An unconventional News Portal.

ಅಖಿಲೇಶ್ ಯಾದವ್
    ...
    election-live-4
    LIVE

    LIVE: ಉತ್ತರ ಪ್ರದೇಶದಲ್ಲಿ ಬಿಜೆಪಿ ಮುನ್ನಡೆ, ಪಂಜಾಬ್‌ನಲ್ಲಿ ಕಾಂಗ್ರೆಸ್- ಎಎಪಿ ಟಫ್ ಫೈಟ್

    ದೇಶದ ರಾಜಕೀಯದ ದಿಕ್ಸೂಚಿಯನ್ನೇ ಬದಲಾಯಿಸಲಿದೆ ಎಂದು ಬಿಂಬಿತವಾಗಿರುವ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶದ ‘ನೇರ ಪ್ರಸಾರ’ ಇದು. ಇಲ್ಲಿಂದ ಮುಂದೆ ನಾಲ್ಕಾರು ಗಂಟೆಗಳ ಕಾಲ ‘ಸಮಾಚಾರ’ ಐದೂ ರಾಜ್ಯಗಳಲ್ಲಿ ನಡೆಯುವ ಮತ ಎಣಿಕೆಯ ಅಪ್ಡೇಟ್ ಜತೆಗೆ, ಒಂದಷ್ಟು ಒಳನೋಟಗಳ ಮಾಹಿತಿಯನ್ನು ನೀಡಲಿದೆ. ಇದು ಡಿಜಿಟಲ್ ಮಾಧ್ಯಮದ ಟಿಪಿಕಲ್ ‘ಲೈವ್’ ಅನ್ನುವುದಕ್ಕಿಂತ, ಚುನಾವಣಾ ಫಲಿತಾಂಶದ ಸುತ್ತ ‘ಟೀಕೆ- ಟಿಪ್ಪಣಿ’ಗಳು. ನಿಮ್ಮ ಅಭಿಪ್ರಾಯಗಳನ್ನೂ ದಾಖಲಿಸಿ…

    March 11, 2017
    ...
    varanasi-narendra-roadshow-1
    ದೇಶ

    ವಾರಣಾಸಿಯತ್ತ ಎಲ್ಲರ ಚಿತ್ತ: ಯುಪಿ ಚುನಾವಣೆಯಲ್ಲಿ ಏನಿದು ‘ಕ್ಷೇತ್ರ ಮಹಾತ್ಮೆ’?

    ಉತ್ತರ ಪ್ರದೇಶ ಚುನಾವಣೆಯ ಕೊನೆಯ ಹಂತದ ಮತದಾನಕ್ಕೆ ಇನ್ನು 48 ಗಂಟೆಗಳಷ್ಟೆ ಬಾಕಿ ಇರುವಾಗ, ವಾರಣಾಸಿಯನ್ನು ಕೇಂದ್ರವಾಗಿಟ್ಟುಕೊಂಡು ಪ್ರಮುಖ ಪಕ್ಷಗಳು ಬಲ ಪ್ರದರ್ಶನಕ್ಕೆ ಇಳಿದಿವೆ. ಬಿಜೆಪಿ ಮತ್ತು ಸಮಾಜವಾದಿ ಪಕ್ಷಗಳು ವಾರಣಾಸಿಯ ಬೀದಿಗಳಲ್ಲಿ ಮತದಾರರನ್ನು ಸೆಳೆಯುವ ತಂತ್ರ ಅನುಸರಿಸಿದ್ದರೆ, ವಾರಣಾಸಿಯ ಹೊರಭಾಗದ ದಲಿತ ಬಸ್ತಿಗಳಲ್ಲಿ ಬಿಎಸ್‌ಪಿ ಕೊನೆಯ ಹಂತದಲ್ಲಿ ಮತದಾರರನ್ನು ಆಕರ್ಷಿಸುವ ರ್ಯಾಲಿಗಳನ್ನು ಆಯೋಜಿಸಿದೆ. ಪ್ರಧಾನಿ ಮೋದಿ ಕಳೆದ ಮೂರು ದಿನಗಳಿಂದ ವಾರಣಾಸಿಯಲ್ಲಿಯೇ ವಾಸ್ತವ್ಯ ಹೂಡಿದ್ದಾರೆ. ಹಸುಗಳಿಗೆ ಮೇವು ನೀಡುತ್ತಿದ್ದಾರೆ. ಲಕ್ಷಾಂತರ ಜನರ ಸಭೆಗಳಲ್ಲಿ ಭಾಗವಹಿಸುತ್ತಿದ್ದಾರೆ. ವಾರಣಾಸಿಯನ್ನು ಕೇಂದ್ರವಾಗಿಟ್ಟುಕೊಂಡು..

