An unconventional News Portal.

ಕಾರ್ಪೊರೇಟ್
    ...
    rbi-bad-loan-list
    ಸುದ್ದಿ ಸಾರ

    ‘ಪಾಪರ್ ಆದ’ ಕಾರ್ಪೊರೇಟ್ ಕುಳಗಳು: ಆರ್‌ಬಿಐ ಎರಡನೇ ಪಟ್ಟಿಯಲ್ಲಿ ವಿಡಿಯೋಕಾನ್ ಮತ್ತಿತರರು

    ಸಾಲ ಪಡೆದು, ಮರುಪಾವತಿ ಮಾಡಲಾಗದ ಸುಸ್ಥಿದಾರರ ಹೊಸ ಪಟ್ಟಿಯೊಂದನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಬಿಡುಗಡೆ ಮಾಡಿದೆ. ವಿಡಿಯೋಕಾನ್, ಜೆಪಿ ಅಸೋಸಿಯೇಟ್ಸ್, ಐವಿಆರ್‌ಸಿಎಲ್, ವಿಸಾ ಸ್ಟೀಲ್ಸ್ ಮತ್ತಿತರ ಕಂಪನಿಗಳ ಹೆಸರುಗಳಿರುವ ಪಟ್ಟಿಯನ್ನು ರಿಸರ್ವ್ ಬ್ಯಾಂಕ್ ‘ರಾಷ್ಟ್ರೀಯ ಕಂಪನಿ ಕಾನೂನು ಟ್ರಿಬ್ಯುನಲ್’ಗೆ ಕಳುಹಿಸಿಕೊಟ್ಟಿದೆ ಎಂದು ‘ಮನಿ ಕಂಟ್ರೋಲ್’ ಜಾಲತಾಣ ವರದಿ ಮಾಡಿದೆ. ಉತ್ತಮ್ ಗಾಲ್ವ, ಕ್ಯಾಸ್ಟೆಕ್ಸ್, ಜೇಸ್ವಾಲ್ ನಿಕೋ, ರುಚಿ ಸೋಯಾ, ನಾಗಾರ್ಜುನ ಆಯಿಲ್ ಅಂಡ್ ಆರ್ಚಿಡ್ ಕೆಮಿಕಲ್ಸ್, ಈಸ್ಟ್ ಕೋಸ್ಟ್ ಎನರ್ಜಿ, ಎಸ್‌ಇಎಲ್ ಮ್ಯಾನುಫ್ಯಾಕ್ಟರಿಂಗ್, ಸೋಮಾ ಎಂಟರ್‌ಪ್ರೈಸಸ್, ಏಷಿಯನ್..

    August 29, 2017
    ...
    Kalanidhi Maran and Kavya Maran, Kaveri Kalanidhi
    ಟಿವಿ

    ‘ಉದಯ ನ್ಯೂಸ್’ ಮುಚ್ಚಲು ನೋಟಿಸ್: ನಷ್ಟ ತುಂಬಲು ಮಾರನ್ ಮಗಳ ‘ಪಾಕೆಟ್ ಮನಿ’ ಸಾಕು!

    ಕೋಪ, ಸಿಟ್ಟು, ಬೇಜಾರು, ಅಸಹನೆ, ಆಕ್ರೋಶ, ಖುಷಿ, ಸಂತಸ, ಸಂತೃಪ್ತಿ, ಉತ್ಸಾಹ… ಹೀಗೆ ನಾನಾ ಭಾವನೆಗಳನ್ನು ಅವುಗಳ ಅತಿರೇಕದಲ್ಲಿ ಅನುಭವಿಸುವ ಸಮುದಾಯ ಪತ್ರಕರ್ತರದ್ದು. ಇವುಗಳ ಜತೆಗೆ, ಉದ್ಯೋಗದ ಅಭದ್ರತೆಯೂ ಅವರನ್ನು ಯಾವ ಪರಿಯಲ್ಲಿ ಕಾಡಬಹುದು ಎಂಬುದಕ್ಕೆ ಕರ್ನಾಟಕದ ಸುದ್ದಿ ಮಾಧ್ಯಮದಲ್ಲಿ ಸದ್ಯ ನಡೆದಿರುವ ಈ ಬೆಳವಣಿಗೆಯೇ ಸಾಕ್ಷಿ. ಕಳೆದ ಐದು ವರ್ಷಗಳಲ್ಲಿ 3,834.95 ಕೋಟಿ ನಿವ್ವಳ ಲಾಭ ಗಳಿಸಿದ ಸನ್ ನೆಟ್ವರ್ಕ್ ತನ್ನ ಅಂಗ ಸಂಸ್ಥೆ ‘ಉದಯ ನ್ಯೂಸ್’ನ್ನು ಮುಚ್ಚಲು ತೀರ್ಮಾನಿಸಿದೆ. ನಷ್ಟದ ಕಾರಣವನ್ನು ಮುಂದಿಟ್ಟ ಸಂಸ್ಥೆಯ..

