An unconventional News Portal.

ಅಪರಾಧ
    ...

    ‘ವ್ಯಾಲಂಟೈನ್ಸ್ ಡೇ ಸ್ಪೆಷಲ್’: ಪ್ರೀತಿ, ಪ್ರೇಮ ಇವರ ಪಾಲಿಗೆ ಕೇವಲ ಪುಸ್ತಕ ಬದನೆಕಾಯಿ ಅಲ್ಲ!

    ಪ್ರೇಮಿಗಳ ದಿನ ಎಂದರೆ ಯುವಜನತೆಗೆ ಖುಷಿ. ಆದರೆ ಇದಕ್ಕೆ ಧಕ್ಕೆ ತರುವವರು ಸ್ವಯಂ ಘೋಷಿತ ಸಂಸ್ಕೃತಿ ರಕ್ಷಕರು. ಇವರು ಪ್ರೇಮಿಗಳ ದಿನದಂದು ನೈತಿಕ ಪೊಲೀಸ್‌ಗಿರಿ ಎಂಬ ಹೆಸರಿನಲ್ಲಿ ಪ್ರೇಮಿಗಳಿಗೆ ತೊಂದರೆ ನೀಡಲು ತಯಾರಿರುತ್ತಾರೆ. ಪ್ರೇಮಿಗಳು ತಮಗೆ ಬೇಕಾದ ಹಾಗೆ ಈ ವಿಶೇಷ ದಿನವನ್ನು ಆಚರಿಸಲು ಸ್ವಾತಂತ್ರ್ಯ ನೀಡುವುದಿಲ್ಲ. ಇದಕ್ಕೆ ಸಾಕ್ಷಿಯಾಗಿ ರಾಜ್ಯದಲ್ಲಿ ತೋಟಗಾರಿಕೆ ಇಲಾಖೆಯು ‘ಪ್ರೇಮಿಗಳ ದಿನ’ದಂದು ಲಾಲ್‌ಬಾಗ್ ಮತ್ತು ಕಬ್ಬನ್‌ ಪಾರ್ಕ್‌ನಲ್ಲಿ ಸಿಸಿ ಕ್ಯಾಮೆರಾ ಮತ್ತು ಪೊಲೀಸ್ ಕಾವಲನ್ನು ಹೆಚ್ಚಿಸಲು ಮುಂದಾಗಿದ್ದರು. ವಿಷಯ ಅದಲ್ಲ… ಛತ್ತೀಸ್‌ಗಡದ […]

    February 14, 2018
    ...

    ಸುಪ್ರಿಂ ಕೋರ್ಟ್ ಮೌಖಿಕ ಪ್ರಶ್ನೆ: ಅಪರಾಧ ಹಿನ್ನೆಲೆಯ ವ್ಯಕ್ತಿ ರಾಜಕೀಯ ಪಕ್ಷದ ಅಧ್ಯಕ್ಷನಾಗಲು ಹೇಗೆ ಸಾಧ್ಯ?

    “ಅಪರಾಧ ಪ್ರಕರಣಗಳಲ್ಲಿ ಶಿಕ್ಷೆಗೊಳಗಾದ ಮತ್ತು ಭ್ರಷ್ಟಾಚಾರದಲ್ಲಿ ಭಾಗಿಯಾದ ವ್ಯಕ್ತಿ ರಾಜಕೀಯ ಪಕ್ಷವೊಂದರ ಅಧ್ಯಕ್ಷರಾಗಲು ಹೇಗೆ ಸಾಧ್ಯ?” ಎಂದು ಸುಪ್ರೀಂಕೋರ್ಟ್‌ನ ಮುಖ್ಯನ್ಯಾಯಮೂರ್ತಿ ದೀಪಕ್‌ ಮಿಶ್ರಾ ಪ್ರಶ್ನಿಸಿದ್ದಾರೆ. ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ನ ತ್ರಿಸದಸ್ಯ ಪೀಠ, ರಾಜಕೀಯ ಪಕ್ಷಗಳ ಈ ವ್ಯವಸ್ಥೆಯನ್ನು ಸುಧಾರಿಸಲು ಕೇಂದ್ರ ಸರಕಾರ ಮತ್ತು ಚುನಾವಣಾ ಆಯೋಗ ಮುಂದಾಗಬೇಕು ಎಂದು ಸೋಮವಾರ ಮೌಖಿಕವಾಗಿ ತಿಳಿಸಿದೆ. “ಅಪರಾಧ ಹಿನ್ನೆಲೆಯ ವ್ಯಕ್ತಿ ರಾಜಕೀಯ ಪಕ್ಷವೊಂದರ ಮುಖ್ಯಸ್ಥನಾಗಿದ್ದುಕೊಂಡು ಚುನಾವಣೆಯಲ್ಲಿ ಯಾವ ಅಭ್ಯರ್ಥಿ ಸ್ಪರ್ಧಿಸಬೇಕೆಂಬುದನ್ನು […]

