An unconventional News Portal.

ಕಾನೂನು
    ...

    ಧರ್ಮಸ್ಥಳದ ‘ಮೀಟರ್ ಬಡ್ಡಿ ವ್ಯವಹಾರ’ಕ್ಕೆ ಕಡಿವಾಣ ಹಾಕಬೇಕಾದ ಸಿದ್ದರಾಮಯ್ಯ ಹೀಗೇಕೆ ನಡೆದುಕೊಂಡರು?

    ಮುಖ್ಯಮಂತ್ರಿ ಸಿದ್ದರಾಮಯ್ಯ ದೀಪಾವಳಿಯ ಕೊನೆಯ ದಿನ ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ ನೀಡಿದ್ದು ಕಾಂಗ್ರೆಸ್ ಪಕ್ಷದ ಒಳಜಗಳದ ಕಾರಣಕ್ಕೆ ರಾಜ್ಯಮಟ್ಟದಲ್ಲಿ ಸುದ್ದಿಯಾಯಿತು. ಸುದ್ದಿಯಾಗದೇ ಹೋಗಿದ್ದು; ಅವರು ಧರ್ಮಸ್ಥಳಕ್ಕೆ ಭೇಟಿ ನೀಡಿದ್ದು ಮತ್ತು ಶ್ರೀ ಮಂಜುನಾಥನ ಹೆಸರಿನಲ್ಲಿ ನಡೆಯುತ್ತಿರುವ ‘ಬಡ್ಡಿ ವ್ಯವಹಾರ’ದ ಲಾಭಾಂಶವನ್ನು ವಿತರಿಸಿ ಬಂದಿದ್ದು! ಸಮಾಜವಾದಿ ಹಿನ್ನೆಯ, ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸುವ ಸಿಎಂ ಸಿದ್ದರಾಮಯ್ಯ, ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮೀಣಾಭಿವೃದ್ಧಿ ಯೋಜನೆ(ಎಸ್‌ಕೆಡಿಆರ್‌ಡಿಪಿ)ಯ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ತಡವಾಗಿ ಆರಂಭವಾದ ಕಾರ್ಯಕ್ರಮದಲ್ಲಿ […]

    October 23, 2017
    ...

    ಮನೆ ಬಾಡಿಗೆಗೆ ಇದೆ; ಸಸ್ಯಹಾರಿಗಳಿಗೆ ಮಾತ್ರ: ಸೂರಿನ ವ್ಯಾಪಾರಕ್ಕೆ ಆಹಾರ ಪದ್ಧತಿಯೇ ಮಾನದಂಡ!

    ಮನೆ ಖಾಲಿ ಇದೆ; ಆದರೆ ಸಸ್ಯಹಾರಿಗಳಿಗೆ ಮಾತ್ರ… ಹೀಗೊಂದು ಫಲಕ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಕಾಣಸಿಗುತ್ತದೆ. ಮನೆಯನ್ನು ಬಾಡಿಗೆಗೆ ಅಥವಾ ಲೀಸ್‌ಗೆ ನೀಡುವಾಗ ಬಾಡಿಗೆದಾರರ ಆಹಾರ ಪದ್ಧತಿಯನ್ನೇ ಮಾನದಂಡವಾಗಿಸಿಕೊಳ್ಳುವ ಪರಿಪಾಠ ಇದು. ಕಾನೂನಿ ಅಡಿಯಲ್ಲಿ ಖಾಸಗಿ ಆಸ್ತಿಯನ್ನು ಯಾರಿಗೆ ಬಾಡಿಗೆಗೆ ಅಥವಾ ಲೀಸ್‌ಗೆ ನೀಡಬೇಕು ಎಂಬುದನ್ನು ಮಾಲೀಕರೇ ನಿರ್ಧರಿಸುವ ಸ್ವಾತಂತ್ರ್ಯವಿದೆ. ಹಾಗಿದ್ದೂ, ‘ಸಸ್ಯಹಾರಿಗಳಿಗೆ ಮಾತ್ರ’ ಎಂಬ ಮನೆಗಳ ಮಾಲೀಕರ ನಿಯಮ, ಸಾಮಾಜಿಕ ನೆಲೆಯಲ್ಲಿ ಸಮುದಾಯವನ್ನು ಅವುಗಳ ಆಹಾರ ಪದ್ಧತಿಯ ಕಾರಣಕ್ಕೇ ಒಳಗೊಳ್ಳುವ ಅಥವಾ ದೂರ ಇಡುವ ಪ್ರಕ್ರಿಯೆಯಂತೆ ಕಾಣಿಸುತ್ತಿದೆ. […]

    October 21, 2017
    ...