    August 26, 2017
    ...
    crpf-vs-naxal-final
    ದೇಶ

    ತ್ಯಾಗ; ಕ್ರೌರ್ಯದ ಮೇಲಾಟದಲ್ಲಿ ತೆರೆಮರೆಗೆ ಸರಿದ ಆದಿವಾಸಿಗಳ ನೈಜ ಚಿತ್ರಣ ಇದು!

    ದೇಶದಲ್ಲಿ ದಶಕಗಳ ಕಾಲ ಜೀವಂತವಾಗಿರುವ ‘ಸರಕಾರ ಮತ್ತು ಮಾವೋವಾದಿ’ಗಳ ನಡುವಿನ ಆಂತರಿಕ ಸಂಘರ್ಷಕ್ಕೆ ಮತ್ತೊಮ್ಮೆ ನೆತ್ತರು ಹರಿದಿದೆ. ಸೋಮವಾರ ನಡೆದ ಗೆರಿಲ್ಲಾ ದಾಳಿಯಲ್ಲಿ 24 ಮಂಡಿ ಸಿಆರ್‌ಪಿಎಫ್ ಸೈನಿಕರು ಸಾವನ್ನಪ್ಪಿದ್ದಾರೆ. ಈ ಮೂಲಕ ಕಳೆದ ಒಂದು ದಶಕದ ಅಂತರದಲ್ಲಿ ಈ ಭಾಗದಲ್ಲಿ ನಡೆಯುತ್ತಿರುವ ಸಾವು ನೋವಿನ ಪಟ್ಟಿಗೆ ಹೊಸ ಸೇರ್ಪಡೆಯಾದಂತಾಗಿದೆ. ವರದಿಗಳ ಪ್ರಕಾರ, 1996ರಿಂದ 2016ರ ನಡುವೆ ಭಾರತದಲ್ಲಿ ಮಾವೋವಾದಿ ಮತ್ತು ಪೊಲೀಸರು, ಅರೆಸೇನಾಪಡೆಗಳ ನಡುವಿನ ಸಂಘರ್ಷದಲ್ಲಿ ಸಾವನ್ನಪ್ಪಿರುವ ನಾಗರಿಕರು, ಆದಿವಾಸಿಗಳ ಸಂಖ್ಯೆಯೇ ಸುಮಾರು 8 ಸಾವಿರ. ಜತೆಗೆ, ಸುಮಾರು..

    April 25, 2017
    ...
    narayan-murthy-1
    ಸುದ್ದಿ ಸಾರ

    ಐಟಿ ಕಂಪನಿಗಳಲ್ಲಿ ಸಂಬಳದ ಅಸಮಾನತೆ: ಇನ್ಫಿ ಮೂರ್ತಿ ಬರೆದ ಪತ್ರ ಬಹಿರಂಗ

    ದೇಶದ ಪ್ರಮುಖ ಐಟಿ ಸಂಸ್ಥೆ ಇನ್ಫೋಸಿಸ್‍ನ ಆಂತರಿಕ ಬಿಕ್ಕಟ್ಟು ಮತ್ತೊಮ್ಮೆ ಸದ್ದು ಮಾಡಿದೆ. ಸಂಸ್ಥೆಯ ಸಂಸ್ಥಾಪಕ ಎನ್. ಆರ್. ನಾರಾಯಣ ಮೂರ್ತಿ ಭಾನುವಾರ ಪತ್ರವೊಂದನ್ನು ಬರೆಯುವ ಮೂಲಕ ಕಂಪನಿಯ ಹೂಡಿಕೆದಾರರ ಮಂಡಳಿಯ ಹೊಸ ತೀರ್ಮಾನಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಇನ್ಫೋಸಿಸ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಓಓ) ಪ್ರವೀಣ್ ರಾವ್ ಸಂಬಳ ಹೆಚ್ಚಳದ ವಿಚಾರವೀಗ ಸಂಸ್ಥಾಪಕ ಮತ್ತು ಹೂಡಿಕೆದಾರರ ನಡುವೆ ಮತ್ತೊಂದು ಸುತ್ತಿನ ಬಿಕ್ಕಟ್ಟಿಗೆ ಕಾರಣವಾಗಿದೆ. ಎರಡು ತಿಂಗಳ ಹಿಂದೆ ಇಂತಹದ್ದೇ ವಿಚಾರವೂ ಸೇರಿದಂತೆ ಕೆಲವೊಂದು ವಿಷಯಗಳಲ್ಲಿ ಸಂಸ್ಥಾಪಕರು ಮತ್ತು ಆಡಳಿತ ಮಂಡಳಿ..

