An unconventional News Portal.

ಆಸ್ಪತ್ರೆ
    ...
    india-dev-index
    ದೇಶ

    ‘ಬರೀ ಓಳು’: ದೇಶದ ಅಭಿವೃದ್ಧಿಗೆ ಬಿಜೆಪಿ ರಾಜ್ಯಗಳ ಮಾನದಂಡ; ಎಷ್ಟು ಸತ್ಯ? ಎಷ್ಟು ಸುಳ್ಳು?

    ದೇಶದ ಅಭಿವೃದ್ಧಿ ವಿಚಾರ ಬಂದಾಗ ರಾಜ್ಯಗಳನ್ನೇ ಮಾನದಂಡವಾಗಿ ತೆಗೆದುಕೊಳ್ಳುವ ಪರಿಪಾಠ ಆರಂಭವಾಗಿದ್ದು 2000ನೇ ಇಸವಿಯ ಈಚೆಗೆ. ಅದಕ್ಕೆ ಕಾರಣ, ‘ಗುಜರಾತ್ ಅಭಿವೃದ್ಧಿ ಮಾದರಿ’. ಇವತ್ತು ಪ್ರಧಾನಿ ಸ್ಥಾನದಲ್ಲಿರುವ ನರೇಂದ್ರ ಮೋದಿ ಗುಜರಾತ್‌ ಮುಖ್ಯಮಂತ್ರಿ ಆಗಿದ್ದಾಗ, ಹೀಗೊಂದು ಮಾದರಿಯ ಮಾನದಂಡವನ್ನು ದೇಶಾದ್ಯಂತ ಹರಿಯ ಬಿಡಲಾಗಿತ್ತು. ಕಳೆದ ಕೆಲವು ದಿನಗಳ ಅಂತರದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಟೀಕಿಸಲು, ಎಡಪಕ್ಷಗಳನ್ನು ಟೀಕಿಸಲು ಅವು ಆಡಳಿತದಲ್ಲಿರುವ ಕರ್ನಾಟಕ ಮತ್ತು ಕೇರಳ ರಾಜ್ಯಗಳ ಅಭಿವೃದ್ಧಿಯನ್ನು ವಿಮರ್ಶೆಗೆ ಒಳಪಡಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಇಂತಹ ಟೀಕೆಗಳ ಹಿಂದೆ ರಾಜಕೀಯ..

    November 9, 2017
    ...
    ದೇಶ

    ಗೋರಖಪುರದಲ್ಲಿ ಮಕ್ಕಳ ಸರಣಿ ಸಾವು; ಜೀವಕ್ಕಿಂತ ಮದರಸಾಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ ಮುಖ್ಯ ಎಂದ ಆದಿತ್ಯನಾಥ್ ಸರಕಾರ!

    ಕಳೆದ 48 ಗಂಟೆಗಳಲ್ಲಿ 30 ಮಕ್ಕಳ ಸಾವು. ಕಳೆದ 9 ದಿನಗಳ ಅಂತರದಲ್ಲಿ ಕೊನೆಯುಸಿರೆಳೆದ ಒಟ್ಟು ಮಕ್ಕಳ ಸಂಖ್ಯೆ 60… ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕ್ಷೇತ್ರ ಗೋರಖಪುರದ ಬಾಬಾ ರಾಘವ ದಾಸ್ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ವೈಫಲ್ಯದಿಂದ ಮಕ್ಕಳು ಸಾವನ್ನಪ್ಪುತ್ತಿದ್ದಾರೆ. ಆಮ್ಲಜನಕ ಪೂರೈಕೆ ವ್ಯತ್ಯಯದಿಂದ ಈ ಸಾವುಗಳು ಸಂಭವಿಸಿವೆ ಎಂದು ವರದಿಗಳು ಹೇಳುತ್ತಿವೆ. ಆಸ್ಪತ್ರೆಗೆ ಆಮ್ಲಜನಕ ಪೂರೈಸಲು ಖಾಸಗಿ ಕಂಪನಿ ‘ಪುಷ್ಪಾ ಸೇಲ್ಸ್ ಪ್ರೈವೆಟ್ ಲಿಮಿಟೆಡ್’ಗೆ ಗುತ್ತಿಗೆ ನೀಡಲಾಗಿತ್ತು. ಆದರೆ ಕಳೆದ 6 ತಿಂಗಳಿನಿಂದ..

