An unconventional News Portal.

ಕಪ್ಪು ಹಣ
    ...
    paradise-papers-logo-icij-759
    ವಿದೇಶ

    ‘ಪ್ಯಾರಡೈಸ್‌ ಪೇಪರ್ಸ್‌’: ಭಾರಿ ಕುಳಗಳ ಅವ್ಯವಹಾರದ ಮಾಹಿತಿ ಬಿಚ್ಚಿಟ್ಟ ತನಿಖೆ ಒಳಗೆ ಏನೇನಿದೆ?

    ‘ತೆರಿಗೆದಾರರ ಸ್ವರ್ಗ’ ಎಂದು ಕರೆಸಿಕೊಳ್ಳುವ ದ್ವೀಪ ರಾಷ್ಟ್ರಗಳಲ್ಲಿ ಹಣಕಾಸಿನ ಅವ್ಯವಹಾರಕ್ಕಿಳಿದ ಇನ್ನಷ್ಟು ಕುಳಗಳ ಮಾಹಿತಿಯನ್ನು ‘ಪ್ಯಾರಡೈಸ್ ಪೇಪರ್ಸ್‌’ ಹೊರಹಾಕಿವೆ. ಕಳೆದ ವರ್ಷ ‘ಪನಾಮಾ ಪೇಪರ್ಸ್‌’ ಹೆಸರಿನಲ್ಲಿ ಬೇನಾಮಿ ಕಂಪನಿಗಳನ್ನು ಸೃಷ್ಟಿಸಿ ಹಣ ಹೂಡಿಕೆ ಮಾಡುವ ಮೂಲಕ ತೆರಿಗೆ ವಂಚನೆಗೆ ಮುಂದಾಗಿದ್ದ ಕಂಪನಿಗಳು ಹಾಗೂ ಶ್ರೀಮಂತರ ಹೆಸರುಗಳನ್ನು ‘ಅಂತರಾಷ್ಟ್ರೀಯ ತನಿಖಾ ಪತ್ರಕರ್ತರ ಒಕ್ಕೂಟ’ (ಐಸಿಐಜೆ) ಹೊರಹಾಕಿತ್ತು. ಪಾಕಿಸ್ತಾನ ಮಾಜಿ ಪ್ರಧಾನಿ ನವಾಝ್‌ ಷರೀಪ್‌ ಪದಚ್ಯುತಿಗೊಂಡು ಜೈಲು ಪಾಲಾಗಲು ಇದು ಕಾರಣವಾಗಿತ್ತು. ಹಲವು ದೇಶಗಳಲ್ಲಿ ಪನಾಮ ಪೇಪರ್ಸ್‌ಗಳಿಂದ ಹೊರಬಿದ್ದ ಮಾಹಿತಿ ಅಲ್ಲಿನ..

    November 6, 2017
    ...
    narendra modi
    ದೇಶ

    ‘ಬಸ್ ಮೋದಿಜಿ ಬಸ್’: ನೋಟ್ ಬ್ಯಾನ್ ಮಾಡಿ ದೇಶವಾಸಿಗಳನ್ನು ಮೂರ್ಖರನ್ನಾಗಿ ಮಾಡಿಬಿಟ್ಟಿರಿ!