    April 3, 2017
    ...
    agni-nimbalkar-final
    ರಾಜ್ಯ

    ‘ರೌಡಿಸಂ, ರಿಯಲ್ ಎಸ್ಟೇಟ್, ರಾಜಕೀಯ’: ಶೂಟೌಟ್ ನೆಪದಲ್ಲಿ ಪೊಲೀಸರೇಕೆ ಫೀಲ್ಡಿಗೆ ಇಳಿದರು?

    ಅದು ಬೆಂಗಳೂರಿನ ವಿಮಾನ ನಿಲ್ದಾಣ ಸಮೀಪದ 100/100 ಖಾಲಿ ಜಾಗ. ಅದರ ನಟ್ಟ ನಡುವೆ ತುಕ್ಕು ಹಿಡಿದ ಕಬ್ಬಿಣ ನೇಮ್‌ಪ್ಲೇಟಿನ ಮೇಲೆ ‘This property is belongs to…’ ಅನ್ನುವ ಬೋರ್ಡ್. ಸುತ್ತ ಬೆಳೆದು ನಿಂತ ಕುರುಚಲು ಗಿಡಗಳು. ಪಕ್ಕದಲ್ಲೊಂದು ಪುಟ್ಟ ಶೆಡ್. ಹೊರಗೆ ಕಾವಲು ನಿಂತ ಇಬ್ಬರು ಸೆಕ್ಯುರಿಟಿ ಗಾರ್ಡ್‌ಗಳು. ಅದೊಂದು ರಾತ್ರಿ ಈ ಜಾಗದ ಮೇಲೆ ಗುಂಪೊಂದು ದಾಳಿ ನಡೆಸುತ್ತದೆ. ಕಾವಲುಗಾರರನ್ನು ಬಡಿದು ಹೊರಗೆ ಹಾಕುತ್ತದೆ. ಮಾಲೀಕರ ಹೆಸರಿನಲ್ಲಿ ತಗಲು ಹಾಕಿದ್ದ ಫಲಕವನ್ನು ಕಿತ್ತು ಎಸೆಯುತ್ತದೆ. ಸರಿಯಾಗಿ..

    February 9, 2017
    ...
    trishneet-arora
    ಫೋಕಸ್

    ‘ಮನಸ್ಸಿದ್ದರೆ ಮಾರ್ಗ’: 8ನೇ ಕ್ಲಾಸ್ ಫೇಲಾಗಿದ್ದ ಈ ಹ್ಯಾಕಿಂಗ್ ಪೋರ!

    ‘ಮನಸ್ಸಿದ್ದರೆ ಮಾರ್ಗ’ ಅಂತ ಕನ್ನಡದಲ್ಲಿ ಮಾತಿದೆ. ಇದಕ್ಕೆ ಸರಿ ಹೊಂದುವಂತಿದೆ 21 ವರ್ಷದ ತ್ರಿಶ್‌ನೀತ್ ಅರೋರ ಜೀವನದ ಕತೆ. ಲೂಧಿಯಾನದ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದ ತ್ರಿಶ್‌ನೀತ್ ಇವತ್ತು ಫಾರ್ಚೂನ್ 500 ಎಂದು ಕರೆಸಿಕೊಳ್ಳುವ ಬೃಹತ್ ಕಾರ್ಪೊರೇಟ್ ಸಂಸ್ಥೆಗಳ ಪೈಕಿ ಕನಿಷ್ಟ 50 ಕಂಪನಿಗಳಿಗೆ ಬೇಕಾಗಿರುವ ಯುವಕ. ಜತೆಗೆ, ಸಿಬಿಐ, ಪಂಜಾಬ್ ಮತ್ತು ಗುಜರಾತ್ ಪೊಲೀಸ್‌ನಂತಹ ತನಿಖಾ ಸಂಸ್ಥೆಗಳಿಗೂ ತ್ರಿಶ್‌ನೀತ್ ‘ಬ್ಯೂ ಐಯ್ಡ್ ಬಾಯ್’. ಸದ್ಯ, ದುಬೈ ಸೇರಿದಂತೆ ವಿದೇಶಗಳಲ್ಲಿಯೂ ಕಚೇರಿಗಳನ್ನು ತೆರೆದಿರುವ ‘ಟ್ಯಾಕ್ ಸೆಕ್ಯುರಿಟಿ’ ಕಂಪನಿಯ ಒಡೆಯನೀತ…

    February 6, 2017
    ...
    pol-party-funding-final
    ದೇಶ

    ರಾಜಕೀಯ ಪಕ್ಷಗಳ ದೇಣಿಗೆಗೆ ಕಡಿವಾಣ: ‘ರಂಗೋಲಿ ಕೆಳಗೆ ತೂರುವವರಿಗೆ’ ಇಲ್ಲಿದೆ ಅವಕಾಶ!