    ‘ಗರ್ಭದ ಭಾರ’ ಹೊರುತ್ತಿರುವ ಮಕ್ಕಳು: ಭ್ರೂಣ ತೆಗೆಸಲು ಕೋರಿ ಅರ್ಜಿ ಸಲ್ಲಿಸುತ್ತಿರುವ ಸಂತ್ರಸ್ಥೆಯರು

    ಹತ್ತು ವರ್ಷದ ಮಗಳ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಭ್ರೂಣವನ್ನು ತೆಗೆಸಲು ಕೋರಿ ಪೋಷಕರು ಅರ್ಜಿ ಸಲ್ಲಿಸಿರುವ ಹಿನ್ನೆಲೆಯಲ್ಲಿ, ಸುಪ್ರಿಂ ಕೋರ್ಟ್‌ ವೈದ್ಯರಿಗೆ ಪರೀಕ್ಷೆ ನಡೆಸುವಂತೆ ಸೂಚನೆ ನೀಡಿದೆ. ಇದು ದೇಶದಲ್ಲಿ ಮಕ್ಕಳ ಮೇಲೆ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳು ಮತ್ತು ನಂತರದ ಸಾಮಾಜಿಕ ಪರಿಣಾಮಗಳಿಗೆ ಹಿಡಿದ ಕನ್ನಡಿದಂತಿದೆ. ಬಾಲಕಿ ತನ್ನ ಸಂಬಂಧಿಯೊಬ್ಬನಿಂದ ನಿರಂತರ ಅತ್ಯಾಚಾರಕ್ಕೆ ಒಳಗಾದ ಘಟನೆ ಚಂಡೀಘಡದಲ್ಲಿ ವರದಿಯಾಗಿತ್ತು. ಆರೋಪಿಯನ್ನು ಪೊಲೀಸರು ಬಂಧಿಸಿ ಜೈಲಿಗೂ ಕಳುಹಿಸಿದ್ದರು. ನಂತರ ಬಾಲಕಿಗೆ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿದ ನಂತರ ಆಕೆ […]

    July 25, 2017
    ...

    ‘ಡಿಜಿಟಲ್ ಕಣ್ಗಾವಲು’: ಪತ್ರಕರ್ತರಿಗೆ ಎಚ್ಚರಿಕೆ ಪಾಠ ಹೇಳಿದ ಯುನೆಸ್ಕೋ ವರದಿ!

    ನಮ್ಮಲ್ಲಿ ಟಿವಿ ವಾಹಿನಿಗಳಿಂದಾಗಿ ಪತ್ರಿಕೋದ್ಯಮ ಆಗಾಗ್ಗೆ ಚರ್ಚೆಗೆ ಒಳಗಾಗುತ್ತಲೇ ಇರುತ್ತದೆ. ಅದರಲ್ಲೂ ಸಾಮಾಜಿಕ ಜಾಲತಾಣಗಳು ಪ್ರಬಲವಾಗಿರುವ ಈ ದಿನಗಳಲ್ಲಿ ಮುಖ್ಯವಾಹಿನಿ ಮಾಧ್ಯಮಗಳು ಪರೀಕ್ಷೆಗೆ ಒಳಗಾಗುತ್ತಿವೆ. ಪತ್ರಿಕೋದ್ಯಮ ಎಂಬುದು ಸಂವಿಧಾನದ ‘ಕಾವಲು ನಾಯಿ’ ಎಂಬುದು ಹಳೆಯ ತಿಳಿವಳಿಕೆ. ಪತ್ರಿಕೋದ್ಯಮದ ಪಾಲಿಗೆ ಸಾಮಾಜಿಕ ಜಾಲತಾಣಗಳು ‘ಕಾವಲು ನಾಯಿ’ಗಳಾಗುತ್ತಿರುವ ದಿನಗಳಿವು.  ಸದ್ಯ ನಮ್ಮಲ್ಲಿ ಪತ್ರಿಕೋದ್ಯಮ ಮತ್ತು ನೈತಿಕತೆ ಚರ್ಚೆಗಳು ಸೀಮಿತಗೊಂಡಿವೆ. ಆದರೆ ಪ್ರಪಂಚದಾದ್ಯಂತ ಬೆಳೆಯುತ್ತಿರುವ ಡಿಜಿಟಲ್ ಯುಗದಲ್ಲಿ ಪತ್ರಕರ್ತರ ಮಾಹಿತಿ ಮೂಲಗಳ ರಕ್ಷಣೆ ಕುರಿತು ಚರ್ಚೆ ಆರಂಭವಾಗಿದೆ. ಸಂಶೋಧನೆಗಳು ನಡೆಯುತ್ತಿವೆ. ಇತ್ತೀಚೆಗೆ […]

    May 8, 2017
    ...

