An unconventional News Portal.

ಕಾವೇರಿ
  ...

  ಕಾವೇರಿ ತೀರ್ಪಿಗೆ ಭಿನ್ನ ಪ್ರತಿಕ್ರಿಯೆಗಳು: ಕರ್ನಾಟಕಕ್ಕೆ ಸಮಾಧಾನ, ತಮಿಳುನಾಡಿನ ಅಸಮಾಧಾನ

  ಕಾವೇರಿ ನೀರು ಹಂಚಿಕೆ ವಿಷಯವಾಗಿ ಸುಪ್ರೀಂಕೋರ್ಟ್‌ನ ತೀರ್ಪು ಶುಕ್ರವಾರ ಹೊರಬಿದ್ದಿದೆ. ಸುಪ್ರೀಂಕೋರ್ಟ್‌ನ ಈ ತೀರ್ಪಿನಿಂದ ಕಾವೇರಿ ನ್ಯಾಯಮಂಡಳಿಯಲ್ಲಿ ರಾಜ್ಯಕ್ಕೆ ಹಂಚಿಕೆಯಾಗಿದ್ದಕ್ಕಿಂತ 14.75 ಟಿಎಂಸಿ ನೀರು ಹೆಚ್ಚುವರಿಯಾಗಿ ಸಿಕ್ಕಂತಾಗಿದೆ. “ಈ ತೀರ್ಪು ಸಮಾಧಾನ ತಂದಿದೆ” ಎಂಬ ಅಭಿಪ್ರಾಯ ಕರ್ನಾಟಕದಲ್ಲಿ ವ್ಯಕ್ತವಾಗಿದ್ದರೆ, “ನಮಗೆ ಅನ್ಯಾಯವಾಗಿದೆ” ಎಂದು ತಮಿಳುನಾಡು ಹೇಳಿದೆ. ಈ ಮೂಲಕ ತಮಿಳುನಾಡು ಸುಪ್ರೀಂಕೋರ್ಟ್‌ ತೀರ್ಪಿನ ಬಗ್ಗೆ ಅಸಮಾಧಾನ ಹೊರಹಾಕಿದೆ. “ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ 28 ವರ್ಷಗಳ ಕರ್ನಾಟಕದ ಹೋರಾಟಕ್ಕೆ ನ್ಯಾಯ ಸಿಕ್ಕಿದೆ. ಇದೊಂದು ಐತಿಹಾಸಿಕ ತೀರ್ಪು. ಎರಡೂ […]

  February 16, 2018
  ...

  ದಕ್ಷಿಣ ರಾಜ್ಯಗಳ ಜಲಕ್ಷಾಮ: ಸಮಸ್ಯೆಗೆ ಗೋದಾವರಿ ಜೋಡಣೆ ನೀಡುತ್ತಾ ಪರಿಹಾರ?

  ಕಾವೇರಿ ಕಣಿವೆಯಲ್ಲಿ ದೊರೆಯುವ ಒಟ್ಟು ನೀರಿನಲ್ಲಿ ಶೇ.80ರಷ್ಟು ಪಾಲು ನನ್ನದು ಎಂಬ  ತಮಿಳುನಾಡು ವಾದಕ್ಕೆ ಸ್ಪಂದಿಸದ ಸುಪ್ರೀಂ ಕೋರ್ಟ್‌ ಕರ್ನಾಟಕ್ಕೆ 14.75 ಟಿಎಂಸಿ ನೀರನ್ನು ಹೆಚ್ಚುವರಿಯಾಗಿ ಕೊಟ್ಟಿದೆ. ನ್ಯಾಯ ಮಂಡಳಿ ತಮಿಳುನಾಡಿಗೆ ಹರಿಸುವಂತೆ ಸೂಚಿಸಿದ್ದ 192 ಟಿಎಂಸಿ ನೀರಿನ ಪ್ರಮಾಣವನ್ನು 177.25 ಟಿಎಂಸಿಗೆ ಕಡಿತಗೊಳಿಸಿದೆ. ಕಾವೇರಿ ನದಿ ನೀರಿನಲ್ಲಿ ಪಾಲು ಪಡೆಯುತ್ತಿರುವ ನಾಲ್ಕೂ ರಾಜ್ಯಗಳಿಗೆ ಅನ್ಯಾಯವಾಗದ ರೀತಿಯಲ್ಲಿ ಸುಪ್ರೀಂ ಕೋರ್ಟ್‌ ತೀರ್ಪು ಪ್ರಕಟಿಸಿದೆಯಾದರೂ, ತಮಿಳುನಾಡಿಗೆ ಬೇಡಿಕೆಯಿಟ್ಟಷ್ಟು ಪ್ರಮಾಣದ ನೀರು ದೊರೆತಿಲ್ಲ. ತಮಿಳುನಾಡಿನ ಈ ನೀರಿನ ಬೇಡಿಕೆಯನ್ನು ಪೂರೈಸುವ […]

  February 16, 2018
  ...