    ರಾಜಕೀಯ ಪಕ್ಷಗಳಿಗೆ ಹರಿದು ಬರುವ ದೇಣಿಗೆಗೆ ಕಡಿವಾಣ ಹಾಕುವ ಸಂಬಂಧ ಈ ಬಾರಿಯ ಬಜೆಟ್ ಮಂಡನೆ ವೇಳೆ ಕೇಂದ್ರ ಸರಕಾರ ಕ್ರಮಗಳನ್ನು ಘೋಷಣೆ ಮಾಡಿದೆ. ಈ ಹಿಂದೆ 20 ಸಾವಿರದವರೆಗೆ ನಗದು ರೂಪದಲ್ಲಿ ಅನಾಮದೇಯ ವ್ಯಕ್ತಿಗಳಿಂದ ಪಕ್ಷಗಳು ‘ದೇಣಿಗೆ’ ಪಡೆಯುವ ಅವಕಾಶ ಇತ್ತು. ಇದಕ್ಕೆ ಚುನಾವಣಾ ಆಯೋಗ ಮತ್ತು ಸರಕಾರೇತರ ಸಂಸ್ಥೆಗಳು ವಿರೋಧವನ್ನು ವ್ಯಕ್ತಪಡಿಸಿದ್ದವು. ಕೇಂದ್ರ ಸರಕಾರ 2017-18ರ ಬಜೆಟ್ ಮಂಡನೆ ವೇಳೆ, ಅನಾಮದೇಯ ವ್ಯಕ್ತಿಗಳಿಂದ ನಗದು ರೂಪದಲ್ಲಿ ಹಣ ಸ್ವೀಕರಿಸುವ ಮಿತಿಯನ್ನು 2 ಸಾವಿರ ರೂಪಾಯಿಗೆ ಇಳಿಸಿದೆ…

    February 2, 2017
    ...
    arun-jaitley-budget
    ಸುದ್ದಿ ಸಾರ

    ಅಪಾರ ನಿರೀಕ್ಷೆ; ಅನುಮಾನಗಳ ಭಾರ: ಬಜೆಟ್ ಸಮಯದಲ್ಲಿ ಗಮನಿಸಬೇಕಾದ 10 ಅಂಶಗಳು

    ಅನಾಣ್ಯೀಕರಣ ಪ್ರಕ್ರಿಯೆ ನಡೆದ ನಂತರದ ಮೊದಲ ಕೇಂದ್ರ ಬಜೆಟ್ ಬುಧವಾರ, ಅಂದುಕೊಂಡ ಸಮಯಕ್ಕೆ ಮಂಡನೆಯಾಗಲಿದೆ. ಹಣಕಾಸು ಸಚಿವ ಅರುಣ್ ಜೇಟ್ಲಿ ತಮ್ಮ ನಾಲ್ಕನೇ ಆಯವ್ಯಯವನ್ನು ಜನರ ಎದುರಿಗೆ ಇಡಲಿದ್ದಾರೆ. ಅವರಿಗೆ ಹಾಗೂ ಸರಕಾರದ ಪಾಲಿಗೆ ಇದು ‘ಮಾಡು ಇಲ್ಲವೇ ಮಡಿ’ ವಿಚಾರ. ಶೇರು ಮಾರುಕಟ್ಟೆ ಇಂದು ಘೋಷಣೆಯಾಗಲಿರುವ ಖರ್ಚು- ಆದಾಯದ ವಿವರಗಳ ಮೇಲೆ ಕಣ್ಣಿಟ್ಟು ಕುಳಿತಿದೆ. ಅಪಾರ ನಿರೀಕ್ಷೆ ಹಾಗೂ ಅನುಮಾನಗಳ ಭಾರವನ್ನು ಹೊದ್ದುಕೊಂಡಿರುವ ಮುಂಗಡ ಪತ್ರ ಅನಾವರಣಗೊಳ್ಳಲು ಕ್ಷಣಗಣನೆ ಆರಂಭವಾಗಿದೆ. ಈ ಸಮಯದಲ್ಲಿ ಗಮನಿಸಬೇಕಾದ 10 ಅಂಶಗಳ ಪಟ್ಟಿ..

