An unconventional News Portal.

ಕರ್ನಾಟಕ
    ...
    farmer_ploughing
    ದೇಶ

    ರೈತರ ಆತ್ಮಹತ್ಯೆಗೆ ಬ್ಯಾಂಕುಗಳ ಕೊಡುಗೆ ಅಪಾರ: ಲೇವಾದೇವಿಗಾರರ ಮೇಲಿನ ಆರೋಪ ನಿರಾಧಾರ

    ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಂತೆ, ಲೇವಾದೇವಿದಾರರಿಂದ ಪಡೆದ ಸಾಲವೇ ಜೀವಕ್ಕೆ ಕುತ್ತಾಯಿತು ಎಂಬ ಮಾತು ಕೇಳಿ ಬರುತ್ತದೆ. ಆದರೆ ಅದು ಸುಳ್ಳು ಎನ್ನುತ್ತಿದೆ ‘ರಾಷ್ಟ್ರೀಯ ಅಪರಾಧ ದಾಖಲೆ ವಿಭಾಗ’ (ಎನ್.ಸಿ.ಆರ್.ಬಿ) ದ ಮಾಹಿತಿ. 2015ರಲ್ಲಿ ಸಾಲ ಮರುಪಾವತಿಸಲಾಗದೆ ಆತ್ಮಹತ್ಯೆಗೆ ಶರಣಾದ ರೈತರಲ್ಲಿ ಶೇಕಡಾ 80 ರಷ್ಟು ಜನ ಬ್ಯಾಂಕುಗಳು ಮತ್ತು ನೋಂದಾಯಿತ ಮೈಕ್ರೋಫೈನಾನ್ಸ್ ಗಳಿಂದ ಸಾಲ ಪಡೆದವರು ಎಂದು ಈ ದಾಖಲೆಗಳು ಹೇಳುತ್ತಿವೆ. ಇದೇ ಮೊದಲ ಬಾರಿಗೆ ಆತ್ಯಹತ್ಯೆ ಮಾಡಿಕೊಂಡ ರೈತರ ಮರು ಪಾವತಿಸಲಾಗದ ಸಾಲದ ಬಗ್ಗೆಯೂ ಎನ್.ಸಿ.ಆರ್.ಬಿ ಮಾಹಿತಿ..

    January 7, 2017
    ...
    throwball-delhi-2
    ದೇಶ

    ‘ಕ್ರೀಡಾ ರಾಜಕೀಯ’: ಕರ್ನಾಟಕದ ಮಹಿಳಾ ಕ್ರೀಡಾಪಟುಗಳ ಮೇಲೆ ದಿಲ್ಲಿಯಲ್ಲಿ ಹಲ್ಲೆ

    ಬೆಂಗಳೂರಿನಲ್ಲಿ ಮಹಿಳೆಯರ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ವಿಚಾರದಲ್ಲಿ ದಿಲ್ಲಿ ಕೇಂದ್ರಿತ ರಾಷ್ಟ್ರೀಯ ಮಾಧ್ಯಮಗಳು ‘ಸುದ್ದಿ ಗದ್ದಲ’ವನ್ನು ಎಬ್ಬಿಸಿವೆ. ಅದೇ ವೇಳೆ, ದಿಲ್ಲಿಯಲ್ಲಿ ನಡೆದ ರಾಷ್ಟ್ರೀಯ ಥ್ರೋ ಬಾಲ್ ಚಾಂಪಿಯನ್ಶಿಪ್ ಕ್ರೀಡಾಕೂಟದಲ್ಲಿ ಕರ್ನಾಟಕದ ವಿದ್ಯಾರ್ಥಿನಿಯರ ಮೇಲೆ ಹಲ್ಲೆ ನಡೆದಿದೆ. ಘಟನೆ ನಡೆದು 24 ಗಂಟೆಗಳು ಕಳೆದಿದ್ದರೂ, ಈವರೆಗೆ ತಮಿಳುನಾಡಿನ ವಾಹಿನಿಗಳನ್ನು ಹೊರತು ಪಡಿಸಿ, ರಾಷ್ಟ್ರೀಯ ಮಾಧ್ಯಮಗಳಾಗಲೀ, ಕರ್ನಾಟಕದ ಮಾಧ್ಯಮಗಳಲ್ಲಿ ‘ಗದ್ದಲ’ ಹಾಳಾಗಿ ಹೋಗಲೀ, ಸುದ್ದಿಯೂ ಪ್ರಸಾರವಾಗಿಲ್ಲ. ಈ ಸಮಯದಲ್ಲಿ ದಿಲ್ಲಿಯಲ್ಲಿ ನಡೆದ ಘಟನೆಯ ಕುರಿತು ‘ಸಮಾಚಾರ’ಕ್ಕೆ ಸಿಕ್ಕಿರುವ ಚಿತ್ರಗಳು, ವಿಡಿಯೋಗಳನ್ನು..

