An unconventional News Portal.

ರಕ್ತಸಿಕ್ತ ಮಧ್ಯಪ್ರಾಚ್ಯ: ಕಳೆದ 72 ಗಂಟೆಗಳಲ್ಲಿ ಐಸಿಲ್ ಸರಣಿ ಸ್ಫೋಟಕ್ಕೆ 148 ಜನರ ಬಲಿ

ರಕ್ತಸಿಕ್ತ ಮಧ್ಯಪ್ರಾಚ್ಯ: ಕಳೆದ 72 ಗಂಟೆಗಳಲ್ಲಿ ಐಸಿಲ್ ಸರಣಿ ಸ್ಫೋಟಕ್ಕೆ 148 ಜನರ ಬಲಿ

ಕಳೆದ 72 ಗಂಟೆಗಳು..

ಸಿರಿಯಾದಲ್ಲಿ ಐಸಿಲ್ ಉಗ್ರರ ಅಟ್ಟಹಾಸಕ್ಕೆ ಅಸುನೀಗಿದವರ ಸಂಖ್ಯೆ 148.

ಸಿರಿಯಾದ ‘ಬಷರ್ ಅಲ್ ಅಸದ್’ ಸರಕಾರ ಹಿಡಿತ ಹೊಂದಿರುವ ಭಾಗಗಳ ಮೇಲೆ ‘ಇಸ್ಲಾಮಿಕ್ ಸ್ಟೇಟ್ ಆಫ್ ಸಿರಿಯಾ ಆಂಡ್ ಲೆವೆನೆಂಟ್’ (ಐಸಿಲ್) ಉಗ್ರರು ಸೋಮವಾರ ಮುಗಿಬಿದ್ದಿದ್ದಾರೆ. ಒಂದೇ ದಿನ ಏಕಕಾಲದಲ್ಲಿ ಸಿರಿಯಾದ ಕರಾವಳಿ ನಗರಗಳಾದ ಟಾರ್ಟಸ್ ಮತ್ತು ಜೆಬ್ಲಾಹ್ ಪಟ್ಟಣಗಳ ಬಸ್ ನಿಲ್ದಾಣ, ಆಸ್ಪತ್ರೆ ಮತ್ತು ಇತರೆ ಕಡೆಗಳಲ್ಲಿ ಗಂಭೀರ ಸ್ವರೂಪದ ಕಾರ್ ಬಾಂಬ್ ಸ್ಪೋಟ ಮತ್ತು ಆತ್ಮಾಹುತಿ ದಾಳಿಗಳು ನಡೆದಿವೆ. ಸರಣಿ ಬಾಂಬ್ ದಾಳಿಗಳಲ್ಲಿ ನಾಲ್ಕು ಟಾರ್ಟಸ್ನಲ್ಲಿ ಮತ್ತು ಮೂರು ಜೆಬ್ಲಾಹ್ನಲ್ಲಿ ಸ್ಪೋಟಗೊಂಡಿದ್ದು ಒಟ್ಟು 7 ಪ್ರಭಲ ಬಾಂಬ್ ಸ್ಪೋಟಗಳು ಸಂಭವಿಸಿವೆ. ಇವುಗಳಲ್ಲಿ ಕಾರ್ ಬಾಂಬ್ ಮತ್ತು ಆತ್ಮಾಹುತಿ ಬಾಂಬರ್ಗಳು ಸೇರಿದ್ದಾರೆ. ಎರಡೂ ಕಡೆಗಳಲ್ಲಿ ಏಕೈಕ ಕಾರ್ ಬಾಂಬ್ ದಾಳಿ ನಡೆದಿದ್ದರೆ ಇನ್ನುಳಿದ ಬಾಂಬ್ಗಳು ಆತ್ಮಾಹುತಿ ಬಾಂಬರ್ಗಳ ಮೂಲಕ ಸ್ಪೋಟಗೊಂಡಿವೆ. ಈ ಎಲ್ಲಾ ಘಟನೆಗಳಲ್ಲಿ ಈ ವರೆಗೆ 148 ಉಗ್ರರು ಸಾವನ್ನಪ್ಪಿದ್ದು ಐಸಿಲ್ ಘಟನೆಯ ಹೊಣೆ ಹೊತ್ತುಕೊಂಡಿದೆ.

