An unconventional News Portal.

ಎಐಎಡಿಎಂಕೆ
    ...
    jaya-memorial-tn-village
    ದೇಶ

    ‘ಅಮ್ಮ’ನಿಲ್ಲದ ಒಂದು ವರ್ಷ: ತಮಿಳುನಾಡು ಸಾಕ್ಷಿಯಾದ ಆರು ಪ್ರಮುಖ ರಾಜಕೀಯ ಬೆಳವಣಿಗೆಗಳು

    ‘ಅಮ್ಮ’ ಎಂದೇ ಪ್ರೀತಿಯಿಂದ ಕರೆಯಿಸಿಕೊಳ್ಳುತ್ತಿದ್ದ ನಟಿ, ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಸಾವಿಗೆ ಒಂದು ವರ್ಷ ತುಂಬಿದೆ. ನೆರೆರಾಜ್ಯದ ರಾಜಕೀಯದಲ್ಲಿ ದಶಕಗಳಿಂದ ಪ್ರಾಬಲ್ಯ ಸಾಧಿಸಿದ, ಅಧಿಕಾರದ ಗದ್ದುಗೆಯಲ್ಲಿ 6 ವರ್ಷಗಳನ್ನು ಕಳೆದಿದ್ದ ಕರ್ನಾಟಕ ಮೂಲದ ಜಯಲಲಿತಾ ಕಳೆದ ವರ್ಷ 2016, ಡಿ. 5ರಂದು ಚೆನ್ನೈನಲ್ಲಿ ಅಸುನೀಗಿದ್ದರು. ‘ಅಮ್ಮ’ನಿಂದಾಗಿ ತಮಿಳುನಾಡಿನ ರಾಜಕೀಯ ಗತಿ ಬದಲಿಸಿತ್ತು. ಇದೀಗ ‘ಅಮ್ಮ’ನಿಲ್ಲದೆಯೂ ಇಲ್ಲಿನ ರಾಜಕೀಯ ಪಥ ಬದಲಿಸಿದೆ. ಕಳೆದ ಒಂದು ವರ್ಷದಲ್ಲಿ ತಮಿಳುನಾಡಿನ ರಾಜಕೀಯದಲ್ಲಾದ ಆರು ಮಹತ್ವದ ಬದಲಾವಣೆಗಳನ್ನು ‘ಸಮಾಚಾರ’ ನಿಮ್ಮ ಮುಂದಿಡುತ್ತಿದೆ. ಈ ಬದಲಾವಣೆಗಳಿಗೂ,..

    December 5, 2017
    ...
    sasikala-pannirselvam
    ದೇಶ

    ದ್ರಾವಿಡ ಗದ್ದುಗೆಗಾಗಿ ಪೈಪೋಟಿ: ನಾಟಕಕ್ಕೆ ಅಂಕ ಸರಿಸಿದ ‘ಅಮ್ಮನ ಆತ್ಮ’ ಮತ್ತು ಓಪಿಎಸ್!

    ನೆರೆಯ ರಾಜ್ಯ ತಮಿಳುನಾಡಿನಲ್ಲಿ ಕಳೆದ 23 ಗಂಟೆಗಳಿಂದ ನಡೆಯುತ್ತಿರುವ ರಾಜಕೀಯ ಹೈ ಡ್ರಾಮಕ್ಕೆ ತಾರ್ಕಿಕ ಅಂತ್ಯ ಸಿಗುವ ಸಾಧ್ಯತೆ ಇವತ್ತಿಗೆ ಕಾಣಿಸುತ್ತಿಲ್ಲ. ಮಂಗಳವಾರ ರಾತ್ರಿ 9 ಗಂಟೆಗೆ ಮರೀನಾ ಬೀಚ್‌ ಪಕ್ಕದಲ್ಲಿ ಸ್ಥಾಪಿತಗೊಂಡಿರುವ ಮಾಜಿ ಮುಖ್ಯಮಂತ್ರಿ, ಎಐಎಡಿಎಂಕೆ ಪಕ್ಷದ ಅಧಿನಾಯಕಿ ಜಯಲಲಿತಾ ಸಮಾಧಿ ಸ್ಥಳಕ್ಕೆ ಉಸ್ತುವಾರಿ ಮುಖ್ಯಮಂತ್ರಿ ಓ. ಪನ್ನೀರ್ ಸೆಲ್ವಂ ನಡೆದು ಬಂದರು. ಮಣ್ಣಲ್ಲಿ ಮಣ್ಣಾಗಿ ಹೋಗಿರುವ ಅಮ್ಮನ ಶವದ ಪದತಲದಲ್ಲಿ ಕುಳಿತ ಓಪಿಎಸ್ ಖ್ಯಾತಿಯ ಸೆಲ್ವಂ, ಮುಂದಿನ 40 ನಿಮಿಷಗಳ ಕಾಲ ಮೌನಕ್ಕೆ ಶರಣಾದರು…

