An unconventional News Portal.

ಕಾಂಗ್ರೆಸ್
  ...

  ಮಾಣಿಕ್ ಸರ್ಕಾರ್‌ಗೆ ಅಗ್ನಿ ಪರೀಕ್ಷೆ: ಈಶಾನ್ಯ ಭಾರತದಲ್ಲಿ ಗಣತಂತ್ರದ ಜಾತ್ರೆ

  ಭಾನುವಾರ ಭಾರತದ ಮೂರನೇ ಚಿಕ್ಕ ರಾಜ್ಯವೆನಿಸಿರುವ ತ್ರಿಪುರಾದಲ್ಲಿ ವಿಧಾನಸಭಾ ಚುನಾವಣೆಗೆ ಮತದಾನ ನಡೆಯಲಿದೆ. ಇದೇ ತಿಂಗಳ 27ರಂದು ಈಶಾನ್ಯ ಭಾರತದ ಮತ್ತೆರಡು ರಾಜ್ಯಗಳಾದ ಮೇಘಾಲಯ ಮತ್ತು ನಾಗಲ್ಯಾಂಡ್‌ಗಳಲ್ಲಿ ಮತದಾನ ನಡೆಯಲಿದೆ. ಮುಂದಿನ ತಿಂಗಳು ೩ನೇ ತಾರೀಖಿಗೆ ಮೂರೂ ರಾಜ್ಯಗಳ ಜನ ಹೊಸ ಸರಕಾರ ರಚನೆಗೆ ಸಾಕ್ಷಿಯಾಗಲಿದ್ದಾರೆ.  ಈಗಾಗಲೇ ಈಶಾನ್ಯ ಭಾರತದ 8 ರಾಜ್ಯಗಳಲ್ಲಿ ಅಸ್ಸಾಂ, ಮಣಿಪುರ, ಮಿಜೋರಾಮ್‌ ರಾಜ್ಯಗಳನ್ನು ತನ್ನ ಬುಟ್ಟಿಗೆ ಹಾಕಿಕೊಂಡಿರುವ ಬಿಜೆಪಿ ನಾಗಲ್ಯಾಂಡ್‌ನಲ್ಲಿ ಸಮ್ಮಿಶ್ರ ಸರಕಾರ ರಚಿಸಿದೆ. ಈಗ ನಡೆಯಲಿರುವ ಚುನಾವಣೆಗಳಲ್ಲಿ ಮೂರೂ ರಾಜ್ಯಗಳನ್ನು […]

  February 17, 2018
  ...

  LIVE: ಸಿದ್ದು ’13ನೇ ಮುಂಗಡ ಪತ್ರ’: ಕಾಂಗ್ರೆಸ್‌ ಸರಕಾರದ ಕೊನೆಯ ಬಜೆಟ್‌ನಲ್ಲಿ ಏನುಂಟು? ಏನಿಲ್ಲ?

  ವಿಧಾನಸೌಧದಲ್ಲಿ ಬಜೆಟ್ ಅಧಿವೇಶನವು 11.30ಕ್ಕೆ ಆರಂಭವಾಗಲಿದೆ. ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಆಡಳಿತದ ಅವಧಿಯ ಕೊನೆಯ ಬಜೆಟ್‌ ಇದಾಗಿದೆ . ಹಣಕಾಸು ಸಚಿವರೂ ಆಗಿರುವ ಸಿದ್ದರಾಮಯ್ಯ ಈ ಬಜೆಟ್ ಮಂಡಿಸುವ ಮೂಲಕ ರಾಜ್ಯದ ಇತಿಹಾಸದಲ್ಲಿ ಅತಿ ಹೆಚ್ಚು (13) ಬಜೆಟ್ ಮಂಡಿಸಿದ ಜನಪ್ರತಿನಿಧಿಗಳ ಪಟ್ಟಿಯಲ್ಲಿ ಮೊದಲನೇ ಸ್ಥಾನಕ್ಕೆ ಏರಲಿದ್ದಾರೆ. ಬಜೆಟ್ ಎಂಬುದು ರಾಜ್ಯದ ಮುಂದಿನ ಒಂದು ವರ್ಷದ ಆಯವ್ಯಯ ಪತ್ರ. 365 ದಿನಗಳಲ್ಲಿ ಜನರ ನಿರ್ದಿಷ್ಟ ಆಶೋತ್ತರಗಳನ್ನು ಈಡೇರಿಸಲು ಜನರೇ ಆಯ್ಕೆ ಮಾಡಿದ ಸರಕಾರ ಮಂಡಿಸುವ ಲೆಕ್ಕಪತ್ರ. ಈ […]

  February 16, 2018
  ...