    August 12, 2017
    ...
    doc-beaten-2
    ವಿಚಾರ

    ‘ಜನಾರೋಗ್ಯದ ಬಿಕ್ಕಟ್ಟು’: ವೈದ್ಯರು ಮತ್ತು ರೋಗಿಗಳ ಸಂಬಂಧ ಯಾಕೆ ರಕ್ತಸಿಕ್ತವಾಗುತ್ತಿದೆ?

      ಕಳಪೆಯಾದ ಸಾರ್ವಜನಿಕ ಆರೋಗ್ಯ ಸೇವಾ ಸೌಲಭ್ಯಗಳು ವೈದ್ಯರು ಮತ್ತು ರೋಗಿಗಳನ್ನು ಪರಸ್ಪರ ಹೊಡೆದಾಟಕ್ಕೆ ಹಚ್ಚುತ್ತಿವೆ.   ವೈದ್ಯರು ಆತಂಕದಲ್ಲಿದ್ದಾರೆ; ರೋಗಿಗಳು ದುಃಖದಲ್ಲಿದ್ದಾರೆ. ಇದೀಗ ಎಲ್ಲಾ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಹೆಚ್ಚೂ ಕಡಿಮೆ ಇದೇ ವಾತಾವರಣವೇ ಕಂಡುಬರುತ್ತಿದೆ. ಮಹಾರಾಷ್ಟ್ರದಲ್ಲಂತೂ ಇತ್ತಿಚೆಗೆ ಐದು ಪ್ರತ್ಯೇಕ ಪ್ರಕರಣಗಳಲ್ಲಿ ರೋಗಿಯ  ಬಗ್ಗೆ ನಿರ್ಲಕ್ಶ್ಯ ತೋರಿದರೆಂದು ಆರೋಪಿಸಿ ಸಂಬಂಧಿಕರು ಸಾರ್ವಜನಿಕ ಆಸ್ಪತ್ರೆಗಳ ವೈದ್ಯರ ಮೇಲೆ ಹಲ್ಲೆ ನಡೆಸಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ಇದೇ ರೀತಿಯ ಪ್ರಕರಣಗಳು ದೆಹಲಿ, ಸೂರತ್, ಅಹಮದಾಬಾದ್, ಬುಲಂದ್‌ಶಹರ್ ಮತ್ತು ಚೆನ್ನೈಗಳಿಂದಲೂ ವರದಿಯಾಗಿದೆ. ಹಾಗೆ..

    April 4, 2017
    ...
    lynlee-1
    ಫೋಕಸ್

    ವೈದ್ಯ ಲೋಕದ ವಿಸ್ಮಯ: ಎರಡು ಬಾರಿ ಭೂಮಿಗೆ ಬಂದ ‘ಮೊದಲನೇ ಕಂದ’!