    ಸುಮಾರು 3 ಲಕ್ಷ ಕೋಟಿ ರೂಪಾಯಿಗಳು… ಇದು, ಕಳೆದ ವರ್ಷ ನವೆಂಬರ್ ಸಮಯದಲ್ಲಿ ಶೇಖರಣೆಗೊಂಡಿದೆ ಎಂದು ನಂಬಲಾದ ‘ಕಪ್ಪು ಹಣ’ದ ಭಾರಿ ಮೊತ್ತ. 8ನೇ ತಾರೀಖು ಪ್ರಧಾನಿ ಮೋದಿ ಚಲಾವಣೆಯಲ್ಲಿದ್ದ 500 ಹಾಗೂ 1000 ಮುಖಬೆಲೆಯ ನೋಟುಗಳ ಚಲಾವಣೆಯನ್ನು ಸರಕಾರ ಹಿಂತೆಗೆದುಕೊಳ್ಳುವುದಾಗಿ ಘೋಷಣೆ ಮಾಡಿದರು. ಕಪ್ಪು ಹಣದ ವಿರುದ್ಧ ಹೋರಾಟ, ಭ್ರಷ್ಟಾಚಾರದ ವಿರುದ್ಧ ಸಮರ, ನಕಲಿ ನೋಟುಗಳ ಚಲಾವಣೆಗೆ ಕಡಿವಾಣ, ಈ ಮೂಲಕ ಭಯೋತ್ಪಾದಕರ ಆರ್ಥಿಕ ಮೂಲಕ್ಕೆ ಹೊಡೆತ ಹೀಗೆ ಸಾಲು ಸಾಲು ಆಶಯಗಳನ್ನು ಭಿತ್ತುವ ಪ್ರಯತ್ನವೂ ಇದರ ಜತೆಗೆ ತಳುಕು ಹಾಕಿಕೊಂಡಿತು…

    August 31, 2017
    ...
    adani-modi-1
    ದೇಶ

    ಬಾಯಲ್ಲಿ ಕಪ್ಪು ಹಣ; ಬಗಲಲ್ಲಿ ಉದ್ಯಮಿ ಗೌತಮ್ ಅದಾನಿ: 1500 ಕೋಟಿ ವಂಚನೆ ಬಗ್ಗೆ ಪ್ರಧಾನಿ ಮೋದಿ ಏನಂತಾರೆ?

    ‘ಕಪ್ಪು ಹಣ’ದ ವಿರುದ್ಧ ಸಮರ ಸಾರಿರುವ ಪ್ರಧಾನಿ ನರೇಂದ್ರ ಮೋದಿ ಅವರ ಉದ್ಯಮಿ ಗೆಳೆಯ ಗೌತಮ್ ಅದಾನಿ ಸುಮಾರು 1500 ಕೋಟಿ ಹಣವನ್ನು ‘ತೆರಿಗೆ ಕಳ್ಳರ ಸ್ವರ್ಗ’ಕ್ಕೆ ವರ್ಗಾವಣೆ ಮಾಡಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ತೆರಿಗೆ ಗುಪ್ತಚರ ನಿರ್ದೇಶನಾಲಯ (ಡಿಐಆರ್)ದ 97 ಪುಟಗಳ ವರದಿಯನ್ನು ‘ದಿ ಗಾರ್ಡಿಯನ್’ ಬಹಿರಂಗಪಡಿಸಿದ್ದು, ಅದಾನಿ ಗ್ರೂಪ್ ಕಂಪನಿಗಳು ಕೃತಕ ಬಿಲ್ ಸೃಷ್ಟಿಸಿ 1500 ಕೋಟಿ ರೂಪಾಯಿಗಳನ್ನು ವಿದೇಶಗಳಿಗೆ ರವಾನಿಸಿರುವುದು ಡಿಐಆರ್ ತನಿಖೆ ಬಯಲಿಗೆಳೆದಿದೆ. ವಿದ್ಯುತ್ ವಾಹಕ (ಎಲೆಕ್ಟ್ರಿಸಿಟಿ ಟ್ರಾನ್ಸ್’ಮಿಷನ್) ಉಪಕರಣಗಳ..

    August 17, 2017
    ...
    dk-3
    ರಾಜ್ಯ

    ‘ಪ್ರತಿಯೊಬ್ಬರಿಗೂ ಉತ್ತರ ನೀಡುತ್ತೇನೆ’: ಐಟಿ ದಾಳಿ ನಂತರ ಡಿಕೆಶಿ ನೀಡಿದ ಹೇಳಿಕೆ ಹಿಂದಿರುವ ನಿಗೂಢಾರ್ಥಗಳು!

