An unconventional News Portal.

10 ದಿನ ತಮಿಳುನಾಡಿಗೆ 15,000 ಕ್ಯೂಸಿಕ್ ನೀರು ಬಿಡಲು ಕರ್ನಾಟಕಕ್ಕೆ ಸುಪ್ರೀಂ ಸೂಚನೆ

10 ದಿನ ತಮಿಳುನಾಡಿಗೆ 15,000 ಕ್ಯೂಸಿಕ್ ನೀರು ಬಿಡಲು ಕರ್ನಾಟಕಕ್ಕೆ ಸುಪ್ರೀಂ ಸೂಚನೆ

ನಿರೀಕ್ಷೆಯಂತೆ ತಮಿಳುನಾಡಿಗೆ ಪ್ರತಿದಿನ 15 ಸಾವಿರ ಕ್ಯೂಸೆಕ್ನಂತೆ 10 ದಿನಗಳ ಕಾಲ ಅಂದಾಜು 13 ಟಿಎಂಸಿ ಕಾವೇರಿ ನೀರು ಬಿಡುವಂತೆ ಸುಪ್ರೀಂ ಕೋರ್ಟ್ ಕರ್ನಾಟಕ ಸರಕಾರಕ್ಕೆ ಆದೇಶ ನೀಡಿದೆ. ಆದೇಶದ ಬೆನ್ನಿಗೆ ಎಂದಿನಂತೆ ರಾಜ್ಯದಲ್ಲಿ ರೈತರ ಆಕ್ರೋಶ ಭುಗಿಲೆದ್ದಿದೆ.

ಸೋಮವಾರ ಸುಪ್ರೀಂ ಕೋರ್ಟ್ನ ದೀಪಕ್ ಮಿಶ್ರಾ ನೇತೃತ್ವದ ದ್ವಿ ಸದಸ್ಯ ಪೀಠ ಕರ್ನಾಟಕ ಸರಕಾರಕ್ಕೆ ಈ ಆದೇಶ ನೀಡಿದೆ. ನೀರು ಬಿಡುವಂತೆ ಸೂಚನೆ ನೀಡಿದ ಕೋರ್ಟ್ ಸಂಜೆ ಮೊದಲು ಬಿಡಲು ಸಾಧ್ಯವಿರುವ ನೀರಿನ ಪ್ರಮಾಣದ ಮಾಹಿತಿ ಕೇಳಿದೆ.

ಆದೇಶದ ಬೆನ್ನಿಗೇ ರಾಜ್ಯದ ಅಲ್ಲಲ್ಲಿ ಪ್ರತಿಭಟನೆಗಳು ಆರಂಭವಾಗಿವೆ. ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಮುಂದೆ ರೈತರು ಆಕ್ರೋಷ ವ್ಯಕ್ತಪಡಿಸಿದ್ದು, ನಾಳೆ ಜಿಲ್ಲಾ ಬಂದ್ಗೆ ಕಾವೇರಿ ರೈತ ಹೋರಾಟ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ. ಮಾದೇಗೌಡ ಕರೆ ನೀಡಿದ್ದಾರೆ.

ಮಂಡ್ಯದ ಗಾಂಧಿ ಭವನದಲ್ಲಿ ರೈತರೊಂದಿಗೆ ಸಭೆ ನಡೆಸುತ್ತಿರುವ ಅವರು ಮುಂದಿನ ತೀರ್ಮಾನಗಳ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ.

ಇನ್ನು ತೀರ್ಪಿನ ಬೆನ್ನಿಗೆ ಕೆಆರ್ಎಸ್ ಜಲಾಶಯಕ್ಕೆ ರೈತರು ಮುತ್ತಿಗೆ ಹಾಕುವ ಪ್ರಯತ್ನ ನಡೆಸಿದರು. ಈ ಸಂದರ್ಭ ಪೊಲೀಸರು ಮತ್ತು ರೈತರ ನಡುವೆ ತಳ್ಳಾಟ ಮತ್ತು ಮಾತಿನ ಚಕಮಕಿ ನಡೆದಿದೆ.