    February 8, 2017
    ...
    Sasikala-Natarajan-1
    ದೇಶ

    ಈಕೆ ಮುನ್ನಾರ್‌ಗುಡಿಯ ‘ಚಿನ್ನಮ್ಮ’: ಸಂಘರ್ಷದಲ್ಲಿಯೇ ನಾಯಕರು ಹುಟ್ಟುತ್ತಾರೆ ಅಂದಿದ್ದರು ‘ಅಮ್ಮ’

    ನೆರೆಯ ರಾಜ್ಯ ತಮಿಳುನಾಡಿನ ರಾಜಕೀಯದಲ್ಲಿ ಭಾನುವಾರ ನಡೆದ ಅನಿರೀಕ್ಷಿತ ಬೆಳವಣಿಗೆ ನಿರೀಕ್ಷಿತ ದಿಕ್ಕಿಗೆ ಹೊರಳಿಕೊಂಡಿದೆ. ಡಿಸೆಂಬರ್ 5ರಂದು ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಸಾವನ್ನಪ್ಪಿದ ದಿನ ಹೊರಬಿದ್ದ ದೃಶ್ಯಾವಳಿಗಳು, ಶವಯಾತ್ರೆ ಮತ್ತು ಅಂತಿಮ ಸಂಸ್ಕಾರದ ನಡಾವಳಿಗಳು ಶಶಿಕಲಾ ನಟರಾಜನ್ ಎಂಬ ಪಾತ್ರವೊಂದು ರಾಜಕೀಯ ಕೇಂದ್ರಕ್ಕೆ ಬರಲಿವೆ ಎಂಬ ಮುನ್ಸೂಚನೆ ನೀಡಿದ್ದವು. ಅದೀಗ ನಿಜವಾಗಿದ್ದು, ಆಲ್ ಇಂಡಿಯಾ ಅನ್ನಾ ಡ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ)ಯ ಶಾಸಕಾಂಗ ಪಕ್ಷದ ನಾಯಕಿಯಾಗಿ ವಿ. ಕೆ. ಶಶಿಕಲಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ತಮಿಳುನಾಡಿನ ಅಧಿಕಾರ..

    February 6, 2017
    ...
    jaya-dravida-1
    ದೇಶ

    ‘ಜಯಲಲಿತಾ ಮತ್ತು ದ್ರಾವಿಡ ಚಳವಳಿ’: ಬ್ರಾಹ್ಮಣ ವಿರೋಧಿ ತಮಿಳು ಪರಂಪರೆ ಹಳಿ ತಪ್ಪಿದ್ದೆಲ್ಲಿ?

    ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಸಾವಿನ ನಂತರ ಅವರ ವ್ಯಕ್ತಿತ್ವದ ಗುಣಗಾನ ಆರಂಭವಾಗಿದೆ. ಅದು ಸಹಜ ಕೂಡ. ಸತ್ತವರ ಕುರಿತು ಒಳ್ಳೆಯದನ್ನಷ್ಟೆ ಮಾತನಾಡಬೇಕು ಎಂಬ ಪ್ರತೀತಿ ನಮ್ಮಲ್ಲಿ ಇರುವುದರಿಂದ, ಇವತ್ತು ಜಯಲಲಿತಾ ಕುರಿತು ಹೊರಬರುತ್ತಿರುವ ವರದಿಗಳಲ್ಲಿ ಅವರ ಒಳ್ಳೆಯತನಗಳಷ್ಟೆ ಹೆಚ್ಚು ‘ಫೋಕಸ್’ ಆಗುತ್ತಿವೆ. ಅದೇ ವೇಳೆ, ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದ ಜಯಲಲಿತಾರ ಅಂತ್ಯಕ್ರಿಯೆ ‘ದ್ರಾವಿಡ ಸಂಪ್ರದಾಯ’ದಂತೆ ನಡೆದು ಹೋಗಿದೆ. ಯಾಕೆ ಹೀಗೆ? ಜಯಲಲಿತಾರ ಹುಟ್ಟಿನ ಹಿನ್ನೆಲೆ ಏನೇ ಇದ್ದರೂ, ಅವರು ಬೆಳೆದಿದ್ದು, ರಾಜಕೀಯವಾಗಿ ಪ್ರವರ್ಧಮಾನಕ್ಕೆ ಬಂದಿದ್ದು ದ್ರಾವಿಡ ಚಳವಳಿಯ ಮೂಸೆಯಲ್ಲಿ..

