An unconventional News Portal.

ಕರುಣಾನಿಧಿ
    ...
    cho ramaswamy Narendra Modi
    ಸುದ್ದಿ ಸಾರ

    ಜಯಲಲಿತಾ ಆಪ್ತ, ನರೇಂದ್ರ ಮೋದಿ ‘ರಾಜ ಗುರು’, ಚೋ ರಾಮಸ್ವಾಮಿ ಇನ್ನಿಲ್ಲ…

    ತಮಿಳುನಾಡು ಮೂಲದ ಹಿರಿಯ ಪತ್ರಕರ್ತ, ನಟ, ಬಹುಮುಖ ಪ್ರತಿಭೆ ಚೋ. ರಾಮಸ್ವಾಮಿ ಇಹಲೋಕ ತ್ಯಜಿಸಿದ್ದಾರೆ. ಚೋ ರಾಮಸ್ವಾಮಿ ಎಂದೇ ಜನಪ್ರಿಯರಾಗಿದ್ದ ರಾಜಕೀಯ ವಿಶ್ಲೇಷಕ ಶ್ರೀನಿವಾಸ ಐಯರ್ ರಾಮಸ್ವಾಮಿ ಹೃದಯಾಘಾತದಿಂದ ಬುಧವಾರ ಬೆಳಿಗ್ಗೆ ಚೆನ್ನೈನಲ್ಲಿ ಅಸುನೀಗಿದ್ದಾರೆ. ಅವರಿಗೆ 82 ವರ್ಷ ವಯಸ್ಸಾಗಿತ್ತು. ಜಯಲಲಿತಾರಿಗೆ ಆಪ್ತ ಗೆಳೆಯರೂ ಆಗಿದ್ದ ರಾಮಸ್ವಾಮಿ 1999ರಲ್ಲಿ ರಾಜ್ಯಸಭೆಗೆ ನಾಮ ನಿರ್ದೇಶನಗೊಂಡಿದ್ದರು. ಬಿ. ಡಿ. ಗೋಯೆಂಕಾ ‘ಎಕ್ಸಲೆನ್ಸ್ ಇನ್ ಜರ್ನಲಿಸಂ’ ಪ್ರಶಸ್ತಿಯೂ ಅವರಿಗೆ ಸಂದಿತ್ತು. 2014ರ ಲೋಕಸಭೆಯಲ್ಲಿ ನರೇಂದ್ರ ಮೋದಿ ಪರವಾಗಿ ಅಭಿಯಾನವನ್ನೂ ಆರಂಭಿಸಿದ್ದರು. ನಂತರ..

    December 7, 2016
    ...
    jaya-dravida-1
    ದೇಶ

    ‘ಜಯಲಲಿತಾ ಮತ್ತು ದ್ರಾವಿಡ ಚಳವಳಿ’: ಬ್ರಾಹ್ಮಣ ವಿರೋಧಿ ತಮಿಳು ಪರಂಪರೆ ಹಳಿ ತಪ್ಪಿದ್ದೆಲ್ಲಿ?

    ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಸಾವಿನ ನಂತರ ಅವರ ವ್ಯಕ್ತಿತ್ವದ ಗುಣಗಾನ ಆರಂಭವಾಗಿದೆ. ಅದು ಸಹಜ ಕೂಡ. ಸತ್ತವರ ಕುರಿತು ಒಳ್ಳೆಯದನ್ನಷ್ಟೆ ಮಾತನಾಡಬೇಕು ಎಂಬ ಪ್ರತೀತಿ ನಮ್ಮಲ್ಲಿ ಇರುವುದರಿಂದ, ಇವತ್ತು ಜಯಲಲಿತಾ ಕುರಿತು ಹೊರಬರುತ್ತಿರುವ ವರದಿಗಳಲ್ಲಿ ಅವರ ಒಳ್ಳೆಯತನಗಳಷ್ಟೆ ಹೆಚ್ಚು ‘ಫೋಕಸ್’ ಆಗುತ್ತಿವೆ. ಅದೇ ವೇಳೆ, ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದ ಜಯಲಲಿತಾರ ಅಂತ್ಯಕ್ರಿಯೆ ‘ದ್ರಾವಿಡ ಸಂಪ್ರದಾಯ’ದಂತೆ ನಡೆದು ಹೋಗಿದೆ. ಯಾಕೆ ಹೀಗೆ? ಜಯಲಲಿತಾರ ಹುಟ್ಟಿನ ಹಿನ್ನೆಲೆ ಏನೇ ಇದ್ದರೂ, ಅವರು ಬೆಳೆದಿದ್ದು, ರಾಜಕೀಯವಾಗಿ ಪ್ರವರ್ಧಮಾನಕ್ಕೆ ಬಂದಿದ್ದು ದ್ರಾವಿಡ ಚಳವಳಿಯ ಮೂಸೆಯಲ್ಲಿ..

