An unconventional News Portal.

ಆಯವ್ಯಯ
    ...
    karnataka-assembly-1
    LIVE

    ‘ಬಜೆಟ್ ವಿಶ್ಲೇಷಣೆ’-1: 49 ಹೊಸ ತಾಲೂಕುಗಳ ಘೋಷಣೆ; ಕೊನೆಗೂ ಸಿಕ್ಕ ‘ಮೋಕ್ಷ’!

    ‘ಸಮಾಚಾರ’ ಓದುಗರಿಗೆ ಶುಭೋದಯ… ಇದು ಬೆಂಗಳೂರಿನಲ್ಲಿರುವ ‘ಸಮಾಚಾರ’ದ ಪುಟ್ಟ ಕಚೇರಿಯಿಂದ ಬರೆಯುತ್ತಿರುವ ‘ಬಜೆಟ್ ಪತ್ರ’. ನಮ್ಮ ತಂಡ ಇವತ್ತು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸುತ್ತಿರುವ ಆಯವ್ಯಯ ಪತ್ರದ ನೇರ ವಿವರಗಳನ್ನು ಇಲ್ಲಿ ನೀಡಲಿದೆ. ಇದು ಬಜೆಟ್‌ ದಿನದ ‘ನೇರ ಪ್ರಸಾರ’! ಟಿವಿಗಳೂ ‘ಫೇಸ್‌ಬುಕ್’ ಲೈವ್ ಮಟ್ಟಕ್ಕೆ ಇಳಿದ ಈ ದಿನಗಳಲ್ಲಿ, ಡಿಜಿಟಲ್ ಮಾಧ್ಯಮವೊಂದು ‘ಲೈವ್’ ನೀಡಲು ಇರುವ ಸಾಧ್ಯತೆಗಳನ್ನು ಅನ್ವೇಷಿಸಬೇಕಿದೆ. ಈ ಸಮಯದಲ್ಲಿ ಇದನ್ನು ‘ನೇರ ಪ್ರಸಾರ’ ಎಂದು ಕರೆಯಬಹುದಾದರೂ, ನಿಜಕ್ಕೂ ಇದು ತಂತ್ರಜ್ಞಾನ ಮತ್ತು ಸುದ್ದಿ ಬೆಳವಣಿಗೆಯೊಂದರ..

    March 15, 2017
    ...
    siddaramayya-budget-1
    ರಾಜ್ಯ

    ‘ಸಿದ್ದರಾಮಯ್ಯ ಬಜೆಟ್’: ನಿರೀಕ್ಷೆಗಳೇನಿಲ್ಲ; ಮುಂದಕ್ಕೆ ಹೋಗಿ ಅನ್ನುತ್ತಿದ್ದಾರೆ ಜನ!

    ”ನಮಗೆ ಈ ಬಜೆಟ್‌ನಿಂದ ಯಾವ ನಿರೀಕ್ಷೆಗಳೂ ಇಲ್ಲ…” ಹೀಗಂತ ಹೇಳಿದವರು ರಾಜಕೀಯ ಪಕ್ಷಗಳ ಮುಖಂಡರು, ಮಾಜಿ ಅಧಿಕಾರಿಗಳು, ಹೋರಾಟಗಾರರು ಮತ್ತು ಸಾಮಾನ್ಯ ಜನತೆ. ಇದೇ ತಿಂಗಳ ಮಧ್ಯದಲ್ಲಿ ಮಂಡನೆಯಾಗಲಿರುವ ರಾಜ್ಯ ಬಜೆಟ್ ಹಿನ್ನೆಲೆಯಲ್ಲಿ ‘ಸಮಾಚಾರ’ ಸಮಾಜದ ಸ್ಥರಗಳಲ್ಲಿರುವ ನಿರೀಕ್ಷೆಗಳೇನು ಎಂಬುದನ್ನು ಅರ್ಥಮಾಡಿಕೊಳ್ಳುವ ಪ್ರಯತ್ನಕ್ಕೆ ಮುಂದಾಯಿತು. ಈ ಸಮಯದಲ್ಲಿ ಮಾತನಾಡಿಸಿದ ಬಹುತೇಕರು ಬಜೆಟ್ ಬಗ್ಗೆ ಯಾವುದೇ ನಿರೀಕ್ಷೆಗಳಿಲ್ಲ ಎಂಬುದನ್ನು ಸ್ಪಷ್ಟಪಡಿಸಿದರು. ಚುನಾವಣೆಗೆ ದಿನಗಣನೆ ಆರಂಭವಾಗಿರುವ ಈ ಸಮಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ 2017- 18ನೇ ಸಾಲಿನ ಬಜೆಟ್ ಮಂಡಿಸಲಿದ್ದಾರೆ. ಈ..

