ. 4 ಸಾವಿರ ಪ್ರೌಢಶಾಲೆ..

    April 18, 2016
    ...
    kimmane-education
    ರಾಜ್ಯ

    ಶುರುವಾಗದ ಪಿಯು ಮೌಲ್ಯಮಾಪನ: ಪರ್ಯಾಯ ನಿಜಕ್ಕೂ ಇದ್ಯಾ?

    ಪಿಯುಸಿ ಮೌಲ್ಯಮಾಪನ ಗೊಂದಲ ರಾಮನವಮಿಗೂ ಅಂತ್ಯಕಾಣುವ ಲಕ್ಷಣ ಶುಕ್ರವಾರ ಇಡೀ ದಿನ ಗೋಚರಿಸಲಿಲ್ಲ. ಗುರುವಾರ ಮೌಲ್ಯಮಾಪನ ಶುರುಮಾಡಿಯೇ ಬಿಡುತ್ತೀವಿ, ನಮ್ಮ ಬಳಿ ಪರ್ಯಾಯ ವ್ಯವಸ್ಥೆ ಇದೆ ಎಂದಿದ್ದ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅವರ ಮಾತುಗಳು ಹೇಳಿಕೆಯಾಗಿಯೇ ಉಳಿಯಿತು. ಅತ್ತ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನಾ ನಿರತ ಉಪನ್ಯಾಸಕರು ಮತ್ತು ಪ್ರಾಂಶುಪಾಲರು ಧರಣಿ, ಉಪವಾಸ ಸತ್ಯಾಗ್ರಹ ಮುಂದುವರಿಸಿದ್ದಾರೆ. ಹೇಗೇ ನೋಡಿದರೂ ಈ ವರ್ಷದ ಪಿಯುಸಿ ಫಲಿತಾಂಶ ಮೇ ಮೊದಲ ವಾರದಲ್ಲಿ ಪ್ರಕಟವಾಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಒಂದು ಕಡೆ ಪ್ರಶ್ನೆ ಪತ್ರಿಕೆ..

    April 15, 2016
    ...
    protest-pu-freedom park
    ರಾಜ್ಯ

    ಪಿಯುಸಿ ಮೌಲ್ಯಮಾಪನಕ್ಕೆ ಪರ್ಯಾಯದ ಆಟ: ಎಂಎಲ್ಸಿಗಳ ಮೇಲೆ ಚಪ್ಪಲಿ ತೂರಾಟ

    ಪಿಯುಸಿ ಉಪನ್ಯಾಸಕರ ಪ್ರತಿಭಟನೆಯಿಂದಾಗಿ ವಿಳಂಬವಾಗಿದ್ದ ಪಿಯು ಮೌಲ್ಯಮಾಪನ ಪ್ರಕ್ರಿಯೆ ಏ.16 ರಿಂದ ಆರಂಭವಾಗಲಿದೆ ಎನ್ನುವ ಮಾಹಿತಿ ಪಿಯು ಮಂಡಳಿ ಉನ್ನತ ಮೂಲಗಳಿಂದ ಲಭ್ಯವಾಗಿದೆ. ಮೇ ಮೊದಲ ವಾರ ಫಲಿತಾಂಶ ಹೊರ ಬರುವ ಸಾಧ್ಯತೆ ಇದೆ ಎನ್ನಲಾಗಿದೆ. ಇದರ ನಡುವೆ ವೇತನ ತಾರತಮ್ಯ ನಿವಾರಣೆ ನಿಟ್ಟಿನಲ್ಲಿ’ಕುಮಾರ್ ನಾಯಕ್ ವರದಿ’ ಜಾರಿಗೆ ಆಗ್ರಹಿಸಿ ಉಪನ್ಯಾಸಕರು ಪಿಯುಸಿ ಮೌಲ್ಯಮಾಪನ ಬಹಿಷ್ಕರಿಸಿ ಕಳೆದ 12 ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಬಹಿಷ್ಕಾರಕ್ಕೆ ಬಗ್ಗದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ..

    April 14, 2016
    ...
    cid_bangalore_office_1
    ಸುದ್ದಿ ಸಾರ

    ಸಿಐಡಿ ಪೊಲೀಸರಿಂದ ಜಸ್ಟ್ ಮಿಸ್ಸಾದ ಶಿವಕುಮಾರ ಸ್ವಾಮಿ!