    “ಕಳೆದ ಮೂರು ದಿನಗಳಿಂದ ನನ್ನ ಮನೆ, ನನ್ನ ಸ್ನೇಹಿತರ ಮನೆ, ನನ್ನ ಸಂಬಂಧಿಕರ ಮನೆಗಳನ್ನು ಹಗಲೂ ರಾತ್ರಿ ಕಾಯ್ದಿದ್ದೀರಿ. ತಮ್ಮದೇ ವಿಚಾರಗಳನ್ನು ಮಾಧ್ಯಮಗಳ ಮೂಲಕ ಚಿತ್ರಿಸಿದ್ದೀರಿ. ಒಂದನ್ನು ಸ್ಪಷ್ಟಪಡಸುತ್ತೇನೆ; ನನ್ನ ಕಷ್ಟಕಾಲದಲ್ಲಿ ಜತೆಗಿದ್ದು ಪ್ರೋತ್ಸಾಹ ನೀಡಿದ, ಬೆಂಬಲ ನೀಡಿದ ಮಾಧ್ಯಮಗಳಿಗೆ, ಪಕ್ಷದ ನಾಯಕರಿಗೆ, ಕಾರ್ಯಕರ್ತರಿಗೆ ಹಾಗೂ ನಾನಾ ಪಕ್ಷಗಳ ನಾಯಕರು ಮತ್ತು ಅಧಿಕಾರಿಗಳಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ನಾನು ಕಾನೂನು ಬಿಟ್ಟು, ಸಂವಿಧಾನವನ್ನು ಬಿಟ್ಟು ನಡೆದುಕೊಂಡಿಲ್ಲ. ನನ್ನ ದೆಹಲಿ ಮನೆಯಲ್ಲಿ, ಎಲ್ಲೆಲ್ಲಿ ಐಟಿ ದಾಳಿ ನಡೆದಿದೆಯೋ, ಅದರ ಪಂಚನಾಮದ..

    August 5, 2017
    ...
    panama-paper-india-final
    ದೇಶ

    ‘ಕಪ್ಪು ಹಣ’ದ ವಿರುದ್ಧ ಪ್ರಧಾನಿ ಮೋದಿ ಹೋರಾಟ: ಪಾಕ್‌ನಲ್ಲಿ ಶಿಕ್ಷೆ; ಭಾರತದಲ್ಲಿ…?

    ಮಳೆ ನಿಂತ ಮೇಲೂ ಹನಿಗಳು ಉದುರುವುದು ಇನ್ನೂ ನಿಂತಿಲ್ಲ. ‘ಪನಾಮ ಪೇಪರ್ಸ್‌’ ಹೆಸರಿನಲ್ಲಿ ಕಳೆದ ವರ್ಷ ಏಪ್ರಿಲ್ ತಿಂಗಳಿನಲ್ಲಿ ಜಾಗತಿಕ ಮಟ್ಟದಲ್ಲಿ ಬಿಡುಗಡೆಗೊಂಡ ದಾಖಲೆಗಳು ಪಾಕಿಸ್ತಾನದ ಪ್ರಧಾನಿಯ ಹುದ್ದೆಯನ್ನೇ ಈಗ ಬಲಿ ತೆಗೆದುಕೊಂಡಿವೆ. ಪಾಕ್‌ ಆಡಳಿತ ಪಕ್ಷದ ಚುಕ್ಕಾಣಿ ಹಿಡಿದಿದ್ದ ನವಾಝ್‌ ಷರೀಫ್‌ ಅವರನ್ನು ಹುದ್ದೆಯಿಂದ ಅಲ್ಲಿನ ಸುಪ್ರಿಂ ಕೋರ್ಟ್‌ ಕೆಳಗಿಳಿಸಿದೆ. ನವಾಝ್‌ ಷರೀಪ್‌ ಅವರ ರೀತಿಯಲ್ಲಿಯೇ ಭಾರತದ ಪ್ರಭಾವಿಗಳ ಹೆಸರುಗಳನ್ನೂ ಈ ‘ಪನಾಮ ಪೇಪರ್ಸ್‌’ ಒಳಗೊಂಡಿದ್ದವು. ನೆರೆಯ ದೇಶದಲ್ಲಿಆ ಕುರಿತು ತನಿಖೆ ನಡೆದು ತೀರ್ಪು ಹೊರಬಿದ್ದಿದೆ. ಆದರೆ..