  ಕಾವೇರಿ ತಾಂತ್ರಿಕ ಸಮಿತಿಯಿಂದ ಸುಪ್ರಿಂ ಕೋರ್ಟಿಗೆ ವರದಿ ಸಲ್ಲಿಕೆ; ರಿಪೋರ್ಟಿನಲ್ಲೇನಿದೆ?

  ಕಾವೇರಿ ಉನ್ನತ ಮಟ್ಟದ ತಾಂತ್ರಿಕ ಸಮಿತಿ ತನ್ನ 87 ಪುಟಗಳ ಸುದೀರ್ಘ ಸ್ಥಳ ಪರಿಶೀಲನಾ ವರದಿಯನ್ನು ಸುಪ್ರಿಂ ಕೋರ್ಟಿಗೆ ಸಲ್ಲಿಸಿದೆ. ಪರ್ಯಾಯ ಬೆಳೆಗಳು ಮತ್ತು ನೀರಾವರಿ ಅಳವಡಿಸಿಕೊಳ್ಳುವುದು; ಈ ಮೂಲಕ ನೀರಿನ ಪೋಲು ತಡೆಗಟ್ಟುವುದು. ಅಟೋಮ್ಯಾಟಿಕ್ ನೀರಿನ ಅಳತೆ ಮಾಪನ ಅಳವಡಿಸಿಕೊಳ್ಳುವುದು. ರಾಜ್ಯದ ಜನರಿಗೆ ಬುದ್ದಿವಾದ ಹೇಳುವುದು ಸೇರಿದಂತೆ ಹಲವು ತೀರ್ಮಾನಗಳನ್ನು ಒಳಗೊಂಡ ವರದಿಯನ್ನು ಸಮಿತಿಯು ಸೋಮವಾರ ಸುಪ್ರಿಂ ಕೋರ್ಟಿಗೆ ಸಲ್ಲಿಸಿದೆ. ಕಾವೇರಿ ತಾಂತ್ರಿಕ ಸಮಿತಿ ಸಲ್ಲಿಸಿದ ರಿಪೋರ್ಟಿನಲ್ಲಿ ಒಟ್ಟು 6 ವಿಭಾಗಗಳಿದ್ದು ಸವಿವರವಾದ ವರದಿ ಇದಾಗಿದೆ. […]

  October 17, 2016
  ...

  ಕಾವೇರಿ ಕಣದಿಂದ ಜಿ. ಮಾದೇಗೌಡ ಮಾಯ: ಪುತ್ರ ವ್ಯಾಮೋಹಕ್ಕೆ ಬಲಿಯಾದ್ರಾ ‘ಮಂಡ್ಯದ ಗಾಂಧಿ’?

  ಜಿ. ಮಾದೇಗೌಡ ಎಂಬ ಹೆಸರು ಮಂಡ್ಯ ಜಿಲ್ಲೆಗೆ ಮಾತ್ರವಲ್ಲ, ಕರ್ನಾಟಕ ರಾಜಕೀಯದಲ್ಲಿ ಚಿರಪರಿಚಿತ ಹೆಸರು. ಕಾವೇರಿ ವಿಚಾರ ಬಂದರೆ ಮಂಡ್ಯದ ಬೀದಿಗಳಲ್ಲಿ ಪ್ರತ್ಯಕ್ಷವಾಗುವ ‘ಮಂಡ್ಯದ ಗಾಂಧಿ’, ನೇರ, ನಿಷ್ಟುರ ಪಾರದರ್ಶಕ ಹೋರಾಟಗಾರ ಎಂಬ ಬಿರುದುಗಳ ಭಾರ ಹೊತ್ತವರು ಇವರು. ನಿಜವಾಗಿಯೂ ಮಾದೇಗೌಡ ಪಾರದರ್ಶಕರೇ? ಗಾಂಧಿ ತತ್ವ ಪಾಲಿಸುವವರೇ? ಈ ವಿಚಾರಗಳ ಬೆನ್ನತ್ತಿ ಹೋದರೆ ಸ್ವಂತಕ್ಕಾಗಿ ಈ ‘ಗಾಂಧಿ’ ಮಾಡಿಕೊಂಡಿದ್ದೇನು? ಎಂಬ ಮಾಹಿತಿಗಳು ಸಿಗುತ್ತವೆ. ಕಾವೇರಿ ವಿಚಾರದಲ್ಲಿ ಮಂಡ್ಯದಲ್ಲಿ ಪ್ರತಿಭಟನೆ ಮಾಡುತ್ತಿದ್ದ ಮಾದೇಗೌಡರು ಏಕಾಏಕಿ ತಮ್ಮ ಧರಣಿ ನಿಲ್ಲಿಸಲು ಕಾರಣ ಪುತ್ರ […]