    ಪಿಯುಸಿ ರಸಾಯನ ಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಪ್ರಮುಖ ಆರೋಪಿ ಸಿಐಡಿ ಪೊಲೀಸರಿಂದ ಕೂದಲೆಳೆ ಅಂತರದಲ್ಲಿ ಪಾರಾದ ಘಟನೆ ಭಾನುವಾರ ನಡೆದಿದೆ. ಆರೋಪಿ ಶಿವಕುಮಾರ್ ಅಲಿಯಾಸ್ ಶಿವಕುಮಾರ ಸ್ವಾಮಿ, ಬೆಂಗಳೂರಿನ ಹೊಸಕೆರೆಹಳ್ಳಿ ಬಳಿಯ ಡಯಗ್ನೋಸಿಸ್ ಸೆಂಟರ್ ಒಂದರಲ್ಲಿ ಎರಡು ದಿನಗಳಿಂದ ಚಿಕಿತ್ಸೆ ನೆಪದಲ್ಲಿ ತಂಗಿದ್ದ ಎಂಬ ಮಾಹಿತಿ ಪೊಲೀಸರಿಗೆ ತಡವಾಗಿ ಲಭ್ಯವಾಗಿತ್ತು. ಸಿಐಡಿಯ ಒಂದು ತಂಡ ಸದರಿ ಡಯಾಗ್ನೋಸಿಸ್ ಸೆಂಟರ್ಗೆ ಭೇಟಿ ನೀಡುವ ಮೊದಲೇ ಆತ ಅಲ್ಲಿಂದ ಪರಾರಿಯಾಗಿದ್ದ ಎಂದು ಉನ್ನತ ಮೂಲಗಳು ಸ್ಪಷ್ಟಪಡಿಸಿವೆ. ಸದ್ಯ,..

    April 11, 2016
    ...
    protest-pu-freedom park
    ರಾಜ್ಯ

    ಮತ್ತೆ ಮುರಿದು ಬಿದ್ದ ಸಂಧಾನ ಸಭೆ: ಪಿಯುಸಿ ಮೌಲ್ಯಮಾಪನದ ಗೊಂದಲ ಮುಂದುವರಿಕೆ

    ವೇತನ ಹೆಚ್ಚಳಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ಪಿಯುಸಿ ಉಪನ್ಯಾಸಕರ ಜತೆ ಭಾನುವಾರ ನಡೆಸಿದ ಸರಕಾರದ ಮಾತುಕತೆ ಮತ್ತೆ ಮುರಿದು ಬಿದ್ದಿದೆ. ಈ ಮೂಲಕ, ಪಿಯುಸಿ ಮೌಲ್ಯಮಾಪನದ ಡೋಲಾಯಮಾನ ಪರಿಸ್ಥಿತಿ ಇನ್ನಷ್ಟು ದಿನಗಳು ಮುಂದುವರಿಯಲಿದೆ. ಭಾನುವಾರ ಬೆಂಗಳೂರಿನ ಕೆ. ಆರ್. ವೃತ್ತದ ಬಳಿ ಇರುವ ‘ಸರ್ವ ಶಿಕ್ಷಣ ಅಭಿಯಾನ’ ಯೋಜನೆ ನಿರ್ದೇಶಕರ ಕಚೇರಿಯಲ್ಲಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಪ್ರತಿಭಟನಾಕಾರರ ಜತೆ ಸಭೆ ಕರೆದಿದ್ದರು. ಸಭೆ ಆರಂಭವಾಗುತ್ತಿದ್ದಂತೆ, ಸಚಿವ ಕಿಮ್ಮನೆ ರತ್ನಾಕರ್, “ವೇತನ ಪರಿಷ್ಕರಣೆ ವಿಚಾರದಲ್ಲಿ ಸರಕಾರ ಮಧ್ಯದ..

    April 10, 2016
    ...
    protest-pu-freedom park
    ರಾಜ್ಯ

    ಉಗಾದಿಗೆ ನಿರ್ಧಾರ ಪ್ರಕಟಿಸಲಿರುವ ಸರಕಾರ: ಉಪನ್ಯಾಸಕರಿಗೆ ಸಿಹಿನೋ? ಕಹಿನೋ?

    ದ್ವಿತೀಯ ಪಿಯುಸಿ ಉಪನ್ಯಾಸಕರ ಪ್ರತಿಭಟನೆ ಗುರುವಾರ ಐದನೇ ದಿನಕ್ಕೆ ಕಾಲಿಟ್ಟಿದೆ. ಉಪನ್ಯಾಸಕರು ಮುಷ್ಕರ ಕೈ ಬಿಡುತ್ತಿಲ್ಲ; ಸರಕಾರ ಬೇಡಿಕೆಗಳಿಗೆ ಮಣಿಯುತ್ತಿಲ್ಲ. ಇವರ ನಡುವಿನ ಗುದ್ದಾಟಕ್ಕೆ ಪಿಯುಸಿ ಫಲಿತಾಂಶ ವಿಳಂಬವಾಗುವ ಸ್ಪಷ್ಟ ಸೂಚನೆ ಸಿಕ್ಕಿದೆ. ವೇತನ ತಾರತಮ್ಯ ನಿವಾರಣೆಯಾಗುವವರೆಗೂ ಹೋರಾಟ ಕೈಬಿಡುವುದಿಲ್ಲ ಎಂದು ಉಪನ್ಯಾಸಕರು ಪಟ್ಟು ಹಿಡಿದಿದ್ದಾರೆ. ಗುರುವಾರ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಕರ್ ಪ್ರತಿಭಟನಾನಿರತ ಉಪನ್ಯಾಸಕರ ಸಭೆ ಕರೆದಿದ್ದರು. ಆದರೆ ಬೇಡಿಕೆಗಳ ಈಡೇರಿಕೆ ವಿಚಾರದಲ್ಲಿ ಸಹಮತ ಬರದ ಹಿನ್ನೆಲೆಯಲ್ಲಿ ಸಭೆ ವಿಫಲವಾಗಿದೆ. ಉಗಾದಿ ರಜೆ ದಿನ ಶುಕ್ರವಾರ ಮತ್ತೆ ಸಭೆಯನ್ನು..