    February 1, 2017
    ...
    B S Yediyurappa Areest
    ರಾಜ್ಯ

    ‘ರಾಮಾ ರಾಮಾ ರೇ..’: ಲಂಚ ಪ್ರಕರಣದಲ್ಲಿ ಯಡಿಯೂರಪ್ಪಗೆ ಸಿಬಿಐನಿಂದ ಸಿಕ್ತು ‘ವಿಶೇಷ’ ಖುಲಾಸೆ!

    ಕಾನೂನಿನ ಅಡಿಯಲ್ಲಿ ಸತ್ಯಕ್ಕೆ ಹಲವು ಆಯಾಮಗಳಿರುತ್ತವೆ ಎಂಬುದು ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ. ಎಸ್. ‘ಯಡಿಯೂರಪ್ಪ v/s ಸಿಬಿಐ’ ಪ್ರಕರಣದಲ್ಲಿ ಮತ್ತೊಮ್ಮೆ ಸಾಭೀತಾಗಿದೆ. ಬುಧವಾರ ಬೆಂಗಳೂರಿನ ಸಿಬಿಐ ವಿಶೇಷ ನ್ಯಾಯಾಲಯ, ತನ್ನಲ್ಲಿ 2012ರಲ್ಲಿ ದಾಖಲಾಗಿದ್ದ ‘RC- 8 A’ ಪ್ರಕರಣದಲ್ಲಿ ಯಡಿಯೂರಪ್ಪ ಸೇರಿದಂತೆ ಅಷ್ಟೂ ಆರೋಪಿಗಳನ್ನು ದೂಷಮುಕ್ತಗೊಳಿಸಿದೆ. ಯಡಿಯೂರಪ್ಪ, ಅವರ ಪುತ್ರರಾದ ರಾಘವೇಂದ್ರ ಮತ್ತು ವಿಜೆಯೇಂದ್ರ, ಅಳಿಯ ಆರ್. ಎನ್. ಸೋಹನ್ ಕುಮಾರ್, ಅವರ ಪ್ರೇರಣ ಎಜುಕೇಶನ್ ಟ್ರಸ್ಟ್, ಮಾಜಿ ಸಚಿವ ಎನ್. ಎನ್. ಕೃಷ್ಣಯ್ಯ ಶೆಟ್ಟಿ, ಸೌತ್ ವೆಸ್ಟ್..

    October 26, 2016
    ...
    mukesh-ambani_1
    ಸುದ್ದಿ ಸಾರ

    15 ಕೋಟಿ ಸಂಬಳಕ್ಕೆ ಮುಕೇಶ್ ಅಂಬಾನಿ ತೃಪ್ತಿ: ವೇತನ ತಾರತಮ್ಯದ ಪ್ರಮಾಣ ಎಷ್ಟು?

    ಕಳೆದ ಎಂಟು 8 ವರ್ಷಗಳಿಂದ ದೇಶದ ಶ್ರೀಮಂತ ಉದ್ಯಮಿ, ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ತಮ್ಮ ಸಂಬಳವನ್ನು ಹೆಚ್ಚು ಮಾಡಿಕೊಂಡಿಲ್ಲ ಎಂಬ ಸುದ್ದಿ ಇದೀಗ ಹೊರಬಿದ್ದಿದೆ. ರಿಲಯನ್ಸ್ ಇಂಡಸ್ಟ್ರೀಸ್ ವಾರ್ಷಿಕ ವರದಿಯಲ್ಲಿ ಈ ವರದಿ ಬಿಡಗಡೆಯಾಗಿದ್ದು; ಅಂಬಾನಿ ತಮ್ಮ ಸಂಬಳವನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಕಳೆದ ಎಂಟು ವರ್ಷಗಳಿಂದ ಮುಕೇಶ್ ಅಂಬಾನಿ ತಮ್ಮ ಸಂಸ್ಥೆ ಕಡೆಯಿಂದ ವಾರ್ಷಿಕ 15 ಕೋಟಿ ಸಂಬಳವನ್ನು ಪಡೆಯುತ್ತಿದ್ದಾರೆ. ಇದರ ಜತೆಗೆ ಅವರ ವಾರ್ಷಿಕ ಖರ್ಚಿಗಾಗಿ ಸುಮಾರು 24 ಕೋಟಿ ರೂಪಾಯಿಗಳನ್ನು..

    August 5, 2016
  • 1
  • 2

Top