    ಕೇಂಬ್ರಿಡ್ಜ್ ರಿಟರ್ನ್ ಮಿಸ್ ಭಾಟಿಯಾ ಮತ್ತು ಸಂಘರ್ಷದ ನಾಡಿನ ಕೊಲೆ ಬೆದರಿಕೆಗಳು

    ಸದ್ಯ ದೇಶದ ರಾಜಧಾನಿಯಲ್ಲಿ ಕಾಲೇಜು ವಿದ್ಯಾರ್ಥಿಗಳು ಹೋರಾಟಕ್ಕೆ ಇಳಿದಿದ್ದಾರೆ. ಹಕ್ಕುಗಳಿಗಾಗಿ ಹೋರಾಟ ನಡೆಸಿಕೊಂಡು ಬರುವ ಸಂಪ್ರದಾಯ ಭಾರತಕ್ಕೆ ಹೊಸತಲ್ಲ. ಹಾಗಂತ ಹೋರಾಟ ಎಂಬುದು ಸುಂದರ ಗುಲಾಬಿಗಳನ್ನು ಹೊಂದಿರುವ ತೋಟವೇನೂ ಅಲ್ಲ. ಅದರಲ್ಲೂ, ಬಸ್ತಾರ್‌ನಂತಹ ಸೇನಾಪಡೆ ಮತ್ತು ನಕ್ಸಲೀಯರ ನಡುವೆ ನಿರಂತರ ಕಾಳಗಕ್ಕೆ ಸಾಕ್ಷಿಯಾಗಿರುವ ಪ್ರದೇಶದಲ್ಲಿ ಮಾನವ ಹಕ್ಕುಗಳಿಗಾಗಿ ಹೋರಾಟ ನಡೆಸುವುದು ಇನ್ನೂ ಕಷ್ಟ. ಅಂತಹದೊಂದು ಕಷ್ಟವನ್ನು ಮೈಮೇಲೆ ಎಳೆದುಕೊಂಡವರು ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ಪಿಎಚ್‌ಡಿ ಪಡೆದುಕೊಂಡು ಬಂದಿರುವ ಮಿಸ್. ಭಾಟಿಯಾ. ಆದಿವಾಸಿಗಳಿರುವ ಛತ್ತೀಸ್‌ಗಢ ರಾಜ್ಯದ ಪರ್ಪಾ ಗ್ರಾಮದಲ್ಲಿ ಭಾಟಿಯಾ […]

    February 28, 2017
    ...

    ‘ವಿಚಿತ್ರ ಕಾನೂನು’: ಇಲ್ಲಿ ಬಡವರಿಗೆ ಆಹಾರ ನೀಡಿದರೆ ಪೊಲೀಸರು ಬಂಧಿಸುತ್ತಾರೆ!

    ವಸತಿ ರಹಿತರಿಗೆ ಅನ್ನ, ಆಹಾರ ನೀಡಲು ಹೋದವರಿಗೆ ಕೈಕೋಳ ತೊಡಿಸುವ ಕಾನೂನುಗಳು ಅಮೆರಿಕಾದಲ್ಲಿವೆ ಎಂದರೆ ನೀವು ನಂಬಬೇಕು. ಇಲ್ಲಿನ ಫ್ಲೋರಿಡಾದ ಟ್ಯಾಂಪ ನಗರದಲ್ಲಿ ಇರುವ ಇಂತದೊಂದು ವಿಚಿತ್ರ ಕಾನೂನು ಆಗಾಗ್ಗೆ ಪೊಲೀಸರು ಮತ್ತು ಸಾಮಾಜಿಕ ಕಾರ್ಯಕರ್ತರ ನಡುವೆ ಸಂಘರ್ಷಕ್ಕೆ ಕಾರಣವಾಗುತ್ತಿದೆ. ಕಲ ದಿನಗಳ ಹಿಂದೆ ಟ್ಯಾಂಪಾ ಪಾರ್ಕೊಂದರಲ್ಲಿ ಬಡವರಿಗೆ ಊಟ ಮತ್ತು ಬಟ್ಟೆಗಳನ್ನು ವಿತರಿಸುತ್ತಿದ್ದವರನ್ನು ಪೊಲೀಸರು ಬಂಧಿಸಿದ್ದಾರೆ. ನಡೆದಿದ್ದೇನು?: ಲೈಕ್ಸ್ ಗ್ಯಾಸ್ಲೈಟ್ ಪಾರ್ಕ್ನಲ್ಲಿ ‘ಫುಡ್ ನಾಟ್ ಬಾಂಬ್ಸ್’ ಎನ್ನುವ ಸಂಘಟನೆಯ ಕಾರ್ಯಕರ್ತರು ಮನೆಯಿಲ್ಲದ ಜನರಿಗೆ ಊಟವನ್ನ ವಿತರಿಸುತ್ತಿದ್ದರು. […]

    February 7, 2017
    ...