    July 29, 2017
    ...
    enforcemnt-directorate-1
    ಸುದ್ದಿ ಸಾರ

    ಏಕಕಾಲಕ್ಕೆ ಮುನ್ನೂರು ‘ಶೆಲ್ ಕಂಪನಿ’ಗಳ ಮೇಲೆ ಮುಗಿ ಬಿದ್ದ ಜಾರಿ ನಿರ್ದೇಶನಾಲಯ

    ದೇಶದಲ್ಲಿ ಅನಾಣ್ಯೀಕರಣದ ನಂತರ ಹುರುಪಿನಿಂದ ಅಖಾಡಕ್ಕೆ ಇಳಿದಿರುವ ಜಾರಿ ನಿರ್ದೇಶನಾಲಯ (ಇಡಿ) ಶನಿವಾರ ದೇಶದ 16 ರಾಜ್ಯಗಳಲ್ಲಿ ಏಕಕಾಲಕ್ಕೆ ದಾಳಿಗಳನ್ನು ಸಂಘಟಿಸುವ ಮೂಲಕ ಅಚ್ಚರಿ ಮೂಡಿಸಿದೆ. ನಾನಾ ರಾಜ್ಯಗಳ ಸುಮಾರು 300 ‘ಶೆಲ್ ಕಂಪನಿ’ಗಳ ಮೇಲೆ ದಾಳಿ ನಡೆಸಿರುವ ಇಡಿ ಅಧಿಕಾರಿಗಳು ಕಾನೂನು ಬಾಹಿರ ಹಣದ ವಹಿವಾಟಿಗೆ ಕಡಿವಾಣ ಹಾಕಲು ಮುಂದಾಗಿದ್ದಾರೆ. ದಿಲ್ಲಿ, ಮುಂಬೈ, ಚೆನ್ನೈ, ಹೃದ್ರಾಬಾದ್ ಸೇರಿದಂತೆ ಸುಮಾರು 100 ಕಡೆಗಳಲ್ಲಿ ಈ ದಾಳಿಗಳು ನಡೆದಿವೆ. ಅನಾಣ್ಯೀಕರಣ ಘೋಷಣೆಗೊಂಡ ನಂತರ ದೇಶದ ಆರ್ಥಿಕ ಕ್ಷೇತ್ರದಲ್ಲಿ ದೊಡ್ಡಮಟ್ಟದ ಬದಲಾವಣೆಗಳಾಗುತ್ತಿವೆ…

    April 1, 2017
    ...
    pol-party-funding-final
    ದೇಶ

    ರಾಜಕೀಯ ಪಕ್ಷಗಳ ದೇಣಿಗೆಗೆ ಕಡಿವಾಣ: ‘ರಂಗೋಲಿ ಕೆಳಗೆ ತೂರುವವರಿಗೆ’ ಇಲ್ಲಿದೆ ಅವಕಾಶ!