ಆದರೆ ಸಿರಿಯಾದ ಸರಕಾರಿ ಮಾಧ್ಯಮಗಳು ಮಾತ್ರ ಸತ್ತವರ ಸಂಖ್ಯೆ 78 ಎಂದು ವರದಿ ಮಾಡಿವೆ.

ಬಸ್ ನಿಲ್ದಾಣದಲ್ಲಿ ಕಾರ್ ಬಾಂಬ್ ಸ್ಪೋಟಗೊಂಡ ಪರಿಣಾಮ 12ಕ್ಕೂ ಹೆಚ್ಚು ಜನರ ಸಾವು(ಎಪಿ)

ಬಸ್ ನಿಲ್ದಾಣದಲ್ಲಿ ಕಾರ್ ಬಾಂಬ್ ಸ್ಪೋಟಗೊಂಡ ಪರಿಣಾಮ 12ಕ್ಕೂ ಹೆಚ್ಚು ಜನರ ಸಾವು(ಎಪಿ)

ವಿಶೇಷ ಅಂದ್ರೆ ಟಾರ್ಟಸ್ನಲ್ಲಿ ರಷ್ಯಾದ ನೌಕಾ ಸೇನೆ ಇದ್ದರೆ ಜೆಬ್ಲಾಹ್ನಲ್ಲಿ ರಷ್ಯಾದ ವಾಯುನೆಲೆ ಇದೆ. ರಷ್ಯಾ ಐಸಿಲ್ ಸೇರಿದಂತೆ ಬಂಡುಕೋರರ ವಿರುದ್ಧ ಹೋರಾಡಲು ಅಧ್ಯಕ್ಷ ಅಸದ್’ಗೆ ಮಿಲಿಟರಿ ಬೆಂಬಲ ನೀಡಿದೆ. ಹೀಗಾಗಿ ಐಸಿಲ್ ಕೆಂಗಣ್ಣಿಗೆ ಗುರಿಯಾಗಿದೆ.

ಒಂದು ಕಡೆ ಸಿರಿಯಾದಲ್ಲಿ ಐಸಿಲ್ ಪ್ರತಾಪ ತೋರುತ್ತಿದ್ದರೆ ಇರಾಕ್ನಲ್ಲಿ ಅದು ನೆಲೆ ಕಳೆದುಕೊಳ್ಳುತ್ತಿದೆ. ಬಹಳ ಮುಖ್ಯವಾಗಿ ತನ್ನ ಹಿಡಿತದಲ್ಲಿದ್ದ ಪ್ರಮುಖ ಇರಾಕ್ ನಗರ ಫಲುಜಾವನ್ನು ಕಳೆದುಕೊಳ್ಳುವ ಹಾದಿಯಲ್ಲಿದೆ. ಅಲ್ಲಿ ಶಿಯಾ ಬಂಡುಕೋರರು ಪೋಲೀಸ್, ಇರಾಕ್ ಸೇನೆ ಮತ್ತು ಇತರ ಸಂಘಟನೆಗಳ ಬಲದಿಂದ ಐಸಿಲ್ ಮೇಲೆ ಯುದ್ಧ ಸಾರಿದ್ದು ಉಗ್ರ ಸಂಘಟನೆಯ ನಿದ್ದೆ ಗೆಡಿಸಿದೆ.  ಇದೇ ರೀತಿ ಈಗಾಗಲೇ ಹಲವಾರು ಕಡೆಗಳಿಂದ ಐಸಿಲ್’ನ್ನು ಜನರೇ ಕಿತ್ತೊಗೆದಿದ್ದಾರೆ.