  ‘ಅಧಿಕಾರಕ್ಕೆ ಬಂದರೆ ಜಿಎಸ್‌ಟಿ ಸರಳಗೊಳಿಸುತ್ತೇವೆ’: ಜನಾಶೀರ್ವಾದ ಯಾತ್ರೆಯಲ್ಲಿ ರಾಹುಲ್

  ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೈದ್ರಾಬಾದ್ ಕರ್ನಾಟಕ ಭಾಗದಲ್ಲಿ ನಡೆಸಿದ ನಾಲ್ಕು ದಿನಗಳ ಜನಾಶೀರ್ವಾದ ಯಾತ್ರೆ ಮಂಗಳವಾರ ಮುಗಿದಿದೆ. ಕಲಬುರಗಿ ಮತ್ತು ಬೀದರ್‌ನಲ್ಲಿ ಮಂಗಳವಾರ ಸಭೆ ನಡೆಸಿದ ರಾಹುಲ್, “ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಜಿಎಸ್‌ಟಿ ವ್ಯವಸ್ಥೆಯನ್ನು ಸರಳಗೊಳಿಸುತ್ತೇವೆ” ಎಂಬ ಭರವಸೆ ನೀಡಿದ್ದಾರೆ. ಈ ಹಿಂದೆ ಜಿಎಸ್‌ಟಿಯನ್ನು ‘ಗಬ್ಬರ್‌ ಸಿಂಗ್ ಟ್ಯಾಕ್ಸ್‌’ ಎಂದು ಕರೆದಿದ್ದ ರಾಹುಲ್ ಈಗ ಅದೇ ವ್ಯವಸ್ಥೆಯನ್ನು ಸರಳಗೊಳಿಸುವ ಮಾತನ್ನಾಡಿದ್ದಾರೆ. ಕಲಬುರಗಿಯಲ್ಲಿ ವೃತ್ತಿಪರರೊಂದಿಗೆ ನಡೆದ ಸಂವಾದದಲ್ಲಿ ಮಾತನಾಡಿರುವ ರಾಹುಲ್, “ನಮ್ಮ ಸರಕಾರ ಅಧಿಕಾರಕ್ಕೆ ಬಂದರೆ […]

  February 13, 2018
  ...

  ‘ಸೇನೆಗಿಂತ ಸಂಘ ದೊಡ್ಡದು’: ಮೋಹನ್ ಭಾಗವತ್ ಹೇಳಿಕೆಯೂ; ಸೈನ್ಯದ ಅವಮಾನವೂ…

  ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್‌) ಮುಖ್ಯಸ್ಥ ಮೋಹನ್ ಭಾಗವತ್ ತಮ್ಮ ಸಂಘಟನೆಯನ್ನು ಹೊಗಳುವ ಭರದಲ್ಲಿ ‘ಸೈನ್ಯಕ್ಕಿಂತ ತಮ್ಮ ಸಂಘಟನೆ (ಆರ್‌ಎಸ್‌ಎಸ್‌) ಶಕ್ತಿ ದೊಡ್ಡದು’ ಎಂಬಂತ ಮಾತುಗಳನ್ನಾಡುವ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಅವರ ಹೇಳಿಕೆ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಸಾಮಾಜಿಕ ಜಾಲತಾಣಳಲ್ಲಿ ಮೋಹನ್ ಭಾಗವತ್ ಅವರ ಹೇಳಿಕೆಗೆ ತೀವ್ರ ಖಂಡನೆ ವ್ಯಕ್ತವಾಗಿದೆ. ಟ್ವೀಟರ್‌ನಲ್ಲಿ #RSSInsultsArmy ಮತ್ತು #ApologiseRSS ಎಂಬ ಹ್ಯಾಶ್ ಟ್ಯಾಗ್ ಉಪಯೋಗಿಸಿ ಟ್ವೀಟ್ ಮಾಡುವ ಮೂಲಕ  ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಯುದ್ಧದ ಸಂಧರ್ಭದಲ್ಲಿ ತಯಾರಾಗಲು […]

  February 12, 2018
  ...