  October 6, 2016
  ...

  ‘ಕಾವೇರಿದ ರಾಜಕಾರಣ’ದ ಶವಪರೀಕ್ಷೆ: ಬೆಟ್ಟ ಅಗೆದೂ, ‘ನೀರು ಹರಿಸಿದವರು’ ನಮ್ಮ ರಾಜಕಾರಣಿಗಳು!

  ಸುಮಾರು 40 ದಿನಗಳ ಅಂತರದಲ್ಲಿ ನಡೆದ ರಾಜ್ಯ ಬಂದ್- ಬೀದಿ ಹೋರಾಟಗಳು, ಒಂದು ಗೋಲಿಬಾರ್, ಎರಡು ಸಾವು, 25 ಸಾವಿರ ಕೋಟಿ ನಷ್ಟ, ಎರಡು ವಿಶೇಷ ಅಧಿವೇಶನಗಳು, ಅದಕ್ಕಾಗಿ ಹೆಚ್ಚುಕಡಿಮೆ 2 ಕೋಟಿ ವೆಚ್ಚ, ಸಾಲು ಸಾಲು ಸುಪ್ರಿಂ ಕೋರ್ಟ್ ತೀರ್ಪುಗಳು, ದೇಶದ ಮುಂದೆ ರಾಜ್ಯಕ್ಕೆ ಛೀಮಾರಿ, ರಾಜಕೀಯ ಲಾಭ ನಷ್ಟದ ನಡೆಗಳು, ಮತ್ಸದ್ಧಿತನದ ಮೆರೆದಾಟಗಳು, ವಿವೇಚನೆ ಪಕ್ಕಕ್ಕಿಟ್ಟ ಆಡಳಿತ ಹಾಗೂ ಕಾವೇರಿ ವಿಚಾರದಲ್ಲಿ ‘ಬೆಟ್ಟ ಅಗೆದು; ಕೊನೆಗೂ ಇಲಿಯನ್ನೇ ಹಿಡಿಯುವ’ ಹೈ ಡ್ರಾಮಾದ ಪುನರಾವರ್ತನೆ… ಇವು […]

  October 4, 2016
  ...

  ನಿರ್ವಹಣಾ ಮಂಡಳಿ ಸದ್ಯಕ್ಕಿಲ್ಲ: ರಾಜ್ಯಕ್ಕೆ ತಾತ್ಕಾಲಿಕ ನಿರಾಳತೆ

  ಕಾವೇರಿ ನೀರು ನಿರ್ವಹಣಾ ಮಂಡಳಿಯ ರಚನೆಯನ್ನು ಸುಪ್ರಿಂ ಕೋರ್ಟ್ ಸದ್ಯಕ್ಕೆ ಮುಂದೂಡಿದ್ದು ಕರ್ನಾಟಕ ತುಸು ನಿರಾಳವಾಗಿದೆ. ಇದರಿಂದ ತಮಿಳುನಾಡಿಗೆ ಹಿನ್ನಡೆಯಾದಂತಾಗಿದೆ. ಆದರೆ ಮತ್ತೆ 12 ದಿನಗಳ ಕಾಲ 24,000 ಕ್ಯೂಸೆಕ್ಸ್ ನೀರು ಹರಿಸುವಂತೆ ಸರ್ವೋಚ್ಚ ನ್ಯಾಯಾಲಯ ರಾಜ್ಯಕ್ಕೆ ಆದೇಶ ನೀಡಿದೆ. ಇದಲ್ಲದೇ ಕೋರ್ಟ್ ತಾಂತ್ರಿಕ ಸಮಿತಿಯನ್ನೂ ನೇಮಿಸಿ ವರದಿ ಸಲ್ಲಿಸಲು ಅಕ್ಟೋಬರ್ 17ರ ಗಡುವು ವಿಧಿಸಿದ್ದು ಇಂದಿನ ಆದೇಶದ ವಿಶೇಷ. ಮಂಗಳವಾರದ ವಿಚಾರಣೆಯಲ್ಲಿ ಸುಪ್ರಿಂ ಆದೇಶವನ್ನು ಪಾಲನೆ ಮಾಡದ ಕರ್ನಾಟಕವನ್ನು ಕೋರ್ಟ್ ತೀರ್ವ ತರಾಟೆಗೆ ತೆಗೆದುಕೊಂಡಿದ್ದಲ್ಲದೇ ತನ್ನ […]