    January 6, 2017
    ...
    vardah-cyclone-pti
    ದೇಶ

    ಕರ್ನಾಟಕವನ್ನೂ ಹಾದು ಹೋಗಲಿರುವ ವಾರ್ದಾ ಚಂಡಮಾರುತ: 10 ಪ್ರಮುಖ ಬೆಳವಣಿಗೆಗಳು

    ತಮಿಳುನಾಡು ರಾಜಧಾನಿ ಚೆನ್ನೈನಿಂದ 15 ಕಿ. ಮೀ ದೂರದಲ್ಲಿ ಅಪ್ಪಳಿಸಿರುವ ವಾರ್ದಾ ಚಂಡಮಾರುತಕ್ಕೆ ಈವರೆಗೆ 10 ಜನರ ಬಲಿಯಾಗಿದೆ. ಸೋಮವಾರ ಗಂಟೆಗೆ 90- 100 ಕಿ. ಮೀ ವೇಗದಲ್ಲಿ ಬೀಸುತ್ತಿದ್ದ ಚಂಡಮಾರುತದ ಬಿರುಗಾಳಿಯ ವೇಗ 120- 130 ಕಿ. ಮೀ ಪ್ರತಿ ಗಂಟೆಗೆ ಹೆಚ್ಚಿದೆ. ಆದರೆ ಮಾರುತಗಳ ತೀವ್ರತೆ ತಗ್ಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದರ ಜತೆಗೆ ಭಾರಿ ಮಳೆ ಸುರಿಯುತ್ತಿರುವುದರಿಂದ ರಸ್ತೆಗಳು, ಜನವಸತಿ ಪ್ರದೇಶಗಳು ಜಲಾವೃತವಾಗಿವೆ. ತಮಿಳುನಾಡು ಮತ್ತು ಆಂಧ್ರ ಪ್ರದೇಶಗಳಲ್ಲಿ ಚಂಡಮಾರುತ ಹಾದು..

    December 13, 2016
    ...
    INDIA-VOTE-JAYALALITHAA
    ದೇಶ

    ‘ಜಯಲಲಿತಾ ಹೆಲ್ತ್ ರಿಪೋರ್ಟ್’: ಅಮ್ಮ ಆರೋಗ್ಯ ಗಂಭೀರ; ಸ್ಪಷ್ಟತೆ ಇನ್ನೂ ದೂರ

    ತಮಿಳುನಾಡಿನ ಮುಖ್ಯಮಂತ್ರಿ, ಎಐಎಡಿಎಂ ಪಕ್ಷದ ಕಾರ್ಯಕರ್ತರ ಪಾಲಿನ ಆರಾಧ್ಯ ದೈವ ಜೆ. ಜಯಲಲಿತಾ ಆರೋಗ್ಯದ ಗಂಭೀರತೆ ಮುಂದುವರಿದೆ. ಸೋಮವಾರ ಮಧ್ಯಾಹ್ನ ತಾನೆ ಚೆನ್ನೈ ಅಪೊಲೋ ಆಸ್ಪತ್ರೆ ಬಿಡುಗಡೆ ಮಾಡಿರುವ ‘ಪ್ರಕಟಣೆ’ಯಲ್ಲಿ, ‘ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ನಿನ್ನೆ (ಭಾನುವಾರ) ಸಂಜೆ ಹೃದಯಾಘಾತಕ್ಕೆ ಒಳಗಾಗಿದ್ದರು. ಇವತ್ತೂ ಆರೋಗ್ಯ ಸ್ಥಿತಿಯಲ್ಲಿ ಗಂಭೀರತೆ ಮುಂದುವರಿದೆ. ಪರಿಣಿತ ತಜ್ಞ ವೈದ್ಯರು ನಿಗಾವಹಿಸಿದ್ದು, ಇಸಿಎಂಓ ಸೇರಿದಂತೆ ತೀವ್ರ ನಿಗಾ ಕ್ರಮಕ್ಕೆ ಒಳಗಾಗಿದ್ದಾರೆ’ ಎಂದು ತಿಳಿಸಿದೆ. ಜಯಲಲಿತಾ 74 ದಿನಗಳ ಹಿಂದೆ ಸದ್ಯ ಚಿಕಿತ್ಸೆ ಪಡೆಯುತ್ತಿರುವ ಚೆನ್ನೈನ ಅಪೊಲೋ ಆಸ್ಪತ್ರೆಗೆ ಅನಾರೋಗ್ಯದ..

