An unconventional News Portal.

ಕುಂಟು ನೆಪ ಬಿಟ್ಟು ಒತ್ತಡವಿಲ್ಲದೆ ಬದುಕಲು ಎಂಟು ದಾರಿಗಳು!

ಕುಂಟು ನೆಪ ಬಿಟ್ಟು ಒತ್ತಡವಿಲ್ಲದೆ ಬದುಕಲು ಎಂಟು ದಾರಿಗಳು!

ಆಧುನಿಕ ಯುಗದಲ್ಲಿ ಕಾಲದ ಜೊತೆ ಓಟಕ್ಕಿಳಿದಿರುವ ಮನುಷ್ಯ ವಿಪರೀತ ಒತ್ತಡಗಳನ್ನು ಸೃಷ್ಟಿಸಿಕೊಂಡಿದ್ದಾನೆ. ಸ್ಪರ್ಧಾತ್ಮಕವಾಗಿರುವ ಈ ಸಮಯದಲ್ಲಿ ಪ್ರತಿಯೊಬ್ಬರು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕಾದರೆ ಇದು ಅನಿವಾರ್ಯ ಕೂಡ. ಇವತ್ತು ಖಾಸಗೀ ಜೀವನಕ್ಕೂ ಸಮಯವನ್ನು ನೀಡಲಾಗದ ಪರಿಸ್ಥಿತಿಯಿದೆ. ಇದರಿಂದಾಗಿ ಮಾನಸಿಕ ಒತ್ತಡಗಳು ಸಹಜವಾಗಿಯೇ ಹೆಚ್ಚಾಗುತ್ತಿವೆ. ಇದರ ಪರಿಣಾಮ ದೈಹಿಕ ಆರೋಗ್ಯದ ಮೇಲೂ ಬೀಳುತ್ತದೆ. ಹೀಗಾಗಿ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವ ಕಲೆಯನ್ನು ರೂಢಿಸಿಕೊಳ್ಳುವುದು ಒಳ್ಳೆಯದು. ಅದಕ್ಕಾಗಿ ಒಂದಷ್ಟು ಟಿಪ್ಸ್ ಇಲ್ಲಿದೆ.

ಆರೋಗ್ಯಪೂರ್ಣ ಆಹಾರ ಸೇವನೆ:

ಆಹಾರಕ್ಕೆ ನಮ್ಮ ಜೀವನದಲ್ಲಿ ಮಹತ್ವದ ಪಾತ್ರವಿದೆ. ದೈಹಿಕ ಮಾತ್ರವಲ್ಲ ಮಾನಸಿಕ ಆರೋಗ್ಯಕ್ಕೂ ಆಹಾರ ಬಹಳ ಮುಖ್ಯ. ಅದರಲ್ಲೂ ಮೀನು, ಮೊಟ್ಟೆ  ಹಾಗೂ ಕಾಳುಗಳು ಮೆದುಳನ್ನು ಚುರುಕುಗೊಳಿಸಿ ಮನಸ್ಸನ್ನು ಪ್ರಶಾಂತಗೊಳಿಸುತ್ತವೆ.

ಉಸಿರಾಟದ ವ್ಯಾಯಾಮ:

ಉಸಿರಾಟ ಬದುಕಲು ಎಷ್ಟು ಅಗತ್ಯವೋ ಮಾನಸಿಕ ಆರೋಗ್ಯದ ಮೇಲೆಯೂ ಅಷ್ಟೇ ಪರಿಣಾಮ ಬೀರುತ್ತದೆ. ಒಟ್ಟಾರೆಯಾದ ಅಥವಾ ಸುದೀರ್ಘವಲ್ಲದ ಉಸಿರಾಟ ಒತ್ತಡಕ್ಕೆ ಕಾರಣವಾಗುತ್ತದೆ. ಇದಕ್ಕಾಗಿ ಕೆಲವು ಸರಳವಾದ ಉಸಿರಾಟದ ವ್ಯಾಯಾಮಗಳನ್ನು ಮಾಡಿಕೊಳ್ಳಬೇಕು. ಕಣ್ಣನ್ನು ಮುಚ್ಚಿಕೊಂಡು 8 ರವರೆಗೆ ಎಣಿಸುವವರೆಗೆ ಸುದೀರ್ಘವಾಗಿ ಉಸಿರನ್ನು ತೆಗೆದುಕೊಳ್ಳಬೇಕು. ಹಾಗೂ ಮತ್ತೆ 8 ಎಣಿಸುತ್ತಾ ಉಸಿರನ್ನು ಬಿಡಬೇಕು. ಈ ರೀತಿ ಮತ್ತೆ ಮತ್ತೆ ಮಾಡುತ್ತಿದ್ದರೆ ಉಸಿರಾಟಕ್ಕೆ ಅತ್ಯುತ್ತಮ ವ್ಯಾಯಾಮವಾದಂತಾಗುತ್ತದೆ.

