An unconventional News Portal.

ಇತಿಹಾಸ
    ...
    vidhan-soudha-doc-final
    ರಾಜ್ಯ

    ‘ಸಾಕ್ಷ್ಯಚಿತ್ರಗಳ ವಿವಾದಸೌಧ’: ನಿರ್ದೇಶಕರ ಬಿನ್ನಹಗಳೂ, ಸಾಮಾಜಿಕ ನ್ಯಾಯದ ಆಗ್ರಹಗಳೂ

    ಇದು ಕರ್ನಾಟಕದ ‘ಶಕ್ತಿಕೇಂದ್ರ’; ಜನ ಓಟು ಹಾಕಿ ಆಯ್ಕೆ ಮಾಡಿ ಕಳುಹಿಸುವ ಪ್ರತಿನಿಧಿಗಳು ‘ಸರಕಾರ ಕೆಲಸ’ವನ್ನು ‘ದೇವರ ಕೆಲಸ’ ಎಂದುಕೊಂಡು ಹೊಣೆಗಾರಿಕೆ ನಿಭಾಯಿಸಲು ಕಛೇರಿಗಳಿರುವ ಬೃಹತ್ ಕಟ್ಟಡ. ವಾಸ್ತುಶಿಲ್ಪದಲ್ಲಿ ಬ್ರಿಟನ್ ರಾಣಿಯ ಮನಸ್ಸನ್ನೂ ಕದ್ದ ಶಿಲ್ಪಕಲೆ ಇದು.  ಅಂದಿನ ಪ್ರಧಾನಿ ನೆಹರೂ ಅವರಿಂದ ಶಂಕುಸ್ಥಾಪನೆಗೊಂಡು, ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರ ಮೇಲ್ವಿಚಾರಣೆಯಲ್ಲಿ ಕಣ್ಮನ ಸೆಳೆಯುವಂತೆ ನಿರ್ಮಾಣಗೊಂಡ ಲ್ಯಾಂಡ್‌ಮಾರ್ಕ್‌ ವಿಧಾನಸೌಧ. ಐತಿಹಾಸಿಕ ಕಟ್ಟಡ ವಿಧಾನಸೌಧಕ್ಕೂ, ವಿವಾದಗಳಿಗೂ ಹತ್ತಿರದ ನಂಟಿದೆ. ಎಷ್ಟರ ಮಟ್ಟಿಗೆ ಎಂದರೆ; ಕಟ್ಟಡದ ನೀಲನಕ್ಷೆಯನ್ನು ಕಾರ್ಯರೂಪಕ್ಕೆ ತಂದ ಕೆಂಗಲ್ ಹನುಮಂತಯ್ಯ ಅವರೇ ಅದರ ಉದ್ಘಾಟನೆ..

    October 19, 2017
    ...
    gauiri-naxal-saketh-final
    GAURI LANKESH FILES

    ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ: ನಕ್ಸಲೀಯರ ಸುತ್ತ ಅನುಮಾನದ ಹುತ್ತ ಬೆಳೀತಾ ಇರೋದು ಯಾಕೆ?

    ಪತ್ರಕರ್ತೆ, ಹೋರಾಟಗಾರ್ತಿ ಗೌರಿ ಲಂಕೇಶ್ ಕೊಲೆ ಪ್ರಕರಣದ ತನಿಖೆ ಮುಂದುವರಿದಿದೆ. ಗೌರಿ ದೇಹ ಬೆಂಗಳೂರಿನ ಚಾಮರಾಜಪೇಟೆಯ ಸ್ಮಶಾನದಲ್ಲಿ ಮಣ್ಣಲ್ಲಿ ಮಣ್ಣಾಗಿ ಹೋಗುತ್ತಿರುವ ಹೊತ್ತಿಗೇ, ಹತ್ಯೆ ಸುತ್ತ ಹಲವು ಅನುಮಾನಗಳ ಮುಳ್ಳು ನೆಟ್ಟಿದೆ. ಒಂದು ಕಡೆ ಗೌರಿ ಲಂಕೇಶ್ ಸಾವಿಗೆ ನ್ಯಾಯ ಒದಗಿಸುವಂತೆ ಕೋರಿ ರಾಷ್ಟ್ರ ಮಟ್ಟದ ಬೃಹತ್ ಹೋರಾಟದ ರೂಪುರೇಷೆ ಸಿದ್ಧವಾಗುತ್ತಿದೆ. ಮತ್ತೊಂದು ಕಡೆ, ರಾಜ್ಯ ಸರಕಾರ ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ‘ವಿಶೇಷ ತನಿಖಾ ತಂಡ'(ಎಸ್‌ಐಟಿ) ವನ್ನು ರಚಿಸಿದೆ. ಎಸ್‌ಐಟಿ ತನಿಖೆಯ ಜಾಡನ್ನು ನಿರ್ಧಾರ ಮಾಡಬೇಕಿದೆ…

    September 7, 2017
    ...
    kambala-rishab-shetty-pic-1
    ರಾಜ್ಯ

    ‘ಇನ್ ಡೀಟೆಲ್’: ಕಂಬಳ ಎಂದರೆ ಬರೀ ಕೋಣಗಳ ಓಟದ ಸ್ಪರ್ಧೆ ಮಾತ್ರ ಅಲ್ಲವೋ ಅಣ್ಣಾ!

