An unconventional News Portal.

ಇಂಧನ
  ...

  ಬೆಂಗಳೂರು ಚಳಿಯನ್ನೂ ಮೀರಿ ಹೆಚ್ಚುತ್ತಿದೆ ಜಾಗತಿಕ ತಾಪಮಾನ; ಕಾರಣ ಹಸಿರು ಮನೆ ಪರಿಣಾಮ

  ಭೂಮಿಯ ದೀರ್ಘಕಾಲೀನ ತಾಪಮಾನ ಏರಿಕೆ ಮುಂದುವರಿದಿದೆ. 2017  ಅತಿಹೆಚ್ಚು ತಾಪಮಾನ ಹೊಂದಿರುವ ವರ್ಷಗಳ ಸಾಲಿನಲ್ಲಿ ಭಾರತವೂ ಸ್ಥಾನ ಪಡೆದಿದೆ. ನಾಸಾ ಮತ್ತು ನ್ಯಾಷನಲ್ ಒಷಿನೊಗ್ರಾಫಿಕ್ ಅಂಡ್ ಅಟ್ಮಾಸ್ಫಿಯರಿಕ್ ಅಡ್ಮಿನಿಸ್ಟ್ರೇಷನ್(ಎನ್ಒಎಎ) ಇತ್ತೀಚೆಗೆ ಬಿಡುಗಡೆಗೊಳಿಸಿರುವ ವರದಿ ಈ ಅಂಶವನ್ನು ಬಹಿರಂಗಪಡಿಸಿವೆ. ನಾಸಾ ವಿಜ್ಞಾನಿಗಳ ವಿಶ್ಲೇಷಣೆ ಪ್ರಕಾರ, 2017 ದಾಖಲೆಯ ಎರಡನೇ ಅತಿ ಬಿಸಿಯಾದ ವರ್ಷವಾಗಿದ್ದು, ಭೂಮಿ ಮತ್ತು ಸಮುದ್ರ ಮೇಲ್ಮೈಗಳ ಈಗಿನ ತಾಪಮಾನವು 1.51 ಡಿಗ್ರಿ ಫ್ಯಾರನ್‌ಹೀಟ್ (0.90 ಡಿಗ್ರಿ ಸೆಲ್ಷಿಯಸ್) ತಲುಪಿದೆ. 2016 ಅತೀ ಹೆಚ್ಚು ತಾಪಮಾನವನ್ನು ಹೊಂದಿದ್ದ […]

  January 24, 2018
  ...

  ಜಾರ್ಖಂಡ್ ಕಲ್ಲಿದ್ದಲು ಗಣಿಯಲ್ಲಿ ದುರಂತ: ಐವರ ಸಾವು, 40 ಜನ ಸಿಲುಕಿರುವ ಶಂಕೆ

  ಜಾರ್ಖಂಡ್ ಕಲ್ಲಿದ್ದಲು ಗಣಿ ಕುಸಿದು 5 ಜನ ಸಾವನ್ನಪ್ಪಿದ್ದಾರೆ. ಇನ್ನೂ 40 -45 ಜನ ಗಣಿಯಡಿಯಲ್ಲಿ ಸಿಲುಕಿಕೊಂಡಿರಬಹುದು ಎಂದು ಅಂದಾಜಿಸಲಾಗಿದೆ. ಜಾರ್ಖಂಡ್ ರಾಜ್ಯದ ಗೊಡ್ಡಾ ಜಿಲ್ಲೆಯ ಲಾಲ್ ಮಟಿಯಾ ಪ್ರದೇಶದಲ್ಲಿ ಗುರುವಾರ ರಾತ್ರಿ ಈ ಘಟನೆ ನಡೆದಿದೆ. ಇದು ಈಸ್ಟೆರ್ನ್ ಕೋಲ್ ಫೀಲ್ಡ್ಸ್ ಲಿಮಿಟೆಡ್ (ಇಸಿಎಲ್) ಕಂಪೆನಿಗೆ ಸೇರಿದೆ. “ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಇಲ್ಲಿವರೆಗೆ ನಾಲ್ಕು ಮೃತ ದೇಹಗಳು ಸಿಕ್ಕಿವೆ. ಒಂದು ದೇಹ ಕಾಣಿಸುತ್ತಿದೆ. ಕಾರ್ಯಾಚರಣೆ ಇನ್ನೂ ಮುಂದುವರಿದಿದೆ,” ಎಂದು ಇಸಿಎಲ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರಂಜನ್ ಮಿಶ್ರಾ […]

  December 30, 2016
  ...