    ರಾಜಕೀಯ ಪಕ್ಷಗಳಿಗೆ ಹರಿದು ಬರುವ ದೇಣಿಗೆಗೆ ಕಡಿವಾಣ ಹಾಕುವ ಸಂಬಂಧ ಈ ಬಾರಿಯ ಬಜೆಟ್ ಮಂಡನೆ ವೇಳೆ ಕೇಂದ್ರ ಸರಕಾರ ಕ್ರಮಗಳನ್ನು ಘೋಷಣೆ ಮಾಡಿದೆ. ಈ ಹಿಂದೆ 20 ಸಾವಿರದವರೆಗೆ ನಗದು ರೂಪದಲ್ಲಿ ಅನಾಮದೇಯ ವ್ಯಕ್ತಿಗಳಿಂದ ಪಕ್ಷಗಳು ‘ದೇಣಿಗೆ’ ಪಡೆಯುವ ಅವಕಾಶ ಇತ್ತು. ಇದಕ್ಕೆ ಚುನಾವಣಾ ಆಯೋಗ ಮತ್ತು ಸರಕಾರೇತರ ಸಂಸ್ಥೆಗಳು ವಿರೋಧವನ್ನು ವ್ಯಕ್ತಪಡಿಸಿದ್ದವು. ಕೇಂದ್ರ ಸರಕಾರ 2017-18ರ ಬಜೆಟ್ ಮಂಡನೆ ವೇಳೆ, ಅನಾಮದೇಯ ವ್ಯಕ್ತಿಗಳಿಂದ ನಗದು ರೂಪದಲ್ಲಿ ಹಣ ಸ್ವೀಕರಿಸುವ ಮಿತಿಯನ್ನು 2 ಸಾವಿರ ರೂಪಾಯಿಗೆ ಇಳಿಸಿದೆ…

    February 2, 2017
    ...
    arun-jaitley-budget-2
    ದೇಶ

    ₹21. 47 ಲಕ್ಷ ಕೋಟಿ ಬಜೆಟ್ ಮಂಡನೆ: ಬಡವರ ಕಲ್ಯಾಣ; ರಾಜಕೀಯ ಪಕ್ಷಗಳಿಗೆ ಕಡಿವಾಣ

    ಆಡಳಿತದಲ್ಲಿ ಸುಧಾರಣೆ, ಯುವಕರು- ದಮನಿತ ಸಮುದಾಯಗಳ ಬಲವರ್ಧನೆ ಹಾಗೂ ಭ್ರಷ್ಟಾಚಾರ, ಕಪ್ಪು ಹಣದ ನಿರ್ಮೂಲನೆ ಮೂಲಕ ಸ್ವಚ್ಚ ಆರ್ಥಿಕತೆ… ಇವು ಮೋದಿ ನೇತೃತ್ವದ ಕೇಂದ್ರ ಸರಕಾರ ತನ್ನ ನಾಲ್ಕನೇ ಆಯವ್ಯಯ ಮಂಡನೆ ವೇಳೆ ಮಾಡಿದ ಮೂರು ಪ್ರಮುಖ ಉದ್ಘೋಷಗಳು. ಇದರ ಜತೆಗೆ, ರೈತರು, ಗ್ರಾಮೀಣ ಮೂಲಸೌಕರ್ಯ, ಯುವಕರಿಗೆ ಉದ್ಯೋಗ, ಬಡವರ ಆರೋಗ್ಯ, ಜೀವನಮಟ್ಟ ಸುಧಾರಣೆ, ಸಾರ್ವಜನಿಕ ಸಮೀಕ್ಷೆಗಳು, ತೆರಿಗೆ ಆಡಳಿತ ಸುಧಾರಣೆ, ವಿತ್ತೀಯ ಕೊರತೆಯ ನಿಭಾವಣೆ ಸೇರಿದಂತೆ ಒಟ್ಟು ಹತ್ತು ಪ್ರಮುಖ ಅಂಶಗಳನ್ನು ಹಣಕಾಸು ಸಚಿವ ಅರುಣ್ ಜೇಟ್ಲಿ 2017-..

