An unconventional News Portal.

‘ವಿಜ್ಞಾನ ವಿಸ್ಮಯ’: ಬಾಹ್ಯಾಕಾಶ ಕೇಂದ್ರದಲ್ಲೂ ಮೊಗ್ಗರಳಿ, ಹೂವಾದಾಗ…!

‘ವಿಜ್ಞಾನ ವಿಸ್ಮಯ’: ಬಾಹ್ಯಾಕಾಶ ಕೇಂದ್ರದಲ್ಲೂ ಮೊಗ್ಗರಳಿ, ಹೂವಾದಾಗ…!

ಜನವರಿ 16, 2016..

ಅಮೆರಿಕಾದ ಗಗನಯಾತ್ರಿ ಸ್ಕಾಟ್ ಕೆಲ್ಲಿ ಮೇಲಿನ ಚಿತ್ರವನ್ನು ಭೂಮಿಗೆ ರವಾನಿಸಿದ್ದರು. ಬಾಹ್ಯಾಕಾಶದಲ್ಲಿ ಬೆಳೆದ ಮೊದಲ ಹೂವಿನ ಚಿತ್ರವಿದು. ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ (ನಾಸಾ) ಪ್ರಾಯೋಜಿತ ‘ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ’ದಲ್ಲಿ ಈ ಜೀನಿಯಾ ಹೂವನ್ನು ಬೆಳೆಯಲಾಗಿತ್ತು.

2015ರ ನವೆಂಬರ್ 16ರಂದು ಆಕಾಶದಲ್ಲಿ ಹೂವು ಬೆಳೆಯುವ ಪ್ರಯತ್ನ ಆರಂಭವಾಗಿತ್ತು. ಅವತ್ತು ಅಮೆರಿಕಾದ ಇನ್ನೊಬ್ಬ ಗಗನಯಾತ್ರಿ ಕ್ಜೆಲ್ ಲಿಂಡ್’ಗ್ರೆನ್ ಜೀನಿಯಾ ಬೀಜವನ್ನು ಬಿತ್ತಿದ್ದರು. ಅದರೆ ಏನೇ ಮಾಡಿದರೂ ಗಿಡ ಸೊರಗಿ ಹೋಗಿತ್ತು. ಕ್ಜೆಲ್ ಲಿಂಡ್’ಗ್ರೆನ್ ಜೊತೆಗಿದ್ದ ಸ್ಕಾಟ್ ಕೆಲ್ಲಿ ಸಹಾಯಕ್ಕಾಗಿ ಭೂಮಿಯಲ್ಲಿದ್ದ ನಿಯಂತ್ರಣ ಕೇಂದ್ರಕ್ಕೆ ಮೊರೆ ಇಟ್ಟಿದ್ದರು. ಕೊನೆಗೆ ಇಲ್ಲಿನ ವಿಜ್ಞಾನಿಗಳು ಬಾಹ್ಯಾಕಾಶದಲ್ಲಿ ಗಿಡ ಹೇಗೆ ಬೆಳೆಸಬೇಕೆಂಬ ಕೈಪಿಡಿ (The Zinnia Care Guide for the On-Orbit Gardener) ಯನ್ನು ಸಿದ್ಧಪಡಿಸಿ ವಿಜ್ಞಾನಿಗಳಿಗೆ ಕಳುಹಿಸಿ ಕೊಟ್ಟಿದ್ದರು.

ವಿಜ್ಞಾನಿಗಳ ಪ್ರಯತ್ನದ ಫಲವಾಗಿ ಜನವರಿ 12ರಂದು ಗಿಡದಲ್ಲಿ ಮೊದಲ ಮೊಗ್ಗುಗಳು ಕಾಣಿಸಿಕೊಂಡವು. ಬೀಜ ಬಿತ್ತಿ ಸರಿಯಾಗಿ ಮೂರು ತಿಂಗಳು ಕಳೆದಾಗ ಹೂವು ಅರಳಿತ್ತು. ಇದನ್ನು ನೋಡಿದ ಕೆಲ್ಲಿ ಫೋಟೋ ಕ್ಲಿಕ್ಕಿಸಿ “Yes, there are other life forms in space! #SpaceFlower #YearInSpace” ಎಂದು ಅಡಿ ಬರಹ ಬರೆದು ಭೂಮಿಗೆ ರವಾನಿಸಿದರು. ಅವತ್ತು ಅರಳಿದ ಹೂವಿನ ಪಕಳೆಗಳನ್ನು ನೋಡಿ ಭೂಮಿ ಮೇಲಿದ್ದ ವಿಜ್ಞಾನಿಗಳ ಮೊಗವೂ ಅರಳಿತ್ತು.

ಗುರುತ್ವಾಕರ್ಷಣಾ ಶಕ್ತಿಯ ಕೊರತೆ ಇದ್ದ ಜಾಗದಲ್ಲಿ ಗಿಡಗಳು ಹೇಗೆ ಬೆಳೆಯುತ್ತವೆ ಎಂಬುದನ್ನು ಅಧ್ಯಯನ ಮಾಡಲು ವಿಜ್ಞಾನಿಗಳಿಗೆ ಈ ಗಿಡ ಸಹಾಯ ಮಾಡಿತ್ತು.

ಚಿತ್ರ ಕೃಪೆ: ನಾಸಾ

ENTER YOUR E-MAIL

Name
Email *
January 2017
M T W T F S S
« Dec    
 1
2345678
9101112131415
16171819202122
23242526272829
3031  

Top