    March 1, 2017
    ...
    pol-party-funding-final
    ದೇಶ

    ರಾಜಕೀಯ ಪಕ್ಷಗಳ ದೇಣಿಗೆಗೆ ಕಡಿವಾಣ: ‘ರಂಗೋಲಿ ಕೆಳಗೆ ತೂರುವವರಿಗೆ’ ಇಲ್ಲಿದೆ ಅವಕಾಶ!

    ರಾಜಕೀಯ ಪಕ್ಷಗಳಿಗೆ ಹರಿದು ಬರುವ ದೇಣಿಗೆಗೆ ಕಡಿವಾಣ ಹಾಕುವ ಸಂಬಂಧ ಈ ಬಾರಿಯ ಬಜೆಟ್ ಮಂಡನೆ ವೇಳೆ ಕೇಂದ್ರ ಸರಕಾರ ಕ್ರಮಗಳನ್ನು ಘೋಷಣೆ ಮಾಡಿದೆ. ಈ ಹಿಂದೆ 20 ಸಾವಿರದವರೆಗೆ ನಗದು ರೂಪದಲ್ಲಿ ಅನಾಮದೇಯ ವ್ಯಕ್ತಿಗಳಿಂದ ಪಕ್ಷಗಳು ‘ದೇಣಿಗೆ’ ಪಡೆಯುವ ಅವಕಾಶ ಇತ್ತು. ಇದಕ್ಕೆ ಚುನಾವಣಾ ಆಯೋಗ ಮತ್ತು ಸರಕಾರೇತರ ಸಂಸ್ಥೆಗಳು ವಿರೋಧವನ್ನು ವ್ಯಕ್ತಪಡಿಸಿದ್ದವು. ಕೇಂದ್ರ ಸರಕಾರ 2017-18ರ ಬಜೆಟ್ ಮಂಡನೆ ವೇಳೆ, ಅನಾಮದೇಯ ವ್ಯಕ್ತಿಗಳಿಂದ ನಗದು ರೂಪದಲ್ಲಿ ಹಣ ಸ್ವೀಕರಿಸುವ ಮಿತಿಯನ್ನು 2 ಸಾವಿರ ರೂಪಾಯಿಗೆ ಇಳಿಸಿದೆ…