    December 5, 2016
    ...
    Krishna Dam
    ಸುದ್ದಿ ಸಾರ

    ಕೃಷ್ಣಾ ನ್ಯಾಯಾಧಿಕರಣ ಆದೇಶ: ಆಂಧ್ರ ನೀರನ್ನೇ ಹಂಚಿಕೊಳ್ಳುವಂತೆ ತೆಲಂಗಾಣಕ್ಕೆ ಸೂಚನೆ

    ಕೃಷ್ಣಾನದಿ ನೀರಿನ ಮರು ಹಂಚಿಕೆಯನ್ನು ‘ಕೃಷ್ಣಾ ನದಿ ನ್ಯಾಯಾಧಿಕರಣ’ ತಳ್ಳಿ ಹಾಕಿದೆ. ಈ ಮೂಲಕ ಕಾವೇರಿ ವಿವಾದದಿಂದ ಜರ್ಝರಿತವಾಗಿದ್ದ ಕರ್ನಾಟಕಕ್ಕೆ ಕೃಷ್ಣಾ ತೀರ್ಪು ನೆಮ್ಮದಿ ತಂದಿದೆ ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳು ಪ್ರತ್ಯೇಕವಾದ ನಂತರ ಕೃಷ್ಣಾ ನದಿ ನೀರನ್ನು ಮರು ಹಂಚಿಕೆ ಮಾಡಬೇಕು, ಮತ್ತೆ ಪ್ರಾರಂಭದಿಂದಲೇ ವಿಚಾರಣೆ ನಡೆಸಬೇಕು ಎಂದು ತೆಲಂಗಾಣ ಸರ್ಕಾರ ಸುಪ್ರೀಂಕೋರ್ಟ್‌ ಹಾಗೂ ನ್ಯಾಯಾಧಿಕರಣದ ಮೊರೆ ಹೋಗಿತ್ತು. ಇದರ ವಿಚಾರಣೆ ಸೋಮವಾರ ಮಗಿದಿದ್ದು ನೀರಿನ ಮರು ಹಂಚಿಕೆ ಎಂದು ಕೃಷ್ಣಾ ನದಿ ನ್ಯಾಯಾಧಿಕರಣ..

    October 19, 2016
    ...
    tachnical-team-supreem-court
    ರಾಜ್ಯ

    ಕಾವೇರಿ ತಾಂತ್ರಿಕ ಸಮಿತಿಯಿಂದ ಸುಪ್ರಿಂ ಕೋರ್ಟಿಗೆ ವರದಿ ಸಲ್ಲಿಕೆ; ರಿಪೋರ್ಟಿನಲ್ಲೇನಿದೆ?

    ಕಾವೇರಿ ಉನ್ನತ ಮಟ್ಟದ ತಾಂತ್ರಿಕ ಸಮಿತಿ ತನ್ನ 87 ಪುಟಗಳ ಸುದೀರ್ಘ ಸ್ಥಳ ಪರಿಶೀಲನಾ ವರದಿಯನ್ನು ಸುಪ್ರಿಂ ಕೋರ್ಟಿಗೆ ಸಲ್ಲಿಸಿದೆ. ಪರ್ಯಾಯ ಬೆಳೆಗಳು ಮತ್ತು ನೀರಾವರಿ ಅಳವಡಿಸಿಕೊಳ್ಳುವುದು; ಈ ಮೂಲಕ ನೀರಿನ ಪೋಲು ತಡೆಗಟ್ಟುವುದು. ಅಟೋಮ್ಯಾಟಿಕ್ ನೀರಿನ ಅಳತೆ ಮಾಪನ ಅಳವಡಿಸಿಕೊಳ್ಳುವುದು. ರಾಜ್ಯದ ಜನರಿಗೆ ಬುದ್ದಿವಾದ ಹೇಳುವುದು ಸೇರಿದಂತೆ ಹಲವು ತೀರ್ಮಾನಗಳನ್ನು ಒಳಗೊಂಡ ವರದಿಯನ್ನು ಸಮಿತಿಯು ಸೋಮವಾರ ಸುಪ್ರಿಂ ಕೋರ್ಟಿಗೆ ಸಲ್ಲಿಸಿದೆ. ಕಾವೇರಿ ತಾಂತ್ರಿಕ ಸಮಿತಿ ಸಲ್ಲಿಸಿದ ರಿಪೋರ್ಟಿನಲ್ಲಿ ಒಟ್ಟು 6 ವಿಭಾಗಗಳಿದ್ದು ಸವಿವರವಾದ ವರದಿ ಇದಾಗಿದೆ…

    October 17, 2016
    ...
    all party meeting siddaramayya and devegowda
    ರಾಜ್ಯ

    ‘ಕಾವೇರಿದ ರಾಜಕಾರಣ’ದ ಶವಪರೀಕ್ಷೆ: ಬೆಟ್ಟ ಅಗೆದೂ, ‘ನೀರು ಹರಿಸಿದವರು’ ನಮ್ಮ ರಾಜಕಾರಣಿಗಳು!