    February 12, 2018
    ...

    ‘ಜರ್ನಲಿಸಂ ಶವಪರೀಕ್ಷೆ’: ಸುಮ್ಮನೆ ಕುಳಿತ ಪತ್ರಕರ್ತನಿಗೆ ಹಳೆಯದೆಲ್ಲವೂ ನೆನಪಾಗುತ್ತವೆ!

    ಅದ್ಯಾಕೋ ಗೊತ್ತಿಲ್ಲ, ಸುಮ್ಮನೆ ಕುಳಿತ ಅವನಿಗೆ ಆತನ ಹಳೆಯದೆಲ್ಲಾ ನೆನಪಾಗುತ್ತದೆ. ನಾಲ್ಕಾರು ತಿಂಗಳು ಜಂಜಾಟದ ಬದುಕಲ್ಲಿ ಬೇಯುತ್ತಾ, ಅವರಿಬ್ಬರು ಕಾಯಕವನ್ನೇ ಕೈಲಾಸ ಅಂತೆಲ್ಲ ಅಂದುಕೊಂಡು ಬದುಕಿದ ಬದುಕು ನೆನಪಾಗುತ್ತದೆ. ಕಣ್ಣ ತುಂಬ ಕನಸುಗಳನ್ನು ಹೊತ್ತುಕೊಂಡು, ಹಳ್ಳಿಯ ಪ್ರಶಾಂತ ಬದುಕಿನ ಚೌಕಟ್ಟನ್ನ ಮೀರಿ ಆತನಲ್ಲಿ ಮುಗ್ಧತೆ ಇತ್ತು. ಆದರೆ ಅದು ಮಾಯಾನಗರದ ಭ್ರಮೆಯ ಬದುಕಲ್ಲಿ ಕಳೆದು ಹೋಗುವ ಆತಂಕವೂ ಇತ್ತು. ಬಯೋಡಾಟದಲ್ಲಿ ವೃತ್ತಿ ಜೀವನದ ಅನುಭವಗಳು ಅಂತ ಮುಕ್ತವಾಗಿ ಪಟ್ಟಿ ಮಾಡಲಾರದ ಕೆಲಸಗಳನ್ನು ಹೊಟ್ಟೆಪಾಡಿಗಾಗಿ ಮಾಡಿಕೊಂಡು ಬಂದವನ ಕೈಗೆ […]

    September 28, 2016
    ...

    ಕಂಬಿ ಹಿಂದಿನ ಕತೆ – 2: ಜೈಲೊಳಗಿನ ಕಾನೂನಿನ ಕಟ್ಟಳೆಗಳ ಆಚೆಗೆ ಮೆರೆದ ಮಾನವೀಯ ಸಂಬಂಧಗಳು!