    March 6, 2017
    ...
    uttar-pradesh-election-1
    ವಿಚಾರ

    ‘ಮಾಡು ಇಲ್ಲವೇ ಮಡಿ’: ಉತ್ತರಪ್ರದೇಶದ ‘ದಿಕ್ಸೂಚಿ ಚುನಾವಣೆ’ಯಲ್ಲಿ ಯಾರು ಗೆದ್ದರೆ ಏನೇನು?

    ಉತ್ತರಪ್ರದೇಶದ ಶಾಸನ ಸಭಾ ಚುನಾವಣೆಗಳ ಫಲಿತಾಂಶವು ಭಾರತದ ರಾಜಕಾರಣದ ಭವಿಷ್ಯದ ಮೇಲೆ ನಿರ್ಣಾಯಕ ಪ್ರಭಾವನ್ನು ಬೀರಲಿದೆ. ಪ್ರತಿ ಆರು ಭಾರತೀಯರಲ್ಲಿ ಒಬ್ಬರು ಉತ್ತರ ಪ್ರದೇಶದಲ್ಲಿ ವಾಸಿಸುತ್ತಾರೆ ಎಂಬುದೂ ಮತ್ತು ಅದು ಪ್ರತ್ಯೇಕ ರಾಷ್ಟ್ರವಾಗಿದ್ದಲ್ಲಿ ಜಗತ್ತಿನಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಐದನೇ ರಾಷ್ಟ್ರವಾಗಿರುತ್ತಿತ್ತೆಂಬುದೇ ಅದರ ಮಹತ್ವವನ್ನು ಹೇಳುತ್ತದೆ. ಆದರೆ ಇತಿಹಾಸದಲ್ಲಿ ಒಮ್ಮೊಮ್ಮೆ ಉತ್ತರ ಪ್ರದೇಶದ ಚುನಾವಣೆಗಳಿಗೆ ಅದರ ಬೃಹತ್ ಗಾತ್ರಕ್ಕೂ ಮಿಗಿಲಾದ ಮಹತ್ವವಿರುವ ಗಳಿಗೆಯು ಬರುತ್ತದೆ. ಈ ಚುನಾವಣೆಯ ನಡೆಯುತ್ತಿರುವ ಸಂದರ್ಭ ಮತ್ತು ಸಮಯದ ಕಾರಣದಿಂದ ಅಂತಹ..

    February 20, 2017
    ...
    uttar-pradesh-1
    ದೇಶ

    ‘ಯಾದವೀ ಕಲಹ’: ಉತ್ತರ ಪ್ರದೇಶದಲ್ಲಿ ಮುಖಕ್ಕಿಂತ ಚಿನ್ಹೆಗೆ ಯಾಕಿಷ್ಟು ಬೆಲೆ?