  ಒಪೆಕ್ ದೇಶಗಳಲ್ಲಿ ‘ಕದನ ವಿರಾಮ’ ಘೋಷಣೆ: ಕಚ್ಚಾ ತೈಲದ ಬೆಲೆ ಏರಿಕೆಯ ಮುನ್ಸೂಚನೆ!

  ಎರಡೂವರೆ ವರ್ಷಗಳ ನಂತರ ಪೆಟ್ರೋಲಿಯಂ ರಫ್ತು ದೇಶಗಳ ಒಕ್ಕೂಟ (ಒಪೆಕ್)ದಲ್ಲಿ ಒಮ್ಮತ ಮೂಡಿದೆ. ಪೈಪೋಟಿಯಲ್ಲಿ ಕಚ್ಚಾ ತೈಲವನ್ನು ಉತ್ಪಾದನೆ ಮಾಡುತ್ತಿದ್ದ ದೇಶಗಳು, ಕೊನೆಗೂ ತಮ್ಮ ಉತ್ಪಾದನೆಗೆ ಕಡಿವಾಣ ಹಾಕಲು ಬುಧವಾರ ಒಪ್ಪಂದಕ್ಕೆ ಬಂದಿವೆ. ಹೀಗಾಗಿ, ಮುಂದಿನ ದಿನಗಳಲ್ಲಿ ಪೆಟ್ರೋಲ್ ಸೇರಿದಂತೆ ಇಂಧನ ಬೆಲೆಗಳು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚಲಿದೆ. ಸಹಜವಾಗಿಯೇ ಭಾರತದ ಸ್ಥಳೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಗಗನಕ್ಕೇರುವ ಮುನ್ಸೂಚನೆ ಸಿಕ್ಕಿದೆ. 2008ರಿಂದ ಸೌದಿ ಅರೇಬಿಯಾ ಮತ್ತು ಇರಾನ್ ನಡುವಿನ ತಿಕ್ಕಾಟಗಳ ಕಾರಣಗಳಿಗಾಗಿ ಕಚ್ಚಾ ತೈಲ ಉತ್ಪಾದನೆ ಪೈಪೋಟಿಯಲ್ಲಿ ನಡೆಯಲಾರಂಭಿಸಿತ್ತು. ಇದರಿಂದ […]

  September 29, 2016
  ...

  ಪೆಟ್ರೊಲ್ ಬೆಲೆ ಲೀಟರ್ ಮೇಲೆ 2. 25 ರೂ, ಡೀಸೆಲ್ 42 ಪೈಸೆ ಇಳಿಕೆ

  ಕೇಂದ್ರ ಸರಕಾರ ಪೆಟ್ರೊಲ್ ಹಾಗೂ ಡೀಸೆಲ್ ಇಂಧನಗಳ ಬೆಲೆಯನ್ನು ಇಳಿಕೆ ಮಾಡಿದೆ. ಲೀಟರ್ ಪೆಟ್ರೊಲ್ ಬೆಲೆಯನ್ನು 2. 25 ರೂಪಾಯಿ ಇಳಿಸಿರುವ ಸರಕಾರ, ಡೀಸೆಲ್ ಬೆಲೆಯಲ್ಲಿ 42 ಪೈಸೆಯಷ್ಟೆ ಇಳಿಕೆ ಮಾಡಿದೆ. ಶುಕ್ರವಾರ ಮಧ್ಯರಾತ್ರಿಯಿಂದಲೇ ಪರಿಷ್ಕೃತ ದರಪಟ್ಟಿ ಜಾರಿಗೆ ಬರಲಿವೆ. ಇತ್ತೀಚೆಗೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿತ್ತು. ಆದರೆ ದೇಶದಲ್ಲಿ ಮಾತ್ರ ಇಂಧನ ದರ ಏರುಗತಿಯಲ್ಲಿ ಸಾಗುತ್ತಿತ್ತು. ಸಾರ್ವಜನಿಕ ತೈಲ ಕಂಪನಿಗಳು ಸಗಟು ವ್ಯಾಪಾರದ ದರವನ್ನು ಕಡಿಮೆ ಮಾಡಿರುವ ಹಿನ್ನೆಲೆಯಲ್ಲಿ ಪೆಟ್ರೊಲ್ ಮೇಲಿನ ದರ ಇಳಿಕೆಯಾಗಿದೆ ಎಂದು ಪ್ರಾಥಮಿಕ […]

  July 15, 2016
  ...

