An unconventional News Portal.

ಕಾವೇರಿ
  ...
  Cuavery rapid action force
  ಕಾವೇರಿ ವಿವಾದ

  ಪ್ರಧಾನಿ ಅಂಗಳಕ್ಕೆ ‘ಕಾವೇರಿದ ಚಂಡು’: ಇನ್ನೊಂದು ಸಾವು, ಸಹಜ ಸ್ಥಿತಿಗೆ ರಾಜಧಾನಿ ಬೆಂಗಳೂರು!

  ಕಾವೇರಿ ವಿವಾದದಿಂದಾಗಿ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಸೃಷ್ಟಿಯಾಗಿದ್ದ ‘ಮಾಯಾಲೋಕ’ದಲ್ಲಿ ಮಂಗಳವಾರ ಸಂಜೆ ಬಿದ್ದ ಮಳೆ ಇಳೆಯನ್ನು ತಂಪಾಗಿಸಿದೆ. ಹಾಗೆಯೇ, ಕಾವೇರಿ ಗಲಭೆಯನ್ನೂ… ದಿನದ ಆರಂಭ:  ಗುಂಡೇಟಿನಿಂದ ಮೃತರಾದ ಉಮೇಶ್ಗೆ ನೀಡಿದ ಪರಿಹಾರ ಸಾಲಲಿಲ್ಲ; ನಾವು ಆಸ್ಪತ್ರೆ ಬಿಟ್ಟು ಕದಲಲ್ಲ ಎನ್ನುವ ಪೋಷಕರ ಪ್ರತಿಭಟನೆಯಿಂದಲೇ ಮಂಗಳವಾರದ ದಿನ ಆರಂಭವಾಯಿತು. ಇದರ ಮಧ್ಯೆಯೂ ಗೋಲಿಬಾರ್ ನಡೆದಿದ್ದ ಹೆಗ್ಗನಹಳ್ಳಿಯಲ್ಲಿ ಒಂದಷ್ಟು ದುಷ್ಕರ್ಮಿಗಳು ರಸ್ತೆಗೆ ಬಂದು ಬೆಂಕಿ ಹಚ್ಚಲು ಯತ್ನಿಸಿದರಾದರೂ, ಅಷ್ಟರಲ್ಲಾಗಲೇ ಪೊಲೀಸರು ಲಾಠಿ ಬೀಸಿ ಗುಂಪು ಚದುರಿಸಿದರು. ಬೆಳಿಗ್ಗೆ 2 ಗಂಟೆಗಳ..

  September 14, 2016
  ...
  Protest in Bengaluru
  ಕಾವೇರಿ ವಿವಾದ

  ಬೇಕಿರುವುದು ಸಂಕಷ್ಟ ಪರಿಹಾರ ಅಲ್ಲ; ‘ಹೆಲ್ಸಂಕಿ ಸೂತ್ರ’ದ ನೆರಳಿನಲ್ಲಿ ‘ರಾಷ್ಟ್ರೀಯ ಜಲನೀತಿ’!

  ಕಾವೇರಿ ಗಲಭೆಗೆ ನಲುಗಿದ್ದ ರಾಜಧಾನಿ ಬೆಂಗಳೂರು ನಿಧಾನವಾಗಿ ಶಾಂತ ಸ್ಥಿತಿಗೆ ಮರಳುತ್ತಿದೆ. ಕಳೆದ ಹಲವು ದಿನಗಳಿಂದ ರಾಜ್ಯದಲ್ಲಿ ಬಹುಚರ್ಚೆಗೆ ಒಳಗಾಗುತ್ತಿರುವ ವಿಚಾರ ಕಾವೇರಿ- ನದಿ ನೀರು ಹಂಚಿಕೆ. ಇದರೊಳಗಿನ ಅಂಕಿ ಅಂಶಗಳು, ನ್ಯಾಯಾಲಯದ ಕಾನೂನಿನ ತೀರ್ಪುಗಳ ಒಳಸುಳಿಗಳು, ಇತಿಹಾಸ ಹೀಗೆ ಹತ್ತು ಹಲವು ಆಯಾಮಗಳು ಈವರೆಗೆ ಬಂದು ಹೋಗಿವೆ. ಇದೀಗ ‘ಸಂಕಷ್ಟಗಳ ಸಮಯದಲ್ಲಿ ನೀರು ಹಂಚಿಕೆ’ ಕುರಿತು ಮಾತುಗಳು ಶುರುವಾಗಿವೆ. ನದಿ ನೀರು ಹಂಚಿಕೆ ಎಂದರೇನು? ಜಗತ್ತಿನಾದ್ಯಂತ ನದಿ ನೀರು ಹಂಚಿಕೆ ಸುತ್ತ ಎಲ್ಲರಿಗೂ ಅನ್ವಯವಾಗುವ ಸೂತ್ರವೇನಾದರೂ..