    ಲೈಂಗಿಕ ದೌರ್ಜನಗಳ ‘ಸುದ್ದಿಯ ಗದ್ದಲ’: ಸಮಸ್ಯೆ ಇದೆ; ಪರಿಹಾರ ಇಲ್ಲ ಯಾಕೆ?

    ಹೊಸ ವರ್ಷದ ಸಂಭ್ರಮಾಚರಣೆ, ಅದರ ಬೆನ್ನಲ್ಲೇ ಬಹಿರಂಗಗೊಂಡ ಲೈಂಗಿಕ ದೌರ್ಜನ್ಯದ ವಿಡಿಯೋ ಕರ್ನಾಟಕದ ಮಾನವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಹರಾಜು ಹಾಕಿದೆ. ಡಿ. 31ರ ರಾತ್ರಿ ರಾಜಧಾನಿ ಬೆಂಗಳೂರಿನ ಎಂ. ಜಿ. ರಸ್ತೆ ಮತ್ತು ಬ್ರಿಗೇಡ್ ರಸ್ತೆಗಳಲ್ಲಿ ನಡೆದ ‘ಸಾಮೂಹಿಕ ಲೈಂಗಿಕ ದೌರ್ಜನ್ಯ’ ಪ್ರಕರಣ ಹಾಗೂ ಬುಧವಾರ ವರದಿಯಾಗಿರುವ ಕಮ್ಮನಹಳ್ಳಿಯ ಯುವತಿ ಮೇಲಿನ ದೌರ್ಜನ್ಯ ಪ್ರಕರಣಗಳಿಂದಾಗಿ ರಾಜ್ಯದಲ್ಲಿ ವಿಶೇಷವಾಗಿ ಬೆಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಾಧ್ಯಮಗಳಲ್ಲಿ ಬೆಂಗಳೂರಿನ ಲೈಂಗಿಕ ದೌರ್ಜನ್ಯ ಪ್ರಕರಣ […]

    January 4, 2017
    ...

    ಬೇನಾಮಿ ಆಸ್ತಿ ಮೇಲೆ ಪ್ರಹಾರ: ಮೋದಿ ಸರಕಾರದ ಹೊಸ ‘ಮಂತ್ರದಂಡ’ದ ಅಂತರಂಗದ ಕಹಾನಿ

    ಅನಾಣ್ಯೀಕರಣ ಘೋಷಣೆ ಮೂಲಕ ರಾತ್ರೋರಾತ್ರಿ 500 ಹಾಗೂ 1 ಸಾವಿರ ಮುಖಬೆಲೆಯ ನೋಟುಗಳನ್ನು ಕಾಗದ ಸಮಾನ ಮಾಡಿದ ಕೇಂದ್ರ ಸರಕಾರದ ನಿರ್ಧಾರ ಡೋಲಾಯಮಾನ ಸ್ಥಿತಿಯನ್ನು ನಿರ್ಮಿಸಿದೆ. ಪ್ರಧಾನಿ ಮೋದಿ ಅವರ ಮಹತ್ವಾಕಾಂಕ್ಷೆಯ ಘೋಷಣೆ ನಿರೀಕ್ಷಿತ ಫಲ ನೀಡಿಲ್ಲ. ಬದಲಿಗೆ ದೇಶಾದ್ಯಂತ ನಗದು ಹಣದ ಕೊರತೆಯನ್ನು ಸೃಷ್ಟಿಸುವ ಮೂಲಕ ಅಘೋಷಿತ ಆರ್ಥಿಕ ತುರ್ತು ಪರಿಸ್ಥಿತಿಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ, ಹೊಸ ವರ್ಷದಲ್ಲಿ ಮೋದಿ ಸರಕಾರ ಹೊಸತೊಂದು ಘೋಷಣೆ ಮೂಲಕ ಕಪ್ಪು ಹಣ ಹಾಗೂ ಭ್ರಷ್ಟಾಚಾರದ ವಿರುದ್ಧ ತನ್ನ ಸಮರವನ್ನು […]

    December 27, 2016
    ...