ಸರಿಯಾದ ನಿದ್ದೆ:

ನಿದ್ದೆಗೂ ಒತ್ತಡಕ್ಕೂ ತೀರಾ ಹತ್ತಿರದ ಸಂಬಂಧವಿದೆ. ಒಳ್ಳೆಯ ನಿದ್ದೆ ಮನಸ್ಸಿಗೆ ಅತ್ಯುತ್ತಮ ವಿಶ್ರಾಂತಿಯನ್ನು ನೀಡುತ್ತದೆ. ಹೀಗಾಗಿ ಸರಿಯಾದ ಸಮಯಕ್ಕೆ ನಿದ್ದೆ ಮಾಡಿದರೆ ಮಾನಸಿಕ ಒತ್ತಡವನ್ನು ದೂರ ಮಾಡಬಹುದು

ಗಾರ್ಡನಿಂಗ್:

ಒಂದೇ ಕೆಲಸದಲ್ಲಿ ಮಗ್ನವಾಗಿರುವುದರಿಂದ ಮನಸ್ಸು ಜಡವಾಗುತ್ತದೆ. ಹೀಗಾಗಿ ಒಂದಷ್ಟು ಹೊತ್ತು ಇತರ ಕಾರ್ಯದಲ್ಲಿ ತೊಡಗಿದರೆ ಉತ್ತಮ. ಅದರಲ್ಲೂ ನಿಮಗೆ ಗಾರ್ಡನಿಂಗ್ ಮಾಡೋದು ಇಷ್ಟವಿದ್ದರೆ, ಮನಸ್ಸು ಮತ್ತಷ್ಟು ಚಟುವಟಿಕೆಯಿಂದ ಇರಲು ಇದೊಂದು ಒಳ್ಳೆಯ ಹವ್ಯಾಸ.

ಚಟುವಟಿಕೆಯಿಂದಿರುವುದು:

ಒತ್ತಡದ ಕೆಲಸದಿಂದ ಸ್ವಲ್ಪ ಹೊತ್ತು ಹೊರಗಡೆ ಬಂದು ಬೇರೆ ಕೆಲಸಗಳಲ್ಲಿ ನಿರತವಾಗಬೇಕು. ಆಗ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ, ನಾಯಿಯ ಜೊತೆ ವಾಕಿಂಗ್ ಮಾಡುವುದು, ಆಟದಲ್ಲಿ ಪಾಲ್ಗೊಳ್ಳುವುದು ಒತ್ತಡವನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ.

ಕುಟುಂಬದೊಂದಿಗೆ ಸಮಯ ಕಳೆಯುವುದು :

ಕುಟುಂಬ ಅಥವಾ ಪ್ರೀತಿ ಪಾತ್ರರೊಂದಿಗೆ ಸಮಯವನ್ನು ಕಳೆಯುವುದು ಮನಸ್ಸಿನ ಒತ್ತಡಗಳಿಂದ ದೂರವಾಗಲು ಸಹಾಯವಾಗುತ್ತದೆ. ಅದರಲ್ಲೂ ಗೆಳೆಯ/ಗೆಳತಿ ಅಥವಾ ಇನ್ಯಾರಾದ್ರೂ ಆಪ್ತರನ್ನು ಅಪ್ಪಿಕೊಂಡು ಭಾವನೆ ವ್ಯಕ್ತಪಡಿಸಿದರೆ ಮನಸ್ಸಿನ ಭಾರ ಕಡಿಮೆಯಾಗುತ್ತದೆ ಎಂದು ಸಂಶೋಧನೆಗಳೇ ಹೇಳುತ್ತವೆ.

ನಗೆಚಟಾಕಿ ಸಿಡಿಸಿ ಮನಸ್ಸನ್ನು ಉಲ್ಲಾಸಿತಗೊಳಿಸುವುದು:

ಕೆಲಸದ ಒತ್ತಡಗಳ ಕಾರಣದಿಂದ ದಿನವಿಡೀ ಗಂಭೀರವಾಗಿಯೇ ಇರುತ್ತೇವೆ. ಹೀಗಾಗಿ ಅವಕಾಶ ಸಿಕ್ಕಾಗ ಗೆಳೆಯರೊಂದಿಗೆ ಸೇರಿ ತಮಾಷೆ ಮಾಡುವುದು ಹಾಸ್ಯಚಟಾಕಿಗಳನ್ನು ಸಿಡಿಸುವುದು ಒತ್ತಡಗಳನ್ನು ಕಡಿಮೆ ಮಾಡುತ್ತದೆ.

ಗೆಳೆಯರೊಂದಿಗೆ ಭಾವನೆಗಳನ್ನು ಹಂಚಿಕೊಳ್ಳುವುದು:

ಮನಸ್ಸಿನೊಳಗೆ ಹಂಚಿಕೊಳ್ಳಲಾಗದ ಅನೇಕ ದುಃಖಗಳು ಇರುತ್ತವೆ. ಇದು ನಮ್ಮ ಮನಸ್ಸನ್ನು ಒತ್ತಡಕ್ಕೆ ಒಳಗಾಗಿಸುತ್ತಲೇ ಇರುತ್ತದೆ. ಹೀಗಾಗಿ ಇದನ್ನು ಕಡಿಮೆ ಮಾಡಲು ಗೆಳೆಯರೊಂದಿಗೆ ನಮ್ಮ ಭಾವನೆಗಳನ್ನು ಹಂಚಿಕೊಳ್ಳಬೇಕು.

ENTER YOUR E-MAIL

Name
Email *
February 2017
M T W T F S S
« Jan    
 12345
6789101112
13141516171819
20212223242526
2728  

Top