    February 2, 2017
    ...
    arun-jaitley-budget
    ಸುದ್ದಿ ಸಾರ

    ಅಪಾರ ನಿರೀಕ್ಷೆ; ಅನುಮಾನಗಳ ಭಾರ: ಬಜೆಟ್ ಸಮಯದಲ್ಲಿ ಗಮನಿಸಬೇಕಾದ 10 ಅಂಶಗಳು

    ಅನಾಣ್ಯೀಕರಣ ಪ್ರಕ್ರಿಯೆ ನಡೆದ ನಂತರದ ಮೊದಲ ಕೇಂದ್ರ ಬಜೆಟ್ ಬುಧವಾರ, ಅಂದುಕೊಂಡ ಸಮಯಕ್ಕೆ ಮಂಡನೆಯಾಗಲಿದೆ. ಹಣಕಾಸು ಸಚಿವ ಅರುಣ್ ಜೇಟ್ಲಿ ತಮ್ಮ ನಾಲ್ಕನೇ ಆಯವ್ಯಯವನ್ನು ಜನರ ಎದುರಿಗೆ ಇಡಲಿದ್ದಾರೆ. ಅವರಿಗೆ ಹಾಗೂ ಸರಕಾರದ ಪಾಲಿಗೆ ಇದು ‘ಮಾಡು ಇಲ್ಲವೇ ಮಡಿ’ ವಿಚಾರ. ಶೇರು ಮಾರುಕಟ್ಟೆ ಇಂದು ಘೋಷಣೆಯಾಗಲಿರುವ ಖರ್ಚು- ಆದಾಯದ ವಿವರಗಳ ಮೇಲೆ ಕಣ್ಣಿಟ್ಟು ಕುಳಿತಿದೆ. ಅಪಾರ ನಿರೀಕ್ಷೆ ಹಾಗೂ ಅನುಮಾನಗಳ ಭಾರವನ್ನು ಹೊದ್ದುಕೊಂಡಿರುವ ಮುಂಗಡ ಪತ್ರ ಅನಾವರಣಗೊಳ್ಳಲು ಕ್ಷಣಗಣನೆ ಆರಂಭವಾಗಿದೆ. ಈ ಸಮಯದಲ್ಲಿ ಗಮನಿಸಬೇಕಾದ 10 ಅಂಶಗಳ ಪಟ್ಟಿ..

    February 1, 2017
    ...
    arun-kumar-1
    ದೇಶ

    ‘ಬಜೆಟ್ ದಿಕ್ಸೂಚಿ’: ಜನಪ್ರಿಯತೆಗೆ ಮೊರೆ; ಯೋಜನೆಗಳ ಅನುಷ್ಠಾನಕ್ಕೆ ಸಿಗೋಲ್ಲ ಬೆಲೆ

    2017-18ರ ಆಯವ್ಯಯ ಕೇಂದ್ರ ಹಣಕಾಸು ಸಚಿವರ ಪಾಲಿಗೆ ದುಃಸ್ವಪ್ನವಾಗಲಿದೆ… ಹೀಗಂತ ಹೇಳಿದವರು ಜೆಎನ್ಯು ನಿವೃತ್ತ ಪ್ರಾಧ್ಯಾಪಕ, ಆರ್ಥಿಕ ತಜ್ಞ ಪ್ರೊ. ಅರುಣ್ ಕುಮಾರ್. ಬಜೆಟ್ ಪೂರ್ವಭಾವಿಯಾಗಿ ಇತ್ತೀಚಿಗೆ ‘ದಿ ವೈರ್’ ಜತೆಗೆ ಮಾತನಾಡಿದ ಅವರು ಫೆ. 1ರಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಮಂಡಿಸಲಿರುವ ಆಯವ್ಯಯ, ದೇಶದ ಆರ್ಥಿಕತೆ, ಅನಾಣ್ಯೀಕರಣ, ಸಂಘಟಿತ ವಲಯದ ಉತ್ಪಾದನೆ ಕುಸಿತ, ಜಿಡಿಪಿ, ವಿತ್ತೀಯ ಕೊರತೆ, ರಾಜಕೀಯ ಸೇರಿದಂತೆ ನಾನಾ ವಿಚಾರಗಳ ಕುರಿತು ಒಳನೋಟಗಳನ್ನು ನೀಡಿದ್ದಾರೆ. ಸಂದರ್ಶನದ ಆಯ್ದ ಭಾಗಗಳ ಕನ್ನಡಾನುವಾದವನ್ನು ‘ಸಮಾಚಾರ’ ಇಲ್ಲಿ..