    ‘ಕೋರ್ಟ್ ಬೀಟ್’ ವರದಿಗಾರರಿಗೆ ಕಾನೂನು ಪದವಿ ಕಡ್ಡಾಯ: ಕೇರಳ ಹೈಕೋರ್ಟ್ ಹೊಸ ನಿಯಮ

    ಕೇರಳ ಹೈಕೋರ್ಟಿನ ವಕೀಲರು ಮತ್ತು ಪತ್ರಕರ್ತರ ನಡುವಿನ ಮುಸುಕಿನ ಗುದ್ದಾಟ ಹೊಸ ನಿಯಮದೊಂದಿಗೆ ಅಂತ್ಯವಾಗಿದೆ. ಕೇರಳ ಹೈಕೋರ್ಟಿನ ವಿಚಾರಣೆಗಳನ್ನು ವರದಿ ಮಾಡಲು ತೆರಳುವ ಪತ್ರಕರ್ತರಿಗೆ ಕಾನೂನು ಪದವಿಯನ್ನು ಕೋರ್ಟ್ ಕಡ್ಡಾಯಗೊಳಿಸಿದೆ. ತಕ್ಷಣದಿಂದ ಜಾರಿಗೆ ಬರುವಂತೆ ಹೈಕೋರ್ಟ್ ಈ ನಿಯಮಗಳನ್ನು ಜಾರಿಗೆ ತಂದಿದೆ. ಈ ಮೂಲಕ ಕೋರ್ಟ್ ಬೆಳವಣಿಗೆಗಳನ್ನು ವರದಿ ಮಾಡುವ ಪತ್ರಕರ್ತರು ‘ಲೀಗಲ್ ಕರೆಸ್ಪಾಂಡೆಂಟ್’ ಮಾನ್ಯತೆ ಪಡೆದುಕೊಳ್ಳಲು ಲಾ ಪದವಿ ಹೊಂದುವುದು ಅನಿವಾರ್ಯವಾಗಿದೆ. ಹೊಸ ನಿಯಮಗಳ ಪ್ರಕಾರ, ವರದಿಗಾರರಿಗೆ ಎರಡು ಪ್ರಕಾರದ ಮಾನ್ಯತೆಗಳನ್ನು ಕೋರ್ಟ್ ನೀಡುತ್ತದೆ. ಸಾಮಾನ್ಯ ಮತ್ತು ತಾತ್ಕಾಲಿಕ […]

    November 18, 2016
    ...

    ‘ಹೊಟ್ಟೆಪಾಡಿನ ನ್ಯಾಯ’: ಪತ್ರಕರ್ತರ ವೃತ್ತಿ ಬದುಕು ಮತ್ತು ಕಾನೂನು ಕಟ್ಟಳೆಗಳು!

    ವಿಭಿನ್ನ ವಿನ್ಯಾಸದ ವೃತ್ತಿಗಳಲ್ಲಿ ಪತ್ರಿಕೋದ್ಯಮ ಕೂಡಾ ಒಂದು. ಇಲ್ಲಿನ ಸವಾಲುಗಳು, ಕೆಲಸದ ಸಮಯಗಳು, ಒತ್ತಡಗಳ ವೈವಿಧ್ಯ ಬಹುಶಃ ಬೇರಾವ ವೃತ್ತಿಗಳಲ್ಲೂ ಕಾಣಲು ಸಾಧ್ಯವಿಲ್ಲ. ಇದೇ ಕಾರಣಕ್ಕೋ ಏನೋ ಕೇಂದ್ರ ಸರಕಾರ ಕಾರ್ಮಿಕ ಇಲಾಖೆಯಡಿಯಲ್ಲಿ ಪತ್ರಕರ್ತರಿಗಾಗಿಯೇ ಪ್ರತ್ಯೇಕ (The Working Jiournalists and Other Newspaper Employees (Conditions of Service) and Miscellaneous Provisions Act – 1955) ಕಾಯ್ದೆಯನ್ನೂ ಜಾರಿಗೆ ತಂದಿದೆ; ಎಷ್ಟರ ಮಟ್ಟಿಗೆ ಪತ್ರಿಕೆಗಳು, ಟಿವಿ ಮಾಧ್ಯಮಗಳು, ನ್ಯೂಸ್ ಚಾನೆಲ್ಗಳು ಇದನ್ನು ಪಾಲನೆ ಮಾಡುತ್ತಿವೆ […]

    September 12, 2016
  • 1
  • 2

Top