    December 7, 2016
    ...
    jayalalitha-died-1
    ದೇಶ

    ‘ಅಮ್ಮ’ ಇನ್ನಿಲ್ಲ…: ಮೈಸೂರಿನ ‘ಚಂದನದ ಗೊಂಬೆ’ಯ ಹೆಜ್ಜೆಗಳು ಚೆನ್ನೈ ಅಪೋಲೋದಲ್ಲಿ ಅಂತ್ಯ

    ಮೈಸೂರಿನಲ್ಲಿ ಹುಟ್ಟಿ, ಕನ್ನಡ ಚಿತ್ರರಂಗದಲ್ಲಿ ‘ಚಂದನದ ಗೊಂಬೆ’ಯಾಗಿ, ನಂತರ ಪಕ್ಕದ ತಮಿಳುನಾಡಿಗೆ ಕಾಲಿಟ್ಟು, ಮೇರು ನಟರ ಜತೆ ಹೆಜ್ಜೆ ಹಾಕುವ ಮೂಲಕ ಜನಪ್ರಿಯತೆ ಕಂಡಿದ್ದ ನಟಿ, ರಾಜಕೀಯಕ್ಕೂ ಕಾಲಿಡುವ ಮೂಲಕ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೇರಿ ಪಕ್ಷದ ಕಾರ್ಯಕರ್ತರ ಪಾಲಿಗೆ ‘ಪ್ರೀತಿಯ ಅಮ್ಮ’ ಅಂತ ಕರೆಸಿಕೊಂಡಿದ್ದ ಜಯಲಲಿತಾ ಜಯರಾಮನ್ ಜೀವನ ಪಯಣದ ಹಾದಿ ಕೊನೆಯಾಗಿದೆ. ತಮಿಳುನಾಡು ರಾಜಧಾನಿ ಚೆನ್ನೈನ ಪಂಚತಾರಾ ಆಸ್ಪತ್ರೆಯಲ್ಲಿ ಸೆಲ್ವಿ. ಜೆ. ಜಯಲಲಿತಾ ಸೋಮವಾರ ರಾತ್ರಿ 11. 30ಕ್ಕೆ ಅಸುನೀಗಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ. ಕಳೆದ 74 ದಿನಗಳ ಕಾಲ..

    December 6, 2016
    ...
    Cauvery coverage
    ಕಾವೇರಿ ವಿವಾದ

    ಭಾವನೆಗಳಿಗೆ ಬೆಲೆ; ಜನರ ಆಕ್ರೋಶಕ್ಕೆ ಮಣೆ: ಇದು ದಿನಪತ್ರಿಕೆಗಳ ‘ಕಾವೇರಿ ಕವರೇಜ್’!

    ‘ಮತ್ತೆ ಭಾವನೆಗಳನ್ನು ಕೆಣಕಿದ ಕಾವೇರಿ’, ‘ಕೆಂಡವಾದ ಕಾವೇರಿ’, ‘ತಮಿಳ್ನಾಡಿಗೆ ಹರಿದ ಕಣ್ಣೀರು’, ‘ಆದೇಶ ಮಾರ್ಪಾಡು: ಅರ್ಜಿ ಸಲ್ಲಿಕೆಗೆ ನಿರ್ಧಾರ’, ‘ಕಾದಿದೆ ಕಾವೇರಿ ಗಂಡಾಂತರ’!, ‘ಆಕ್ರೋಶದ ನಡುವೆಯೂ ಹರಿದ ಕಾವೇರಿ’, ‘ಮತ್ತೆ ಬೆಂಕಿಯಾದ ನೀರು’… ಇವು ಕನ್ನಡ ಪ್ರಮುಖ ದಿನಪತ್ರಿಕೆಗಳು ಕಾವೇರಿ ವಿಚಾರದಲ್ಲಿ ಬುಧವಾರ ತಮ್ಮ ಮೊದಲ ಪುಟದಲ್ಲಿ ಪ್ರಕಟಿಸಿದ ತಲೆ ಬರಹಗಳು. ತಮಿಳುನಾಡಿಗೆ ನೀರು ಹರಿಸುವಂತೆ ಸುಪ್ರಿಂ ಕೋರ್ಟ್ ಆದೇಶ ನೀಡಿದ್ದು ಸೋಮವಾರ. ಅಂದು ಹಬ್ಬದ ನಿಮಿತ್ತ ಮುದ್ರಣ ಮಾಧ್ಯಮಗಳು ರಜೆ ತೆಗೆದುಕೊಂಡಿದ್ದವು. ಪತ್ರಿಕಾ ಕಚೇರಿಗಳು ಕೆಲಸ..