  September 14, 2016
  ...
  bandh_top-view
  ಕಾವೇರಿ ವಿವಾದ

  ‘ಎವರಿಬಡಿ ಲವ್ಸ್ ಎ ಗುಡ್ ಬಂದ್’: ಪ್ರತಿಭಟನಾ ವಿಧಾನವೊಂದರ ಮತ್ತೊಂದು ಮುಖ!

  ‘ಬಂದ್’… ಹೀಗೊಂದು ಪದ ಕಳೆದ ಒಂದು ತಿಂಗಳ ಅಂತರದಲ್ಲಿ ರಾಜ್ಯವನ್ನು ಬಿಟ್ಟು ಬಿಡದೇ ಕಾಡುತ್ತಿದೆ. ಮಹಾದಾಯಿ, ಸಾರಿಗೆ ನೌಕರರ ಮುಷ್ಕರದಿಂದ ಆರಂಭವಾಗಿ ಕಾವೇರಿ ವಿವಾದದವರೆಗೆ ‘ಬಂದ್’ ಎಂಬ, ದಕ್ಷಿಣ ಏಷಿಯಾ ದೇಶಗಳಲ್ಲಿ ಮಾತ್ರವೇ ಚಲಾವಣೆಯಲ್ಲಿರುವ ಪ್ರತಿಭಟನಾ ರೂಪವೊಂದನ್ನು ಕೊಂಚ ಹೆಚ್ಚಾಗಿಯೇ ಸಾರ್ವಜನಿಕರಿಗೆ ತಟ್ಟಿದೆ. ಅದರಲ್ಲೂ ಕಾವೇರಿ ವಿಚಾರದಲ್ಲಿ ಕರೆ ನೀಡಿದ್ದ ಬಂದ್ ಬಿಸಿ ಆರುವ ಮುನ್ನವೇ ಸುಪ್ರಿಂ ಕೋರ್ಟ್ ನೀಡಿದ ಮಾರ್ಪಾಟು ತೀರ್ಪು ಹೊರಬೀಳುತ್ತಿದ್ದಂತೆ ರಾಜಧಾನಿ ಬೆಂಗಳೂರು ‘ಅಘೋಷಿತ ಬಂದ್’ ಆಚರಿಸಿತು. ಅದು ಒಂದು ಹಂತದಲ್ಲಿ ಪ್ರಚೋದನೆಗೆ ಒಳಗಾಗಿ ವಿಕೋಪಕ್ಕೂ ತಿರುಗಿತು…

  September 14, 2016
  ...
  cauvery-tn-protests-eps9
  ಕಾವೇರಿ ವಿವಾದ

  ಗೋಲಿಬಾರ್- 2016: ಜೀವನದಿ ವಿಚಾರದಲ್ಲಿ ಜೋಭದ್ರಗೇಡಿತನ ಮೆರೆದವರು ಯಾರು?

