An unconventional News Portal.

ನೆನಪಿದೆಯಾ ‘ಬೇಬಿಸ್ ಡೇ ಔಟ್’: ಆ ಮುದ್ದು ಬೇಬಿ ಬಿನ್ ಈಗೇನಾಗಿದ್ದಾನೆ?

ನೆನಪಿದೆಯಾ ‘ಬೇಬಿಸ್ ಡೇ ಔಟ್’: ಆ ಮುದ್ದು ಬೇಬಿ ಬಿನ್ ಈಗೇನಾಗಿದ್ದಾನೆ?

ಒಂದು ತಲೆಮಾರಿಗೆ ಚಿಕ್ಕವಯಸ್ಸಿನಲ್ಲಿಯೇ ಹಾಲಿವುಡ್ಗೆ ತೆರೆದುಕೊಳ್ಳುವಂತೆ ಮಾಡಿದ್ದು, ‘ಬೇಬಿಸ್ ಡೇ ಔಟ್’ ಎಂಬ ಸಿನೆಮಾ. ಇದರಲ್ಲಿ ಪುಟ್ಟ ಮಗುವೊಂದು ಮೂವರು ಕಳ್ಳರಿಂದ ಅಪಹರಣಕ್ಕೆ ಈಡಾಗಿ, ಅವರಿಂದ ತಪ್ಪಿಸಿಕೊಂಡು ನಂತರ ತಾಯಿಯ ಮಡಿಲು ಸೇರುವ ಕತೆಯನ್ನು ಅದ್ಭುತವಾಗಿ ಕಟ್ಟಿಕೊಡಲಾಗಿದೆ. ಅಂದಹಾಗೆ, ಇಷ್ಟು ಹೇಳುತ್ತಿದ್ದಂತೆ ಇಡೀ ಸಿನೆಮಾ ನಿಮ್ಮ ಕಣ್ಣೆದುರಿಗೆ ಈಗಾಗಲೇ ಬಂದು ಹೋಗಿರುತ್ತದೆ. ಹೀಗಾಗಿ, ಕತೆಯ ಕುರಿತು ಮಾತು ಮುಂದುವರಿಸುವ ಅಗತ್ಯವಿದ್ದಂತೆ ಕಾಣಿಸುವುದಿಲ್ಲ.

ಅದರಾಚೆಗಿನ ಕುತೂಹಲ ಏನೆಂದರೆ, ಎರಡು ದಶಕಗಳ ಹಿಂದೆ ಬೆಳ್ಳಿ ತೆರೆಯ ಮೇಲೆ ಅದ್ಭುತ ನಟನೆ ಮೂಲಕ ಕಣ್ಮನ ಸೆಳೆದಿದ್ದ ಆ ಪುಟ್ಟ ಬಾಲಕನ ಈಗ ಏನಾಗಿದ್ದಾನೆ? ಅದನ್ನು ಹುಡುಕಿಕೊಂಡು ನಾವು ಹೊರಡುವ ಮುನ್ನವೇ ಸಾಕಷ್ಟು ಜನ ಸಮ್ ಶೋಧನೆಗಳನ್ನು ಮಾಡಿದ್ದಾರೆ. ಆದರ ಯಾರಿಗೂ ನಿಖರವಾಗಿ ಮಾಹಿತಿ ಸಿಕ್ಕಿಲ್ಲ. ಸದ್ಯ ಇರುವ ಮಾಹಿತಿ ಪ್ರಕಾರ, ಅವತ್ತು ‘ಬೇಬಿಸ್ ಡೇ ಔಟ್’ ಸಿನೆಮಾದ ಬೇಬಿ ಬಿನ್ ಪಾತ್ರದಲ್ಲಿ ನಟಿಸಿದ್ದು ಒಂದು ಮಗು ಅಲ್ಲ; ಬದಲಿಗೆ ತದ್ರೂಪವನ್ನು ಹೊಂದಿದ್ದ ಅವಳಿ ಜವಳಿ ಅಂತೆ!

ಜಾಕೋಬ್ ಜೋಸೆಫ್ ವಾರ್ಟನ್ ಮತ್ತು ಆಡಮ್ ರಾಬರ್ಟ್ ವಾರ್ಟನ್ ಎಂಬ ಇಬ್ಬರು ಅವಳಿ ಜವಳಿಗಳು ಸಿನೆಮಾದಲ್ಲಿ ಕಾಣಿಸಿಕೊಂಡಿದ್ದರು. ಈ ಬಾಲ ಪ್ರತಿಭೆಗಳು ಮತ್ತೆಂದೂ ಸಿನೆಮಾದಲ್ಲಿ ನಟಿಸಲೇ ಇಲ್ಲ. ಬದಲಿಗೆ ಇಬ್ಬರೂ ಒಂದೊಂದು ದಾರಿಯಲ್ಲಿ ಬದುಕನ್ನು ಕಟ್ಟಿಕೊಂಡಿದ್ದಾರೆ. ಸದ್ಯ ಇರುವ ಮಾಹಿತಿ ಪ್ರಕಾರ, ಆಡಮ್ ಒಂಟಾರಿಯೋದಲ್ಲಿ ನೌಕರಿ ಮಾಡುತ್ತಿದ್ದಾನೆ ಮತ್ತು ಜಾಕೋಬ್ ಸಂಗೀತ ಕ್ಷೇತ್ರದಲ್ಲಿ ಮುನ್ನಡೆಯುತ್ತಿದ್ದಾನೆ.

bdayout-3

ಬಾಲ ಪ್ರತಿಭೆಗಳು ಬಾಲ ಪ್ರತಿಭೆಗಳಾಗಿಯೇ ಉಳಿದು ಹೋಗುತ್ತಾರೆ ಎಂಬ ಅಪವಾದವೊಂದಿದೆ. ಚಿಕ್ಕವಯಸ್ಸಿನಲ್ಲಿಯೇ ದೊಡ್ಡ ಹೆಸರು ಮಾಡಿದ ಬಹುತೇಕ ಮಕ್ಕಳು ದೊಡ್ಡವರಾದ ಮೇಲೆ ಕಳೆದು ಹೋಗುತ್ತಾರೆ. ಅದಕ್ಕೆ ಸಾಕಷ್ಟು ಸಾಕ್ಷಿಗಳು ನಮ್ಮ ಮುಂದಿವೆ. ಅದೇ ರೀತಿ, ಎರಡು ದಶಕಗಳ ಹಿಂದೆ ಶಾಲಾ ಮಕ್ಕಳನ್ನು ಸಿನೆಮಾ ಮಂದಿರಕ್ಕೆ ಕರೆತಂದಿದ್ದ ಬೇಬಿ ಬಿನ್ ಪಾತ್ರಕ್ಕೆ ಬಣ್ಣ ಹಚ್ಚಿದ ಅವಳಿಗಳು ಇವತ್ತು ತೆರೆಮರೆಗೆ ಸರಿದಿದ್ದಾರೆ.

Top