    ಏನೇ ಅಂದರೂ, ಮನುಷ್ಯ ಬಂದು ನಿಲ್ಲುವುದು ಸಂಬಂಧಗಳ ಕಡೆಗೆ; ಎಷ್ಟಾದರೂ ಸಂಘ ಜೀವಿ ಈತ. ಜೈಲಿನಲ್ಲಿರುವವರು ಸಮಾಜದ ಎಲ್ಲಾ ಸಂಬಂಧಗಳಿಂದ ದೂರ ಉಳಿದಿರುತ್ತಾರೆ ಎಂಬ ಭಾವನೆ ನಮ್ಮೆಲ್ಲರಲ್ಲಿದೆ. ಖೈದಿಗಳಿಗೆ ಭಾವನೆಗಳೇ ಅರ್ಥವಾಗುವುದಿಲ್ಲ ಎಂಬ ದೂರೂ ಇದೆ. ಆದರೆ ಇದೆಲ್ಲವನ್ನೂ ಸುಳ್ಳಾಗಿಸುವ ಕರಿಸುಬ್ಬುವಿನ ಈ ರೋಚಕ ಕತೆ. ಇದು ಕಂಬಿ ಹಿಂದಿನ ಕತೆಗಳ ಎರಡನೇ ಕಂತು. ಆತನ ಹೆಸರು ಕರಿಸುಬ್ಬು; ಹಾಗೆಂದಿಟ್ಟುಕೊಳ್ಳಿ. ಬೆಂಗಳೂರಿನ ಲಗ್ಗೆರೆಯವನು. ಒಂದಷ್ಟು ಓದಿಕೊಂಡಿದ್ದ. ‘ಬಿಎಸ್ಎನ್ಎಲ್’ನಲ್ಲಿ ಲೈನ್ ಮ್ಯಾನ್ ಕೆಲಸ ಸಿಕ್ಕಿತು. ಧಾರವಾಡದಲ್ಲಿ ಕೆಲಸ ಮಾಡುತ್ತಿದ್ದ; ಖಾಯಂ ಕೂಡ ಆಗಿತ್ತು. […]

    September 28, 2016
    ...

    ‘ಜಪಾನ್ & ಕ್ರೈಮ್’: ಇದು ಸುದ್ದಿಯಾದವರ ಪಾಲಿಗೆ ಸುದ್ದಿಯಾಗದ ಸುದ್ದಿ!

    ಮಂಗಳವಾರ ಜಪಾನಿನಲ್ಲಿ ಚಾಕು ಹಾಕಿ 19 ಜನರನ್ನು ಕೊಲೆ ಮಾಡಿದ ಸುದ್ದಿ ಸರಿಸುಮಾರು ಜಗತ್ತಿನ ಎಲ್ಲಾ ಮಾಧ್ಯಮಗಳಲ್ಲೂ ಮುಖ್ಯ ಸುದ್ದಿಯಾಗಿ ಜಾಗ ಆಕ್ರಮಿಸಿಕೊಂಡಿತ್ತು. ವಿದೇಶಗಳಿಗೆಲ್ಲಾ ಸುದ್ದಿ ನೀಡಿದ ಜಪಾನಿಗೆ ಮಾತ್ರ ಅದು ಮುಖ್ಯ ಸುದ್ದಿಯಾಗಿರಲೇ ಇಲ್ಲ. ವಿಶ್ವದ ಮುಂಚೂಣಿ ಆರ್ಥಿಕ ಶಕ್ತಿ; ವಿಶಿಷ್ಟ ಸಂಸ್ಕೃತಿ, ಶಿಸ್ತು ಬದ್ಧ ಜೀವನ ಶೈಲಿ ಹೊಂದಿರುವ ಜಪಾನಿನ ಅಪರಾಧ ಲೋಕವೇ ಭಿನ್ನ. ಇಲ್ಲಿನ ಮಾಧ್ಯಮಗಳು, ಜನರು, ಇವರೆಲ್ಲರಿಗೂ ಅಪರಾಧಗಳೆಂದರೆ ಅಸಡ್ಡೆ. ಜಪಾನಿನ ವಿಶಿಷ್ಟ ಅಪರಾಧ ಲೋಕದ ಕಥೆಯನ್ನು ‘ಸಮಾಚಾರ’ ವಿಭಿನ್ನವಾಗಿ ನಿಮ್ಮ […]

    July 26, 2016

Top