    September 7, 2016
    ...
    rakesh siddu
    ಸುದ್ದಿ ಸಾರ

    ಶೋಕಾಚರಣೆಯಲ್ಲಿ ಜತೆಗಿದ್ದವರಿಗೆ ಧನ್ಯವಾದ ಅರ್ಪಿಸಿದ ಸಿಎಂ

    ಈ ಸುದ್ದಿಯನ್ನು ಬರೆಯಲು ಶುರು ಮಾಡುವ ಹೊತ್ತಿಗೆ ಶನಿವಾರ ಇಹಲೋಕ ತ್ಯಜಿಸಿದ ರಾಕೇಶ್ ಸಿದ್ದರಾಮಯ್ಯ ಮೃತ ದೇಹವನ್ನು ಎಮರೈಟ್ಸ್ ಏರ್ಲೈನ್ಸ್ ವಿಮಾನದಲ್ಲಿ ದೇಶದ ಕಡೆಗೆ ತೆಗೆದುಕೊಂಡು ಬರಲಾಗುತ್ತಿದೆ. ಸೋಮವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ದೇವನಹಳ್ಳಿಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪಾರ್ಥಿವ ಶರೀರ ಬಂದಿಳಿಯಲಿದೆ. ಭಾನುವಾರ ಮುಖ್ಯಮಂತ್ರಿ ಕಚೇರಿಯ ಪ್ರಕಟಣೆ ಪ್ರಕಾರ, “ಬೆಂಗಳೂರಿನಲ್ಲಿ ವಿಮಾನದಿಂದ ಇಳಿಯುವ ಮೃತ ದೇಹವು, ಅಲ್ಲಿಂದಲೇ ವಿಶೇಷ ವಿಮಾನದಲ್ಲಿ ಮೈಸೂರಿಗೆ ತೆಗೆದುಕೊಂಡು ಹೋಗಲಾಗುತ್ತಿದೆ. ಅಲ್ಲಿನ ದಸರಾ ವಸ್ತು ಪ್ರದರ್ಶನ ಮೈದಾನದಲ್ಲಿ ಸಾರ್ವಜನಿಕ ದರ್ಶನಕ್ಕೆ..

    August 1, 2016
    ...
    jayalalitha-tn-2
    ದೇಶ

    ತಮಿಳುನಾಡಿನಲ್ಲಿ ಸೋತಿದ್ದು ಸಮೀಕ್ಷೆಗಳು; ‘ಅಮ್ಮ’ ಮರು ಆಯ್ಕೆ ಹಿಂದಿರುವ ನಿಗೂಢ ನಡೆಗಳು!

    ತಮಿಳುನಾಡು ಜನರ ಮನದಲ್ಲಿ ಏನಿದೆ ಎಂಬುದನ್ನು ಫಲಿತಾಂಶಕ್ಕೆ ಮುನ್ನವೇ ಅರಿಯುವಲ್ಲಿ ಈ ಬಾರಿಯೂ ಬಹುತೇಕ ಮತದಾನ ಪೂರ್ವ ಹಾಗೂ ಮತದಾನೋತ್ತರ ಸಮೀಕ್ಷೆಗಳು ವಿಫಲವಾಗಿವೆ. ನೆರೆಯ ರಾಜ್ಯ ತಮಿಳುನಾಡಿನಲ್ಲಿ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಕರುಣಾನಿಧಿ ನೇತೃತ್ವದ ಡಿಎಂಕೆ ಅಥವಾ ಜಯಲಲಿತಾ ಮುಂದಾಳತ್ವದ ಎಐಎಡಿಎಂಕೆ ಪಕ್ಷಗಳ ನಡುವೆ ಪೈಪೋಟಿ ಇರುವುದಾಗಿ ಸಮೀಕ್ಷೆಗಳು ಬಿಂಬಿಸಿದವು. ಇಂಡಿಯಾ ಟಿವಿ ಹಾಗೂ ಸಿ- ವೋಟರ್ ನಡೆಸಿದ ಸಮೀಕ್ಷೆಯಲ್ಲಿ ಆಡಳಿತರೂಢ ಪಕ್ಷಕ್ಕೆ ಗೆಲುವಿನ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿತ್ತು. ಅತ್ತ ಮತ ಸಮೀಕ್ಷೆಗಳು, ಚುನಾವಣಾ ನಾಡಿನಿಂದ ವರದಿಗಳು ಹೊರಬರುತ್ತಿರುವಾಗಲೇ ತಮಿಳುನಾಡಿನ..

    May 19, 2016

ENTER YOUR E-MAIL

Name
Email *
September 2017
M T W T F S S
« Aug    
 123
45678910
11121314151617
18192021222324
252627282930  

Top