    ಇದು ದೇಶದ ದೊಡ್ಡ ರಾಜ್ಯ ಉತ್ತರ ಪ್ರದೇಶ. ಇವತ್ತಿಂದ ಸರಿಯಾಗಿ 25ನೇ ದಿನಕ್ಕೆ ಇಲ್ಲಿನ ವಿಧಾನಸಭೆಗಾಗಿ ದೊಡ್ಡ ಸಂಗ್ರಾಮವೊಂದು ನಡೆದು ಹೋಗಿರುತ್ತದೆ. ಇಲ್ಲಿರುವ 403 ವಿಧಾನಸಭಾ ಕ್ಷೇತ್ರಗಳಿಗೆ ಪ್ರತಿನಿಧಿಗಳನ್ನು ಆಯ್ಕೆ ಮಾಡಲು ಸುಮಾರು 13 ಕೋಟಿ ಮತದಾರರು ಮತದಾನ ಮಾಡಲಿದ್ದಾರೆ. ಅವರಲ್ಲಿ ಶೇ. 67. 68ರಷ್ಟು ಸಾಕ್ಷರರಿದ್ದು, ನಾನಾ ಪಕ್ಷಗಳ ಅಭ್ಯರ್ಥಿಗಳನ್ನು ಅಳೆದು, ತೂಗಿ, ಓಟಾಕಿ ವಿಧಾನಸಭೆಗೆ ಕಳುಹಿಸಿಕೊಡಲಿದ್ದಾರೆ. ಹಾಗೆ ನೋಡಿದರೆ, ಇಲ್ಲಿನ ನಾನಾ ಪಕ್ಷಗಳ ಚುನಾವಣಾ ಪ್ರಚಾರದ ಮಾಹಿತಿ ದೇಶದ ಸುದ್ದಿಕೇಂದ್ರವನ್ನು ಇಷ್ಟೊತ್ತಿಗಾಗಲೇ ಆವರಿಸಿಕೊಳ್ಳಬೇಕಿತ್ತು. ಕೇಂದ್ರದಲ್ಲಿ ಅಧಿಕಾರ..

    January 17, 2017
    ...
    nasim zaidi
    ದೇಶ

    ಪಂಚ ರಾಜ್ಯಗಳ ಚುನಾವಣೆಗೆ ದಿನಾಂಕ ನಿಗದಿ: ಆರಂಭಿಕ ಸಮೀಕ್ಷೆಗಳು ಹೇಳುತ್ತಿರುವುದೇನು?

    ಮುಂದಿನ ಲೋಕಸಭಾ ಚುನಾವಣೆಯ ದಿಕ್ಸೂಚಿ ಎಂದೇ ಪರಿಗಣಿಸಿರುವ ಪಂಚ ರಾಜ್ಯಗಳ ವಿಧಾನಸಭಾ ಚುನಾವಣಾ ದಿನಾಂಕ ಬುಧವಾರ ಹೊರಬಿದ್ದಿದೆ. ಪಂಜಾಬ್, ಉತ್ತರ ಪ್ರದೇಶ, ಉತ್ತರಖಂಡ್, ಮಣಿಪುರ ಮತ್ತು ಗೋವಾದಲ್ಲಿ ಒಟ್ಟು 7 ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಫೆಬ್ರವರಿ 4ರಿಂದ ಮತದಾನ ಆರಂಭವಾಗಲಿದೆ. ಇನ್ನು ಎಲ್ಲಾ ರಾಜ್ಯಗಳ ಮತ ಎಣಿಕೆ ಮಾರ್ಚ್ 11ರಂದು ನಡೆಯಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಡಾ. ನಜೀಮ್ ಜೈದಿ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಎಲ್ಲಾ ಐದು ರಾಜ್ಯಗಳ ತಳಮಟ್ಟದಲ್ಲಿ ಪಕ್ಷಗಳ ಬಲಾಬಲ, ಆರಂಭಿಕ ಹಂತದ..