    ದಕ್ಷಿಣ ಕನ್ನಡದ ಎರಡು ಜಿಲ್ಲೆಗಳಿಗೆ ಸೀಮಿತವಾಗಿ ನಡೆಯುವ ಕಂಬಳ ಆಚರಣೆಗೆ ಇರುವ ನಿರ್ಬಂಧಗಳನ್ನು ತೆಗೆದು ಹಾಕುವಂತೆ ಒತ್ತಾಯಿಸಿ ಜನ ಬೀದಿಗೆ ಬಂದಿದ್ದಾರೆ. ತಮಿಳುನಾಡಿನಲ್ಲಿ ಜಲ್ಲಿಕಟ್ಟು ಸ್ಪರ್ಧೆಯ ಹಿನ್ನೆಲೆಯಲ್ಲಿ ಹುಟ್ಟಿಕೊಂಡು ಭಾರಿ ಪ್ರತಿಭಟನೆ ಮತ್ತು ಅದು ಪಡೆದುಕೊಂಡು ಪ್ರಚಾರ ಕಂಬಳದ ಸುತ್ತ ಆರಂಭಗೊಂಡಿರುವ ಪ್ರತಿಭಟನೆಗಳ ಮೇಲೆ ಪರಿಣಾಮ ಬೀರಿದೆ. ಈಗಾಗಲೇ, ಬೆಂಗಳೂರು ಸೇರಿದಂತೆ ದಕ್ಷಿಣ ಕನ್ನಡದಲ್ಲಿ ಕಂಬಳವನ್ನು ಕಾನೂನುಬದ್ಧಗೊಳಿಸುವಂತೆ ಒತ್ತಾಯಿಸಿ ಹೋರಾಟಗಳು ನಡೆದಿವೆ. ಮುಂದಿನ ಒಂದು ವಾರದಲ್ಲಿ ಇವು ಇನ್ನಷ್ಟು ಜೋರಾಗುವ ಮುನ್ಸೂಚನೆ ಸಿಕ್ಕಿದೆ. “ಕಂಬಳ ಕರಾವಳಿ ಭಾಗದ ಗ್ರಾಮೀಣ ಕ್ರೀಡೆ…

    January 24, 2017
    ...
    ind-pak-textbook
    ದೇಶ

    ಭಾರತ- ಪಾಕ್ ಸಂಬಂಧಕ್ಕೆ ಹುಳಿ ಹಿಂಡುತ್ತಿರುವ ಎರಡೂ ದೇಶಗಳ ಪಠ್ಯಕ್ರಮಗಳು!

    ಸ್ವಾತಂತ್ರ್ಯಕ್ಕೂ ಮುನ್ನ ಒಟ್ಟಿಗೇ ಇದ್ದ ಎರಡು ಭೂ ಭಾಗಗಳು, 1947ರ ನಂತರ ‘ಶತ್ರುಗಳು ರಾಷ್ಟ್ರಗಳು’ ಎಂಬ ಪಟ್ಟವನ್ನು ಕಟ್ಟಿಕೊಂಡಿವೆ. ಈ 70 ವರ್ಷಗಳ ಅಂತರದಲ್ಲಿ ಉಬಯ ದೇಶಗಳ ನಡುವೆ ನಡೆದ ಯುದ್ಧಗಳು, ನಡೆಯದ ಸಂಧಾನ ಮಾತುಕತೆಗಳು ಮತ್ತು ಕೊಡುಕೊಳ್ಳುವಿಕೆಯ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ನಡೆಗಳು ಎಲ್ಲವೂ ಹೀಗೊಂದು ಪಟ್ಟವನ್ನು ಪಡೆದುಕೊಳ್ಳುವಲ್ಲಿ ಗಣನೀಯ ಪ್ರಮಾಣದ ಕೊಡುಗೆ ನೀಡಿವೆ. ಸದ್ಯ ಇವೆಲ್ಲವನ್ನೂ ಪಕ್ಕಕ್ಕಿಟ್ಟು, ಭಾರತ ಮತ್ತು ಪಾಕಿಸ್ತಾನ ಈ ಪರಿಯ ಶತ್ರುತ್ವವನ್ನು ಬೆಳೆಸಿಕೊಳ್ಳಲು ನೆರವಾದ ಶಾಲೆಗಳ ಪಠ್ಯಕ್ರಮಗಳನ್ನು ಗಮನಿಸಬೇಕಿದೆ. ಇತಿಹಾಸದ ಒಂದೇ..

    August 24, 2016

Top