    April 7, 2016
    ...
    CID Exclusive
    ರಾಜ್ಯ

    ‘ಜುಗಾರಿ ಕ್ರಾಸ್’ಗೆ ಬಂದು ನಿಂತ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ: ಯಾರು ಆ ‘ಬಾಸ್’?

    ವಿಧಾನಸೌಧದಿಂದ ಅನತಿ ದೂರದಲ್ಲಿರುವ ಸಿಐಡಿಯ ಬಿಳಿ ಬಣ್ಣದ ಭವ್ಯ ಕಟ್ಟಡದೊಳಗೆ ದೊಡ್ಡ ಮಟ್ಟದ ಸಂಚಲನ ಶುರುವಾಗಿದೆ. ಪಿಯುಸಿ ‘ರಸಾಯನ ಶಾಸ್ತ್ರ’ದ ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನಲೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳನ್ನು ತನಿಖೆ ನಡೆಸುತ್ತಿರುವ ಸಿಐಡಿ ತಂಡಕ್ಕೆ ಮಹತ್ವದ ಸುಳಿವು ಲಭ್ಯವಾಗಿದೆ. ಅದು ‘ಬಾಸ್’ ಅಲಿಯಾಸ್ ‘ಚೀಫ್’ ಎಂಬ ಅನಾಮಧೇಯ ವ್ಯಕ್ತಿಯ ಬಗೆಗಿನ ಸ್ಫೋಟಕ ಮಾಹಿತಿ. ಈ ಬಾರಿ ಇದು, ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ‘ಶಿವಕುಮಾರ್  ಎಂಬ ಕಿಂಗ್ ಪಿನ್’ಗೆ ಮಾತ್ರವೇ ಸೀಮಿತಗೊಳ್ಳುವ ‘ಹಗರಣ’ ಇದಲ್ಲ ಎಂಬುದು ತನಿಖೆಯನ್ನು ಮುನ್ನಡೆಸುತ್ತಿರುವ ಹಿರಿಯ ಅಧಿಕಾರಿಗಳಿಗೆ ಮನವರಿಕೆ ಆದಂತಿದೆ. ಆದರೂ,..

    April 6, 2016
    ...
    cid_bangalore_office_1
    ರಾಜ್ಯ

    ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ: ಸಚಿವರ ಆಪ್ತ ಸೇರಿ ಮೂವರ ಬಂಧನ

    ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರರಕಣದಲ್ಲಿ ಸಚಿವರ ಆಪ್ತ ಸಹಾಯಕ ಸೇರಿದಂತೆ ಸೋಮವಾರ ಮೂವರ ಬಂಧನವಾಗಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಡಿಐಜಿ ಸೋನಿಯಾ ನಾರಂಗ್ ಈ ಸಂಬಂಧ ಮಧ್ಯಾಹ್ನದ ವೇಳೆಗೆ ಮಾಹಿತಿ ಹೊರಗೆಡವಿದ್ದಾರೆ. ವೈದ್ಯಕೀಯ ಶಿಕ್ಷಣ ಸಚಿವ ಶರಣ್ ಪ್ರಕಾಶ್ ಪಾಟೀಲ್ ಜತೆ ವಿಶೇಷಾಧಿಕಾರಿಯಾಗಿದ್ದ ಓಬಳರಾಜು ಎಂಬಾತನನ್ನು ಬಂಧಿಸಲಾಗಿದೆ.  ವಿಜಯ ನಗರದ ಕೇಂಬ್ರಿಡ್ಜ್ ಕಾಲೇಜಿನಲ್ಲಿ ದೈಹಿಕ ಶಿಕ್ಷಕ ಮಂಜುನಾಥ್ ಹಾಗೂ ಲೋಕೋಪಯೋಗಿ ಇಲಾಖೆ ಕಚೇರಿ ನಿರ್ವಾಹಕ ರುದ್ರಪ್ಪ ಉಳಿದ ಬಂಧಿತರು. ಶಿಕ್ಷನ ಮಂಜುನಾಥ್ ಮತ್ತೊಬ್ಬ ಆರೋಪಿಯಿಂದ ಪ್ರಶ್ನೆ ಪತ್ರಿಕೆ..

    April 4, 2016
  • 1
  • 2

Top