  ರೋಡ್‌ ಶೋ, ಜನಸಂಪರ್ಕ ಸಭೆ & ದಲಿತರ ಪ್ರತಿಭಟನೆ; ಎರಡನೇ ದಿನವೂ ಮುಂದುವರಿದ ರಾಹುಲ್ ‘ಟೆಂಪಲ್ ರನ್’

  ರಾಜ್ಯದಲ್ಲಿ ಚುನಾವಣಾ ಪ್ರಚಾರ ಆರಂಭಿಸಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ತಮ್ಮ ಜನಾಶೀರ್ವಾದ ಯಾತ್ರೆಯ ಎರಡನೇ ದಿನವಾದ ಭಾನುವಾರ ಕುಷ್ಟಗಿ, ತಾವರಗೇರಾ ಮಾರ್ಗದಲ್ಲಿ ರೋಡ್‌ ಶೋ ನಡೆಸಿದ್ದಾರೆ. ಯಾತ್ರೆಯ ಅಲ್ಲಲ್ಲಿ ತಮ್ಮ ವಿಶೇಷ ಬಸ್‌ನಿಂದ ಇಳಿದು ಜನರ ಕೈಕುಲುಕುವುದು, ದೇವಸ್ಥಾನಗಳಿಗೆ ಭೇಟಿ ನೀಡುವುದನ್ನು ಮುಂದುವರಿಸಿದ್ದಾರೆ. ತಮ್ಮ ಯಾತ್ರೆಯ ಮಾರ್ಗ ಮಧ್ಯೆ ಹೆಚ್ಚು ಜನ ಸೇರಿರುವ ಕಡೆಗಳಲ್ಲಿ ಬಸ್‌ನಿಂದ ಇಳಿದು ಜನರತ್ತ ಕೈ ಬೀಸುವುದು ಹಾಗೂ ಜನರೊಂದಿಗೆ ಬೆರೆಯುವ ಮೂಲಕ ರಾಹುಲ್ ಆಯಾ ಭಾಗದ ಜನರ ಒಲವು ಕಾಂಗ್ರೆಸ್‌ […]

  February 11, 2018
  ...

  ಎನ್‌ಡಿಟಿವಿ ಸಿಎಂ ಸಂದರ್ಶನ: ‘ನಾನು ದೇವರನ್ನು ನಂಬುತ್ತೇನೆ…’ ಎಂದವರು ಸಿದ್ದರಾಮಯ್ಯ!

  ಇದು ಚುನಾವಣೆಗೂ ಮುನ್ನ ರಾಷ್ಟ್ರೀಯ ವಾಹಿನಿಯೊಂದು ನಡೆಸಿದ ಸಂದರ್ಶನದ ಸಂಪೂರ್ಣ ಮಾಹಿತಿ. ಮುಂಬರುವ ಕರ್ನಾಟಕ ವಿಧಾನಸಸಭಾ ಚುನಾವಣೆಯನ್ನು ಎರಡೂ ರಾಷ್ಟ್ರೀಯ ಪಕ್ಷಗಳು ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳಿಗೆ ಈ ಚುನಾವಣೆಯ ಗೆಲುವು ಅನಿವಾರ್ಯ ಹಾಗೂ ಅಗತ್ಯ ಕೂಡ. ಬಿಜೆಪಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಅವರನ್ನೇ ಮುಂದಿಡಲು ತೀರ್ಮಾನ ತೆಗೆದುಕೊಂಡಿದೆ. ಕಾಂಗ್ರೆಸ್ ಪಕ್ಷದಲ್ಲಿ ಹಲವು ಮುಖ್ಯಮಂತ್ರಿ ಆಕಾಂಕ್ಷಿಗಳಿದ್ದರೂ, ಸಿಎಂ ಸಿದ್ದರಾಮಯ್ಯ ಅವರೇ, ಚುನಾವಣೆಯ ಮುಂಚೂಣಿ ನಾಯಕರಾಗಲಿದ್ದಾರೆ. ಅಂತಹದೊಂದು ಬೆಳವಣಿಗೆಯನ್ನು […]

  February 7, 2018
  ...

