An unconventional News Portal.

ನೀವು ಬಳಸುವ ಕಂಪ್ಯೂಟರ್ ಡಿಸ್ಕ್ ಹೆಸರು ಯಾಕೆ ‘ಸಿ’ಯಿಂದ ಶುರುವಾಗುತ್ತವೆ? ‘ಎ’, ‘ಬಿ’ ಎಲ್ಲಿ ಹೋದವು?

ನೀವು ಬಳಸುವ ಕಂಪ್ಯೂಟರ್ ಡಿಸ್ಕ್ ಹೆಸರು ಯಾಕೆ ‘ಸಿ’ಯಿಂದ ಶುರುವಾಗುತ್ತವೆ? ‘ಎ’, ‘ಬಿ’ ಎಲ್ಲಿ ಹೋದವು?

ನೀವು ಬಳಸುವ ಕಂಪ್ಯೂಟರಿನಲ್ಲಿ ಡಿಸ್ಕ್ ಡ್ರೈವ್ಗಳಿರುತ್ತವಲ್ಲ, ಅವುಗಳ ಹೆಸರೇಕೆ ‘ಸಿ’ ಇಂದ ಶುರುವಾಗುತ್ತದೆ? ಯಾವತ್ತಾದರೂ ಈ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಹುಟ್ಟಿದೆಯಾ? ‘ಎ’ ಮತ್ತು ‘ಬಿ’ ಡ್ರೈವ್ಗಳೆಲ್ಲಿ ಮಾಯವಾಗಿವೆ? ಹೀಗೊಂದು ಟೆಕ್ ಪ್ರಶ್ನೆಗೆ ಉತ್ತರ ಇಲ್ಲಿದೆ.

ಕಂಪ್ಯೂಟರ್ ಕಂಡು ಹಿಡಿದ ಸಮಯದಲ್ಲಿ ಇವತ್ತಿನ ಹಾಗೆ ಅವುಗಳಲ್ಲಿ ಮಾಹಿತಿ ಸಂಗ್ರಹಿಸಿ ಇಡಲು ಡ್ರೈವ್ ವ್ಯವಸ್ಥೆಯೇ ಇರಲಿಲ್ಲ. ಅವತ್ತಿಗೆ ಮಾಹಿತಿ ಸಂಗ್ರಹಿಸಲು, ಇನ್ನೊಬ್ಬರ ಜೊತೆ ಹಂಚಿಕೊಳ್ಳಲು ಬಳಸುತ್ತಿದ್ದದ್ದು ಪ್ಲಾಪಿ ಡ್ರೈವ್ಗಳನ್ನು. ಪ್ಲಾಪಿಗಳ ಹೆಸರನ್ನು ನೀವು ಕೇಳಿರುತ್ತೀರಿ. ಆರಂಭದಲ್ಲಿ ಕಪ್ಪು ಬಣ್ಣದಲ್ಲಿ, ನಂತರ ನಾನಾ ಬಣ್ಣಗಳಲ್ಲಿ ಬಂದ ಚೌಕಾಕಾರದ ಮೆಟಲ್ ಸೀಲ್ ಹೊಂದಿದ್ದ ಪ್ಲಾಪಿಗಳು ಎರಡು ಭಿನ್ನ ಗಾತ್ರದಲ್ಲಿ ಬರುತ್ತಿದ್ದವು. ಅವುಗಳಿಗೆ ‘ಎ’ ಮತ್ತು ‘ಬಿ’ ಎಂದು ಹೆಸರಿಡಲಾಗಿತ್ತು.

ಅವತ್ತಿನ ಪ್ಲಾಪಿ ಡಿಸ್ಕ್.

ಅವತ್ತಿನ ಪ್ಲಾಪಿ ಡಿಸ್ಕ್.

ಹೀಗಾಗಿ, ಮುಂದೆ ಪ್ಲಾಪಿಗಳು ಜಾಗದಲ್ಲಿ ಡ್ರೈವ್ಗಳು ಬಂದ ಕಾಲದಲ್ಲಿ ಅವುಗಳನ್ನು ‘ಸಿ’ಯಿಂದ ಗುರುತಿಸಲು ಶುರುಮಾಡಲಾಯಿತು. ಈ ಮೂಲಕ ಮೊದಲು ಎರಡು ಡ್ರೈವ್ಗಳಿದ್ದವು ಎಂಬ ಕುರುಹುಗಳನ್ನು ಬಿಡಲಾಯಿತು.

80ರ ದಶಕದ ನಂತರ ಬಂದ ಆಂತರಿಕ ಸಂಗ್ರಹ (ಇಂಟರ್ನಲ್ ಮೆಮೊರಿ) ಡ್ರೈವ್ಗಳು ಕಂಪ್ಯೂಟರ್ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಕ್ರಾಂತಿ ಮಾಡಿದವು. ಗಣಕ ಯಂತ್ರದ ಸಾಧ್ಯತೆಗಳನ್ನು ಇವು ಹೆಚ್ಚಿಸಿದವು. ಹೀಗಾಗಿ, ‘ಸಿ’ಯಿಂದ ಶುರುವಾಗುವ ಡ್ರೈವ್ಗಳು, ‘ಡಿ, ‘ಇ’ ಹೀಗೆ ಮುಂದುವರಿಯುತ್ತವೆ. ಇವತ್ತು ಬಳಸುವ ಪೆನ್ ಡ್ರೈವ್, ಹಾರ್ಡ್ ಡಿಸ್ಕ್ಗಳು  ಇಂಗ್ಲಿಷ್ ವರ್ಣಮಾಲೆಯ ನಂತರದ ಅಕ್ಷರಗಳಿಂದ ಗುರುತಿಸಲ್ಪಡುತ್ತಿವೆ.

Top