  ‘ಕನ್ನಡ ನಾಡಿನ ಜೀವ ನದಿ- ಈ ಕಾವೇರಿ’ ಎನ್ನಿಸಿಕೊಂಡಿದ್ದ ಕಾವೇರಿ ನದಿಯ ನೀರು ಹಂಚಿಕೆ ವಿಚಾರದಲ್ಲಿ ಬೆಂಗಳೂರಿನಲ್ಲಿ ವ್ಯಕ್ತಿಯೊಬ್ಬರು ಪೊಲೀಸರ ಗುಂಡಿಗೆ ಸೋಮವಾರ ಜೀವ ಕಳೆದುಕೊಂಡಿದ್ದಾರೆ. ವಾರದ ಆರಂಭದ ದಿನ, ಮುಂಜಾನೆಯಿಂದಲೇ ಪರಿಸ್ಥಿತಿ ಬಿಗಡಾಯಿಸುವ ಮುನ್ಸೂಚನೆಗಳನ್ನು ನೀಡಿದ್ದ ವಾತಾವರಣವನ್ನು ಹೊಂದಿತ್ತು. ಸಂಜೆ ಹೊತ್ತಿಗೆ ಅದು ವಿಕೋಪಕ್ಕೆ ತಿರುಗಿತು. ಖಾಸಗಿ ಬಸ್ ಸಂಸ್ಥೆಗೆ ಸೇರಿದ್ದ ಮಲ್ಟಿ ಆಕ್ಸೆಲ್ ಬಸ್ಗಳು ಧಗಧಗ ಹೊತ್ತಿ ಉರಿದವು. ಸಣ್ಣ ಪುಟ್ಟ ವಾಹನಗಳೂ ಕಿಡಿಗೇಡಿಗಳ ಕೈಯಲ್ಲಿ ಪುಡಿಪುಡಿಯಾದವು. ಹೆಚ್ಚು ಕಡಿಮೆ ಇದೇ ಚಿತ್ರಣ ಬೆಂಗಳೂರಿನ..

  September 13, 2016
  ...
  cauvery-protest
  ಕಾವೇರಿ ವಿವಾದ

  ‘ಹತೋಟಿಗೆ ಸಿಗದ ಕಿಚ್ಚು’: ಸೋಮವಾರದ Time Line; ಎಲ್ಲೆಲ್ಲಿ? ಏನೇನು ನಡೆಯಿತು?

  ಸೋಮವಾರ ಬೆಳಿಗ್ಗೆಯಿಂದ ನಡೆದ ‘ಕಾವೇರಿ’ ಸುತ್ತಮುತ್ತಲಿನ ಬೆಳವಣಿಗೆಗಳು ಸಂಜೆ ವೇಳೆಗೆ ಬೆಂಗಳೂರು ಸೇರಿದಂತೆ ಮಂಡ್ಯ, ಮೈಸೂರು ಭಾಗಗಳನ್ನು ಸ್ಥಬ್ಧ ಮಾಡಿ ಹಾಕಿವೆ. ಬೆಂಗಳೂರಿನ ಮುಂಜಾನೆಯ ಪ್ರಶಾಂತ ವಾತಾವರಣದಲ್ಲಿ; ಸಂಜೆ ವೇಳೆಗೆ ಧಗಧಗಿಸುವ ಬೆಂಕಿ ಆವರಿಸಿತ್ತು. ಕ್ಷಣದಿಂದ ಕ್ಷಣಕ್ಕೆ ರಾಜ್ಯದಲ್ಲಿ, ಅದರಲ್ಲೂ ಪ್ರಮುಖವಾಗಿ ಬೆಂಗಳೂರಿನಲ್ಲಿ ಬದಲಾದ ಪರಿಸ್ಥಿತಿಗಳ ‘Time Line’ ಸ್ಟೋರಿಯನ್ನು ‘ಸಮಾಚಾರ’ ಇಲ್ಲಿ ನಿಮ್ಮ ಮುಂದಿಡುತ್ತದೆ. ಬೆಳಿಗ್ಗೆ.. 7:00 – ಬೆಂಗಳೂರು ವಾತಾವರಣ ಪ್ರಶಾಂತವಾಗಿತ್ತು. ಎಂದಿನ ಮುಂಜಾವಿನಂತೆ ತಣ್ಣನೆ ಗಾಳಿ ಬೀಸುತ್ತಿತ್ತು. ಸಂಜೆ ವೇಳೆಗೆ ಮಹಾಗಂಡಾಂತರ ಕಾದಿದೆ ಎಂಬ..