    January 30, 2017
    ...
    tanvir-seth-protest
    ಸುದ್ದಿ ಸಾರ

    ಶಿಕ್ಷಣ ಸಚಿವರ ನಿವಾಸಕ್ಕೇ ಲಗ್ಗೆ ಇಟ್ಟ ಪ್ರತಿಭಟನಾಕಾರರು

    ರಾಜ್ಯದ ಸರಕಾರಿ ಶಾಲೆಗಳ ಬಲವರ್ಧನೆಗೆ ಆಗ್ರಹಿಸಿ ದಲಿತ ಸಂಘಟನೆಗಳು ಹಾಗೂ ಸಮಾನ ಶಿಕ್ಷಣಕ್ಕಾಗಿ ಜನಾಂದೋಲನ ಸಂಘಟನೆಯ ಕಾರ್ಯಕರ್ತರು ಶಿಕ್ಷಣ ಸಚಿವ ತನ್ವೇರ್ ಸೇಠ್ ಅವರ ಅಧಿಕೃತ ನಿವಾಸಕ್ಕೆ ಮುತ್ತಿಗೆ ಹಾಕಿದ ಘಟನೆ ಸೋಮವಾರ ನಡೆದಿದೆ. ಬೆಂಗಳೂರಿನ ವಿಂಡ್ಸರ್ ಮ್ಯಾನರ್ ರಸ್ತೆಯಲ್ಲಿರುವ ಶಿಕ್ಷಣ ಸಚಿವರ ಅಧಿಕೃತ ನಿವಾಸಕ್ಕೆ ನಾನಾ ಕಡೆಗಳಿಂದ ಬೆಳಗ್ಗೆ 11 ಗಂಟೆ ಸುಮಾರಿಗೆ ಪ್ರತಿಭಟನೆ ಜಾಥ ಬಂದವರು ಮನೆಯ ಒಳಗೇ ಪ್ರವೇಶಿಸಿದರು. ನಂತರ ಪೊಲೀಸರು ಬಂದರಾದರೂ ಪ್ರತಿಭಟನಾಕಾರರು ಸ್ಥಳದಿಂದ ಕದಲಿಲ್ಲ. ಹೊರಗೆ ಟ್ರಾಫಿಕ್ ಸಮಸ್ಯೆಯೂ ತಲೆದೋರಬಹುದು..

    January 23, 2017
    ...
    bsf-1
    ದೇಶ

    ‘ದೇಶಪ್ರೇಮಿಗಳ ಗಮನಕ್ಕೆ’: ಯೋಧನೊಬ್ಬನ ಗಂಭೀರ ಆರೋಪ ಮತ್ತು ಬಿಎಸ್ಎಫ್ ಅಂತರಂಗ

    ಬಾರ್ಡರ್ ಸೆಕ್ಯುರಿಟಿ ಫೋರ್ಸ್ (BSF) ಅಥವಾ ಗಡಿ ರಕ್ಷಣಾ ಪಡೆ… ಪಾಕಿಸ್ತಾನದ ಗಡಿಯಲ್ಲಿ ಗುಂಡಿನ ಚಕಮಕಿಯಾದಾಗ, ಬಾಂಗ್ಲದೇಶದ ಗಡಿಯಲ್ಲಿ ಅಕ್ರಮ ವಲಸೆಗಳು ನಡೆದಾಗ, ಅರಬ್ಬೀ ಸಮುದ್ರದಲ್ಲಿ ಒಳನುಸುಳುವಿಕೆಯ ಸಂಗತಿ ಬಹಿರಂಗವಾದಾಗ, ಆಂಧ್ರ- ಒರಿಸ್ಸಾ- ಬಿಹಾರ ಗಡಿಯಲ್ಲಿ ನಕ್ಸಲ್ ಕಾರ್ಯಾಚರಣೆಗಳು ನಡೆದಾಗ ಸುದ್ದಿಕೇಂದ್ರದಕ್ಕೆ ಬರುವ ಪದವಿದು. ಆದರೆ ಈ ಬಾರಿ, ಗಡಿ ನಿಯಂತ್ರಣ ಪಡೆಯ ಸೈನಿಕನೊಬ್ಬ ಜಮ್ಮ ಮತ್ತು ಕಾಶ್ಮೀರದ ಹಿಮಚ್ಛಾದಿತ ಪ್ರದೇಶದಿಂದ ‘ಸರಿಯಾಗಿ ಊಟ ಸಿಗುತ್ತಿಲ್ಲ’ ಎಂಬ ಆರೋಪ ಮಾಡಿರುವ ವಿಡಿಯೋ ಕಾರಣಕ್ಕೆ ಬಿಎಸ್ಎಫ್ ಸುದ್ದಿಯಲ್ಲಿದೆ. ತೇಜ್ ಬಹುದ್ದೂರ್ ಯಾದವ್ ಎಂಬ..

    January 10, 2017

Top