    December 7, 2016
    ...
    jaya-last-1
    ದೇಶ

    ದ್ರಾವಿಡ ಸಂಪ್ರದಾಯದಂತೆ ಜಯಾ ಅಂತಿಮ ಸಂಸ್ಕಾರ: ಲಕ್ಷಾಂತರ ಜನರ ಸಮ್ಮುಖದಲ್ಲಿ ಚಿರನಿದ್ರೆಗೆ ಜಾರಿದ ಅಮ್ಮ

    ‘ಅಮ್ಮ’, ಜಯಲಲಿತಾ ಜಯರಾಮನ್ ಪಾರ್ಥಿವ ಶರೀರದ ಅಂತಿಮ ಸಂಸ್ಕಾರಗಳು ಚೆನ್ನೈನ ಮರೀನಾ ಬೀಚಿನಲ್ಲಿ ದ್ರಾವಿಡ ಸಂಪ್ರದಾಯದಂತೆ ಮಂಗಳವಾರ ಸಂಜೆ ನಡೆಯಿತು. ಅವರ ಇಚ್ಚೆಯಂತೆಯೇ, ದ್ರಾವಿಡ ಚಳುವಳಿಯ ಹರಿಕಾರ ಅಣ್ಣಾ ಮತ್ತು ಗುರು ಎಂಜಿಆರ್ ಸಮಾಧಿಗಳ ಪಕ್ಕದಲ್ಲಿಯೇ ಜಯಲಲಿತಾ ಕೂಡ ಚಿರನಿದ್ರೆಗೆ ಜಾರಿದರು. ಅದಕ್ಕೂ ಮುನ್ನ ಲಕ್ಷಾಂತರ ಸಂಖ್ಯೆಯಲ್ಲಿ ನೆರೆದ ಅಭಿಮಾನಿಗಳು ರಾಜಾಜಿ ಹಾಲಿನಲ್ಲಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನವನ್ನು ಪಡೆದರು. ಸಾಮಾನ್ಯ ಜನರ ಪಾಲಿಗೆ ಆರಾಧ್ಯ ದೈವವೇ ಆಗಿ ಹೋಗಿದ್ದ ಸೆಲ್ವಿ, ಇನ್ನಿಲ್ಲ ಎಂಬ ಕಾರಣಕ್ಕೆ..

    December 6, 2016
    ...
    jayalalitha-died-1
    ದೇಶ

    ‘ಅಮ್ಮ’ ಇನ್ನಿಲ್ಲ…: ಮೈಸೂರಿನ ‘ಚಂದನದ ಗೊಂಬೆ’ಯ ಹೆಜ್ಜೆಗಳು ಚೆನ್ನೈ ಅಪೋಲೋದಲ್ಲಿ ಅಂತ್ಯ

    ಮೈಸೂರಿನಲ್ಲಿ ಹುಟ್ಟಿ, ಕನ್ನಡ ಚಿತ್ರರಂಗದಲ್ಲಿ ‘ಚಂದನದ ಗೊಂಬೆ’ಯಾಗಿ, ನಂತರ ಪಕ್ಕದ ತಮಿಳುನಾಡಿಗೆ ಕಾಲಿಟ್ಟು, ಮೇರು ನಟರ ಜತೆ ಹೆಜ್ಜೆ ಹಾಕುವ ಮೂಲಕ ಜನಪ್ರಿಯತೆ ಕಂಡಿದ್ದ ನಟಿ, ರಾಜಕೀಯಕ್ಕೂ ಕಾಲಿಡುವ ಮೂಲಕ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೇರಿ ಪಕ್ಷದ ಕಾರ್ಯಕರ್ತರ ಪಾಲಿಗೆ ‘ಪ್ರೀತಿಯ ಅಮ್ಮ’ ಅಂತ ಕರೆಸಿಕೊಂಡಿದ್ದ ಜಯಲಲಿತಾ ಜಯರಾಮನ್ ಜೀವನ ಪಯಣದ ಹಾದಿ ಕೊನೆಯಾಗಿದೆ. ತಮಿಳುನಾಡು ರಾಜಧಾನಿ ಚೆನ್ನೈನ ಪಂಚತಾರಾ ಆಸ್ಪತ್ರೆಯಲ್ಲಿ ಸೆಲ್ವಿ. ಜೆ. ಜಯಲಲಿತಾ ಸೋಮವಾರ ರಾತ್ರಿ 11. 30ಕ್ಕೆ ಅಸುನೀಗಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ. ಕಳೆದ 74 ದಿನಗಳ ಕಾಲ..