  September 13, 2016
  ...
  cauvery protest - PTI
  ಕಾವೇರಿ ವಿವಾದ

  ಮೊದಲು ಬೆಂಗಳೂರು ಬೆಳವಣಿಗೆಯನ್ನು ನಿಯಂತ್ರಿಸಿ; ಪ್ರಾಮಾಣಿಕ ಕನ್ನಡ ಪ್ರೇಮ ಮೆರೆಯಿರಿ!

  ಸರಕಾರ ಪ್ರಾಯೋಜಿತ ಶುಕ್ರವಾರದ ‘ಕಾವೇರಿ ಬಂದ್’ ಯಶಸ್ವಿಯಾಗಿದೆ. ರಾಜ್ಯದ ಹಲವು ಭಾಗಗಳಲ್ಲಿ ಜನ ಬೀದಿಗೆ ಇಳಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ತಮಿಳುನಾಡು ಸಿಎಂ ಜಯಲಲಿತಾ ತಿಥಿ ಕಾರ್ಯ ನಡೆದಿದೆ. ಕನ್ನಡದ ಪರ ಹೋರಾಟಗಾರರು ಸಿಲಿಕಾನ್ ಸಿಟಿಯ ಬೀದಿ ಬೀದಿಯಲ್ಲಿ ಕನ್ನಡ ಪರ ಘೋಷಣೆಗಳನ್ನು ಮೊಳಗಿಸಿದ್ದಾರೆ. ಐಟಿ ಕಂಪನಿಗಳನ್ನು ಮುಚ್ಚಿಸುವ ಮೂಲಕ ಕೆಲವರು ಕನ್ನಡ ಪ್ರೇಮವನ್ನು ಹಂಚುವ ಕೆಲಸವನ್ನು ನಿಸ್ವಾರ್ಥವಾಗಿ ಮಾಡಿದ್ದಾರೆ. ವಿಶೇಷವಾಗಿ, ಮಂಡ್ಯ ಭಾಗದ ಸಾವಿರಾರು ರೈತರು ಸ್ವಯಂಪ್ರೇರಕವಾಗಿ ಕೃಷ್ಣರಾಜ ಸಾಗರ ಅಣೆಕಟ್ಟನ್ನು ಮುಚ್ಚಿಸಲು ಹೋಗಿ..

  September 10, 2016
  ...
  Nariman and siddaramayya copy
  ಕಾವೇರಿ ವಿವಾದ

  ‘ಅಮ್ಮ’ಗೆ ಜಾಮೀನು; ಕಾವೇರಿಗಾಗಿ ಕಾನೂನು ಹೋರಾಟ: ಯಾರಿವರು ಫಾಲಿ ಸ್ಯಾಮ್ ನಾರಿಮನ್?