  October 4, 2016
  ...

  ‘ಬೀಸೋ ದೊಣ್ಣೆಯಿಂದ ಪಾರಾಗಲು’: ತಮಿಳುನಾಡಿಗೆ 10,000 ಕ್ಯೂಸೆಕ್ಸ್ ನೀರು ಹರಿಸಲು ನಿರ್ಣಯ

  ಸುಪ್ರಿಂ ಆದೇಶದಂತೆ ತಮಿಳುನಾಡಿಗೆ 10,000 ಕ್ಯೂಸೆಕ್ಸ್ ನೀರು ಹರಿಸಲು ಕರ್ನಾಟಕ ನಿರ್ಧರಿಸಿದೆ. ಈ ಮೂಲಕ ಪರೋಕ್ಷವಾಗಿ ಸುಪ್ರಿಂ ಕೋರ್ಟ್ ಆದೇಶ ಪಾಲಿಸಲು ಕರ್ನಾಟಕ ಮುಂದಾಗಿದೆ. ಸೋಮವಾರ ನಡೆದ ಕೆ.ಬಿ ಕೋಳಿವಾಡ್ ನೇತೃತ್ವದ ‘ಬ್ಯುಸಿನೆಸ್ ಅಡ್ವೈಸರಿ ಕಮಿಟಿ ಸಭೆ’ಯಲ್ಲಿ ಈ ತೀರ್ಮಾನಕ್ಕೆ ಕರ್ನಾಟಕ ಬಂದಿದೆ ಎಂದು ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ. ‘ಕಾವೇರಿ ನೀರು ಬಿಡುಗಡೆಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರ ನಾವು ನೀಡುತ್ತಿರುವ ಆದೇಶ ಉಲ್ಲಂಘಿಸುವುದನ್ನು ಮೊದಲು ನಿಲ್ಲಿಸಲಿ. ಮಂಗಳವಾರ ಮಧ್ಯಾಹ್ನದೊಳಗೆ ನೀರು ಹರಿಸುವ ನಿರ್ಧಾರದ ಬಗ್ಗೆ […]

  October 3, 2016
  ...

  ಕಾವೇರಿಗಾಗಿ ಮುಂದುವರಿದ ಅಧಿವೇಶನ: ರೈತರ ಸಂಕಷ್ಟಗಳ ಬಗ್ಗೆಯೂ ಚರ್ಚೆ ನಡೆಯಲಿ

  ‘ಕರ್ನಾಟಕ ರಾಜ್ಯದ ದಕ್ಷಿಣ ಭಾಗದಲ್ಲಿ, ವಿಶೇಷವಾಗಿ ಕಾವೇರಿ ನದಿಯ ಜಲಾನಯನ ಪ್ರದೇಶಗಳಲ್ಲಿ ಮಳೆ ಕೊರತೆಯಿಂದಾಗಿ ಉಂಟಾಗಿರುವ ನೀರಿನ ಕೊರತೆ ಬಗ್ಗೆ ಚರ್ಚೆ’ ನಡೆಸಲು ಮುಂದುವರಿದ ಉಪ ಅಧಿವೇಶನ ಸೋಮವಾರ ಬೆಳಗ್ಗೆ 11 ಗಂಟೆಗೆ ಆರಂಭವಾಗಲಿದೆ. ಸುಪ್ರಿಂ ಕೋರ್ಟ್ ಸೆ. 30ರಂದು ತಮಿಳುನಾಡಿಗೆ ಆರು ದಿನಗಳ ಕಾಲ ಪ್ರತಿ ದಿನ 6 ಸಾವಿರ ಕ್ಯೂಸೆಕ್ಸ್ ನೀರು ಬಿಡುವಂತೆ ಆದೇಶ ನೀಡಿತ್ತು. ಜತೆಗೆ, ಈ ಬಾರಿಯೂ ಆದೇಶ ಪಾಲನೆ ಮಾಡದಿದ್ದರೆ ಕಾನೂನಿನ ಕೆಂಗಣ್ಣಿಗೆ ತುತ್ತಾಗಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ನೀಡಿತ್ತು. ಈ ಹಿನ್ನೆಲೆಯಲ್ಲಿ ಶನಿವಾರ […]

  October 3, 2016
  ...