ಆದೇಶದ ಬೆನ್ನಿಗೆ ಹೇಳಿಕೆ ನೀಡಿರುವ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ “ರಾಜ್ಯದ ಕಾನೂನು ತಜ್ಞರ ತಂಡ ಸರಿಯಾಗಿ ಕಾರ್ಯ ನಿರ್ವಹಿಸಿದೆ. ಸುಪ್ರೀಂ ಕೋರ್ಟಿಗೆ ಸರಿಯಾದ ಮಾಹಿತಿಗಳನ್ನು ನೀಡಿದ್ದೇವೆ. ನಮಗೆ ಕುಡಿಯಲು 40 ಟಿಎಂಸಿ ನೀರು ಬೇಕು. ರೈತರಿಗೆ ಬೆಳೆ ಬೆಳೆಯಲು ನೀರು ಬೇಕು. ಸೂಪರ್ ವೈಸರಿ ಕಮಿಟಿಯ ಮುಂದೆ ಮಾಹಿತಿ ನೀಡುತ್ತೇವೆ. ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ,” ಎಂದು ಹೇಳಿದ್ದಾರೆ.

ಇನ್ನು ಮೈಸೂರಿನಲ್ಲಿ ಹೇಳಿಕೆ ನೀಡಿರುವ ಕುರುಬೂರು ಶಾಂತ ಕುಮಾರ್, ಎಂ.ಬಿ ಫಾಟೀಲ್ ರಾಜೀನಾಮೆಗೆ ಒತ್ತಾಯಿಸಿದ್ದಾರೆ. ಕಾವೇರಿ ವಿಚಾರದಲ್ಲಿ ಫಾಲಿ ನಾರಿಮನ್ ವಾದ ಮಾಡುವಲ್ಲಿ ವಿಫಲವಾಗಿದ್ದಾರೆ ಎಂದು ಆಕ್ರೋಷ ವ್ಯಕ್ತಪಡಿಸಿರುವ ಅವರು ಸೆಪ್ಟೆಂಬರ್ 7ರಂದು ಸಾವಿರಾರು ಜನ ಕಬಿನಿಗೆ ಮುತ್ತಿಗೆ ಹಾಕಲಿದ್ದೇವೆ ಎಂದು ತಿಳಿಸಿದ್ದಾರೆ.

ತಮಿಳುನಾಡು ಕಾವೇರಿ ನೀರು ಬಿಡುವಂತೆ ಕೇಳಿಕೊಂಡಾಗ ಕರ್ನಾಟಕ ನಿರಾಕರಿಸಿತ್ತು. ಕೊನೆಗೆ ಇದು ನ್ಯಾಯಾಧಿಕರಣ ಮೆಟ್ಟಿಲೇರಿತ್ತು. ಈ ಸಂದರ್ಭ ದೆಹಲಿಯಲ್ಲಿ ಕರ್ನಾಟಕ ಪರ ವಕೀಲ ಫಾಲಿ ಎಸ್ ನಾರಿಮನ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿತ್ತು. ಈ ಸಂದರ್ಭ ನಾರಿಮನ್ ನೀರು ಬಿಡಲು ಸಿದ್ಧವಾಗುವಂತೆ ಸೂಚನೆಗಳನ್ನು ನೀಡಿದ್ದರು ಎನ್ನಲಾಗಿದೆ.

ಆದರೆ ಆಗಸ್ಟ್ 25ರಂದು ಹೇಳಿಕೆ ನೀಡಿದ್ದ ಸಿದ್ಧರಾಮಯ್ಯ ನಮ್ಮಲ್ಲಿ ನೀರಿನ ಕೊರತೆ ಇದೆ. ಹಾಗಾಗಿ ತಮಿಳುನಾಡಿಗೆ ಕೃಷಿಗೆ ನೀರು ಬಿಡಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಈಗ ಸುಪ್ರೀಂ ಕೋರ್ಟೇ ನೀರು ಬಿಡುವಂತೆ ಆದೇಶ ನೀಡಿದೆ. ಈ ಹಿನ್ನೆಲೆಯಲ್ಲಿ ಸಿಎಂ ನಿವಾಸದಲ್ಲಿ ಹಿರಿಯ ಸಚಿವರ ಸಭೆ ಆರಂಭವಾಗಿದೆ.

ಫೊಟೋ: ಎಎಫ್ಪಿ

ENTER YOUR E-MAIL

Name
Email *
January 2017
M T W T F S S
« Dec    
 1
2345678
9101112131415
16171819202122
23242526272829
3031  

Top