  ಕಾವೇರಿ ವಿವಾದಲ್ಲಿ ರಾಜ್ಯಕ್ಕೆ ಸೋಲಾಗಿದೆ ಎಂಬ ವಿಚಾರದಲ್ಲಿ ಪ್ರತಿಭಟನಾಕಾರರ ಆಕ್ರೋಶ ಇದೀಗ ವಕೀಲರತ್ತ ಹೊರಳಿದೆ. ಮುಖ್ಯವಾಗಿ 25 ಜನರ ರಾಜ್ಯ ವಕೀಲರ ತಂಡದಲ್ಲಿರುವ ಕೆಲವು ‘ಗಂಜಿ ಗಿರಾಕಿ’ಗಳು ಮತ್ತು ಹಿರಿಯ ನ್ಯಾಯವಾದಿ ಫಾಲಿ ಸ್ಯಾಮ್ ನಾರಿಮನ್ ಮೇಲೆ ವೈಯಕ್ತಿಕ ಮಟ್ಟದ ದಾಳಿಗಳು ನಡೆಯುತ್ತಿವೆ. ಈ ಹೊತ್ತಲ್ಲಿ ಫಾಲಿ ನಾರಿಮನ್ ಯಾರು? ಅವರ ಬಗ್ಗೆ ವಕೀಲರ ಸಮುದಾಯದಲ್ಲಿ ಇರುವ ಅಭಿಪ್ರಾಯಗಳೇನು ಎನ್ನುವ ವರದಿಯನ್ನು ‘ಸಮಾಚಾರ’ ಇಲ್ಲಿ ಮುಂದಿಡುತ್ತಿದೆ. “ಫಾಲಿ ಎಸ್ ನಾರಿಮನ್ ಅವರನ್ನು ಬದಲಾಯಿಸಿ ಕಮಿಟೆಡ್ ಟೀಂ ನೇಮಕ..

  September 9, 2016
  ...
  vatala-nagraj
  ಕಾವೇರಿ ವಿವಾದ

  ‘ಕಾವೇರಿ ಕವರೇಜ್’: ಮುಖ್ಯಮಂತ್ರಿಗಳ ಆಪ್ತ; ಗೋಕಾಕ್ ಚಳವಳಿ ವಿರೋಧಿ ‘ವಾಚಾಳಿ ವಾಟಾಳ್’!

  ಅದೇ ಕರಿ ಟೋಪಿ, ಕಪ್ಪು ಕನ್ನಡಕ, ಉಬ್ಬು ಹಲ್ಲು, ಮಾತೆತ್ತಿದರೆ ಕನ್ನಡ; ಕರ್ನಾಟಕ; ಹೋರಾಟ ಮತ್ತು ತಮಾಷೆಯ ಒಂದಷ್ಟು ರಂಜನೀಯ ಭಾಷಣಗಳು. ಇವರು ಈ ಬಾರಿ ಮತ್ತೆ ಪ್ರತ್ಯಕ್ಷರಾಗಿದ್ದಾರೆ. ಪ್ರತಿ ಬಾರಿ ಬೀದಿಗೆ ಬರಲು ಕಾರಣ ಹುಡುಕುವ ಇವರಿಗೆ ಈ ಬಾರಿ ‘ಗಂಜಿ’ ನೀಡಿದ್ದು ಕಾವೇರಿ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪು. ಇವರ ಸಂಬಂಧವಿಲ್ಲದ ಭಾಷಣಗಳಿಗೆ ಧ್ವನಿಯಾಗಲು ಅದಾಗಲೇ ನ್ಯೂಸ್ ಚಾನಲ್ಗಳು OB ರೆಡಿ ಮಾಡಿಕೊಂಡು ನಿಂತಿದ್ದಾರೆ. ಸಂಶಯವೇ ಇಲ್ಲ ನಾವು ಇಷ್ಟು ಹೊತ್ತು ಹೇಳಿದ್ದು..

  September 8, 2016
  ...
  Cauvery Bangarappa
  ಕಾವೇರಿ ವಿವಾದ

  ಕಾವೇರಿ ವಿಚಾರದಲ್ಲಿ ಬಂಗಾರಪ್ಪ ಗುಣಗಾನ: 1991ರಲ್ಲಿ ನಿಜಕ್ಕೂ ನಡೆದಿದ್ದೇನು?