    January 4, 2017
    ...
    mulayam_akhilesh-copy
    ಸುದ್ದಿ ಸಾರ

    ‘ಅಪ್ಪ v/s ಮಗ’: ಉತ್ತರ ಪ್ರದೇಶದ ‘ಯಾದವೀ ಕಲಹ’ಕ್ಕೆ ಸಿನಿಮೀಯ ಟ್ವಿಸ್ಟ್

    ದೇಶದ ಅತೀ ದೊಡ್ಡ ರಾಜ್ಯ ಉತ್ತರ ಪ್ರದೇಶದಲ್ಲಿ ಕಳೆದ ಮೂರು ತಿಂಗಳಿನಿಂದ ನಡೆಯುತ್ತಿದ್ದ ‘ಸಮಾಜವಾದಿ ಕೌಟುಂಬಿಕ ಸಂಘರ್ಷ’ ಸಿನಿಮೀಯ ತಿರುವುದು ತೆಗೆದುಕೊಂಡಿದೆ. ಶುಕ್ರವಾರ ರಾತ್ರಿ ನಡೆದ ಅನಿರೀಕ್ಷಿತ ಬೆಳವಣಿಗೆಯಲ್ಲಿ ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮುಲಾಯಂ ಸಿಂಗ್ ಯಾದವ್, ಸ್ವಂತ ಮಗ ಹಾಗೂ ರಾಜ್ಯದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಮತ್ತು ಸಹೋದರ ಸಂಬಂಧಿ ರಾಮ್ ಗೋಪಾಲ್ ಯಾದವ್ರನ್ನು ಪಕ್ಷದಿಂದ ಆರು ವರ್ಷಗಳ ಅವಧಿಗೆ ಉಚ್ಛಾಟಿಸಿದ್ದಾರೆ. ರಾಜ್ಯದಲ್ಲಿ ಚುನಾವಣೆಗೆ 6 ತಿಂಗಳಿಗೂ ಕಡಿಮೆ ಅವಧಿ ಇದೆ ಎನ್ನುವಾಗ ಆಡಳಿತರೂಢ..

    December 31, 2016
    ...
    up-election
    ದೇಶ

    ಹನಿಟ್ರ್ಯಾಪ್; ಪಕ್ಷಾಂತರ ಮತ್ತು ಕೌಟುಂಬಿಕ ಕಲಹ: ಇದು ಉತ್ತರ ಪ್ರದೇಶ ಚುನಾವಣಾ ಪ್ರಹಸನದ ‘ಅಂಕ ಒಂದು’!

    ದೇಶದಲ್ಲಿಯೇ ಅತಿ ಹೆಚ್ಚು ವಿಧಾನಸಭಾ ಹಾಗೂ ಲೋಕಸಭಾ ಸ್ಥಾನಗಳನ್ನು ಹೊಂದಿರುವ ರಾಜ್ಯ, ಉತ್ತರ ಪ್ರದೇಶದಲ್ಲಿ ಚುನಾವಣಾ ಪೂರ್ವ ಚಟುವಟಿಕೆಗಳು ಗರಿಗೆದರಿವೆ. 2017ರ ಮಾರ್ಚಿನಲ್ಲಿ ನಡೆಯಲಿರುವ ಇಲ್ಲಿನ ವಿಧಾನಸಭಾ ಚುನಾವಣೆಯ ಕಾವು ನಿಧಾನವಾಗಿ ಏರಲಾರಂಭಿಸಿದೆ. ಉತ್ತರ ಪ್ರದೇಶದ ಗೆದ್ದುಗೆಗೂ, ದೇಶದ ಚುಕ್ಕಾಣಿಗೂ ಹತ್ತಿರ ಸಂಬಂಧವೊಂದು ಇದೆ ಎಂಬ ನಂಬಿಕೆ ಸಹಜವಾಗಿಯೇ, ದೊಡ್ಡ ರಾಜ್ಯದ ಆಡಳಿತದ ಕುರ್ಚಿಗಾಗಿ ನಡೆಯುತ್ತಿರುವ ಕಸರತ್ತುಗಳಿಗೆ ರಂಗು ತುಂಬಿದೆ. ಗುರುವಾರ ನಡೆದ ಪ್ರಮುಖ ಬೆಳವಣಿಗೆಯಲ್ಲಿ ಕಾಂಗ್ರಸ್ ಪಕ್ಷದ ಹಿರಿಯ ನಾಯಕಿ ರೀಟಾ ಬಹುಗುಣ ಜೋಶಿ ಕಾಂಗ್ರೆಸ್ ಪಾಳೆಯ ತೊರೆದು ಬಿಜೆಪಿಯ..

    October 21, 2016

Top