    ಸುಮಾರು 40 ದಿನಗಳ ಅಂತರದಲ್ಲಿ ನಡೆದ ರಾಜ್ಯ ಬಂದ್- ಬೀದಿ ಹೋರಾಟಗಳು, ಒಂದು ಗೋಲಿಬಾರ್, ಎರಡು ಸಾವು, 25 ಸಾವಿರ ಕೋಟಿ ನಷ್ಟ, ಎರಡು ವಿಶೇಷ ಅಧಿವೇಶನಗಳು, ಅದಕ್ಕಾಗಿ ಹೆಚ್ಚುಕಡಿಮೆ 2 ಕೋಟಿ ವೆಚ್ಚ, ಸಾಲು ಸಾಲು ಸುಪ್ರಿಂ ಕೋರ್ಟ್ ತೀರ್ಪುಗಳು, ದೇಶದ ಮುಂದೆ ರಾಜ್ಯಕ್ಕೆ ಛೀಮಾರಿ, ರಾಜಕೀಯ ಲಾಭ ನಷ್ಟದ ನಡೆಗಳು, ಮತ್ಸದ್ಧಿತನದ ಮೆರೆದಾಟಗಳು, ವಿವೇಚನೆ ಪಕ್ಕಕ್ಕಿಟ್ಟ ಆಡಳಿತ ಹಾಗೂ ಕಾವೇರಿ ವಿಚಾರದಲ್ಲಿ ‘ಬೆಟ್ಟ ಅಗೆದು; ಕೊನೆಗೂ ಇಲಿಯನ್ನೇ ಹಿಡಿಯುವ’ ಹೈ ಡ್ರಾಮಾದ ಪುನರಾವರ್ತನೆ… ಇವು..

    October 4, 2016
    ...
    cauvery
    ಸುದ್ದಿ ಸಾರ

    ನಿರ್ವಹಣಾ ಮಂಡಳಿ ಸದ್ಯಕ್ಕಿಲ್ಲ: ರಾಜ್ಯಕ್ಕೆ ತಾತ್ಕಾಲಿಕ ನಿರಾಳತೆ

    ಕಾವೇರಿ ನೀರು ನಿರ್ವಹಣಾ ಮಂಡಳಿಯ ರಚನೆಯನ್ನು ಸುಪ್ರಿಂ ಕೋರ್ಟ್ ಸದ್ಯಕ್ಕೆ ಮುಂದೂಡಿದ್ದು ಕರ್ನಾಟಕ ತುಸು ನಿರಾಳವಾಗಿದೆ. ಇದರಿಂದ ತಮಿಳುನಾಡಿಗೆ ಹಿನ್ನಡೆಯಾದಂತಾಗಿದೆ. ಆದರೆ ಮತ್ತೆ 12 ದಿನಗಳ ಕಾಲ 24,000 ಕ್ಯೂಸೆಕ್ಸ್ ನೀರು ಹರಿಸುವಂತೆ ಸರ್ವೋಚ್ಚ ನ್ಯಾಯಾಲಯ ರಾಜ್ಯಕ್ಕೆ ಆದೇಶ ನೀಡಿದೆ. ಇದಲ್ಲದೇ ಕೋರ್ಟ್ ತಾಂತ್ರಿಕ ಸಮಿತಿಯನ್ನೂ ನೇಮಿಸಿ ವರದಿ ಸಲ್ಲಿಸಲು ಅಕ್ಟೋಬರ್ 17ರ ಗಡುವು ವಿಧಿಸಿದ್ದು ಇಂದಿನ ಆದೇಶದ ವಿಶೇಷ. ಮಂಗಳವಾರದ ವಿಚಾರಣೆಯಲ್ಲಿ ಸುಪ್ರಿಂ ಆದೇಶವನ್ನು ಪಾಲನೆ ಮಾಡದ ಕರ್ನಾಟಕವನ್ನು ಕೋರ್ಟ್ ತೀರ್ವ ತರಾಟೆಗೆ ತೆಗೆದುಕೊಂಡಿದ್ದಲ್ಲದೇ ತನ್ನ..