ಮುಗಿಯದ ಸಿರಿಯಾ ಆಂತರಿಕ ಯುದ್ಧ

2011ರಲ್ಲಿ ‘ಅರಬ್ ಸ್ಪ್ರಿಂಗ್’ನೊಂದಿಗೆ ಹುಟ್ಟಿಕೊಂಡ ಕಲಹ ಸಿರಿಯಾದಲ್ಲಿ ನಿಲ್ಲುವಂತೆ ಕಾಣುತ್ತಿಲ್ಲ. ಕಳೆದ ಐದು ವರ್ಷಗಳಲ್ಲಿ ಇಲ್ಲೀವರೆಗೆ 2,50,000 ಹೆಚ್ಚು ಜನ ಈ ಆಂತರಿಕ ಯುದ್ಧದಲ್ಲಿ ಸಾವನ್ನಪ್ಪಿದ್ದಾರೆ. ಈ ಯುದ್ಧ ಯಾವ ಪರಿ ಇದೆ ಅಂದರೆ ಸಿರಿಯಾ ಜನಸಂಖ್ಯೆಯ ಅರ್ಧದಷ್ಟು ಅಂದರೆ ಸುಮಾರು ಒಂದು ಕೋಟಿ 10 ಲಕ್ಷ ಜನ  ತಮ್ಮ ಸ್ವಂತ ನೆಲೆ ಕಳೆದುಕೊಂಡಿದ್ದಾರೆ. 10 ಲಕ್ಷಕ್ಕೂ ಹೆಚ್ಚು ಜನ ದೇಶ ಬಿಟ್ಟು ಯೂರೋಪ್ ಮುಂತಾದ ಖಂಡಗಳಿಗೆ ವಲಸೆ ಹೋಗಿದ್ದು, ವಲಸೆಗಾರರ ಸಂಖ್ಯೆಯೇ ಈಗ ಜಾಗತಿಕ ಸಮಸ್ಯೆಯಾಗಿ ಬೆಳೆದು ನಿಂತಿದೆ.

ಘಟನೆ ಬೆನ್ನಲ್ಲೇ ರಷ್ಯಾ ಅಧ್ಯಕ್ಷ ವ್ಲಾಡಿಮೀರ್ ಪುತಿನ್ ತಮ್ಮ ಮಾತನ್ನು ಪುನರುಚ್ಚರಿಸಿದ್ದು, ಅಸದ್ ಸರಕಾರದ ಜತೆಯಲ್ಲಿ ಭಯೋತ್ಪಾದನೆ ವಿರುದ್ಧ ಹೋರಾಡುವುದಾಗಿ ಖಚಿತಪಡಿಸಿದ್ದಾರೆ. ಇದನ್ನು ವಿರೋಧಿಸಿ ಐಸಿಲ್ ಸಾಮಾನ್ಯ ನಾಗರಿಕರ ಮೇಲೆ ಮೇಲಿಂದ ಮೇಲೆ ದಾಳಿ ನಡೆಸುತ್ತಿದೆ.

ಸ್ಥಳದಲ್ಲಿರುವ ಅಲ್ ಜಜೀರಾ ಪ್ರತಿನಿಧಿಯ ಪ್ರಕಾರ, ‘ಸಿರಿಯಾ ನಾಗರಿಕ ಯುದ್ಧದಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿ ಸರಣಿ ಬಾಂಬ್ ಸ್ಪೋಟ ನಡೆದಿದ್ದು ಇದೇ ಮೊದಲು’.

ಮೂರು ದಿನಗಳ ಕಾಳಗದಲ್ಲಿ 148 ಜನ ಸಾವನ್ನಪ್ಪಿದ್ದರೂ ಮುಖ್ಯ ವಾಹಿನಿ ಮಾಧ್ಯಮಗಳು ಈ ಸುದ್ದಿಯನ್ನು ಕಡೆಗಣಿಸಿವೆ. ಅದರಲ್ಲೂ ಕೆಲವೇ ಕೆಲವು ಅಂತರಾಷ್ಟ್ರೀಯ ಮಾಧ್ಯಮಗಳು ಈ ಘಟನೆಯ ವರದಿ ಮಾಡುತ್ತಿವೆ. ಅದೇ ಕಳೆದ ವರ್ಷ ಫ್ರಾನ್ಸ್ನ ‘ಪ್ಯಾರಿಸ್’ ದಾಳಿಯಲ್ಲಿ 130 ಜನ ಸತ್ತಾಗ ಇದೇ ಮಾಧ್ಯಮಗಳು ದಿನಗಟ್ಟಲೆ ನೇರ ಪ್ರಸಾರ ನೀಡಿದ್ದನ್ನು ಸ್ಮರಿಸಬಹುದು.

ಚಿತ್ರ: ದಿ ಡೈಲಿ ಸ್ಟಾರ್

ENTER YOUR E-MAIL

Name
Email *
March 2017
M T W T F S S
« Feb    
 12345
6789101112
13141516171819
20212223242526
2728293031  

Top