    February 1, 2017
    ...
    arun-kumar-1
    ದೇಶ

    ‘ಬಜೆಟ್ ದಿಕ್ಸೂಚಿ’: ಜನಪ್ರಿಯತೆಗೆ ಮೊರೆ; ಯೋಜನೆಗಳ ಅನುಷ್ಠಾನಕ್ಕೆ ಸಿಗೋಲ್ಲ ಬೆಲೆ

    2017-18ರ ಆಯವ್ಯಯ ಕೇಂದ್ರ ಹಣಕಾಸು ಸಚಿವರ ಪಾಲಿಗೆ ದುಃಸ್ವಪ್ನವಾಗಲಿದೆ… ಹೀಗಂತ ಹೇಳಿದವರು ಜೆಎನ್ಯು ನಿವೃತ್ತ ಪ್ರಾಧ್ಯಾಪಕ, ಆರ್ಥಿಕ ತಜ್ಞ ಪ್ರೊ. ಅರುಣ್ ಕುಮಾರ್. ಬಜೆಟ್ ಪೂರ್ವಭಾವಿಯಾಗಿ ಇತ್ತೀಚಿಗೆ ‘ದಿ ವೈರ್’ ಜತೆಗೆ ಮಾತನಾಡಿದ ಅವರು ಫೆ. 1ರಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಮಂಡಿಸಲಿರುವ ಆಯವ್ಯಯ, ದೇಶದ ಆರ್ಥಿಕತೆ, ಅನಾಣ್ಯೀಕರಣ, ಸಂಘಟಿತ ವಲಯದ ಉತ್ಪಾದನೆ ಕುಸಿತ, ಜಿಡಿಪಿ, ವಿತ್ತೀಯ ಕೊರತೆ, ರಾಜಕೀಯ ಸೇರಿದಂತೆ ನಾನಾ ವಿಚಾರಗಳ ಕುರಿತು ಒಳನೋಟಗಳನ್ನು ನೀಡಿದ್ದಾರೆ. ಸಂದರ್ಶನದ ಆಯ್ದ ಭಾಗಗಳ ಕನ್ನಡಾನುವಾದವನ್ನು ‘ಸಮಾಚಾರ’ ಇಲ್ಲಿ..

    January 30, 2017
    ...
    modi-and-trump-1
    ವಿದೇಶ

    ಡೋನಾಲ್ಡ್ ಟ್ರಂಪ್- ನರೇಂದ್ರ ಮೋದಿ: ಇಬ್ಬರ ಭಾಷಣದಲ್ಲಿ ಅದೆಷ್ಟು ಸಾಮ್ಯತೆಗಳು!

    ಅಮೆರಿಕಾದ 45ನೇ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ಡೋನಾಲ್ಡ್ ಟ್ರಂಪ್ ಭಾಷಣಕ್ಕೂ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಈವರೆಗಿನ ಭಾಷಣಗಳಿಗೂ ಹಲವು ಸಾಮ್ಯತೆಗಳು ಗೋಚರಿಸುತ್ತಿದೆ. ಅಮೆರಿಕಾ ಕಾಲಮಾನ ಶುಕ್ರವಾರ ಶ್ವೇತಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಟ್ರಂಪ್, ಚುನಾವಣಾ ಪ್ರಚಾರದ ಸಮಯದಲ್ಲಿ ಹೇಳಿದ್ದ ಮಾತುಗಳನ್ನೇ ಇನ್ನಷ್ಟು ಸ್ಪಷ್ಟವಾಗಿ ಜಗತ್ತಿನ ಮುಂದಿಟ್ಟರು. ಈ ಮೂಲಕ ಅವರೊಳಗಿರುವ ‘ರಾಷ್ಟ್ರೀಯ ವಾದ’ದ ಆಲೋಚನೆಯನ್ನು ಮತ್ತೊಮ್ಮೆ ಸ್ಪಷ್ಟಗೊಳಿಸಿದರು. ಅವರ 20 ನಿಮಿಷಗಳ ಪುಟ್ಟ ಭಾಷಣದಲ್ಲಿ ಪ್ರಸ್ತಾಪಿಸಿದ ಹಲವು ಅಂಶಗಳನ್ನು 2013ರಿಂದ ಈಚೆಗೆ ಪ್ರಧಾನಿ..

    January 21, 2017

Top