  ‘ದೇವರು ಕೊಟ್ಟರೂ, ಪೂಜಾರಿಗಳು ಕೊಡುವುದಿಲ್ಲ’: ಕಚ್ಚಾ ತೈಲದ ಬೆಲೆ ಇಳಿಕೆಯಾದರೂ ಪೆಟ್ರೋಲ್ ಬೆಲೆ ಯಾಕೆ ಏರುತ್ತಿದೆ?

  ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಭಾರಿ ಪ್ರಮಾಣದಲ್ಲಿ ಇಳಿಕೆಯುತ್ತಿದ್ದರೂ ನಮ್ಮಲ್ಲಿ ಯಾಕೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳು ಗಗನಕ್ಕೇರುತ್ತಿವೆ? ಇದು ಇವತ್ತು ಹೊರಗಿನ ವಿದ್ಯಮಾನಗಳ ಕುರಿತು ಕನಿಷ್ಟ ಜ್ಞಾನ ಇರುವ ಪ್ರತಿಯೊಬ್ಬರನ್ನೂ ಕಾಡುತ್ತಿರುವ ಪ್ರಶ್ನೆ. ಕಚ್ಚಾ ತೈಲ ಉತ್ಪಾದನಾ ರಾಷ್ಟ್ರಗಳ ಜತೆಗೆ ಅಭಿವೃದ್ಧಿ ಹೊಂದಿರುವ ದೇಶಗಳೂ ಪೈಪೋಟಿಗೆ ಬಿದ್ದಂತೆ ಭೂಮಿಯಾಳದಿಂದ ತೈಲವನ್ನು ಹೊರತೆಗೆಯುತ್ತಿವೆ. ಹೀಗಾಗಿ 2014ರಲ್ಲಿ ಪ್ರತಿ ಬ್ಯಾರಲ್ ಕಚ್ಚಾ ತೈಲಕ್ಕೆ ಇದ್ದ 106 ಡಾಲರ್ (7093.51 ರೂಪಾಯಿಗಳು) ಇಂದು 26 ಡಾಲರ್ (1739.92 ರೂಪಾಯಿ)ಗೆ […]

  June 6, 2016
  ...

  ಅದಾನಿ ಕಂಪನಿಗೆ ಪರಿಸರ ಸಂಘಟನೆಗಳ ಲಾತ: 1600 ಕೋಟಿ ಕಲ್ಲಿದ್ದಲ ಗಣಿ ಯೋಜನೆ ಕೈ ಬಿಟ್ಟ ‘ಮೋದಿ ಸ್ನೇಹಿತ’!

  ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್ ಪ್ರದೇಶದಲ್ಲಿ ಉದ್ದೇಶಿತ 1600 ಕೋಟಿ ಕಲ್ಲಿದ್ದಲ ಗಣಿಗಾರಿಕೆ ಯೋಜನೆಯಿಂದ ಭಾರತ ಮೂಲದ ಉದ್ಯಮಿ ಗೌತಮ್ ಅದಾನಿ ಹಿಂದೆ ಸರಿಯುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ. ಈ ಮೂಲಕ ಅದಾನಿ ಕಂಪನಿ ಯೋಜನೆಗಳ ವಿರುದ್ಧ ಭಾರಿ ಹೋರಾಟವನ್ನು ಸಂಘಟಿಸಿದ್ದ ಪರಿಸರ ಸಂಘಟನೆಗಳಿಗೆ ಮೊದಲ ಹಂತದ ಜಯ ಲಭಿಸಿದಂತಾಗಿದೆ. ಕಂಪನಿಯ ಯೋಜನೆ ಪರಿಸರಕ್ಕೆ ಮಾರಕ ಎಂದು ಸಂಘಟನೆಗಳು ನ್ಯಾಯಾಲಯದ ಮೊರೆ ಹೋಗಿದ್ದವು. ಈ ಹಿನ್ನೆಲೆಯಲ್ಲಿ ಉದ್ದೇಶಿತ ಕಲ್ಲಿದ್ದಲ ಗಣಿಗಾರಿಕೆ ಯೋಜನೆ ಆರಂಭಕ್ಕೆ ಮುನ್ನವೇ ಸ್ಥಳೀಯರ ಕೆಂಗಣ್ಣಿಗೆ ಗುರಿಯಾಗಿತ್ತು. […]

  June 5, 2016

Top