    October 4, 2016
    ...
    cauvery
    ಸುದ್ದಿ ಸಾರ

    ‘ಬೀಸೋ ದೊಣ್ಣೆಯಿಂದ ಪಾರಾಗಲು’: ತಮಿಳುನಾಡಿಗೆ 10,000 ಕ್ಯೂಸೆಕ್ಸ್ ನೀರು ಹರಿಸಲು ನಿರ್ಣಯ

    ಸುಪ್ರಿಂ ಆದೇಶದಂತೆ ತಮಿಳುನಾಡಿಗೆ 10,000 ಕ್ಯೂಸೆಕ್ಸ್ ನೀರು ಹರಿಸಲು ಕರ್ನಾಟಕ ನಿರ್ಧರಿಸಿದೆ. ಈ ಮೂಲಕ ಪರೋಕ್ಷವಾಗಿ ಸುಪ್ರಿಂ ಕೋರ್ಟ್ ಆದೇಶ ಪಾಲಿಸಲು ಕರ್ನಾಟಕ ಮುಂದಾಗಿದೆ. ಸೋಮವಾರ ನಡೆದ ಕೆ.ಬಿ ಕೋಳಿವಾಡ್ ನೇತೃತ್ವದ ‘ಬ್ಯುಸಿನೆಸ್ ಅಡ್ವೈಸರಿ ಕಮಿಟಿ ಸಭೆ’ಯಲ್ಲಿ ಈ ತೀರ್ಮಾನಕ್ಕೆ ಕರ್ನಾಟಕ ಬಂದಿದೆ ಎಂದು ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ. ‘ಕಾವೇರಿ ನೀರು ಬಿಡುಗಡೆಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರ ನಾವು ನೀಡುತ್ತಿರುವ ಆದೇಶ ಉಲ್ಲಂಘಿಸುವುದನ್ನು ಮೊದಲು ನಿಲ್ಲಿಸಲಿ. ಮಂಗಳವಾರ ಮಧ್ಯಾಹ್ನದೊಳಗೆ ನೀರು ಹರಿಸುವ ನಿರ್ಧಾರದ ಬಗ್ಗೆ..

    October 3, 2016
    ...
    SUPREME-COURT
    ಕಾವೇರಿ ವಿವಾದ

    ‘ಗಾಯದ ಮೇಲೆ ಬರೆ’: 36 ಸಾವಿರ ಕ್ಯೂಸೆಕ್ಸ್ ನೀರು, ನಿರ್ವಹಣೆಗೆ ಮಂಡಳಿ ರಚನೆ; ಸುಪ್ರಿಂ ಕೋರ್ಟ್ ‘ಗರಂ’ ಆದೇಶ

    ಮತ್ತೆ ಸುಪ್ರಿಂ ಕೋರ್ಟ್ ತಮಿಳುನಾಡಿಗೆ ನೀರು ಹರಿಸುವಂತೆ ಶುಕ್ರವಾರ ಆದೇಶ ನೀಡಿದೆ. ಆದೇಶ ಪಾಲಿಸದೆ ಇರುವ ರಾಜ್ಯಸರ್ಕಾರದತ್ತ ಚಾಟಿ ಬೀಸಿರುವ ಸುಪ್ರೀಂಕೋರ್ಟ್, ಮೂರು ದಿನಗಳೊಳಗೆ ‘ನೀರು ನಿರ್ವಹಣಾ ಮಂಡಳಿ’ ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ತಾಕೀತು ಮಾಡಿದೆ. ಅ.1 ರಿಂದ 6ರವರೆಗೆ ಪ್ರತಿದಿನ 6 ಸಾವಿರ ಕ್ಯೂಸೆಕ್‍ನಂತೆ ಒಟ್ಟು 36 ಸಾವಿರ ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಹರಿಸುವಂತೆ ಸುಪ್ರೀಂಕೋರ್ಟ್‍ನ ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ ಹಾಗೂ ಯು. ಯು. ಲಲಿತ್ ನ್ಯಾಯಪೀಠ ಆದೇಶ ನೀಡಿದೆ. ಸೆ.20 ರಂದು ನೀಡಿದ್ದ ಆದೇಶದಲ್ಲಿ ಸುಪ್ರೀಂ ಕೋರ್ಟ್..

    September 30, 2016

ENTER YOUR E-MAIL

Name
Email *
January 2017
M T W T F S S
« Dec    
 1
2345678
9101112131415
16171819202122
23242526272829
3031  

Top