    ಒಮ್ಮೆ ಹುಟ್ಟಿ ಮತ್ತೆ ಭ್ರೂಣ ಸೇರಿ, ಮತ್ತೊಮ್ಮೆ ಹುಟ್ಟಿದ ಮಗುವಿನ ಕತೆ ಇದು.. ಕನ್ಪೂಸ್ ಮಾಡಿಕೊಳ್ಳಬೇಡಿ. ಆಪರೇಷನ್ನಿಗಾಗಿ ಮಗುವಿನ ಭ್ರೂಣವನ್ನು ತಾಯಿಯ ಹೊಟ್ಟೆಯಿಂದ ಹೊರತೆಗೆದು ನಾರ್ಮಲ್ ಡೆಲಿವರಿಗಾಗಿ ಮತ್ತೆ ಹೊಟ್ಟೆಗೆ ವೈದ್ಯರು ಮರಳಿಸಿದ್ದರು. ನಂತರ ಮಗು ಸರಿಯಾದ ಸಮಯಕ್ಕೆ ನೈಸರ್ಗಿಕವಾಗಿ ಹುಟ್ಟಿದೆ. ಹೀಗೆ ಎರಡು ಬಾರಿ ಈ ಮಗು ಹುಟ್ಟಿದಂತಾಗಿದೆ. ವೈದ್ಯಲೋಕದ ವಿಸ್ಮಯಗಳ ಸಾಲಿಗೆ ಸೇರುವ ಶಸ್ತ್ರ ಚಿಕಿತ್ಸೆಯೊಂದು ಅಮೆರಿಕಾದ ಟೆಕ್ಸಾಸ್ ನಗರದಲ್ಲಿ ನಡೆದಿದೆ. ಶಸ್ತ್ರಚಿಕಿತ್ಸೆಯ ಕಾರಣಕ್ಕೆ ಮಗುವಿನ ಭ್ರೂಣವನ್ನು ಗರ್ಭಕೋಶದಿಂದ ಹೊರ ತೆಗೆದು ಮತ್ತೆ, ಮರಳಿಸಿದ..

    November 6, 2016
    ...
    Helth train
    ಫೋಕಸ್

    ರೈಲು ಬೋಗಿಯ ಮೇಲೆ ಸುಸಜ್ಜಿತ ಆಸ್ಪತ್ರೆ: ದೇಶದ ಜನಾರೋಗ್ಯದ ಜತೆ ಅಂತ್ಯಗೊಂಡ 25ವರ್ಷಗಳ ಪಯಣ!

    ಮನೆಬಾಗಿಲಿಗೆ ಆರೋಗ್ಯ ಸೇವೆ ನೀಡುವ ಉದ್ದೇಶದಿಂದ ಹುಟ್ಟಿಕೊಂಡ ಕಲ್ಪನೆಯೊಂದು ಸಾಕಾರವಾಗಿದೆ. ‘ಲೈಫ್ ಲೈನ್ ಎಕ್ಸ್‌ಪ್ರೆಸ್‌’ ಎಂಬ ರೈಲು, 25 ವರ್ಷಗಳ ಕಾಲ ದೇಶಾದ್ಯಂತ ಸಂಚರಿಸಿ ಆರೋಗ್ಯ ಸೇವೆ ನೀಡಿದೆ. ಆರ್ಥಿಕವಾಗಿ ಕಷ್ಟದಲ್ಲಿ ಇರುವವರಿಗೆ ಶಸ್ತ್ರ ಚಿಕಿತ್ಸೆ, ಔಷಧೋಪಚಾರ, ಡಯಗ್ನಾಸ್ಟಿಕ್ಸ್ ಸೇರಿದಂತೆ ವಿವಿಧ ಆರೋಗ್ಯ ಸೇವೆಗಳನ್ನು ಎರಡೂವರೆ ದಶಕಗಳ ಕಾಲ ನೀಡಿದ ಕೀರ್ತಿ ಇದರದ್ದು. ‘ಇಂಪ್ಯಾಕ್ಟ್ ಇಂಡಿಯಾ ಫೌಂಡೇಷನ್’ ಹಾಗೂ ರೈಲ್ವೆ ಇಲಾಖೆ ಸಹಯೋಗದಲ್ಲಿ ರೈಲು ಹಳಿಗಳ ಮೇಲೆ ಆರೋಗ್ಯ ಸೇವೆ ನೀಡುವ ಆಸ್ಪತ್ರೆ ಬೋಗಿಗಳ ಕಲ್ಪನೆ ಇದು. ಇದಕ್ಕೆ ಆರೋಗ್ಯ..

    August 2, 2016

Top