  ‘ಧರ್ಮ ವಿಭಜನೆ’ ರಾಜಕೀಯ ತಂತ್ರದಿಂದ ರಾಜಸ್ಥಾನದಲ್ಲಿ ಮುಗ್ಗರಿಸಿದ ಬಿಜೆಪಿ: ಮೂರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲುವು

  ರಾಜಸ್ಥಾನ ಮತ್ತು ಪಶ್ಚಿಮ ಬಂಗಾಳದಲ್ಲಿ ನಡೆದ ಉಪ ಚುನಾವಣೆಗಳಲ್ಲಿ ಬಿಜೆಪಿಗೆ ಭಾರೀ ಮುಖಭಂಗವಾಗಿದೆ. ರಾಜಸ್ಥಾನದ ಸಿಎಂ ವಸುಂಧರಾ ರಾಜೆ ಸರಕಾರ ಮತ್ತು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ಜನರು ಸ್ಪಷ್ಟ ಉತ್ತರ ನೀಡಿದ್ದಾರೆ. ಬಿಜೆಪಿ ಅಭ್ಯರ್ಥಿ ಜಸ್ವಂತ್ ಸಿಂಗ್ ಯಾದವ್ , “ನೀವು ಹಿಂದೂ ಆಗಿದ್ದರೆ, ನನಗೆ ಮತ ನೀಡಿ. ನೀವು ಮುಸ್ಲಿಂ ಆಗಿದ್ದರೆ, ಕಾಂಗ್ರೆಸ್‌ಗೆ ಮತ ನೀಡಿ,” ಎಂದು ಹೇಳುವ ಮೂಲಕ ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡಲು ಮುಂದಾಗಿದ್ದರು. ಧರ್ಮ ವಿಭಜನೆಯ ರಾಜಕೀಯ ತಂತ್ರಕ್ಕೆ […]

  February 2, 2018
  ...

  ‘ಅತ್ತ ಬಜೆಟ್‌; ಇತ್ತ ಧರ್ಮಯುದ್ಧ’: ಆಯವ್ಯಯಕ್ಕೆ ತಿಲಾಂಜಲಿ ಇಟ್ಟು, ಕೋಮು ರಾಜಕಾರಣಕ್ಕಿಳಿದ ರಾಜ್ಯ ಬಿಜೆಪಿ

  ದೇಶದ ರಾಜಧಾನಿಯಲ್ಲಿ ಕೇಂದ್ರ ವಿತ್ತ ಸಚಿವರು 2018-19ನೇ ಸಾಲಿನ ಆಯವ್ಯಯಗಳ ಬಜೆಟ್‌ ಮಂಡಿಸುತ್ತಿದ್ದರೆ, ರಾಜ್ಯ ರಾಜಧಾನಿಯಲ್ಲಿ ಬಿಜೆಪಿ ರಾಜ್ಯ ಮುಖಂಡರು ಬುಧವಾರ ನಡೆದ ಕೊಲೆಯೊಂದಕ್ಕೆ ಕೋಮು ಬಣ್ಣ ಬಳಿಯುವತ್ತ ಮಗ್ನರಾಗಿದ್ದಾರೆ. ಸಾಮಾಜಿಕ ಜಾಲತಾಣಗಳನ್ನು ಉಪಯೋಗಿಸಿಕೊಂಡು, ಮತ್ತೊಂದು ಹಿಂದೂ ಕಾರ್ಯಕರ್ತನ ಕೊಲೆ ನಡೆದಿದೆ ಎಂದು ಸರಣಿ ಟ್ವೀಟ್‌ಗಳನ್ನು ಮಾಡುತ್ತಿದ್ದಾರೆ. ಆದರೆ ಇಡೀ ದೇಶ ಕೇಂದ್ರ ಬಜೆಟ್‌ನಲ್ಲಿ ಮುಳುಗಿ ಹೋಗಿರುವ ಹಿನ್ನೆಲೆಯಲ್ಲಿ, ಬಿಜೆಪಿ ನಾಯಕರ ಈ ಆಲಾಪಕ್ಕೆ ತಕ್ಕನಾದ ಮೀಡಿಯಾ ಕವರೇಜ್ ಸಿಗದೇ ಹೋಗಿದೆ.  ಬುಧವಾರ ಸಂಜೆ ಬೆಂಗಳೂರಿನ ಜೆಸಿ […]

  February 1, 2018
  ...