  ‘ಕಾವೇರಿ ಕವರೇಜ್’: ಸರ್ವ ಪಕ್ಷ ಸಭೆ ಆರಂಭ; ದೇವೇಗೌಡ ಉಪವಾಸ; ಬಿಜೆಪಿ ವಿರುದ್ಧ ಉಗ್ರಪ್ಪ ಆಕ್ರೋಶ

  ಕಾವೇರಿ ನದಿ ನೀರು ಹಂಚಿಕೆ ಸಂಬಂಧ ಸುಪ್ರಿಂ ಕೋರ್ಟ್ ನೀಡಿದ ‘ಗರಂ’ ಆದೇಶದ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿ ಸರ್ವ ಪಕ್ಷ ಸಭೆ ಆರಂಭವಾಗಿದೆ. ಸುಪ್ರಿಂ ಕೋರ್ಟ್ ಶುಕ್ರವಾರ ನೀಡಿದ ಆದೇಶದ ಹಿನ್ನೆಲೆಯಲ್ಲಿ ಸರಕಾರ ಎಲ್ಲಾ ಪಕ್ಷಗಳ ಜನಪ್ರತಿನಿಧಿಗಳ ಸಭೆಯನ್ನು ಕರೆದಿದೆ. ತಮಿಳುನಾಡಿಗೆ ನೀರು ಹರಿಸುವ ಹಾಗೂ ನೀರು ನಿರ್ವಹಣಾ ಮಂಡಳಿ ರಚನೆ ಸಂಬಂಧಪಟ್ಟಂತೆ ಸಭೆಯಲ್ಲಿ ಚರ್ಚೆ ನಡೆಸಲಿದೆ. ಸಭೆಯಲ್ಲಿ ಲೋಕಸಭೆ ವಿರೋಧ ಪಕ್ಷದ ನಾಯಕ ಮಲ್ಲಿಖಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕರಾದ ಜಗದೀಶ್ ಶೆಟ್ಟರ್, ಸದಾನಂದ […]

  October 1, 2016
  ...

  ‘ಗಾಯದ ಮೇಲೆ ಬರೆ’: 36 ಸಾವಿರ ಕ್ಯೂಸೆಕ್ಸ್ ನೀರು, ನಿರ್ವಹಣೆಗೆ ಮಂಡಳಿ ರಚನೆ; ಸುಪ್ರಿಂ ಕೋರ್ಟ್ ‘ಗರಂ’ ಆದೇಶ

  ಮತ್ತೆ ಸುಪ್ರಿಂ ಕೋರ್ಟ್ ತಮಿಳುನಾಡಿಗೆ ನೀರು ಹರಿಸುವಂತೆ ಶುಕ್ರವಾರ ಆದೇಶ ನೀಡಿದೆ. ಆದೇಶ ಪಾಲಿಸದೆ ಇರುವ ರಾಜ್ಯಸರ್ಕಾರದತ್ತ ಚಾಟಿ ಬೀಸಿರುವ ಸುಪ್ರೀಂಕೋರ್ಟ್, ಮೂರು ದಿನಗಳೊಳಗೆ ‘ನೀರು ನಿರ್ವಹಣಾ ಮಂಡಳಿ’ ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ತಾಕೀತು ಮಾಡಿದೆ. ಅ.1 ರಿಂದ 6ರವರೆಗೆ ಪ್ರತಿದಿನ 6 ಸಾವಿರ ಕ್ಯೂಸೆಕ್‍ನಂತೆ ಒಟ್ಟು 36 ಸಾವಿರ ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಹರಿಸುವಂತೆ ಸುಪ್ರೀಂಕೋರ್ಟ್‍ನ ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ ಹಾಗೂ ಯು. ಯು. ಲಲಿತ್ ನ್ಯಾಯಪೀಠ ಆದೇಶ ನೀಡಿದೆ. ಸೆ.20 ರಂದು ನೀಡಿದ್ದ ಆದೇಶದಲ್ಲಿ ಸುಪ್ರೀಂ ಕೋರ್ಟ್ […]

  September 30, 2016

Top