  ಕಾವೇರಿ ವಿಚಾರದಲ್ಲಿ 1991ರ ಸುಪ್ರೀಂ ಕೋರ್ಟ್ ತೀರ್ಮಾನವನ್ನು ವಿರೋಧಿಸಿ ಅಂದಿನ ಮುಖ್ಯಮಂತ್ರಿ ಸಾರೆಕೊಪ್ಪ ಬಂಗಾರಪ್ಪ ಗಟ್ಟಿ ನಿಲುವು ತೆಗೆದುಕೊಂಡಿದ್ದರು. ಇವತ್ತಿನ ಸಿದ್ಧರಾಮಯ್ಯ ಸರಕಾರದ ಕೈಲಿ ಯಾಕೆ ಸಾಧ್ಯವಿಲ್ಲ? ಹೀಗೆ ಒಂದಷ್ಟು ಪ್ರಶ್ನೆಗಳು, ಮಾಜಿ ಮುಖ್ಯಮಂತ್ರಿಯನ್ನು ಗುಣಗಾನ ಮಾಡುವ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಹಾಗಾದರೆ ನಿಜಕ್ಕೂ ಬಂಗಾರಪ್ಪ 1991ರಲ್ಲಿ ತೆಗೆದುಕೊಂಡ ನಿಲುವೇನು? ಮುಂದೆ ಆ ನಿರ್ಧಾರ ಏನಾಯ್ತು? ಹುಡುಕಿಕೊಂಡು ಹೊರಟಾಗ ‘ಸಮಾಚಾರ’ಕ್ಕೆ ಸಿಕ್ಕ ಮಾಹಿತಿಗಳಿಷ್ಟು. ಜೂನ್ 2, 1990. ಎರಡೂ ರಾಜ್ಯಗಳ ಜಲವಿವಾದ ಪರಿಹರಿಸಲು ‘ಕಾವೇರಿ ನ್ಯಾಯಾಧಿಕರಣ’ ಆರಂಭವಾಗಿತ್ತು. ಹಾಗೆ ಆರಂಭವಾದ..

  September 7, 2016
  ...
  Cauvery coverage
  ಕಾವೇರಿ ವಿವಾದ

  ಭಾವನೆಗಳಿಗೆ ಬೆಲೆ; ಜನರ ಆಕ್ರೋಶಕ್ಕೆ ಮಣೆ: ಇದು ದಿನಪತ್ರಿಕೆಗಳ ‘ಕಾವೇರಿ ಕವರೇಜ್’!

  ‘ಮತ್ತೆ ಭಾವನೆಗಳನ್ನು ಕೆಣಕಿದ ಕಾವೇರಿ’, ‘ಕೆಂಡವಾದ ಕಾವೇರಿ’, ‘ತಮಿಳ್ನಾಡಿಗೆ ಹರಿದ ಕಣ್ಣೀರು’, ‘ಆದೇಶ ಮಾರ್ಪಾಡು: ಅರ್ಜಿ ಸಲ್ಲಿಕೆಗೆ ನಿರ್ಧಾರ’, ‘ಕಾದಿದೆ ಕಾವೇರಿ ಗಂಡಾಂತರ’!, ‘ಆಕ್ರೋಶದ ನಡುವೆಯೂ ಹರಿದ ಕಾವೇರಿ’, ‘ಮತ್ತೆ ಬೆಂಕಿಯಾದ ನೀರು’… ಇವು ಕನ್ನಡ ಪ್ರಮುಖ ದಿನಪತ್ರಿಕೆಗಳು ಕಾವೇರಿ ವಿಚಾರದಲ್ಲಿ ಬುಧವಾರ ತಮ್ಮ ಮೊದಲ ಪುಟದಲ್ಲಿ ಪ್ರಕಟಿಸಿದ ತಲೆ ಬರಹಗಳು. ತಮಿಳುನಾಡಿಗೆ ನೀರು ಹರಿಸುವಂತೆ ಸುಪ್ರಿಂ ಕೋರ್ಟ್ ಆದೇಶ ನೀಡಿದ್ದು ಸೋಮವಾರ. ಅಂದು ಹಬ್ಬದ ನಿಮಿತ್ತ ಮುದ್ರಣ ಮಾಧ್ಯಮಗಳು ರಜೆ ತೆಗೆದುಕೊಂಡಿದ್ದವು. ಪತ್ರಿಕಾ ಕಚೇರಿಗಳು ಕೆಲಸ..

  September 7, 2016

Top