  ಧಾರ್ಮಿಕ ರಾಜಕಾರಣದ ಖಡಕ್ ಮುಸ್ಲಿಂ ಧ್ವನಿ ಓವೈಸಿ; ರಾಜ್ಯಕ್ಕೆ ಬಂದರೆ ಏನಾಗಬಹುದು ಊಹಿಸಿ!

  “ಎಐಎಂಐಎಂ ಪಕ್ಷದ ಅಸಾದುದ್ದೀನ್ ಓವೈಸಿ ಜೊತೆಗೆ ಬಿಜೆಪಿ ನಾಯಕರು ಹೈದರಾಬಾದ್‌ನಲ್ಲಿ ರಹಸ್ಯ ಸಭೆ ನಡೆಸಿದ್ದಾರೆ. ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ಹತ್ತಿರ ಇರುವ ಹಿನ್ನಲೆಯಲ್ಲಿ ಮತ ವಿಭಜನೆ ಮಾಡುವ ಸಲುವಾಗಿ ಅವರು ಓವೈಸಿ ಜೊತೆಗೆ ಚುನಾವಣಾ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದಾರೆ. ಬಿಜೆಪಿಗೆ ಇಂತಹ ಮಾರ್ಗಗಳು ಹೊಸದೇನೂ ಅಲ್ಲ. ಉತ್ತರ ಪ್ರದೇಶದಲ್ಲಿ ಇಂಥ ಮಾರ್ಗಗಳನ್ನು ಅನುಸರಿಸಿಯೇ ಅದು ಅಧಿಕಾರಕ್ಕೆ ಬಂದಿದೆ. ಅಲ್ಲಿನ ಮುಸ್ಲಿಮ್ ಸಮುದಾಯ ಹೆಚ್ಚಿರುವ ಪ್ರದೇಶದಲ್ಲಿ ಬಿಜೆಪಿಯು ಒಳಮೈತ್ರಿ ಮಾಡಿಕೊಂಡಿತ್ತು. ಈಗ ಕರ್ನಾಟಕದಲ್ಲೂ ಅದೇ ತಂತ್ರವನ್ನು ಅನುಸರಿಸಲು ಬಿಜೆಪಿ ಮುಂದಾಗಿದೆ,” ಎಂದು ಎರಡು […]

  January 31, 2018
  ...

  ಬಂದ್ ನಡುವೆಯೇ ಬಿಜೆಪಿ ಪರಿವರ್ತನಾ ಯಾತ್ರೆ: ಸರಕಾರದ ವಿರುದ್ಧ ವಾಗ್ದಾಳಿಗೆ ಸಾಕ್ಷಿಯಾದ ಅರಮನೆ ನಗರಿ

  “ಭ್ರಷ್ಟಾಚಾರ ಅಂದರೆ ಸಿದ್ದರಾಮಯ್ಯ, ಸಿದ್ದರಾಮಯ್ಯ ಅಂದರೆ ಭ್ರಷ್ಟಾಚಾರ. ಭ್ರಷ್ಟಾಚಾರ ಮತ್ತು ಸಿದ್ದರಾಮಯ್ಯ ಒಂದೇ ನಾಣ್ಯದ ಎರಡು ಮುಖಗಳು. ಸಿದ್ದರಾಮಯ್ಯ ಸರ್ಕಾರದ ಭ್ರಷ್ಟಾಚಾರ ಪ್ರಕರಣಗಳನ್ನು ಹೇಳುತ್ತಾ ಹೋದರೆ 7 ದಿನ ಬೇಕಾಗುತ್ತದೆ. ಅಷ್ಟು ಮಾಹಿತಿ ನನ್ನ ಬಳಿ ಇದೆ, ಭ್ರಷ್ಟ ಸಿದ್ದರಾಮಯ್ಯ ಸರ್ಕಾರವನ್ನು ಕಿತ್ತೊಗೆಯಲೇಬೇಕು,” ಎಂದು ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೇಳಿದರು. ಗುರುವಾರ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಬಿಜೆಪಿ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ‘ಭಾವಿ ಮುಖ್ಯಮಂತ್ರಿ ಯಡಿಯೂರಪ್ಪ’ ಎಂದು ಸಂಬೋಧಿಸುವ […]

  January 25, 2018

Top