    December 6, 2016
    ...
    INDIA-VOTE-JAYALALITHAA
    ದೇಶ

    ‘ಜಯಲಲಿತಾ ಹೆಲ್ತ್ ರಿಪೋರ್ಟ್’: ಅಮ್ಮ ಆರೋಗ್ಯ ಗಂಭೀರ; ಸ್ಪಷ್ಟತೆ ಇನ್ನೂ ದೂರ

    ತಮಿಳುನಾಡಿನ ಮುಖ್ಯಮಂತ್ರಿ, ಎಐಎಡಿಎಂ ಪಕ್ಷದ ಕಾರ್ಯಕರ್ತರ ಪಾಲಿನ ಆರಾಧ್ಯ ದೈವ ಜೆ. ಜಯಲಲಿತಾ ಆರೋಗ್ಯದ ಗಂಭೀರತೆ ಮುಂದುವರಿದೆ. ಸೋಮವಾರ ಮಧ್ಯಾಹ್ನ ತಾನೆ ಚೆನ್ನೈ ಅಪೊಲೋ ಆಸ್ಪತ್ರೆ ಬಿಡುಗಡೆ ಮಾಡಿರುವ ‘ಪ್ರಕಟಣೆ’ಯಲ್ಲಿ, ‘ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ನಿನ್ನೆ (ಭಾನುವಾರ) ಸಂಜೆ ಹೃದಯಾಘಾತಕ್ಕೆ ಒಳಗಾಗಿದ್ದರು. ಇವತ್ತೂ ಆರೋಗ್ಯ ಸ್ಥಿತಿಯಲ್ಲಿ ಗಂಭೀರತೆ ಮುಂದುವರಿದೆ. ಪರಿಣಿತ ತಜ್ಞ ವೈದ್ಯರು ನಿಗಾವಹಿಸಿದ್ದು, ಇಸಿಎಂಓ ಸೇರಿದಂತೆ ತೀವ್ರ ನಿಗಾ ಕ್ರಮಕ್ಕೆ ಒಳಗಾಗಿದ್ದಾರೆ’ ಎಂದು ತಿಳಿಸಿದೆ. ಜಯಲಲಿತಾ 74 ದಿನಗಳ ಹಿಂದೆ ಸದ್ಯ ಚಿಕಿತ್ಸೆ ಪಡೆಯುತ್ತಿರುವ ಚೆನ್ನೈನ ಅಪೊಲೋ ಆಸ್ಪತ್ರೆಗೆ ಅನಾರೋಗ್ಯದ..

    December 5, 2016
    ...
    jayalalitha-tn-2
    ಸುದ್ದಿ ಸಾರ

    ಅಪೊಲೋದಲ್ಲಿ 74ನೇ ದಿನ: ಎಐಎಡಿಎಂಕೆ ನಾಯಕಿ ಜಯಲಲಿತಾಗೆ ಹೃದಯಾಘಾತ

    ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರಿಗೆ ಭಾನುವಾರ ಸಂಜೆ ವೇಳೆಗೆ ಹೃದಯಾಘಾತವಾಗಿದೆ ಎಂದು ಚೆನ್ನೈ ಅಪೊಲೋ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಕಳೆದ 73 ದಿನಗಳಿಂದ ಅನಾರೋಗ್ಯದ ಕಾರಣಕ್ಕೆ ಜಯಲಲಿತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ‘ಅಮ್ಮ’ಗೆ ಇದು ಮೂರನೇ ಬಾರಿಗೆ ಆಗುತ್ತಿರುವ ಹೃದಯಾಘಾತವಾಗಿದೆ. ವಿಷಯ ತಿಳಿಯುತ್ತಿದ್ದಂತೆ ಎಐಎಡಿಎಂಕೆ ಕಾರ್ಯಕರ್ತರು, ಅಮ್ಮ ಅಭಿಮಾನಿಗಳು ಭಾರಿ ಸಂಖ್ಯೆಯಲ್ಲಿ ಆಸ್ಪತ್ರೆ ಮುಂದೆ ಜಮಾಯಿಸಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಹಾಗೂ ಸಿಆರ್ಪಿಎಫ್ ಸಿಬ್ಬಂದಿಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ. ಭಾನುವಾರ ಬೆಳಗ್ಗೆಯಷ್ಟೆ ಜಯಲಲಿತಾ ಆರೋಗ್ಯ ಸ್ಥಿತಿ ಸುಧಾರಿಸಿದೆ…

    December 5, 2016

Top